Thursday, August 14, 2014

ನೀವು ಓದಲೇ  ಬೇಕಾದ ಬರಹ...

ಇದನ್ನು ನೀವು ಒಪ್ಪತ್ತಿರೋ ಬಿಡತೀರೋ ಗೊತ್ತಿಲ್ಲ ಆದ್ರೆ ನಾ ಒಂದು ವಿಷಯ  ಇಲ್ಲಿ ಹಂಚಿಕೊಳ್ಳಲೇಬೇಕು. ನಾವೆಲ್ಲರು ಇವತ್ತು ನಮ್ಮ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದೇವೆ. ಆದರೆ ಈ ಸಂಭ್ರಮ ನಿಜಕ್ಕೂ ಇದೇಯೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಕಾರಣ 1947 ರ ಮಧ್ಯರಾತ್ರಿ ಸಿಕ್ಕ ಸ್ವಾತಂತ್ರ್ಯ ಕೇವಲ ಬ್ರಿಟಿಷರು ತಮ್ಮ ಅಧಿಕಾರ ಬಿಟ್ಟು ಹೋದ ಸಮಯವೆಂದು ನನ್ನ ಭಾವನೆ. ಕಾರಣ ನೀವೆ ನೋಡಿ, ಇಂದಿಗೂ ಕೂಡ ನಮ್ಮ ಪ್ರಧಾನಿಗಳು ನಮ್ಮ ದೇಶದ ರಾಜಧಾನಿಯಲ್ಲಿ ನಮ್ಮ ಜನರ ನಡುವೆ ನಮ್ಮ ಜಾಗದಲ್ಲಿ ನಮ್ಮ ಭಾರತದ ತ್ರಿವರ್ಣೆ್  ಧ್ವಜ ಹಾರಿಸಬೇಕಾದರೆ ಸಾವಿರಾರು ಜನ ಪೊಲೀಸರು, ಸೈನಿಕರು ಇವರಿಗೆ ಭದ್ರತೆ ನೀಡಬೇಕು. 1947 ರಿಂದ 1950 ರವೆರೆಗೂ ಮಾತ್ರವೇ ನೆಹರು ಕಡಿಮೆ ಭದ್ರತೆಯಲ್ಲಿ ಧ್ವಜ ಹಾರಿಸಿದ್ದ ನೆನಪು. ಆದರೆ ಮುಂದಿನ ದಿನಗಳಲ್ಲಿ ಅವರು ಕೂಡ ಭದ್ರತೆ ಹೆಚ್ಚಿಸಿಕೊಂಡಿದ್ದರು. ನಮ್ಮ ನೆಲದಲ್ಲಿ ನಮ್ಮ ಪ್ರಧಾನಿಗೆ ವಿಶೇಷ ಭಧ್ರೆತೆ ಬೇಕಾದರೆ ಜನ ಸಾಮಾನ್ಯರ ಗತಿಯೇನು? ಪ್ರತಿ ದೀಪಾವಳಿ ಹಾಗೂ ಇನ್ನಿತರ ವಿಶೇಷ ಸಂದರ್ಭದಲ್ಲಿ ಸಹ ದೇಶದಾದ್ಯಂತ ಹೈ ಅಲರ್ಟ ಘೋಷಣೆ ಮಾಡ್ತಾರೆ, ಕಾರಣ ಮತ್ತದೆ ಉಗ್ರರ ಕಾಟ. 9/11 ದಾಳಿ ನಂತರ ಅಮೇರಿಕದ ಮೇಲೆ ಯಾವುದೇ ದೊಡ್ಡ ದಾಳಿಗಳು ನಡೆಯಲು ಸಾಧ್ಯವಾಗಲೇ ಇಲ್ಲ. ಕಾರಣ ಅಲ್ಲಿನ ವ್ಯವಸ್ಥೆ ಹಾಗೂ ಅಲ್ಲಿನ ಆಡಳಿತಗಾರರ ಮನಸ್ಥಿತಿ. ಆದರೆ ಮೂರು ಯುದ್ದಗಳು ಹಾಗೂ ದಿನನಿತ್ಯ ನಡೆಯುವ ಆಂತರಿಕ ದಾಳಿಗಳಿಂದಲೂ ಸಹ ನಾವು ಪಾಠ ಕಲಿಯದಿದ್ದರೆ ಹೇಗೆ ನೀವೆ ಹೇಳಿ. ? 26.11
ಮುಂಬೈ ದಾಳಿ ನಂತರ ಭದ್ರತೆ ಸುಧಾರಿಸಬಹುದೆಂಬ ಹಾಗೂ ನಂತರ ದಿನಗಳಲ್ಲಿ ಭಾರತ ಪಾಪಿ ಪಾಕಿಸ್ತಾನದ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಬಹುದೆಂಬ ನಂಬಿಕೆಯಿತ್ತು. ಆದರೆ ಆ ರೀತಿಯ ಯಾವುದೇ ಕ್ರಮಗಳು ನಡೆಯಲಿಲ್ಲ, ಇದರಿಂದಾಗಿ ಭಾರತದ ಧ್ವಜ ಹಾರಿಸಬೇಕಾದಗಲೂ ಸಹ ನಮ್ಮ ಪ್ರಧಾನಿಗಳಿಗೆ ವಿಶೇಷ ಭದ್ರತೆ ನೀಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ.