Wednesday, October 30, 2013
Friday, October 11, 2013
ಟಿ ಆರ್ ಪಿ ನೇ ಮುಖ್ಯಾನಾ..?
ಟಿ ಆರ್ ಪಿ ನೇ ಮುಖ್ಯಾನಾ..?
ಕಳೆದ 15 ದಿನಗಳಿಂದ ಇಂಥದೊಂದು ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಕಾರಣ ಇಷ್ಟೇ ಸಮಾಜವನ್ನು ಸರಿದಾರಿಗೆ ತರಬೇಕಾದ ಅಥವಾ ಸರಿ ದಾರಿಯಲ್ಲಿ ಮುನ್ನಡೆಸಲು ಸಹಕಾರಿಯಾಗಬೇಕಾದ ಮಾಧ್ಯಮಗಳು ತಮ್ಮ ಟಿ ಆರ್ ಪಿ ಗಾಗಿ
, ನಾನಾ ರೀತಿಯ ಕಸರತ್ತು ನಡೆಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.
ಉತ್ತಮ ಸಮಾಜಕ್ಕಾಗಿ, ನೇರ ದಿಟ್ಟ ನಿರಂತರ, ಪ್ರಾಮಾಣಿಕತೆ ಅದು ಇದು ಎಂದು ಟ್ಯಾಗ್ ಲೈನ್ ಎಳೆದುಕೊಂಡಿರುವ ದೃಶ್ಯ ಮಾಧ್ಯಮಗಳು ಇಂದು ನಿರಂತರವಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ.
ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆಗೆ ಕಡಿವಾಣ ಬೀಳಲೆ ಬೇಕಿದೆ.
ಕಡಿವಾಣ ಏಕೆ ?: ವಿವಿಧತೆಯಲ್ಲೂ ಏಕತೆ ಪ್ರದರ್ಶಿಸುತ್ತಿರುವ ನಮ್ಮ ದೇಶದಲ್ಲಿ ಅಭಿಪ್ರಾಯ ಬೇದಗಳು ಸಹಜವೇ. ಆದರೂ ಸಹ ಎಲ್ಲರೂ ಒಟ್ಟಾಗಿ ಬಾಳುತ್ತಿರುವುದು ಸಂತಸದ ಸಂಗತಿ. ಆದರೆ ಇಂದು ಸಮಾಜವನ್ನು ವೈಚಾರಿಕತೆಯನ್ನುವ ಹಣೆಪಟ್ಟಿಯಲ್ಲಿ ಮುನ್ನಡೆಸಲು ಹಾಗೂ ಭಾರತೀಯ ಸಂಸ್ಕೃತಿಯನ್ನು ಮುಗಿಸಲು ಕಾಯುತ್ತಿರುವ ಕೆಲವರು ವಿನಾಕಾರಣ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮೌಢ್ಯಗಳನ್ನು ತೊಡೆದು ಹಾಕುತ್ತೇವೆ ಎನ್ನುವ ಅವರುಗಳು ಪ್ರಚಾರಕ್ಕಾಗಿ ಮಾಧ್ಯಮದ ಮೊರೆ ಹೋಗಿದ್ದಾರೆ. ಇದನ್ನು ತಿಳಿಯದ ಮಾಧ್ಯಮಗಳು ಅವರಿಗೆ ಮಣೆ ಹಾಕುವ ಮೂಲಕ ಲಕ್ಷಾಂತರ ಆಸ್ತಿಕರಲ್ಲಿ ಗೊಂದಲವನ್ನುಂಟು ಮಾಡುತ್ತಿವೆ. ಇದರಿಂದಾಗಿ 2020 ಭಾರತ ಸುಪರ್ ಪವರ್ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವ ಅನೇಕರಿಗೆ ನೋವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಶಕ್ತಿಯಾಗಿಸಬೇಕು ಎನ್ನುವ ವಿವೇಕರ ವಾಣಿಯನ್ನು ಹಾಗೂ ದಾರ್ಶನಿಕ ರ ಮಾತನ್ನು ಮರೆತು ತಮ್ಮ ಪ್ರತಿಷ್ಠೆಗೋಸ್ಕೃರ ಇನ್ನೊಬ್ಬರ ಆಸ್ತಿಕತೆ, ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿರುವ ಅವರುಗಳನ್ನು ಮಾಧ್ಯಮಗಳು ಸಹ ಬೆನ್ನು ತಟ್ಟುತ್ತಿರುವುದು ನೋವಿನ ಸಂಗತಿ.
ಭಾರತ ಆಧ್ಯಾತ್ಮತ ನೆಲವಾಗಿದ್ದು, ಇಲ್ಲಿ ಏಕ ಕಾಲಕ್ಕೆ ಎಲ್ಲವೂ ನಡೆದುಕೊಂಡು ಬರುತ್ತಿದೆ. ಒಂದೇಡೆ ವೈಚಾರಿಕತೆ ವಿಸ್ತರಿಸುತ್ತಿದ್ದರೆ ಇನ್ನೊಂದಡೆ ಆಧ್ಯಾತ್ಮಿಕತೆಯೂ ಸಹ ತಮ್ಮ ಮೂಲವನ್ನು ಕಾಪಾಡಿಕೊಳ್ಳುತ್ತಾ ಮನಸ್ಸಿಗೆ ಶಾಂತಿಯನ್ನು ನೀಡುತ್ತಿದೆ. ಹಿಂದುಸ್ಥಾನದಲ್ಲಿ ನಿಂತುಕೊಂಡು ನಾವು ಹಿಂದುಗಳಲ್ಲ ನಾವು ಲಿಂಗಾಯತರು ಎಂದು ಹೇಳುವ ಅವರು, ಬೇರೆಯವರ ಅಡ್ಡಪಲ್ಲಕ್ಕಿಯನ್ನು ವಿರೋಧಿಸುತ್ತಾರೆ. ಮಾನವೀಯತೆ ಬಗ್ಗೆ ಮಾತನಾಡುತ್ತಾರೆ ಆದರೆ ತಾವೇ ಸ್ವತಃ ಭಕ್ತರಿಂದ ಕಾಲು ಮುಗಿಸಿಕೊಳ್ಳುವ ಮೂಲಕ ನಾನು ನಿನಗಿಂತ ಶ್ರೇಷ್ಠ ಎಂದು ತೋರಿಸಿಕೋಳ್ಳುತ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ. ಅವರವರ ಭಕ್ತಿಗೆ ಅವರವರು ಕಂಡುಕೊಂಡ ಶಕ್ತಿಯನ್ನು ದೇವರು ಎಂದು ಕರೆಯುವುದುಂಟು. ಆದರೆ ಇನ್ನೊಬ್ಬರಿಗೆ ತೊಂದರೆ ಕೊಡುವುದು ಯಾವ ನ್ಯಾಯ. ತಾವುಗಳು ನಡೆಸುವ ವಿವಿಧ ಸಮಾಜ ವಿರೋಧಿ ಚಟುವಟಿಕೆಗಳಿಗಳನ್ನು ಮುಚ್ಚಿಕೊಳ್ಳಲು ಮಾಧ್ಯಮದ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಅವರುಗಳನ್ನು ಈಗಲಾದರೂ ಮಾಧ್ಯಮಗಳು ಬೀಡಬೇಕಿದೆ. ಕಾರಣ ಭಾರತ ಎನ್ನುವದು ಚೈನಾ ಮಾದರಿ ಕಮ್ಯೂನಿಸ್ಟ ಆಡಳಿತವಲ್ಲ ಇದು ಧಾರ್ಮಿಕತೆ ನೆಲೆಯಲ್ಲಿ ನಿಂತ ಪ್ರಜಾಪ್ರಬುತ್ವ.

Wednesday, October 2, 2013
ಅಡ್ಡಪಲ್ಲಕ್ಕಿಗೆ ಅಡ್ಡಗಾಲು ಯಾಕೆ...?
ಅಡ್ಡಪಲ್ಲಕ್ಕಿಗೆ ಅಡ್ಡಗಾಲು ಯಾಕೆ...?
------
ಇಂದು ಎಲ್ಲ ಮಾಧ್ಯಮಗಳಲ್ಲಿಯೂ ಸಹ ಬಹುಚರ್ಚಿತವಾಗಿರುವ ವಿಷಯ ಪಂಚಪೀಠಾಧಿಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ.
ವೀರಶೈವ ಪರಂಪರೆಯಲ್ಲಿ ಅದರಲ್ಲೂ ಪಂಚಪೀಠಗಳಲ್ಲಿ ಈ ಅಡ್ಡಪಲ್ಲಕ್ಕಿಗೆ ತನ್ನದೇಯಾದ ವಿಶೇಷ ಸ್ಥಾನವಿದೆ. ಹರ ಮುನಿದರು ಗುರು ಕಾಯುವನಯ್ಯಾ ಎಂಬಂತೆ, ವೀರಶೈವರಲ್ಲಿ ಗುರು ಶಿವನಿಗಿಂತಲೂ ದೊಡ್ಡವ. ಗುರು-ಲಿಂಗ-ಜಂಗಮ, ಪ್ರಸಾದ, ಪಾದೋದಕಗಳು ಪ್ರತಿಯೋಬ್ಬ ವೀರಶೈವರು ಪಾಲಿಸುತ್ತಾ ಬಂದಿರುವ ಆಚರಣೆಗಳು. ಗುರುಗಳ ಪಾದದ ನೀರನ್ನು ( ಪಾದೋದಕ) ಲಿಂಗಕ್ಕೆ ಹಾಕಿಕೊಳ್ಳುವ ಗುರುವಿನ ಕರುಣೆಗೆ ಪಾತ್ರರಾಗುತ್ತಾ ಬಂದಿರುವುದು ವೀರಶೈವರ ಆಚರಣೆಗಳಲ್ಲಿ ಒಂದು. ಇಂದಿಗೂ ನಾಡಿನ ಅನೇಕ ದತ್ತಿ ಇಲಾಖೆ ದೇವಸ್ಥಾನಗಳಲ್ಲಿಯೂ ದೇವರಿಗೆ ನೈವೈದ್ಯ ಮಾಡುವ ಸಂದರ್ಭದಲ್ಲಿ ಗುರುವಿನ ಪಾದೋದಕ ಪಡೆದ ನಂತರವೇ ನೈವೈದ್ಯ ಮಾಡುವ ಪದ್ದತಿ ಜಾರಿಯಲ್ಲಿದೆ. ಅಂದರೇ ಗುರುವನ್ನು ಸಾಕ್ಞಾತ್ ಶಿವನ ರೂಪವೆಂದೇ ಪರಿಗಣಿಸಲ್ಪಡಲಾಗುತ್ತಿದೆ.
ಇನ್ನೂ ಪೀಠಗಳ ಪರಂಪರೆ ವಿಚಾರವಾಗಿ ಬಂದರೆ , ರಂಭಾಪುರಿ ವೀರ ಸಿಂಹಾಸನ, ಉಜ್ಜೈನಿ ಸದ್ಧರ್ಮ ಸಿಂಹಾಸನ, ಕೇದಾರ ವೈರಾಗ್ಯ ಸಿಂಹಾಸನ, ಶ್ರೀಶೈಲ ಸೂರ್ಯ ಸಿಂಹಾಸನ ಹಾಗೂ ಕಾಶಿಯನ್ನು ಜ್ಞಾನ ಸಿಂಹಾಸನವೆಂದು ಕರೆಯಲಾಗುತ್ತಿದೆ.
(ಇಂದಿಗೂ ಸಹ ಅನೇಕ ಗುರುವಿರಕ್ತ ಸಾಧಕರು ಕಾಶಿಯ ಜಂಗಮವಾಡಿ ಮಠದಲ್ಲಿದ್ದುಕೊಂಡು ವಿಧ್ಯಾರ್ಜನೆ ಮಾಡುತ್ತಿರುವುದು ಗುರು-ವಿರಕ್ತರ ಸಂಬಂಧವನ್ನು ಸೂಚಿಸುತ್ತದೆ.)
ರಂಭಾಪುರಿ ಪೀಠದ ಗುರುಗಳಿ ಕಳೆದ ಸಾವಿರಾರು ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ 10ದಿನಗಳ ಕಾಲ ರಾಜ್ಯದ ಒಂದು ಭಾಗದಲ್ಲಿ ದಸರಾ ದರ್ಬಾರ್ ನಡೆಸುವ ಮೂಲಕ ನಾಡಿನಲ್ಲಿ ಆಧ್ಯಾತ್ಮಿಕ, ಸಾಂಸ್ಕ್ರತಿಕ ಕ್ರಾಂತಿಗೆ ಕಾರಣವಾಗಿದ್ದಾರೆ. ಆದರೆ ಎಂದು ಸಹ ಎಲ್ಲಿಯೂ ವಿರೋಧ ವ್ಯಕ್ತವಾಗಿಲ್ಲ. ಕಾರಣ ಪರಂಪರೆ ಹಾಗೂ ಧಾರ್ಮಿಕತೆಗೆ ಯಾರು ಅಡ್ಡಗಾಲು ಹಾಕಿರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ರಾಜಧಾನಿಯಲ್ಲಿ ನಡೆದ ದಸರಾ ದರ್ಬಾರ್ ಸಂದರ್ಭಧಲ್ಲಿಯೂ ಸಹ ಯಾರು ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಜೇವರ್ಗಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅಡ್ಡಗಾಲಾಗುತ್ತಿರುವುದು ವಿಷಾದನೀಯ
ಸರ್ವ ಧರ್ಮಗಳಿಗೂ ಸಮಾನ ಅವಕಾಶ : ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ಕೇವಲ ವೀರಶೈವರಷ್ಟೇ ಅಲ್ಲ ನಾಡಿನ ಎಲ್ಲ ಧರ್ಮದವರು ಪಾಲ್ಗೊಳ್ಳುವ ಮೂಲಕ ಪೀಠದ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. 10 ದಿನಗಳ ಕಾಲ ನಡೆಯುವ ಜ್ಞಾನ ದಾಸೋಹ, ಅನ್ನ ದಾಸೋಹದಲ್ಲಿ ಪ್ರಸಾದ ಸ್ವೀಕರಿಸುವ ನಾಡಿನ ಜನ ತಮ್ಮ ಕೈಲಾದ ಭಕ್ತಿ ಸಮರ್ಪಿಸುವ ಮೂಲಕ ಧರ್ಮದ ಕಾರ್ಯದಲ್ಲಿ ನಾವು ನಿಮ್ಮ ಜತಗಿದ್ದೇವೆ ಎನ್ನುವ ಐಕ್ಯ ಸಂದೇಶ ಸಾರುತ್ತಿದ್ದಾರೆ.
ಶ್ರೀಗಳ ಇಚ್ಛೆಯಲ್ಲ : ಅಡ್ಡಪಲ್ಲಕ್ಕಿ ಶ್ರೀಗಳ ಇಚ್ಛೆಯಲ್ಲ ಬದಲಿಗೆ ಭಕ್ತರ ಇಚ್ಛೆ. ಸಾಕ್ಷಾತ್ ಶಿವನ ರೂಪವಾಗಿರುವ ಶ್ರೀಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗಿದಾಗ ತಾವು ತಿಳಿದು, ತಿಳಿಯದೆಯೋ ಮಾಡಿದ ಪಾಪಗಳು ನಾಶವಾಗಿ, ಮುಕ್ತಿ ದೊರಕುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಜತೆಗೆ ಅಡ್ಡಪಲ್ಲಕ್ಕಿಯಲ್ಲಿ ಸಾಗುವ ಶ್ರೀಗಳು ಭಕ್ತರ ಮನೆ ಬಾಗಿಲ ಬಈ ದರ್ಶನ ನೀಡುವ ಮೂಲಕ ಭಕ್ತರನ್ನು ಉದ್ದರಿಸುತ್ತಾರೆ ಎನ್ನುವ ನಂಬಿಕೆ ಮೊದಲಿನಿಂದಲೂ ಇದೆ. ಇದಕ್ಕೆ ಜೇವರ್ಗಿಯ ಎಲ್ಲ ಸಮಾಜದ ಮುಖಂಡರು ಕೈ ಜೋಡಿಸಿರುವುದು ಸಾಕ್ಷಿಯಾಗಿದೆ. ಆದರೆ ಇದನ್ನು ಅರಿಯದ ಕೆಲ ವಿಕೃತ ಮನಸ್ಸುಗಳು ವಿನಾಕಾರಣ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವುದು ದುರಂತ.
ಬಸವಣ್ಣನವರ ಹೆಸರಲ್ಲಿ ತಮ್ಮ ಕೆಟ್ಟಬೇಳೆ ಬೆಯಿಸಲು ಯತ್ನ : ಶತಾಯುಷಿಗಳಾಗಿರುವ ಕರ್ನಾಟಕ ರತ್ನ ಸಿದ್ಧಗಂಗಾ ಮಠಾಧಿಶರಾದ ಡಾ. ಶಿವಕುಮಾರ ಸ್ವಾಮಿಗಳು ವಿರಕ್ತ ಪರಂಪರೆಯನ್ನು ಮುಂದುವರೆಸುತ್ತಾ ಬಂದವರಾಗಿದ್ದು ತ್ರಿದೋಹ ದಾಸೋಹದಲ್ಲಿ ನಿರತರಾಗುವ ಮೂಲಕ ಕಾಯಕವೇ ಕೈಲಾಸ ಎಂಬುದನ್ನು ನಿರೂಪಿಸಿದ್ದಾರೆ. ಆದರೆ ಅವರು ಎಂದಿಗೂ ಸಹ ಗುರು ಪರಂಪರೆಯ ಆಚರಣೆಗೆ ವಿರೋಧ ವ್ಯಕ್ತಪಡಿಸಿಲ್ಲ. ಕಾರಣ ಅವರು ಈ ಬಗ್ಗೆ ಪೂರ್ಣ ಜ್ಞಾನವನ್ನು ಹೊಂದಿದವರಾಗಿದ್ದಾರೆ. ಆದರೆ ಅಲ್ಪ ಜ್ಞಾನಿಗಳಾಗಿರುವ ( ವಿರಕ್ತರು ಎಂದು ಹೇಳಿಕೊಳ್ಳುವ ) ಕೆಲವರು ತಮ್ಮ ವೈಯಕ್ತಿಕ ದ್ವೇಷಕ್ಕೆ ಮಹಾನ್ ಮಾನವತಾವಾದಿ ಬಸವಣ್ಣನವರ ಹೆಸರನ್ನು ಬಳಸುವ ಮೂಲಕ ತಮ್ಮ ವಿಕೃತ ಬೇಳೆ ಬೆಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಖಂಡನೀಯ.
ಸಮಾಜ ಅರ್ಥಮಾಡಿಕೊಳ್ಳಲಿ : ನಾಡಿನ ಸಕಲ ಜನರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುವ ಯಾವುದೇ ಮಠಾಧೀಶರ ಕಾರ್ಯಕ್ರಮಕ್ಕೆ ಇನ್ನೊಂದು ಮಠಾಧಿಶರು ಅಡ್ಡಿಪಡಿಸುತ್ತಿರುವುದು ಇದೇ ಮೊದಲು. ಸಮಾಜದ ಜನ ಒಂದನ್ನು ಅರ್ಥ ಮಾಡಿಕೊಳ್ಳಬೇಕು . ಯಾರು ಸಮಾಜದ ಹಿತವನ್ನು ಬಯಸುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆತ್ತಿದ್ದಾರೋ ಅವರಿಗೆ ಬೆಂಬಲ ನೀಡಲೇಬೇಕು. ಇಂದಿಗೂ ಸಹ ಪಂಚಪೀಠಗಳು, ಮೈಸೂರಿಗೆ ಸುತ್ತೂರು, ಸಿದ್ಧಗಂಗಾ, ಸಿರಿಗೆರೆ ಮಠ, , ಸೋಂದಾ ಸ್ವರ್ಣವಲ್ಲಿ ಮಠ, ಉಡುಪಿಯ ಅಷ್ಟಮಠಗಳು, ಮದರಸಾಗಳು, ಜೈನರ ಕ್ಷೇತ್ರಗಳು, ಗುರುದ್ವಾರಗಳು, ಚರ್ಚಗಳು ಸೇರಿದಂತೆ ಹಲವಾರು ಧಾರ್ಮಿಕ ಕ್ಷೇತ್ರಗಳು ಸಮಾಜದ ಏಳಿಗೆಗೆ ಶ್ರಮಿಸುತ್ತಿವೆ. ಆದರೆ ಎಂದಿಗೂ ಪರಸ್ಪರ ಕೆಸರೆರಚಾಡಿಕೊಂಡ ಉದಾಹರಣೆಗಳು ಇಲ್ಲ. ಕಾರಣ ಎಲ್ಲರಿಗೂ ಸಮಾಜ ಗುರುವಿನ ಸ್ಥಾನವನ್ನು ನೀಡಿದ್ದು ಅದನ್ನು ಕಾಪಾಡಿಕೊಂಡು ಬರುತ್ತಿವೆ. ಆದ್ದರಿಂದ ಸಮಾಜ ಈ ಬಗ್ಗೆ ಗಂಭೀರ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ.

Tuesday, October 1, 2013
ಪಂಚಾಚಾರ್ಯರು = ಬಸವಣ್ಣ
ಪಂಚಾಚಾರ್ಯರು = ಬಸವಣ್ಣ
ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕೆಲವರು ಅವರ ಆದರ್ಶಗಳನ್ನು ಮರೆಯುವ ಮೂಲಕ ಕೆಟ್ಟ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ. ಮಹಾನ್ ಮಾನವತಾವಾದಿಯಾಗಿದ್ದ ಬಸವಣ್ಣನವರು ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎಂದು ಹೇಳುವ ಮೂಲಕ ಎಲ್ಲರನ್ನೂ ಅಪ್ಪಿಕೊಂಡರು. ಆದರೆ ಅವರನ್ನು ಅನುಸರಿಸುವ ಕೆಲ ಸ್ವಯಂ ಘೋಷಿತ ಪ್ರಗತಿಪರರು ವೀರಶೈವ ಧರ್ಮದ ಮೂಲ ಪೀಠಗಳಲ್ಲಿ ಒಂದಾಗಿರುವ ಶ್ರೀ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ ದರ್ಬಾರ ಕಾರ್ಯಕ್ರಮ ವಿರೋಧಿಸುವ ಮೂಲಕ ತಮ್ಮ (ಸಣ್ಣ) ತನವನ್ನು ಪ್ರದರ್ಶಿಸಿದ್ದಾರೆ.
ಹಿನ್ನಲೆ ; ಸನಾತನ ಧರ್ಮಗಳಲ್ಲಿ ಒಂದಾಗಿರುವ ವೀರಶೈವ ಧರ್ಮ ತನ್ನದೇಯಾದ ಇತಿಹಾಸ ಪರಂಪರೆಯನ್ನು ಹೊಂದಿದೆ. ತೈತ್ರಾಯುಗದಲ್ಲಿ ಶಿವನ ಅಪ್ಪಣೆಯಿಂದ ಲಿಂಗೋಧ್ಬವರಾದ ಪಂಚಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸಿದರು ಎನ್ನುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಮುಂದೆ ಕಾಲಾನುಕ್ರಮದಲ್ಲಿ ದೇಶದೆಲ್ಲೆಡೆ ಪಸರಿಸಿದ ಧರ್ಮ ಇಂದಿಗೂ ಸತ್ಯ, ಅಹಿಂಸೆ, ನ್ಯಾಯವನ್ನು ರಕ್ಷಿಸುತ್ತಾ ಬರುತ್ತಿದೆ.
ಆದರೆ ವಿವಾದ ಶುರುವಾಗಿದ್ದು, ಇತ್ತೀಚಿಗೆ ಕಾರಣ, ಕೆಲ ವಿಚಿದ್ರಕಾರಿ ಶಕ್ತಿಗಳು ಸಮಾಜವನ್ನು ತಮ್ಮ ಸ್ವಾರ್ಥಕ್ಕಾಗಿ ಒಡೆಯುವ ಹುನ್ನಾರ ನಡೆಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆದರೆ ಸಾಮಾನ್ಯ ವೀರಶೈವರಲ್ಲಿ ಈ ಬಗ್ಗೆ ಯಾವುದೇ ಸಂದೇಹವಿಲ್ಲ
ಬಸವಣ್ಣವರು ಪಂಚಾಚಾರ್ಯರ ವಿರೋಧಿಯಲ್ಲ: 12 ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರುಅಂದಿನ ಕೆಲ ಅನಿಷ್ಠ ಪದ್ದತಿಗಳನ್ನು ವಿರೋಧಿಸಿ ವೀರಶೈವ ಧರ್ಮದ ಗುರುಗಳಾಗಿದ್ದ ಜ್ಯಾತವೇದ ಮುನಿ ಶಿವಾಚಾರ್ಯರಿಂದ ಲಿಂಗದೀಕ್ಷೆ ಪಡೆದರು. ಇದಕ್ಕೆ ಮೂಲಕ ಕಾರಣ ವೀರಶೈವ ಧರ್ಮದಲ್ಲಿದ್ದ ಸ್ವಾತಂತ್ರ್ಯ. ಅದರಲ್ಲೂ ಮಹಿಳೆಯರಿಗೂ ಸಹ ಲಿಂಗದೀಕ್ಷೆ ನೀಡಿ ಅವರಿಗೆ ಶಿವನ ಕರುಣೆ ಸಿಗುವಂತ ಇದ್ದ ಅವಕಾಶ. ಅದೇ ರೀತಿ ಜಾತಿ ಪದ್ದತಿ, ವಿವಿಧ ರೀತಿಯ ಪದ್ದತಿಗಳ ವಿರುದ್ದ ಹೋರಾಡುತ್ತ ಬಂದಿದ್ದ ಬಸವಣ್ಣನವರು ಮುಂದೆ ಕೂಡಲ ಸಂಗಮನಲ್ಲಿ ಐಕ್ಯರಾದರು ಎನ್ನುವುದು ಇತಿಹಾಸದಲ್ಲಿ ಕಾಣ ಸಿಗುತ್ತದೆ. ಆದರೆ ಎಲ್ಲಿಯೂ ಸಹ ಬಸವಣ್ಣನವರು ಪಂಚಾಚಾರ್ಯ ಪರಂಪರೆಯನ್ನು ವಿರೋಧಿಸಿದ ಉದಾಹರಣೆಗಳಿಲ್ಲ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ತಮ್ಮ ವಚನಗಳಲ್ಲಿಯೇ ವೀರಶೈವ ಪದವನ್ನು ಅವರು ಬಳಕೆ ಮಾಡಿರುವುದು ಕಂಡು ಬರುತ್ತದೆ.
ಬಸವಣ್ಣನವರ ಬಗ್ಗೆ ಅಧ್ಯಯನ ಮಾಡಿದ ಕೆಲವರು ತಮ್ಮ ಕೆಟ್ಟ ಜ್ಞಾನದಿಂದಾಗಿ ಬಸವಣ್ಣನವರ ವಚನಗಳ ಅರ್ಥವನ್ನು ತಿರುಚಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದ್ದರು. ಆಗ ಎಚ್ಚೆತ್ತುಕೊಂಡಿದ್ದ ಹಾನಗಲ್ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾವನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಉಂಟಾಗಬಹುದಾಗಿದ್ದ ಒಡಕನ್ನು ತಪ್ಪಿಸಿದ ಪುಣ್ಯಾತ್ಮರು.
ಗುರು- ವಿರಕ್ತ ಪರಂಪರೆ : ವೀರಶೈವ ಸಮಾಜದಲ್ಲಿ ಪಂಚಾಚಾರ್ಯರನ್ನು ಅನುಸರಿಸುವ ಸ್ವಾಮಿಜಿಗಳನ್ನು ಗುರುಗಳೆಂದು ಹಾಗೂ ಬಸವತತ್ವವನ್ನು ಪ್ರತಿಪಾದಿರುವವರನ್ನು ವಿರಕ್ತ ಮಠಾಧಿಶರೆಂದು ಕರೆಯಲಾಗುತ್ತಿದ್ದು, ಇಲ್ಲಿ ಯಾವುದೇ ರೀತಿಯ ಭೇದಗಳಾಗಲಿ ಕಂಡು ಬರುವುದಿಲ್ಲ. ಈ ಎರಡು ಪರಂಪರೆಗಳು ಶತಮಾನಗಳಿಂದ ವೀರಶೈವ ಸಮಾಜವನ್ನು ಮುನ್ನಡೆಸುತ್ತಾ ಸಾರ್ವಜನಿರಿಗೆ ಧರ್ಮದ ಮಾರ್ಗ ತೋರಿಸುತ್ತಾ ಬರುತ್ತಿದ್ದಾರೆ. ಇದಕ್ಕೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಪಂಚಗ್ರಹ ಹಿರೇಮಠದಲ್ಲಿ ಸುಮಾರು 500 ವರ್ಷಗಳ ಹಿಂದೆ ಬರೆದಿರುವ ಪತ್ರಗಳೇ ಸಾಕ್ಷಿಯಾಗಿವೆ.
ಇಂದು ವೈಚಾರಿಕೆಯನ್ನು ಬೆಳೆಸುವಲ್ಲಿ ನಿರತವಾಗಿರುವ ಚಿತ್ರದುರ್ಗದ ಮುರುಘಾಮಠದ ಹಿಂದಿನ ಶ್ರೀಗಳು ಅಂದು ಅಗ್ರಹಾರವಾಗಿದ್ದ ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಶ್ರೀಗಳಿಗೆ ಬರೆದ ಪತ್ರದಲ್ಲಿ ರೇಣುಕರದ ವಾರಸುದಾರರು ಎಂದು ಒಕ್ಕಣೆಯಲ್ಲಿ ಬರೆದಿದ್ದಾರೆ. ಅದೇ ರೀತಿ ಹುಬ್ಬಳ್ಳಿ ಮೂರು ಸಾವಿರ ಮಠದ ಉತ್ತಾರಾಧಿಕಾರಿ ವಿಷಯವನ್ನು ಚರ್ಚಿಸಲು ಸಹ ಅಮ್ಮಿನಭಾವಿ ಮಠದ ಪೀಠಾಧ್ಯಕ್ಷರಿಗೆ ಆಮಂತ್ರಣ ನೀಡಿದ ಪತ್ರ ಇಂದಿಗೂ ಇದೆ.
ಮುಜಗಂ= ರಂಭಾಪುರಿ ಶ್ರೀ : ವಿರಕ್ತ ಪರಂಪರೆಯ ಹಿಂದಿನ ಮಠವಾದ ಹುಬ್ಬಳ್ಳಿ ಮೂರು ಸಾವಿರ ಮಠದ ಹಿಂದಿನ ಶ್ರೀಗಳಾಗಿದ್ದ ಶ್ರೀ ಗಂಗಾಧರ ಜಗದ್ಗುರುಗಳು ಹಾಗೂ ಶ್ರೀ ರಂಭಾಪುರಿ ಪೀಠದ ಹಾಲಿ ಜಗದ್ಗುರುಗಳು ಗುರು ವಿರಕ್ತರನ್ನು ಒಂದು ಮಾಡುವ ಅತಿ ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದರು. ಕಾರಣ ಸಮಾಜವನ್ನು ಬಲ ಪಡಿಸುವ ಮಹದಾಸೆಯನ್ನು ಹಿರಿಯರಾಗಿದ್ದ ಮುಜಗಂ ಶ್ರೀಗಳು ಹೊಂದಿದ್ದರು. ಅದಕ್ಕೆ ಪೂರಕವೆಂಬಂತೆ ರಂಭಾಪುರಿ ಪೀಠದಲ್ಲಿ ನಡೆದ ಶ್ರೀ ರೇಣುಕ ಜಯಂತಿ ಕಾರ್ಯಕ್ರಮದಲ್ಲಿ ಮುಜಗಂ ಶ್ರೀಗಳನ್ನು ಬರಮಾಡಿಕೊಂಡು ರಂಭಾಪುರಿ ಶ್ರೀಗಳು ಅವರಿಗೆ ಸರಿ ಸಮಾನ ವೇದಿಕೆ ಕಲ್ಪಿಸಿ ನಾವೆಲ್ಲರೂ ಒಂದೇ ಎನ್ನುವ ಘೋಷಣೆ ಮಾಡಿದರು. ಅಂದು ಮಾತನಾಡಿದ್ದ ಮುಜಗಂ ಶ್ರೀಗಳು ಸಹ ರಂಭಾಪುರಿ ಶ್ರೀಗಳ ಭಾವನೆಗೆ ಸಹಮತ ವ್ಯಕ್ತಪಡಿಸಿದ್ದರು.
ಇದರಿಂದ ಸಾಕಷ್ಟು ಗಲಿಬಿಲಿಗೊಂಡ ವಿಕೃತ ಮನಸ್ಸುಗಳು ಅಂದು ಸಹ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದರು. ಆದರೆ ಈಗ ಮತ್ತೆ ವಿವಾದ ಹುಟ್ಟು ಹಾಕಿರುವ ವಿಕೃತರು, ಸಮಾಜವನ್ನು ಒಡೆಯುತ್ತಿರುವುದು ದುರಂತ.

Subscribe to:
Posts (Atom)