ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ
ರಾಷ್ಟ್ರ ಭವ್ಯ ಗಣರಾಜ್ಯೋತ್ಸವಕ್ಕೆ ಸಿದ್ಧವಾಗುತ್ತಿರುವಾಗ ಉಗ್ರರು ಅದನ್ನು ತಡೆಯಲು ಸಿದ್ಧವಾಗುತ್ತಿದ್ದರು.ಆದರೆ ನಮ್ಮ ಪೊಲೀಸ್ ವ್ಯವಸ್ಥೆಯ ಫಲದಿಂದಾಗಿ ವಿವಿಧ ರಾಜ್ಯಗಳಲ್ಲಿ ಅವತಿದ್ದ ಉಗ್ರರನ್ನು ಎಳೆದು ತಂದಿದ್ದಾರೆ. ಆದರೆ ವಿಚಿತ್ರ ನೋಡಿ ಮುಖ್ಯಮಂತ್ರಿಗಳ ಖಾಸಾ ಮನುಷ್ಯರು ಎಂದು ಹೇಳಿಕೊಳ್ಳುವ ಹಾಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ(?) ಪತ್ರಕರ್ತ ದಿನೇಶ ಅಮೀನ ಮಟ್ಟು ಬೇಜವಾಬ್ದಾರಿ ತನದ ಹೇಳಿಕೆ ನೀಡುವ ಮೂಲಕ ತಾವು ಏನು ಎಂದು ತಾವೇ ಬಣ್ಣಿಸಿಕೊಂಡಿದ್ದಾರೆ. ಮೂಲಭೂತವಾದ ಯಾವುದೇ ಇರಲಿ ಅದನ್ನುಸೆದೆ ಬಡಿಯಲೇಬೇಕು ಎನ್ನುವುದು ಎಲ್ಲರ ಚಿಂತನೆಯಾದರೆ ಇಲ್ಲಿ ಅನ್ಯಕೋಮಿನವರನ್ನು ಬಂಧಿಸಿದ್ದು ತಪ್ಪು ಎಂದು ದಿನೇಶ ಹೇಳುತ್ತಿದ್ದಾರೆ. ಹಾಗಾದರೆ ಉಗ್ರರನ್ನು ಸೆದೆ ಬಡೆಯುವುದು ತಪ್ಪೆ? ಈ ಹಿಂದಿನ ಘಟನೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಅಷ್ಟೇ ಏಕೆ ಮೊನ್ನೆಯ ಪಠಾಣ್ ಕೋಟ್ ದಾಳಿಯನ್ನೇ ಉದಾಹರಿಸುವುದಾದರೆ ಎಸ್ಪಿ ನೀಡಿದ ಎಚ್ಚರಿಕೆಯನ್ನು( ಈ ಬಗ್ಗೆ ಇನ್ನೂ ಎನ್ಐಎ ಸ್ಪಷ್ಟನೆ ನೀಡಬೇಕಿದೆ) ಗಮನಿಸದ ಪೊಲೀಸರಿಂದಾಗಿ ಎಂತಹ ಆತಂಕ ಸೃಷ್ಟಿಯಾಗಿತ್ತು. ಈ ರೀತಿ ನಮ್ಮ ಪಡೆಗಳು ನಮ್ಮನ್ನು ರಕ್ಷಿಸಿದಾಗ ಅವರ ಬೆನ್ನಿಗೆ ನಿಂತು ಶಹಬಾಷ್ ಗಿರಿ ಹೇಳಬೇಕಾದ ನಾವುಗಳು ಈ ರೀತಿ ಕಾಮಾಲೆ ನಾಲಿಗೆಯಿಂದ ಮಾತನಾಡಿದರೆ ಹೇಗೆ ಸ್ವಾಮಿ? ಇನ್ನೂ ಸ್ವಲ್ಪ ದಿನ ಹೋಗಿದ್ದರೆ ಇತಿಹಾಸದ ಪುಟದಲ್ಲಿರುವ ಪ್ರಜಾವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ತನ್ನ ವಸ್ತು ನಿಷ್ಠತೆಗೆ ಹೆಸರಾಗಿದ್ದ ಪತ್ರಿಕೆಯ ಸೌಭಾಗ್ಯವೋ ಏನೋ ನೀವು ಪತ್ರಿಕೋದ್ಯಮ ಬಿಟ್ಟಿದ್ದು ಒಳ್ಳಯದೆ ಆಯಿತು. ಒಂದು ವೇಳೆ ನೀವು ಇದ್ದಿದ್ದರೆ ಪತ್ರಿಕೆಯ ಮುಖಪುಟದಲ್ಲಿ ಉಗ್ರರನ್ನುಹೀರೋಗಳಂತೆ ಬಿಂಬಿಸುತ್ತಿದ್ದಿರಿ ಎಂದೆನಿಸುತ್ತದೆ. ನೀವು ವಿದ್ಯಾವಂತರು ಎಂದು ಹೇಳಿಕೊಂಡು ತಿರಾಗುಡುತ್ತಿರಿ ಸಾಮಾನ್ಯ ನಾಗರೀಕನಿಗೆ ಇರುವ ಸಾಮಾನ್ಯ ಬುದ್ಧಿಯೂ ಇಲ್ಲವೇ. ಉಗ್ರರು ಇಡುವ ಬಾಂಬುಗಳಾಗಲಿ, ಅಥವಾ ಚಲಾಯಿಸುವ ಗುಂಡುಗಳಾಲಿ ಯಾವುದು ಕೂಡ ಜಾತಿ ಧರ್ಮವನ್ನು ನೋಡುವುದಿಲ್ಲ. ಹಾಗಿರುವಾಗ ನಿಮಗೇಕೆ ಸ್ವಾಮಿ ಜಾತಿ ಪ್ರೀತಿ.? ನಾವೇನು ಭಾರತೀಯ ಮುಸ್ಲಿಮರಿಗೆ ವಿರೋಧ ವ್ಯಕ್ತಪಡಿಸಿದವರಲ್ಲ ಕಾರಣ ಅವರಲ್ಲಿಯೂ ಸಹ ಸಾಕಷ್ಟು ಜನ ಈ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾರೆ. ಆದರೆ ಇತ್ತೀತ್ತಲಾಗಿ ಕೆಲವರು ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತವನ್ನು ಪ್ರೀತಿಸುವ ಮುಸ್ಲಿಂರು ಇಲ್ಲಿದ್ದಾರೆ ಅವರು ಸಹ ಉಗ್ರವಾದವನ್ನು ವಿರೋಧಿಸುತ್ತಿದ್ದಾರೆ. ಅಂತಹುದರಲ್ಲಿ ನಮ್ಮ ಸೇನಾ ಪಡೆಗಳು ಹಾಗೂ ಪೊಲೀಸರು ಮಾಡುವ ಕೆಲಸ ನಿಮಗೆ ರುಚಿಸಲಿಲ್ಲ ಅಲ್ಲವೇ. ನಿಮಗೆ ಒಂದು ಸವಾಲ್ ಹಾಕುತ್ತಿದ್ದೇನೆ. ಇಷ್ಟೇಲ್ಲಾ ಮಾತನಾಡುವ ನಿಮಗೆ ಒಂದು ವಾರ ಎಲ್ಲ ಐಶಾರಾಮಗಳನ್ನು ಬಿಟ್ಟು ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ. ಪಾಕಿಸ್ತಾನದಿಂದ ಏಕಾಏಕಿ ತೂರಿ ಬರುವ ಶೆಲ್ ಹಾಗೂ ಎಕೆ 47 ನಿಂದ ಬರುವ ಗುಂಡುಗಳಿಗೆ ಎದೆಕೊಡುವ ಶಕ್ತಿ ಇದೆಯೇ? ಇಲ್ಲ ಅಲ್ವಾ ಹಾಗಿದ್ದರೆ ನಮ್ಮ ಪಡೆಗಳ ಹಾಗೂ ಪೊಲೀಸರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ.

