ನೀವಾದರೂ ಬಾಯಿಬಿಡಿ…..!
ನೀವಾದರೂ ಬಾಯಿಬಿಡಿ…..!
ಬೆಳಗಾವಿ ಗಡಿ ಭಾಗದಲ್ಲಿ ಎಂಇಎಸ್ ಪುಂಡರು ಅಟ್ಟಹಾಸ
ಮೆರೆಯುತ್ತಿದ್ದರೆ ಪೊಲೀಸರು ಕೈಲಾಗದ ಹೇಡಿಗಳಂತೆ ಹಾಗೂ ಜಿಲ್ಲಾಡಳಿತ ರೋಮ ಸಾಮ್ರಾಜ್ಯದ್ಯಂತೆ ಸುಮ್ಮನೆ
ಕುಳಿತಿದೆ. ನೀವಾದರೂ ಬಾಯಿಬಿಡಿ..!
ಕನ್ನಡಿಗರ ದೇವಾಲಯದಂತಿದ್ದ ಕನ್ನಡ ಸಾಹಿತ್ಯ ಪರಿಷತ್
ಹಾಗೂ ಕರ್ನಾಟಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು ಸುಮ್ಮನೆ ಕುಳಿತಿರುವುದು ನಿಜಕ್ಕೂ ನಾಚಿಗೇಗೇಡಿನ
ಸಂಗತಿ. ವಿನಾಕಾರಣ ವಿವಾದಗಳನ್ನು ಹುಟ್ಟುಹಾಕುವ ಅನಂತಮೂರ್ತಿ
, ಕೋಮುಸೌಹಾರ್ದ ಹೆಸರಲ್ಲಿ ಜಾತಿ ವಿಷ ಬೀಜ ಬಿತ್ತುವ ಗಿರೀಶ ಕಾರ್ನಾಡ ಹಾಗೂ ಉತ್ತಮರು ಎಂದು ಕರೆಸಿಕೊಳ್ಳುವ ಬೆಳಗಾವಿ ಜಿಲ್ಲೆಯವರಾದ
ಚಂದ್ರಶೇಖರ ಕಂಬಾರ ಎಲ್ಲಿ ಅಡಗಿದ್ದಾರೆ ಎನ್ನುವುದು ತಿಳಿಯದಾಗಿದೆ.
ಕನ್ನಡ ನೆಲ-ಜಲ-ಭಾಷಾ ರಕ್ಷಣೆಗೆ ಹುಟ್ಟಿಕೊಂಡ ಕನ್ನಡ
ಸಾಹಿತ್ಯ ಪರಿಷತ್ ಅಕ್ಷರಷಃ ಅನಾಥ ಸ್ಥಿತಿಯಲ್ಲಿದೆ, ಸದಾ ಬಾಯಲ್ಲಿ ಎಲೆ ಅಡಿಕೆ ಜಗಿಯುತ್ತಾ ಸಮ್ಮೇಳನ
ಹೆಸರಲ್ಲಿ ಜಾತ್ರ ನಡೆಸುವ ಅಧ್ಯಕ್ಷ ಹಾಲಂಬಿಗೆ ಇನ್ನೂ ಬಾಯಲ್ಲಿನ ಕವಳ ಮುಗಿದ್ದಿಲ್ಲವೆಂದ ಕಾಣುತ್ತದೆ.
ಇದು ಕೇವಲ ಆಕ್ರೋಶದ ಮಾತುಗಳಲ್ಲ. ಬದಲಾಗಿ ಇವರ ನಾಟಕ ನೋಡಿ ಬರೆದಿರುವ ವಿಮರ್ಷೆ. ನಾಡಿನ ಜನರಿಂದ ಸನ್ಮಾನ ಸ್ವೀಕರಿಸುವ ಜ್ಞಾನಪೀಠ ಪುರಸ್ಕೃತರು
ಹಾಗೂ ಸಾಹಿತಿಗಳು ಭಾಷಾ ಹಾಗೂ ಗಡಿ ವಿವಾದ ಬಂದಾಗ ಮನೆ ಸೇರುವುದನ್ನು ನೋಡಿದರೆ ಇವರಿಗಾಗಿಗೂ ಸಹ ಕನ್ನಡತನ
ಉಳಿಯುವುದು ಬೇಕಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ನಾವು ಹಿಂದಿನ ಘಟನೆಗಳನ್ನು ಮರೆತಿದ್ದೇವೆ
ಹಾಗೂ ಕಂಪ್ಯೂಟರ ಪರದೆಯ ಮೇಲೆ ನಾನಾ ಕೆಲಸಕ್ಕೆ ಬಾರದ ಕವನಗಳನ್ನು ಗೀಚುವ ಸೋಕಾಲ್ಡ ನವ ಯುಗದ ಸಾಹಿತಿಗಳಿಗೆ
ಆ ಬಗ್ಗೆ ತಿಳುವಳಿಕೆ ನೀಡಿಲ್ಲ. ಏಕೀಕರಣ ಹಾಗೂ ಗೋಕಾಕ್ ಚಳುವಳಿಯನ್ನು ಒಮ್ಮೆ ನೆನೆಪಿಸಿಕೊಳ್ಳಬೇಕಿದೆ.
ಏಕೀಕರಣದ ನಂತರ ಬಂದ ಗೋಕಾಕ್ ಚಳುವಳಿ ಆರಂಭದಲ್ಲಿ ಅಷ್ಟೊಂದು ಪ್ರಭಾವ ಶಾಲಿ ಅನಿಸಿರಲಿಲ್ಲ,.ಆದರೆ
ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಭೆ ಹೋರಾಟದ ಹಾದಿಯನ್ನು ಬಲಿಷ್ಠಗೊಳಿಸಿತು. ಚಳುವಳಿಗೆ
ಮೇರು ನಟ ಡಾ. ರಾಜ್ ಎಂಟ್ರಿ ಹಾಗೂ ಅದಕ್ಕೆ ಅಂದಿನ ಸಾಹಿತಿಗಳ ಬೆಂಬಲ ಎಷ್ಟಿತ್ತೆಂದರೆ ಸ್ವತಃ ರಾಜ್
ಸಹ ಅನೇಕ ಸಲ ಹೇಳಿಕೊಂಡಿದ್ದರು. ಅಂದು ನಡೆದ ಹೋರಾಟಗಳು
ಕೇವಲ ಹಾರಾಟಕ್ಕೆ ಸೀಮಿತವಾಗಿರಲಿಲ್ಲ,. ಬದಲಾಗಿ ನಾಡಿನ
ರಕ್ಷಣೆಗೆ ಬದ್ಧ ಎಂಬುದನ್ನು ಎತ್ತಿ ತೋರಿಸಿದವು.
ಇನ್ನೂ ಇಂದಿನ ಹೋರಾಟಗಾರ ಎಂದು ಹೇಳಿಕೊಳ್ಳುವ ಕೆಲವರಿಗೆ
ಇನ್ನೂ ಕೂಡ “ಹ “ ಓ” ಕಾರಣಗಳನ್ನು ಹೇಳಿಕೊಡಬೇಕಾದ
ಅನಿವಾರ್ಯತೆಯಿದ್ದು ಅವರಿಂದ ನಾಡಿನ ರಕ್ಷಣೆ ನೀರಿಕ್ಷಿಸುವುದು ಅಸಾಧ್ಯ. ಜತೆಗೆ ಇಲ್ಲಿ ಗಮನಿಸಬೇಕಾದ
ಪ್ರಮುಖ ಅಂಶವೆಂದರೆ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಸಚಿವ ಸತೀಶಜಾರಕಿಹೋಳಿ ಮಾಧ್ಯಮಗಳ ಮುಂದೆ ಮಾತನಾಡಿ,
ಅಲ್ಲಿನ ಸಮಸ್ಯೆಯನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎನ್ನುವ ಮೂಲಕ ತಿಪ್ಪೆ ಸಾರಿಸುವ ಕೆಲಸ ಮಾಡುವುದರ
ಜತೆಗೆ ನಾನು ಯಾರನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ ಹಾಗೂ ಇದು ರಾಜ್ಯದ ಸಮಸ್ಯೆಯಾಗಿದ್ದು ನನಗೂ
ಅದಕೂ ಸಂಬಂಧವಿಲ್ಲ. ಹೋದರೆ ನಂದೇನು ಹೋಗುವುದಿಲ್ಲ ಕರ್ನಾಟಕದ ಜಾಗ ಹೋಗುತ್ತದೆ ಎನ್ನುವ ಭಾವನೆ ಹೊಂದಿರುವುದು ನಿಜಕ್ಕೂ
ಬೇಸರ ಮೂಡಿಸಿದೆ.
ಮೂರು ದಿನಗಳಿಂದ ಸದನದಲ್ಲಿ ಅರ್ಕಾವತಿ ಬಗ್ಗೆ ವಿನಾಕಾರಣ
ಜಗಳ ಮಾಡುತ್ತಿರುವ ವಿಪಕ್ಷ ನಾಯಕರಿಗೆ ತಮ್ಮ ಪಕ್ಕದ ಜಿಲ್ಲೆಯ ಸಮಸ್ಯೆ ಬಗ್ಗೆ ಅರಿವಿಲ್ಲವಂತೆ, ಸಮಯ
ಸಿಕ್ಕಾಗ ಮಾತನಾಡುತ್ತೇನೆ ಎನ್ನುವ ಮೂಲಕ ಅವರು ಕೂಡ ಮರಾಠಿಗರು ಹಾಗೂ ಶಿವಸೇನೆ ಯ ಓಟುಗಳ ಮೇಲೆ ಅವಲಂಬಿತನಾಗಿದ್ದು
ಇದರಲ್ಲಿ ಕರ್ನಾಟಕದ ಹಿತ ಮಣ್ಣು ಪಾಲಾದರೂ ನಮಗೇನು ಚಿಂತೆಯಿಲ್ಲ ಎನ್ನುವ ರೀತಿಯಲ್ಲಿ ಮಾತಾಡಿರುವುದು
ನಾಡಿನ ಜನತೆ ಗಮನಿಸಬೇಕಾದೆ.
ಬೆಳಗಾವಿ ಭಾಷಾ ಸಮಸ್ಯೆಯಿಂದ ಹೊತ್ತಿಯುರಿತ್ತೊದ್ದರು, ಯಾವೋಬ್ಬ ಜನ ಪ್ರತನಿಧಿಗಳಾಗಲಿ
ಸರ್ಕಾರದ ಪ್ರಮುಖ ಸ್ಥಳಗಳಲ್ಲಿ ಕುಳಿತಿರುವ ಜಿಲ್ಲೆಯ ಶಾಸಕರುಗಳಾಗಲಿ ಬಾಯಿಬಿಡದೆ ಇರುವುದು ನಿಜಕ್ಕೂ
ನಾಚಿಗೆ ಗೇಡಿನ ಸಂಗತಿ.