Thursday, April 13, 2017

ಬಿಎಸ್‌ವೈಗೆ ಬ್ರೇಕ್ ಹಾಕಲು ಯತ್ನ

ಬ್ಲರ್ಬ್
ಚುನಾವಣೆ ಸೋಲು ಗೆಲುವುಗಳ ಕುರಿತು ಮೊದಲಿಂದಲೂ ರಾಜ್ಯಾಾಧ್ಯಕ್ಷರುಗಳು ವರದಿ ನೀಡುವುದು ಸಾಮಾನ್ಯ. ಆದರೆ ಈ ಬಾರಿ ಬಿಜೆಪಿಯಲ್ಲಿ ರಾಜ್ಯಾಾಧ್ಯಕ್ಷರ ವರದಿ ಹೊರತಾಗಿ ಮೊತ್ತೊೊಂದು ಗೌಪ್ಯ ವರದಿ ಸಿದ್ಧಮಾಡಲಾಗುತ್ತಿಿದ್ದು ಯಾರ ಮೂಲಕ ಅಮಿತ್ ಷಾ ಕೈ ತಲುಪಲಿದೆ ಎಂಬುದು ಕುತುಹಲ ಮೂಡಿಸಿದೆ.

ವರದಿ ನೆಪದಲ್ಲಿ ಪರೋಕ್ಷ ದೂರಿಗೆ ನಿರ್ಧಾರ
ಪ್ರಶಾಂತ ರಾಜಗುರು
ಪ್ರತಿಷ್ಠಿಿತ ಕಣವಾಗಿದ್ದ  ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆೆಸ್ ಜಯ ಸಾಧಿಸುತ್ತಿಿದ್ದಂತೆ ಕೇಸರಿ ಬ್ರಿಿಗೇಡ್‌ನಲ್ಲಿ ಸಂಚಲನ ಮೂಡಿದೆ. ಇದೇನ್ರಿಿ ಈ ಥರಾ ಹೇಳ್ತಾಾಯಿದಿರಾ ಅಂತ ಮೂಗು ಮೂರಿಬೇಡಿ. ಏನೇನ್ ಆಗ್ತಾಾಯಿದೆ ಅನ್ನುದನ್ನ ಮುಂದೆ ಹೇಳ್ತಿಿನಿ ಕೇಳಿ.
ಶ್ರೀನಿವಾಸ್ ಪ್ರಸಾದ ಅವರನ್ನು ಬಿಜೆಪಿಗೆ ಕರೆ ತರುವ ಮೂಲಕ ಮೈಸೂರು ಭಾಗದಲ್ಲಿ  ಜೆಡಿಎಸ್ ಹಾಗೂ ಕಾಂಗ್ರೆೆಸ್‌ಗೆ ಪರ್ಯಾಾಯ ಶಕ್ತಿಿಯಾಗಿ ಬೆಳೆಯಬೇಕು ಎಂದು ಕೊಂಡಿದ್ದ ಬಿಎಸ್‌ವೈಗೆ ಸೋಲು ಸಾಕಷ್ಟು ಘಾಸಿ ಮಾಡಿದೆ. ಗುಂಡ್ಲುಪೇಟೆಯಲ್ಲಿ ಅನುಕಂಪ ಪ್ರಭಾವಿ ಬೀರಿದ್ದರೆ ಇಲ್ಲಿ ಡಿಕೆಶಿ ರಣತಂತ್ರ ಕೈ ಹಿಡಿದಿದೆ. ಇದರಿಂದಾಗಿ ಬಿಜೆಪಿಯಲ್ಲಿನ ಬಿಎಸ್‌ವೈ ವಿರೋಧಿ ಬಣ ತುರುಸಿನ ಕಾರ್ಯಚಟುವಟಿಕೆ ನಡೆಸುತ್ತಿಿದೆ. ಸೋಲು ಖಚಿತವಾಗುತ್ತಿಿದ್ದೆೆ ಬಿಎಸ್‌ವೈ ಹಣಿಯಲು ಯತ್ನಿಿಸುತ್ತಿಿರುವ ಗುಂಪು ಸೋಲಿಗೆ ಏನು ಕಾರಣ ಎಂಬುದನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಮೂಲಕ ವರಿಷ್ಠರಿಗೆ ವರದಿ ನೀಡಲು ಸಜ್ಜಾಾಗಿದೆ.
ಈಗಾಗಲೇ ಸಂಗೋಳ್ಳಿಿ ರಾಯಣ್ಣ ಬ್ರಿಿಗೇಡ್ ಕಟ್ಟುವ ವಿಚಾರದಲ್ಲಿ ಸಾಕಷ್ಟು ಗೊಂದಲ ಮೂಡಿಸಿದ್ದ ಈಶ್ವರಪ್ಪ ತಮ್ಮ ಹೇಳಿಕೆಯಲ್ಲಿ ಬಿಜೆಪಿ ಸೋಲಿಗೆ ಒಳಜಗಳವೇ ಕಾರಣ ಎನ್ನುವ ಅರ್ಥದಲ್ಲಿ ಮಾತನಾಡಿರುವುದು ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವಿನ ವೈಮನಸ್ಸು ಆರಿಲ್ಲ ಎಂಬುದನ್ನು ಸಷ್ಟವಾಗಿಸಿದೆ. ಜತೆಗೆ ಮೊದಲಿನಿಂದಲೂ ಬಿಜೆಪಿಯಲ್ಲಿ ತಮ್ಮದೇಯಾದ ಹಿಂಬಾಲಕರನ್ನು ಹೊಂದಿರುವ ಕೇಂದ್ರ ಸಚಿವರು ಸುಮ್ಮನೆ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ವರದಿ ತಯಾರಿಗೆ ಕಾರಣ
ಬಿಎಸ್‌ವೈ ಅಧ್ಯಕ್ಷರಾದ ದಿನದಿಂದಲೂ ಕೆಜೆಪಿಯಲ್ಲಿ ತಮ್ಮ ಜತೆಗಿದ್ದ ನಾಯಕರಿಗೆ ಜಿಲ್ಲಾಾಧ್ಯಕ್ಷ ಹಾಗೂ ವಿವಿಧ ಮೋರ್ಚಾಗಳ ನೇಮಕಾತಿಯಲ್ಲಿ ಮಾನ್ಯತೇ ನೀಡಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ಈ ಮೊದಲೇ ಸಿಟ್ಟಾಾಗಿದ್ದ ನಾಯಕರು ಬಿಎಸ್‌ವೈ ದರ್ಬಾರಿಗೆ ಬ್ರೇಕ್ ಹಾಕಲು ಹವಣಿಸುತ್ತಿಿದ್ದರು. ಈ ಸೋಲನ್ನೆೆ ದಾಳವಾಗಿಟ್ಟುಕೊಂಡು ಮುಂದಿನ ಚುನಾವಣೆ ವೇಳೆಗೆ ಬಿಎಸ್‌ವೈ ಹಾಗೂ ಹಿಂಬಾಲಕರಿಗೆ ಚುರುಕು ಮುಟ್ಟಿಿಸಲು ಸಜ್ಜಾಾಗಿದ್ದಾಾರೆ. ಅಲ್ಲದೇ ಮಿಷನ್ 150 ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಓಡಾಡುತ್ತಿಿರುವ ಯಡಿಯೂರಪ್ಪ ಈಗಾಗಲೇ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವ ಲಕ್ಷಣಗಳು ಕಂಡು ಬಂದ ಹಿನ್ನೆೆಲೆಯಲ್ಲಿ ವಿರೋಧಿ ಬಣ ವರದಿ ತಯಾರಿಸಿದೆ.
ವರಿಷ್ಠರ ಮಾತನ್ನು ಅವರಿಗೆ ತಿರುಗಿಸುವ ಯತ್ನ
ಕಾಂಗ್ರೆೆಸ್ ಮುಕ್ತ ಭಾರತ ಬಿಜೆಪಿ ಒಂದಂಶದ ಕಾರ್ಯಕ್ರಮವಾಗಿರುವುದನ್ನು ಮನಗಂಡಿರುವ ವಿರೋಧಿ ನಾಯಕರು ರಾಜ್ಯ ಸರಕಾರ ಸಾಕಷ್ಟು ಹಗರಣ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿಿದೆ. ಆದರೂ ಸಹ ವಿರೋಧ ಪಕ್ಷವಾಗಿರುವ ಬಿಜೆಪಿಗೆ ಸೋಲಾಗಿದೆ. ಇದರಿಂದ ಬಿಜೆಪಿ ಪಾಠ ಕಲಿಯಬೇಕಿದ್ದು, ಜನರನ್ನು ಸೆಳೆಯುವಲ್ಲಿ ಬಿಎಸ್‌ವೈ ವಿಫಲರಾಗಿದ್ದಾಾರೆ. ಇದರಿಂದಾಗಿ ಕಾಂಗ್ರೆೆಸ್ ಮುಕ್ತ ಭಾರತದ ಕನಸು ಕಾಣುತ್ತಿಿರುವ ನಿಮಗೆ ( ವರಿಷ್ಠರಿಗೆ) ಕರ್ನಾಟಕ ಅಡ್ಡಗಾಲು ಆಗಬಾರದು ಆ ನಿಟ್ಟಿಿನಲ್ಲಿ ಕೂಡಲೇ ಕ್ರಮಕ್ಕೆೆ ಮುಂದಾಗಬೇಕು ಎನ್ನುವ ಮಾತನ್ನು ವರಿಷ್ಠರಿಗೆ ಹೇಳುವ ಮೂಲಕ ವರಿಷ್ಠರಲ್ಲಿ ಪರೋಕ್ಷವಾಗಿ ದೂರು ನೀಡಲು ನಿರ್ಧರಿಸಿದೆ.
ಒಟ್ಟಿಿನಲ್ಲಿ ಮುಂದಿನ ಚುನಾವಣೆಯಲ್ಲಿ ಜಯ ಸಾಧಿಸಿ ಮತ್ತೆೆ ಅಧಿಕಾರದ ಗದ್ದುಗೆ ಏರುವ ಮೂಲಕ ಎರಡನೇ ಬಾರಿ ಸಿಎಂ ಆಗುವ ಹಾಗೂ ಆ ಮೂಲಕ ದಕ್ಷಿಣ ಭಾರತದಲ್ಲಿ ಸ್ವತಂತ್ರ್ಯವಾಗಿ ಬಿಜೆಪಿಯನ್ನು ಅಧಿಕಾರಕ್ಕೆೆ ತರುವ ಕನಸು ಕಾಣುತ್ತಿಿರುವ ಬಿಎಸ್‌ವೈಗೆ ಅವರ ಪಕ್ಷದ ಮುಖಂಡರೆ ಈ ರೀತಿ ವಿರೋಧಿ ನೀತಿ ಅನುಸರಿಸುತ್ತಿಿರುವುದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.