Friday, December 27, 2013

ಈಡೆರದ ಆಸೆ : ಅಮರನಾದ ಪ್ರೇಮ

ನಿಜಕ್ಕೂ  ಈ ಪ್ರೇಮ ಕಥೆಯ ಕೊನೆಯ ಕಂತನ್ನೂ ಬರೆಯಲು ತುಂಬಾನೇ ಕಷ್ಟವಾಗುತ್ತಿದೆ.

ಸುಮಾರು ವರ್ಷಗಳ ಕಾಲ ಬಚ್ಚಿಟ್ಟಿದ್ದ ಪ್ರೇಮವನ್ನು ಹೇಳಿಕೊಂಡಿದ್ದ ನಾಯಕ ಪ್ರೇಮ ಹಾಗೂ ಅದನ್ನು ಕೇಳಿ ದುಃಖಿತಳಾಗದ್ದ ನಾಯಕಿ ರಮ್ಯಾ ಈಗ ಮತ್ತೆ ದೂರವಾಗುತ್ತಿದ್ದಾರೆ. ಕಾರಣ ಅವಳು ಗೃಹಿಣಿ. ಸಮಾಜದಲ್ಲಿ ಈ ರೀತಿಯ ಸಂಬಂಧಕ್ಕೆ ಯಾವುದೇ ಬೆಲೆ ಇರದು ಎಂದು ಅರಿತಿದ್ದ ಪ್ರೇಮ ಇಷ್ಟು ವರ್ಷಗಳಾದರೂ ಅದನ್ನು ಹೇಳಿರಲಿಲ್ಲ. ಆದರೆ ಅವಳು  ಒತ್ತಾಯಮಾಡಿದಳೆಂಬ ಕಾರಣಕ್ಕೆ ಪ್ರೀತಿಸುತ್ತಿರುವ  ವಿಷಯ ಹೇಳಿದ ಪ್ರೇಮನಿಗೆ ಒಳಗೊಳಗೆ ಅಪರಾಧಿ ಮನೋಭಾವನೆ ಕಾಡಹತ್ತಿತು. ಈ ನಡುವೆ ಅವಳಿಗೆ ಸಂದೇಶ ಕಳುಹಿಸಿದ ಪ್ರೇಮನಿಗೆ ಬಂದ  ಉತ್ತರ ಅವನನ್ನು  ಇನ್ನಷ್ಟು ಗಾಸಿ ಘೋಳಿಸಿದ್ದವು. ಸ್ನೇಹಿತರಿದ್ದಾಗಿನಿಂದ ಹಿಡಿದು ಇಲ್ಲಿಯವರೆಗೂ ಎಲ್ಲಿಯೂ ಸಹ ಎಂದು ಆತ ಅವಳ ಮೇಲೆ ಸಿಟ್ಟು ಮಾಡಿಕೊಂಡವನಲ್ಲ.  ಎಲ್ಲೇ ಮೀರಿದವನೂ ಅಲ್ಲ. ಅವಳನ್ನು ದೇವತೆಯಂತೆ ಪೂಜಿಸುತ್ತಿದ್ದ. ಅವಳನ್ನು ಅಪ್ಪಿ ತಪ್ಪಿಯೂ ಕೆಟ್ಟ ಭಾವನೆಯಿಂದ ಮುಟ್ಟಿದವನು ಅಲ್ಲ. ಅವಳು ಸಹ  ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಳು. ಅವನನ್ನು ಪ್ರೀತಿಸುತ್ತಿದ್ದರೂ ಸಹ ಅವಳು ಅವನ ಮುಂದೆ ಎಂದಿಗೂ ಆ ರೀತಿಯ ನಡುವಳಿಕೆ ತೋರಿರಲಿಲ್ಲ. ಕಾರಣ ಮತ್ತದೇ ಸ್ನೇಹ. ಇಷ್ಟು ಗಾಡವಾಗಿದ್ದ ಸ್ನೇಹ ಪ್ರೇಮಕ್ಕೆ ತಿರುಗಿದ್ದರೂ ಅದನ್ನು ವ್ಯಕ್ತಪಡಿಸಿದ  ಇಬ್ಬರೂ ಈಗ ಕಣ್ಣಿರಿನಲ್ಲಿ ಕೈ  ತೊಳಯುವಂತಾಗಿತ್ತು. ಆದರೆ ಇದನ್ನೆಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಇತ್ತು. ಆದರೆ  ನಾಯಕ ಪ್ರೇಮ ಮಾತ್ರ ಮನೆಯಲ್ಲಿ ಮದುವೆ ಮಾತು ಎತ್ತಿದರೆ ಸಾಕು ಉರಿದು ಬೀಳುತ್ತಿದ್ದ. ಅವನನ್ನು ಇಷ್ಟಪಟ್ಟಿದ್ದ ಹಲವಾರು ಹುಡುಗಿಯರು ಅವನೆದರು ಮಂಡಿಯೂರಿ ಕುಳಿತರು ಅವನು ಜಪ್ಪಯ್ಯ  ಎನ್ನಲಿಲ್ಲ. ಅದರಲ್ಲೂ ಒಂದು ಹುಡುಗಿಯಂತೂ ಆತ್ಮಹತ್ಯೆಗೆ ಯತ್ನಿಸಿದ್ದರೇ ಇನ್ನೋಬ್ಬಳು ತನ್ನ ಸರ್ವಸ್ವವನ್ನು ಈತನಿಗೆ ಧಾರೆ ಎರೆಯಲು ಕಾತುರಳಾಗಿದ್ದಳು ಆದರೂಸಹ ಪ್ರೇಮ ಮಾತ್ರ ಅದ್ಯಾವುದಕ್ಕೂ ಬೆಲೆ ನೀಡದೆ ತನ್ನ ಗುಪ್ತ ಪ್ರೇಯಸಿ ರಮ್ಯಳನ್ನು ಪ್ರೀತಿಸುತ್ತಿದ್ದ.
ಈ ನಡುವೆ ಗೃಹಿಣಿಯಾಗಿದ್ದ ರಮ್ಯಾ ಆಗೊಂದು ಈಗೊಂದು ಸಂದೇಶಗಳನ್ನು ಬಿಟ್ಟರೆ ಎಂದೂ ಸಹ ಅವನ ಜತೆ ಮಾತನಾಡುವುದಾಗಲಿ ಭೇಟಿ ಮಾಡುವುದಾಗಲಿ ಮಾಡಲೇಯಿಲ್ಲ. ಅವಳ ಸ್ಥಿತಿಯನ್ನು ಅರಿತಿದ್ದ ಪ್ರೇಮ ಸಹ ತನ್ನ ಪ್ರೇಮವನ್ನು ಬಿಟ್ಟುಕೊಟ್ಟಿದ್ದ.  ಆದರೆ ಅವನ ಮನಸ್ಸಿನಲ್ಲಿ ಅವಳು ಮಾತ್ರ ಅಚ್ಚಳಿಯದೆ ಉಳಿದು ಬಿಟ್ಟಿದ್ದಳು.  ಜತೆಗೆ ತನ್ನ ವ್ಯವಹಾರದಲ್ಲಿ ಲಾಸ್ ಮಾಡಿಕೊಂಡ ಪ್ರೇಮ ಮತ್ತಷ್ಟು ಕೃಷನಾದ. ಇದರಿಂದಾಗಿ ಅವನ ಆರೋಗ್ಯ ಸಹ ಹದಗೆಟ್ಟಿತು. ಆಗ ಅವನ ಮನೆಯವರಿಗೆ ಚಿಂತೆ ಕಾಡಲಾರಂಭಿಸಿತು. ಅವನಿಗೆ ಇದದ್ದು ಒಂದು ಆಸೆ ಅದು ರಮ್ಯಾಳನ್ನು ಲಾಂಗ್ ಡ್ರೈವಗೆ ಕರೆದುಕೊಂಡು ಹೋಗುವುದು, ಅಲ್ಲಿ ಅವನ ಕೈಯಿಂದ ಅವಳಿಗೆ ಊಟ ಮಾಡಿಸುವುದು ಅಷ್ಟೇ. ಆದರೆ ಕೊನೆಗೂ ಅದಕ್ಕೆ ಅವಕಾಶ ಸಿಗಲೇ ಯಿಲ್ಲ. ಇದರಿಂದಾಗಿ ಅವನ ತನ್ನ ಜೀವನವನ್ನೇ ಕೊನೆಗೊಳಿಸಲು ಉದ್ದೇಶಿಸಿದ. ಒಂದು ದಿನ ಮುಂಜಾನೆಯ ಸಮಯದಲ್ಲಿ ಹೊರಟ ಪ್ರೇಮ ಮತ್ತೆ ತಿರುಗಿ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ. ಅಂದು ಮುಂಜಾನೆ ಎದ್ದ ಪ್ರೇಮ ತನ್ನ ನೆಚ್ಚಿನ ಸೂಟ್ ಧರಿಸಿ ಟಿಪ್ ಟಾಪ್ ಆಗಿ ಹೋರಟ, ಕಾಲು ನಡಿಗೆಯಲ್ಲಿ ಸುಮಾರು ದೂರ ನಡೆದ ಮೇಲೆ ಅಲ್ಲಿ ಅವನಿಗೆ ದೂರದ ಬೆಟ್ಟವೊಂದು ಕಾಣಿಸಿತು. ಬೆಟ್ಗದ ತುದಿಗೇರಿದ ಆತ   ಇನ್ನೇನು ಸಾಯಬೇಕು ಎನ್ನುವ ಸಂದರ್ಭದಲ್ಲಿ  ದಿವ್ಯವಾಣಿಯೊಂದು ಕೇಳಿದ ಅನುಭವವಾಯಿತು. ಹಿಂದಿರುಗಿ ನೋಡಿದ ಪ್ರೇಮನಿಗೆ ಸನ್ಯಾಸಿಗಳೊಬ್ಬರು ಆತನನ್ನು ನೋಡುತ್ತಿರುವುದು ಕಾಣಿಸಿತು. ಆಗ ಅವರ ಮಾರ್ಗದರ್ಶನ ಪಡೆದ ಪ್ರೇಮ ಮುಂದೆ ಅವರನ್ನು ಹಿಂಬಾಲಿಸಿದ. ಅವರು ಅವನಲ್ಲಿನ ಆಧ್ಯಾತ್ಮದ ಹಸಿವನ್ನು ಗಮನಿಸಿ ಆತನಿಗೆ ದೀಕ್ಷೆ ನೀಡಿದರು. ಆಗ  ಪ್ರೇಮನಾಗಿದ್ದವ ಬದಲಾಗಿ ಸ್ವಾಮೀ ಪ್ರೇಮಾನಂದ ಗೂರುಜಿಯಾಗಿ ಬದಲಾದ. ಹಿಂದಿನ ಎಲ್ಲ ಘಟನೆಗಳನ್ನು ,ಮರೆತು ಸಮಾಜಕ್ಕೆ ದಾರಿ ದೀಪವಾದ. ಆದರೆ ಅವನನ್ನು ಈ ಹಂತಕ್ಕೆ ತಂದ ರಮ್ಯಾ ಮಾತ್ರ  ಅಲ್ಲೇ ಉಳಿದಳು. ಆದರೆ ಅವನ ಈ ಸ್ಥಿತಿಗೆ ಕಾರಣವಾಗಿದ್ದೂ ಏನು ಎನ್ನುವುದು ಮಾತ್ರ ಯಾರಿಗೂ ತಿಳಿಯಲಿಲ್ಲ. ಕಾರಣ ಅವನು ಎಲ್ಲಿಯೂ ಸಹ ಅಪ್ಪಿ-ತಪ್ಪಿ ಬಾಯಿಬಿಡಲಿಲ್ಲ.  ಈ ಪ್ರೇಮದಲ್ಲಿ ಅವನ ಆಸೆಗಳು ಈಡೆರಲಿಲ್ಲ ಆದರೆ ಪ್ರೇಮನ ನಿಷ್ಕಲ್ಮಶ ಪ್ರೇಮ -ಪ್ರೀತಿ-ಪ್ಯಾರ- ಇಷ್ಕ -ಮೋಹಬ್ಬತ್ ಮಾತ್ರ ಅಮರವಾಯಿತು.

"ಪ್ರೇಮ " ಪತ್ರ : ಹೇಳಲಾಗದ ಪ್ರೀತಿಯ ಪತ್ರ

ಸ್ನೇಹಿತರೇ ಪ್ರೇಮ ಮತ್ತು  ರಮ್ಯಳ ಪ್ರೇಮದ ವಿಷಯ ನಿಮಗೆ ಗೊತ್ತಿರುವಂತೆ ಒಂದು ಹಂತಕ್ಕೆ ಬಂದು ನಿಂತಿದೆ. ಮದುವೆಯಾಗಿರುವ ರಮ್ಯಳನ್ನು ಪ್ರೀತಿಸುವುದು ತಪ್ಪು ಎಂದು ಗೊತ್ತಿದ್ದರೂ ಸಹ ಪ್ರೇಮ ಮಾತ್ರ ತನ್ನ ಪ್ರೇಮಕ್ಕೆ ಯಾವುದೇ ಕಪ್ಪು ಚುಕ್ಕಯಾಗದಂತೆ ನೋಡಿಕೊಂಡಿದ್ದಾನೆ. ಅವಳು ಸಹ ತಮ್ಮ ಸ್ನೇಹಕ್ಕೆ ಬೆಲೆ ನೀಡಿ ಪ್ರೇಮವನ್ನು ಹಿಡಿದಿಟ್ಟಿಕೊಂಡಿದ್ದಳು. ಆದರೆ ಈಗ ಅವಳೇ ಅವನ ಬಾಯಿ ಬಿಡಿಸುವ ಮೂಲಕ ಅವನು ಕಣ್ಣಿರಿಡುವಂತೆ ಮಾಡಿದ್ದಾಳೆ. ಇತ್ತ ಪ್ರೇಮ ತಾನು ಪ್ರೀತಿಸಿದ ಹುಡುಗಿ ನೀನೆ ಎಂದು ಹೇಳುವ ಮೂಲಕ ಅವಳಿಗೆ ತನ್ನ ಪ್ರೀತಿಯನ್ನು ವಿವರಿಸಿದ್ದಾನೆ. ಆದರೆ ಅವನಲ್ಲಿ ಈಗ ಒಂದು ರೀತಿಯ ಗೀಲ್ಟ ಕಾಡಲು ಆರಂಭಿಸಿದೆ.  

ಇದು ಒತ್ತಟ್ಟಿಗಿರಲಿ ಸ್ನೇಹಿತರೇ, ಈಗ  ಒಂದು ವಿಷಯ ಹೇಳಲೇಬೇಕು ಅದೇನಪ್ಪ ಅಂದ್ರೆ, ಪ್ರೇಮ ನೂ ಕೂಡಾ ತನ್ನ ಹುಡುಗಿಗೆ ಅವಳ ಮದುವೆಗೆ ಮುಂಚೆ ಒಂದು ಪ್ರೇಮ ಪತ್ರ ಬರೆದಿದ್ದ.  

" ಹಾಯ್ ಚಿನ್ನ, ಹೇಗಿದಿಯಾ, ಎಷ್ಟು ದಿನ ಆಯ್ತು ನಿನ್ನ ನೋಡಿ, ಆ ನಿನ್ನ ನಗು,  ಆ ನಿನ್ನ ಇಳಿಬಿಟ್ಟ ಕೂದಲೂ ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಶಾಂತತೆ, ಏನೇ ಆದರೂ ಯಾರಿಗೂ ಹೇಳದೇ ಏನನ್ನೂ ತೋರಿಸಿ ಕೋಡದೆ ಇರುವ  ನಿನ್ನ  ಈ ಮಾರ್ಗದರ್ಶಕ ವ್ಯಕ್ತಿತ್ವಕ್ಕೆ  ಕಣೇ ನಾನು ಸೋತು ಹೋಗಿದ್ದು,
ನಿನ್ನಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ ಸ್ನೇಹ ಶ್ರೀಗಂಧದ ಪರಿಮಳದಂತೆ. ಆ ಸವಿನೆನಪು ನನ್ನ ಬದುಕನ್ನು ಹಸಿರಾಗಿಸಿದೆ. ಅಂದು ನಿನ್ನ ನೋಡಿದ ನಾನು ಇಂದಿನವರೆಗೂ ಆ ಮುಖವನ್ನು ಮರೆಯಲು ಸಾಧ್ಯವಾಗಿಲ್ಲ. ನಿನ್ನ ಪ್ರತಿಯೊಂದು ಮಾತು ಕ(ವಿ)ತೆ ಇಂದಿಗೂ ನನ್ನ ಕಿವಿಯಲ್ಲಿ ಹಾಗೇ ಇದೆ. ಎರಡು ವರ್ಷಗಳ ನಂತರ ಆದರೂ ನೀನು ನನ್ನ ಮರೆತಿಲ್ಲ. ಅದು ನನಗೆ ಎಷ್ಟು ಖುಷಿ ನೀಡಿದೆ ಗೊತ್ತಾ ಚಿನ್ನ. 
""ನೀನು ಬಂದ ಮೇಲೆ ಮೇಲೆ ತಾನೇ ಇಷ್ಟೂ ಚಂದ  ಈ ಬಾಳು
ನೀನೇ ತಾನೆ ಹೇಳೆ ಕೋಟ್ಟೆ ಪ್ರೀತಿಸಲು'' 
ನಿಜವಾಗ್ಲು ನಿನು ಮರಳಿ ಪೋನ ಮಾಡಿದ ದಿನಾ ನಾನು ರಾತ್ರಿಯಲ್ಲ ನಿದ್ದೆನೇ ಮಾಡ್ಲಿಲ್ಲ. ಯಾಕೇ ಗೊತ್ತಾ ನಿನ್ನ ಸ್ನೇಹನೇ ಅಂತದ್ದೂ, ಆದರೆ ಮುಂದೆ ನೀನು ಯಾರನ್ನೋ ಪ್ರೀತಿಸ್ತೀನಿ ಅಂತ ಹೇಳಿದಾಗ ಆದ ಗಾಯ  ಇನ್ನೂ ಆರಿಲ್ಲ.  ಈಗಲೂ ಕಾಲ ಮಿಂಚಿಲ್ಲ ಚಿನ್ನು ನಾನು ನಿನ್ನ ತುಂಬ ಪ್ರೀತಿಸ್ತೀನಿ. ಎಷ್ಟೋ ಬಾರಿ ನಿನ್ನ ಹತ್ರ ಹೇಳಬೇಕು ಅಂದ್ಕೋಂಡೆ ಆದ್ರೆ ಹೇಳಕೋ ಆಗ್ಲಿಲ್ಲ.  ಬೇರೆಯಾರನ್ನೋ ಮದುವೆ ಮಾಡ್ಕೊಂಡು ಬಾಳೋದಕ್ಕಿನ ನಿನ್ನ ಮದುವೆಯಾದ್ರೆ ಉತ್ತಮ ಅಂತ ನನ್ನ ಅಭಿಪ್ರಾಯ. ನಿನ್ನ ಅಭಿಪ್ರಾಯನಾ ಬೇಗ ತಿಳಿಸು

""ಮಿಂಚಾಗಿ ನೀನು ಬರಲು ನಿಂತಲಿಯೇ ಮಳೆಗಾಲ
ಬೆಚ್ಚಗೆ ನೀ ಜತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನಲ್ಲೇ ನನಗೆ ಉಳಿಗಾಲ..  

ವಿರಹದ ಬೇಗೆಯಲ್ಲಿ ಬೇಯುತ್ತಿರುವ ನನ್ನಗೆ ಒಪ್ಪಿಗೆ ಸೂಚಿಸುವ ಮೂಲಕ ಪ್ರೀತಿಯ ಮಹಲ್ ಕಟ್ಟುತ್ತಿಯೋ ಅಥವಾ ನಿರಾಕರಿಸಿ ನಮ್ಮ ಪ್ರೀತಿಗೆ ಗೋರಿ ಕಟ್ಟುತ್ತಿಯೋ ನಿನಗೆ ಬಿಟ್ಟಿದ್ದು..

( ಓದುಗರೆ ಈ ಪ್ರೀತಿ ಹೇಗ ಮುಂದುವರಿತು ರಮ್ಯಳಾ ಮದುವೆ ಮುಂಚೆ ಅವರ ಸ್ನೇಹ ಹೇಗಿತ್ತು ಎನ್ನುವ ಇನ್ನೂ ಕೆಲವು ಕೂತುಹಲಕಾರಿ ಘಟನೆಯೊಂದಿಗೆ ಮತ್ತೆ ಬೇಟಿಯಾಗೋಣ) 




Sunday, December 22, 2013

ಒಂದು ಸಣ್ಣ ಪ್ರೇಮ ಕಥೆ

ಅದೊಂದು ಊರು ಅಲ್ಲಿನ ಒಂದು ಹುಡುಗ (ಕಥಾ ನಾಯಕ ಪ್ರೇಮ) ನಿಗೂ ದೂರದ ಊರಿನ ಹುಡುಗಿ( ಕಥಾ ನಾಯಕಿ ರಮ್ಯ)ಗೂ ಪರಿಚಯ ಆಯ್ತು. ಆದರೆ ನಂತರದ ದಿನಗಳಲ್ಲಿ ಆ ಹುಡುಗ ಆ ಹುಡುಗಿ ಭೇಟಿ ಆಗಿರಲಿಲ್ಲ. ಆದರೆ ಸುಮಾರು ವರ್ಷಗಳ ನಂತರ  ಒಂದು ಮದುವೆ ಇವರಿಬ್ಬರ ಅನನ್ಯ ಸ್ನೇಹಕ್ಕೆ ವೇದಿಕ ಆಗುತ್ತೆ. ಅಲ್ಲಿಂದ ಮುಂದೆ ಗಾಡವಾಗುತ್ತಾ ಬಂದ ಸ್ನೇಹ ಯಾವತ್ತೂ ಹಳಿ ತಪ್ಪಲಿಲ್ಲ   ಎಲ್ಲೇ ಮೀರಲಿಲ್ಲ.  ಆ ವೇಳೆಗೆ ಆಗಲೇ ರಮ್ಯಾ ತಾನು  ಒಂದು ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ ನನಗೆ ನೀನು ನನಗೆ ಸಹಾಯ ಮಾಡಬೇಕೆಂದು ಆ ಪ್ರೇಮನಲ್ಲಿ ಕೇಳ್ತಾಳೆ. ಆಯ್ತು ಎಂದ ಪ್ರೇಮ ಅವಳೆಡೆಗೆ ಧಾವಿಸುತ್ತಾನೆ. ಆದರೆ ಆ ವೇಳೆಗಾಗಲೇ ಇದನ್ನು ಅರಿತಿದ್ದ ರಮ್ಯಾಳ ತಂದೆ ಅವಳನ್ನು ಕಲಿಕೆಯನ್ನು ಬಿಡಿಸಿ ರಾಜಧಾನಿಯಿಂದ ಮನೆಯಲ್ಲಿ  ಇಟ್ಟುಕೊಂಡಿರುತ್ತಾನೆ.  ಇದನ್ನು ಕಂಡ ಕಥಾ ನಾಯಕ ಪ್ರೇಮ ಬಹಳಷ್ಟು ನೊಂದುಕೊಳ್ಳುತ್ತಾನೆ.

ಎರಡು ವರ್ಷಗಳ ನಂತರ :  ಇದೆನಪ್ಪಾ ಧೀಡಿರ ಅಂತ ಎರಡು ವರ್ಷಾ ಆಯ್ತಾ ಅಂತ ಹುಬ್ಬೇರಿಸಬೇಡಿ. ಕಾರಣ ಈ ಎರಡು ವರ್ಷ  ಪ್ರೇಮನಿಗೂ ಹಾಗೂ ರಮ್ಯಳಿಗೂ ಯಾವುದೇ ರೀತಿಯ ಸಂವಹನ ನಡೆದಿರುವುದಿಲ್ಲ. ಕಾರಣ ಅವಳು ಏನನ್ನೋ ಸಾಧಿಸುವ ನಿಟ್ಟಿನಲ್ಲಿ ಹಾಗೂ  ಪ್ರೇಮ ಸಹ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆದಿರ್ತಾರೆ.  ಎರಡು ವರ್ಷಗಳ ನಂತರ ಆಕೆಗೆ ತನ್ನ ಆತ್ಮೀಯ ಸ್ನೇಹಿತನ ನೆನಪಾಗುತ್ತೆ.  ಅವಳು ಒಂದು ದಿನ ಅನುಮಾನದಿಂದಲೇ ಅವನ ಹಳೇ ನಂಬರಿಗೆ ಪೋನ್ ಮಾಡ್ತಾಳೆ. ಅವನು ಯಾರದೋ ನಂಬರ  ಎಂದು ಸುಮ್ಮನಾಗುತ್ತಾನೆ. ಆಗ ಅವನಿಗೆ ಸಂದೇಶವೊಂದು ಬರುತ್ತೇ. ನಾನು ರಮ್ಯ ಕಣೋ ಹೇಗಿದಿಯಾ. ನಾನು ನಿನ್ನ ಜತೆ ಮಾತಡಬೇಕು ಅಂತಾಳೆ. ಆಗ ಅವನು ಆಯ್ತು ಆದ್ರೆ ಈಗ ಬೇಡ ರಾತ್ರಿ 12 ಮೇಲೆ ಮಾಡು ಅಂತಾನೆ.
5 ಗಂಟೆಗಳ ಕಾಲ ಸುಧಿರ್ಘ ಮಾತು : ಎರಡು ವರ್ಷಗಳ ನಂತರ ಮಾತಿಗಿಳಿದ ರಮ್ಯ ಬರೋಬ್ಬರಿ 2.30 ಗಂಟೆಗೂ ಹೆಚ್ಚು ಕಾಲ ಮಾತಾಡ್ತಾಳೆ. ಆಗ ಕರೆನ್ಸಿ ಖಾಲಿ ಆಗುತ್ತೇ. ಮತ್ತೆ ಈತ ಅವಳಿಗೆ ಪೋನ್ ಮಾಡ್ತಾನೆ. ಅವನಿಗೋ ಖುಷಿಯೋ ಖುಷಿ ಕಾರಣ ಅವಳು ಎಂದರೆ ಅದೇನೋ ಅವನಿಗೆ ತುಂಬ  ಇಷ್ಟ. ಇಲ್ಲಿನ ಸ್ನೇಹಕ್ಕೆ ಯಾವುದೇ ರೀತಿಯ ಬಣ್ಣವಿರಲಿಲ್ಲ ಅದೊಂದು ಸುಂದರ ಅನುಬಂಧವಷ್ಟೇ. ಹೀಗೆ ಬೆಳಗಿನವರೆಗೂ ಎರಡು ವರ್ಷಗಳ ಮಾತಿನ ಬರ ನೀಗಿಸಿಕೊಂಡು ಸ್ನೇಹಿತರು ಮತ್ತೆ ಹಳೆಯ ದಿನಗಳಂತೆ ಒಂದಾಗಿರುತ್ತಾರೆ.
ಮತ್ತೆ ರಮ್ಯಳ ಪ್ರೇಮಾಯಣ : ಈ ನಡುವೆ ತನ್ನ ಊರಿನ ಪ್ರಸಿದ್ದ ಜಾತ್ರೆಗೆ ಸ್ನೇಹಿತನನ್ನು ಕರೆಸಿಕೊಳ್ಳುವ ರಮ್ಯ ಅವನೊಂದಿಗೆ ಹಾಗೂ ಇತರೇ ಸ್ನೇಹಿತರೊಂದಿಗೆ ಮೂರು ದಿನ ಅಲ್ಲಿ ಇಲ್ಲಿ ಸುತ್ತಾಡುತ್ತಾಳೆ.   ಜಾತ್ರೆ ಮುಗಿದು ಪ್ರೇಮ ತನ್ನ ಸ್ವಂತ  ಊರಿಗೆ ಬಂದಿದ್ದೇ ತಡ ಅವನ ಜತೆ ಮಾತಿಗಿಳಿದ ರಮ್ಯ ನಾನು ನನ್ನ ಅತ್ತೆ ಮಗನನ್ನು ಪ್ರೀತಿಸುತ್ತಿರುವುದಾಗಿ ತಿಳಿಸುತ್ತಾಳೆ. ಇದನ್ನು ಅರಿತ  ಪ್ರೇಮ ಮದುವೆಗೆ ಏನು ಸಮಸ್ಯೆ ಎಂದು ಕೇಳುತ್ತಾನೆ. ಆಗ ರಮ್ಯ ಮೊದಲು ನನ್ನನ್ನು ಪ್ರೀತಿಸುತ್ತೀದ್ದ ನನ್ನ ಅತ್ತೆ ಮಗ ನಾನು ಆಡಿದ ಒಂದು ಮಾತಿನಿಂದ ಬೇಸರಗೊಂಡು ನನ್ನನ್ನು ದೂರ ಮಾಡಿದ್ದು ನನಗೆ ದಿಕ್ಕು ತೋಚದಂತಾಗಿದೆ ಹೇಗಾದರೂ ಮಾಡಿ ಅವನ ಮನವೊಲಿಸಬೇಕಿದೆ ಎಂದು ಹೇಳುತ್ತಾಳೆ. ಆಯಿತು ಎಂದ ಪ್ರೇಮ ತನಗೆ ಗೋತ್ತಿರುವ ಜ್ಯೋತಿಷಿಗಳು ಹಾಗೂ ವಿದ್ವಾಂಸರ ಬಳಿ ಇಬ್ಬರ ಪೋಟೋಗಳನ್ನು ಹಾಗೂ ಜಾತಕಗಳನ್ನು ತೋರಿಸಿ ಇವರ ಮದುವೆಯಾಗುವಂತೆ ಮಾಡಿ ಎಂದು ಬೇಡುತ್ತಾನೆ. ಜತೆಗೆ ತನಗೆ ನಂಬಿಕೆಯಿದ್ದ ದೇವರಲ್ಲಿ ಪ್ರಾರ್ಥಿಸಿ ಅವರು ಒಂದಾಗುವಂತೆ ಮಾಡಿ ಎಂದು ಬೇಡಿಕೊಳ್ಳುತ್ತಾನೆ.
ಆದರೆ ಪಟ್ಟು ಸಡಿಲಿಸದ ರಮ್ಯಾಳ ಅತ್ತೆ ಮಗ ಅವಳನ್ನು ಮದುವೆಯಾಗಲಾರೆ ಎಂದು ಹೇಳುತ್ತಾನೆ. ಇದರಿಂದ ಜರ್ಜಿತಳಾದ ರಮ್ಯಳನ್ನು ಸಂತೈಸಿದ ಪ್ರೇಮ ಅವಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾನೆ. ಈ ನಡುವೆ ಅವನಿಗೆ ಗೊತ್ತಿಲ್ಲದಂತೆ ರಮ್ಯಳನ್ನು ಪ್ರೀತಿಸ ತೊಡಗುವ ಪ್ರೇಮ ಆ ವಿಷಯವನ್ನು ಅವಳಿಗೆ ತಿಳಿಸುವುದಿಲ್ಲ ಕಾರಣ ಅವಳು ಒಪ್ಪದಿದ್ದರೇ ಎನ್ನುವ ಭಯ ಅವನಿಗೆ.
ಅನಟೋಲ್ಡ ಲವ್ : ನಿಜಕ್ಕೂ ಈ ಪ್ರೇಮ ಕಥೆ ಶುರುವಾಗುವುದೇ ಇಲ್ಲಿ. ಪ್ರೇಮನ ಮಾತು, ಕೃತಿ, ಅವನ ನೀಡಿದ ಬೆಂಬಲದಿಂದ ಪ್ರಭಾವಿತಳಾದ ರಮ್ಯ ಸಹ ಅವನನ್ನು ಪ್ರೀತಿಸತೊಡಗುತ್ತಾಳೆ. ಆದರೆ ಅವಳು ಸಹ  ಬಾಯಿ ಬಿಡುವುದಿಲ್ಲ. ಹೀಗೆ ದಿನ ಕಳೆದಂತೆ ಮನೆಯಲ್ಲಿ ರಮ್ಯಳಿಗೆ ಬೇರೆ ಕಡೆ ಗಂಡು ನೋಡಲು ಪ್ರಾರಂಭಿಸುತ್ತಾರೆ. ಈ ವಿಷಯ ಪ್ರೇಮನಿಗೂ ಗೊತ್ತಾಗುತ್ತದೆ ಆಗಲೂ ಸಹ ಅವನು ಬಾಯಿ ಬಿಡುವುದಿಲ್ಲ. ಕಾರಣ ಮತ್ತೇ ಅದೇ ಅವಳು ದೂರವಾದರೆ, ಅವಳು ಸಹ ಅವನಲ್ಲಿ ಈ ವಿಷಯ ಹೇಳುವುದಿಲ್ಲ. ದಿನಗಳು ಹೀಗೆ ಸಾಗಿರುವಾಗ ಒಂದು ಹುಡುಗನ ಪೋಟೋವನ್ನು ಹಾಗೂ ಜಾತಕವನ್ನು ಪ್ರೇಮನಿಗೆ ಮೇಲ್ ಮಾಡುವ ರಮ್ಯ  ಇವನನ್ನು ನಮ್ಮ ಮನೆಯವರೆಲ್ಲರೂ ಒಪ್ಪಿದ್ದು ನೀನು ಒಪ್ಪಿಗೆ ಸೂಚಿಸಿದರೆ ಹಾಗೂ ನನ್ನ ಜಾತಕದ ಜತೆ ಹೊಂದಾಣಿಕೆ ಯಾಗುತ್ತದೆ ಎಂದರೆ ನಾನು ಮದುವೆಯಾಗಲು ಸಿದ್ಧ ಎಂದು ತಿಳಿಸುತ್ತಾಳೆ. ಇದರಿಂದ ಬಹುವಾಗಿ ನೊಂದುಕೊಂಡ ಪ್ರೇಮ ಆಯಿತು ಎಂದು ತನ್ನ ಸ್ನೇಹಕ್ಕಾಗಿ ಪ್ರೀತಿಯನ್ನು ಬಿಟ್ಟುಕೊಡಲು ಒಪ್ಪಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾನೆ.
 ಮುಂದೆ ಮದುವೆಗೆ ಆಮಂತ್ರಣ ಬಂದಾಗ ಹೃದಯ ಚೂರಾದರೂ ಅವಳ ಸಂತಸದಲ್ಲಿ ತನ್ನನ್ನು ತಾನು ಸಂತೈಸಿಕೊಂಡ ಪ್ರೇಮ ಮದುವೆಗೆ ಹೋಗಿ ವಧುವರರಿಗೆ ಶುಭ ಕೋರುತ್ತಾನೆ. ಮದುವೆಯಾಗಿ ಸುಮಾರು ತಿಂಗಳು ಕಳೆದ ಮೇಲೇ ಏಕಾಏಕಿ ಪೋನ್ ಮಾಡುವ ರಮ್ಯ ಗಳಗಳನೇ ಅಳಲು ಶುರು ಮಾಡುತ್ತಾಳೆ. ಆಗ ಪ್ರೇಮ ಕಾರಣವೆನೆಂದು ಕೇಳಲು ಗಂಡ ವಿನಾಕಾರಣ ಅನುಮಾನ ಪಡುತ್ತಿದ್ದು ನನಗೆ ಜೀವನವೇ ಬೇಸರವಾಗಿದೆ ಎಂದು ದುಖಃ ಹಂಚಿಕೊಳ್ಳುತ್ತಾಳೆ.ಆಗ ಮತ್ತೆ ಅವಳಿಗೆ ಸಾಂತ್ವಾನ ನೀಡಿದ ಪ್ರೇಮ, ಗೊತ್ತಿರುವ ಜ್ಯೋತಿಷಿಗಳು ಹಾಗೂ ದೇವರ ಮೊರೆ ಹೋಗಿ ಅವರಿಬ್ಬರು ಚನ್ನಾಗಿರಲಿ ಎಂದು ಬೇಡಿಕೊಳ್ಳುತ್ತಾನೆ.
ಮಗುವಿನ ಸಂಭ್ರಮ : ನಂತರ ಗಂಡ ಹೆಂಡತಿಯ ನಡುವೆ ಇದ್ದ ಕಂದಕ ಮುಚ್ಚಿ ರಮ್ಯ ತಾಯಿಯಾಗತ್ತಾಳೆ. ಆಗಲೂ ಸಹ ತನ್ನ ಸ್ನೇಹವೇ ದೊಡ್ಡದು ಎಂದು ತಿಳಿದು ಪ್ರೇಮ ಮಗುವನ್ನು ಕಂಡು ಅದಕ್ಕೆ ಮುತ್ತಿಟ್ಟು ಬರುತ್ತಾನೆ. ಈ ನಡುವೆ ಅವನಿಗೆ ಜೀವನ ಬೇಸರವೆನಿಸ ತೊಡಗುತ್ತದೆ. ಜೀವನದಲ್ಲಿ ಕೆಲ ಕಹಿ ಘಟನೆಗಳು ಅವನನ್ನು ಆಧ್ಯಾತ್ಮದೆಡೆಗೆ ಒಯ್ಯಲಾರಂಭಿಸುತ್ತವೆ. ಸಣ್ಣ ಹುಡುಗನಿದ್ದಾನಿಂದಲೂ ಆಧ್ಯಾತ್ಮದ ಬಗ್ಗೆ ಅಪಾರ  ಒಲವಿದ್ದ ಪ್ರೇಮ  ಈ ವಿಷಯವನ್ನು ಅವಳಿಗೆ ತಿಳಿಸುತ್ತಾನೆ. ಅದಕ್ಕೆ ಅವಳಿಂದ ಯಾವುದೇ ಬಗೆಯ ಪ್ರತಿ ಉತ್ತರ ಬರುವುದಿಲ್ಲ. ಹೀಗೆ ಒಂದು ದಿನ ಸಂದೇಶ ವನಿಮಯ ಸಮಯದಲ್ಲಿ ರಮ್ಯ ಇವನ ಮದುವೆ ಬಗ್ಗೆ ಕೇಳುತ್ತಾಳೆ. ಆಗ ಅವನು ತಾನು ಒಂದು ಹುಡುಗಿಯನ್ನು ಪ್ರೀತಿಸಿದ್ದು ಅವಳಿಗೆ ಹೇಳಲಾಗಲಿಲ್ಲ. ಆದರೆ ಅವಳನ್ನು ಈಗಲೂ ತಾನು ಪ್ರೀತಿಸುತ್ತೀರುವುದಾಗಿಯೂ ಅವಳಿಗೆ ಮದುವೆಯಾಗಿ ಗೃಹಿಣಿಯಾಗಿದ್ದಾಳೆ ಎಂದು ತಿಳಿಸುತ್ತಾನೆ. ಕೆಲ ದಿನಗಳ ನಂತರ ಮತ್ತೆ ಸಂದೇಶ ವಿನಿಮಯ ಮಾಡುತ್ತಿರುವ ಸಂದರ್ಭದಲ್ಲಿ ಮತ್ತೆ ಆ ವಿಷಯ ಪ್ರಸ್ತಾಪವಾಗಿ ನೀನು ಪ್ರೀತಿಸಿದ ಹುಡುಗಿ ನಾನೇ...!  ನಾನು ಸಹ ನಿನ್ನನ್ನು ಪ್ರೀತಿಸಿದ್ದು, ನೀನು ನನ್ನನ್ನು ಪ್ರೀತಿಸುತ್ತಿದ್ದ ವಿಷಯ ತನಗೆ ಗೊತ್ತಿದೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ದೂರವಾಗಿದ್ದೇವೆ ನಾನು ಏನು ಮಾಡುವ ಸ್ಥೀತಿಯಲ್ಲಿ ಇಲ್ಲ.  ಎಂದು ಕೈ ಚೆಲ್ಲುತ್ತಾಳೆ.
ಹೀಗೆ ಮದುವೆಯಾಗಿರುವ ರಮ್ಯ ಹಾಗೂ  ಪ್ರೇಮ ನಡುವಿನ ಪ್ರೀತಿ ಮುಂದೇನಾಯ್ತ ಎನ್ನುವುದನ್ನು ಮುಂದಿನ ಬರಹದಲ್ಲಿ ತಿಳಿಸುತ್ತೇನೆ...

ಇಂತಿ ನಿಮ್ಮ 
ಪ್ರಶಾಂತ  ರಾಜ ರಾಜ ಗುರು...!

Thursday, November 28, 2013

ಬೆಳಗಾವಿ : ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಜನ್ಮತಳೆದ ಸುವರ್ಣ ಸೌಧದ ಎದುರು ಅಮಾಯಕ ರೈತನ ಬಲಿ ನಡೆದಿದೆ. ಅಷ್ಟಕ್ಕೂ ರಾಜ್ಯದಲ್ಲಿ ರೈತರ ವಿರುದ್ಧ ನಡೆಯುತ್ತಿರುವುದಾದರೂ ಏನು?

ಹೌದು... ಹಸಿರು ಕ್ರಾಂತಿಯ ಆರಂಭದಲ್ಲಿ ಹಸನ್ಮುಕಿಯಾಗಿದ್ದ ರೈತ ನಂತರದ ದಿನಗಳಲ್ಲಿ ಏಕೆ ಈ ರೀತಿಯ ಕೃತ್ಯಗಳಿಗೆ ಬಲಿಯಾಗುತ್ತಿದ್ದಾನೆ ಎಂದು ಒಮ್ಮೆ ಅವಲೋಕಿಸಿದರೆ ಸಿಗುವ ಉತ್ತರ ಬಂಡವಾಳ ಶಾಹಿಗಳ ಕೀಯಂತೆ ಕುಣಿಯುತ್ತಿರುವ ಆಡಳಿತಗಾರರು ಎಂಬುದು ಸ್ಪಷ್ಟವಾಗುತ್ತದೆ. ಉತ್ಪಾದನೆ ಹೆಚ್ಚಿಸುವ ದೃಷ್ಠೀಯಿಂದ ಆರಂಭಗೊಂಡ ಹಸಿರುಕ್ರಾಂತಿ ಬರಬರುತ್ತ ರೈತರ ಜೀವಕ್ಕೆ ಎರವಾಗ ತೊಡಗಿತು. ಸಾವಯವ ಕೃಷಿಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದ ರೈತರು ಬರಬರುತ್ತ ರಸಗೊಬ್ಬರಗಳ ಮೇಲೆ ಅವಲಂಬಿತರಾಗತೊಡಗಿದರು. ಜತೆಗೆ ವಿವಿಧ ರೀತಿಯ ಸವಲತ್ತುಗಳನ್ನು ಬಳಸಿಕೊಳ್ಳುವ ನೆಪದಲ್ಲಿ ಸಾಲಗಾರರು ಆದರು. ಈ ರೀತಿಯ ಸಾಲದ ಸುಳಿಯಲ್ಲಿ ಸಿಕ್ಕ ರೈತ ತನ್ನ ಅಹವಾಲನ್ನು ಆಡಳಿತಗಾರರ ಮುಂದೆ ಮಂಡಿಸಿದರು ಯಾವ ಸರ್ಕಾರಗಳು ಅವರ ನೆನವಿಗೆ ಬರಲಿಲ್ಲ. ಅವರು ಎಂದು ಸಹ ತನ್ನನ್ನು ಸಾಲ ಮುಕ್ತನನ್ನಾಗಿ ಮಾಡು ಎಂದು ಬೇಡಿಕೊಂಡವರಲ್ಲ, ಸರ್ಕಾರಗಳಿಗೆ ತಮ್ಮ ಬೆಳೆ ಬೇಯಿಸಿಕೊಳ್ಳಲು ಸಾಲ ಮನ್ನಾ ಮಾಡಿವೆ ಅಷ್ಟೇ.  ಪ್ರಕೃತಿಯೊಡನೆ ಜೂಜಾಡುವ ಅವನ ಕಷ್ಟ ಅವನಿಗೆ ಮಾತ್ರ ಗೊತ್ತು. ರೈತರ ಮಕ್ಕಳು ಎಂದು ಹೇಳಿಕೊಳ್ಳುವ ಆಡಳಿತಗಾರರು ರೈತರು ಅರ್ಜಿ ಹಿಡಿದು ಬಂದಾಗ ಹವಾನಿಯಂತ್ರಿಕ ರೂಮಿನೊಳಗೆ ಕುಳಿತು ಮಾಯಾಪೆಟ್ಟಿಗೆಯನ್ನು ವೀಕ್ಷಿಸುವುದರಲ್ಲಿ ಬ್ಯೂಸಿಯಾಗಿರುತ್ತಾರೆ. ಕಾರಣ  ಇಷ್ಟೇ ಅಧಿಕಾರದ ಮದ ನೆತ್ತಿಗೆರಿರುವುದರಿಂದ. ( ಲಾಲ್ ಬಹದ್ದೂರ ಶಾಸ್ತ್ರಿ  ಅವರನ್ನು ಬಿಟ್ಟು)
ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳುವ ಎಲ್ಲಾ ಪಕ್ಷಗಳು ಎಂದಿಗೂ ಸಹ ಅವನ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ. ಒಂದು ವೇಳೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ವಿಷಯಗಳೆ ಇಲ್ಲದೆ ತಮ್ಮ ಪಕ್ಷಗಳು  ಅಧಿಕಾರಕ್ಕೆ ಬರದಿದ್ದರೆ ಎಂಬ ಚಿಂತೆ ಅವರಿಗೆ.

ವೈಜ್ಞಾನಿಕ ಬೆಲೆ ನೀಡಲು ಆಗದವರು ಅಧಿಕಾರದಲ್ಲಿರಬೇಕೆ? : ರೈತರ ಬೆಳೆಗಳಿಗೆ ಪೂರಕ ಬೆಂಬಲ ನೀಡಲು ಆಗದಿದ್ದವರು ಅಧಿಕಾರದಲ್ಲಿರಬೇಕೆ ಎಂಬ ಪ್ರಶ್ನೆಗೆ ಇನ್ನೂವರೆಗೂ ಉತ್ತರ ಸಿಕ್ಕಿಲ್ಲ. ಸಿಗುವುದು ಇಲ್ಲ ಎಂದು ಅನಿಸುತ್ತಿದೆ. ಈಗಾಗಲೇ ಸಾಕಷ್ಟು ಫಲವತ್ತಾದ ಭೂಮಿ ಬಂಡವಾಳ ಶಾಹಿಗಳ ಕೈ ಸೇರಿ, ಕೃಷಿ ಉತ್ಪಾದನೆ ನೆಲಕಚ್ಚಿದ್ದು, ಇರುವ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗೆ ಬೆಲೆ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೂ ಸಹ ಆಳುವ ಸರ್ಕಾರಗಳು ಈ ಬಗ್ಗೆ ಕಿಂಚಿತ್ತು ತಲೆ ಕೆಡಿಸಕೊಂಡಿಲ್ಲ.

ಕೈಗಾರಿಕೆಗೆ ರಿಯಾಯ್ತಿ : ರೈತರಿಗೆ ಪಂಚಾಯ್ತಿ : ಕಳೆದ ಕೆಲ ವರ್ಷಗಳಿಂದ ಈಚೆಗೆ ಕೈಗಾರಿಕೊದ್ಯಮಿಗಳನ್ನು ಆಕರ್ಷಿಸಲು ಭಾರಿ ಕಸರತ್ತು ನಡೆಸಿರುವ ಸರ್ಕಾರಗಳು ಅವರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿವೆ. ಆದರೆ ಅದೇ ನಮ್ಮ ನಾಡಿನ ಬೆನ್ನಲೆಬಾಗಿರುವ ರೈತನಿಗೆ  ಬೆಲೆ ನೀಡಲು ಸತಾಯಿಸುತ್ತವೆ. ಯಾಕೆ ಹೀಗೆ ಎಂದು ನೋಡಿದರೆ ಮತ್ತೆ ಸಿಗುವ ಉತ್ತರ  ಕೈಗಾರಿಕೆಗಳಿಂದ ಬರುವ ಕಪ್ಪು ಹಣ. ಹೌದು. ಇದು ಕೇವಲ  ಆರೋಪವಲ್ಲ ಬದಲಾಗಿ ಕಟು ಸತ್ಯ. ಸಕ್ಕರೆ ಕಾರ್ಖಾನೆಗಳ ನೀಡಬೇಕಾಗಿದ್ದ ತೆರಿಗೆಯನ್ನು ಸಹ ಮನ್ನಾ ಮಾಡಿರುವ ಆಡಳಿತಗಾರರು ಅವರಿಂದ ಬರಬೇಕಾಗಿದ್ದ ತೆರಿಗೆಯಲ್ಲಿನ ಶೇ 50% ರಷ್ಟನ್ನು ತಮ್ಮ ಖಾತೆಗೆ ಜಮಾಮಾಡಿಕೊಂಡಿದ್ದಾರೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ಖೋತಾ ಆಗುವ ಜತೆಗೆ ಕೈಗಾರಿಕೊದ್ಯಮಿಗಳು ಕೋಟಿಗಟ್ಟಲೇ ಲಾಭ ಮಾಡಿಕೊಂಡಿದ್ದಾರೆ.

ಲೇಖನ ಅಷ್ಟು ಚೆನ್ನಾಗಿಲ್ಲ ಆದ್ಗರಿಂದ ಮತ್ತೆ ಮುಂದುವರೆಯುವುದು ....




Friday, October 11, 2013

ಟಿ ಆರ್ ಪಿ ನೇ ಮುಖ್ಯಾನಾ..?

ಟಿ ಆರ್ ಪಿ ನೇ ಮುಖ್ಯಾನಾ..? 


ಕಳೆದ 15 ದಿನಗಳಿಂದ ಇಂಥದೊಂದು ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಕಾರಣ ಇಷ್ಟೇ ಸಮಾಜವನ್ನು ಸರಿದಾರಿಗೆ ತರಬೇಕಾದ ಅಥವಾ ಸರಿ ದಾರಿಯಲ್ಲಿ ಮುನ್ನಡೆಸಲು ಸಹಕಾರಿಯಾಗಬೇಕಾದ ಮಾಧ್ಯಮಗಳು ತಮ್ಮ ಟಿ ಆರ್ ಪಿ ಗಾಗಿ
, ನಾನಾ ರೀತಿಯ ಕಸರತ್ತು ನಡೆಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.
ಉತ್ತಮ ಸಮಾಜಕ್ಕಾಗಿ, ನೇರ ದಿಟ್ಟ ನಿರಂತರ, ಪ್ರಾಮಾಣಿಕತೆ ಅದು ಇದು ಎಂದು ಟ್ಯಾಗ್ ಲೈನ್ ಎಳೆದುಕೊಂಡಿರುವ ದೃಶ್ಯ ಮಾಧ್ಯಮಗಳು ಇಂದು ನಿರಂತರವಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ.
ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆಗೆ ಕಡಿವಾಣ ಬೀಳಲೆ ಬೇಕಿದೆ.
ಕಡಿವಾಣ ಏಕೆ ?: ವಿವಿಧತೆಯಲ್ಲೂ  ಏಕತೆ ಪ್ರದರ್ಶಿಸುತ್ತಿರುವ ನಮ್ಮ ದೇಶದಲ್ಲಿ ಅಭಿಪ್ರಾಯ ಬೇದಗಳು ಸಹಜವೇ. ಆದರೂ ಸಹ  ಎಲ್ಲರೂ ಒಟ್ಟಾಗಿ ಬಾಳುತ್ತಿರುವುದು ಸಂತಸದ ಸಂಗತಿ. ಆದರೆ  ಇಂದು ಸಮಾಜವನ್ನು ವೈಚಾರಿಕತೆಯನ್ನುವ ಹಣೆಪಟ್ಟಿಯಲ್ಲಿ ಮುನ್ನಡೆಸಲು ಹಾಗೂ ಭಾರತೀಯ ಸಂಸ್ಕೃತಿಯನ್ನು ಮುಗಿಸಲು ಕಾಯುತ್ತಿರುವ ಕೆಲವರು ವಿನಾಕಾರಣ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮೌಢ್ಯಗಳನ್ನು ತೊಡೆದು ಹಾಕುತ್ತೇವೆ ಎನ್ನುವ ಅವರುಗಳು ಪ್ರಚಾರಕ್ಕಾಗಿ ಮಾಧ್ಯಮದ ಮೊರೆ ಹೋಗಿದ್ದಾರೆ. ಇದನ್ನು ತಿಳಿಯದ ಮಾಧ್ಯಮಗಳು ಅವರಿಗೆ ಮಣೆ ಹಾಕುವ ಮೂಲಕ ಲಕ್ಷಾಂತರ ಆಸ್ತಿಕರಲ್ಲಿ  ಗೊಂದಲವನ್ನುಂಟು ಮಾಡುತ್ತಿವೆ. ಇದರಿಂದಾಗಿ 2020 ಭಾರತ ಸುಪರ್ ಪವರ್ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವ ಅನೇಕರಿಗೆ ನೋವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಶಕ್ತಿಯಾಗಿಸಬೇಕು ಎನ್ನುವ ವಿವೇಕರ ವಾಣಿಯನ್ನು ಹಾಗೂ ದಾರ್ಶನಿಕ ರ ಮಾತನ್ನು ಮರೆತು ತಮ್ಮ ಪ್ರತಿಷ್ಠೆಗೋಸ್ಕೃರ  ಇನ್ನೊಬ್ಬರ ಆಸ್ತಿಕತೆ, ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿರುವ ಅವರುಗಳನ್ನು ಮಾಧ್ಯಮಗಳು ಸಹ ಬೆನ್ನು ತಟ್ಟುತ್ತಿರುವುದು ನೋವಿನ ಸಂಗತಿ.
ಭಾರತ ಆಧ್ಯಾತ್ಮತ ನೆಲವಾಗಿದ್ದು, ಇಲ್ಲಿ ಏಕ ಕಾಲಕ್ಕೆ ಎಲ್ಲವೂ ನಡೆದುಕೊಂಡು ಬರುತ್ತಿದೆ. ಒಂದೇಡೆ ವೈಚಾರಿಕತೆ ವಿಸ್ತರಿಸುತ್ತಿದ್ದರೆ ಇನ್ನೊಂದಡೆ ಆಧ್ಯಾತ್ಮಿಕತೆಯೂ ಸಹ ತಮ್ಮ ಮೂಲವನ್ನು ಕಾಪಾಡಿಕೊಳ್ಳುತ್ತಾ ಮನಸ್ಸಿಗೆ ಶಾಂತಿಯನ್ನು ನೀಡುತ್ತಿದೆ. ಹಿಂದುಸ್ಥಾನದಲ್ಲಿ ನಿಂತುಕೊಂಡು ನಾವು ಹಿಂದುಗಳಲ್ಲ ನಾವು ಲಿಂಗಾಯತರು ಎಂದು ಹೇಳುವ ಅವರು, ಬೇರೆಯವರ ಅಡ್ಡಪಲ್ಲಕ್ಕಿಯನ್ನು ವಿರೋಧಿಸುತ್ತಾರೆ. ಮಾನವೀಯತೆ ಬಗ್ಗೆ ಮಾತನಾಡುತ್ತಾರೆ ಆದರೆ ತಾವೇ ಸ್ವತಃ ಭಕ್ತರಿಂದ ಕಾಲು ಮುಗಿಸಿಕೊಳ್ಳುವ ಮೂಲಕ ನಾನು ನಿನಗಿಂತ ಶ್ರೇಷ್ಠ ಎಂದು ತೋರಿಸಿಕೋಳ್ಳುತ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ. ಅವರವರ ಭಕ್ತಿಗೆ ಅವರವರು ಕಂಡುಕೊಂಡ ಶಕ್ತಿಯನ್ನು ದೇವರು ಎಂದು ಕರೆಯುವುದುಂಟು. ಆದರೆ ಇನ್ನೊಬ್ಬರಿಗೆ ತೊಂದರೆ ಕೊಡುವುದು ಯಾವ ನ್ಯಾಯ. ತಾವುಗಳು ನಡೆಸುವ ವಿವಿಧ ಸಮಾಜ ವಿರೋಧಿ ಚಟುವಟಿಕೆಗಳಿಗಳನ್ನು ಮುಚ್ಚಿಕೊಳ್ಳಲು ಮಾಧ್ಯಮದ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಅವರುಗಳನ್ನು ಈಗಲಾದರೂ ಮಾಧ್ಯಮಗಳು ಬೀಡಬೇಕಿದೆ. ಕಾರಣ ಭಾರತ ಎನ್ನುವದು ಚೈನಾ ಮಾದರಿ ಕಮ್ಯೂನಿಸ್ಟ ಆಡಳಿತವಲ್ಲ ಇದು ಧಾರ್ಮಿಕತೆ ನೆಲೆಯಲ್ಲಿ ನಿಂತ ಪ್ರಜಾಪ್ರಬುತ್ವ. 

ಟಿ ಆರ್ ಪಿ ನೇ ಮುಖ್ಯಾನಾ..?

ಟಿ ಆರ್ ಪಿ ನೇ ಮುಖ್ಯಾನಾ..? 


ಕಳೆದ 15 ದಿನಗಳಿಂದ ಇಂಥದೊಂದು ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಕಾರಣ ಇಷ್ಟೇ ಸಮಾಜವನ್ನು ಸರಿದಾರಿಗೆ ತರಬೇಕಾದ ಅಥವಾ ಸರಿ ದಾರಿಯಲ್ಲಿ ಮುನ್ನಡೆಸಲು ಸಹಕಾರಿಯಾಗಬೇಕಾದ ಮಾಧ್ಯಮಗಳು ತಮ್ಮ ಟಿ ಆರ್ ಪಿ ಗಾಗಿ
, ನಾನಾ ರೀತಿಯ ಕಸರತ್ತು ನಡೆಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.
ಉತ್ತಮ ಸಮಾಜಕ್ಕಾಗಿ, ನೇರ ದಿಟ್ಟ ನಿರಂತರ, ಪ್ರಾಮಾಣಿಕತೆ ಅದು ಇದು ಎಂದು ಟ್ಯಾಗ್ ಲೈನ್ ಎಳೆದುಕೊಂಡಿರುವ ದೃಶ್ಯ ಮಾಧ್ಯಮಗಳು ಇಂದು ನಿರಂತರವಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ.
ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆಗೆ ಕಡಿವಾಣ ಬೀಳಲೆ ಬೇಕಿದೆ.
ಕಡಿವಾಣ ಏಕೆ ?: ವಿವಿಧತೆಯಲ್ಲೂ  ಏಕತೆ ಪ್ರದರ್ಶಿಸುತ್ತಿರುವ ನಮ್ಮ ದೇಶದಲ್ಲಿ ಅಭಿಪ್ರಾಯ ಬೇದಗಳು ಸಹಜವೇ. ಆದರೂ ಸಹ  ಎಲ್ಲರೂ ಒಟ್ಟಾಗಿ ಬಾಳುತ್ತಿರುವುದು ಸಂತಸದ ಸಂಗತಿ. ಆದರೆ  ಇಂದು ಸಮಾಜವನ್ನು ವೈಚಾರಿಕತೆಯನ್ನುವ ಹಣೆಪಟ್ಟಿಯಲ್ಲಿ ಮುನ್ನಡೆಸಲು ಹಾಗೂ ಭಾರತೀಯ ಸಂಸ್ಕೃತಿಯನ್ನು ಮುಗಿಸಲು ಕಾಯುತ್ತಿರುವ ಕೆಲವರು ವಿನಾಕಾರಣ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮೌಢ್ಯಗಳನ್ನು ತೊಡೆದು ಹಾಕುತ್ತೇವೆ ಎನ್ನುವ ಅವರುಗಳು ಪ್ರಚಾರಕ್ಕಾಗಿ ಮಾಧ್ಯಮದ ಮೊರೆ ಹೋಗಿದ್ದಾರೆ. ಇದನ್ನು ತಿಳಿಯದ ಮಾಧ್ಯಮಗಳು ಅವರಿಗೆ ಮಣೆ ಹಾಕುವ ಮೂಲಕ ಲಕ್ಷಾಂತರ ಆಸ್ತಿಕರಲ್ಲಿ  ಗೊಂದಲವನ್ನುಂಟು ಮಾಡುತ್ತಿವೆ. ಇದರಿಂದಾಗಿ 2020 ಭಾರತ ಸುಪರ್ ಪವರ್ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವ ಅನೇಕರಿಗೆ ನೋವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಶಕ್ತಿಯಾಗಿಸಬೇಕು ಎನ್ನುವ ವಿವೇಕರ ವಾಣಿಯನ್ನು ಹಾಗೂ ದಾರ್ಶನಿಕ ರ ಮಾತನ್ನು ಮರೆತು ತಮ್ಮ ಪ್ರತಿಷ್ಠೆಗೋಸ್ಕೃರ  ಇನ್ನೊಬ್ಬರ ಆಸ್ತಿಕತೆ, ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿರುವ ಅವರುಗಳನ್ನು ಮಾಧ್ಯಮಗಳು ಸಹ ಬೆನ್ನು ತಟ್ಟುತ್ತಿರುವುದು ನೋವಿನ ಸಂಗತಿ.
ಭಾರತ ಆಧ್ಯಾತ್ಮತ ನೆಲವಾಗಿದ್ದು, ಇಲ್ಲಿ ಏಕ ಕಾಲಕ್ಕೆ ಎಲ್ಲವೂ ನಡೆದುಕೊಂಡು ಬರುತ್ತಿದೆ. ಒಂದೇಡೆ ವೈಚಾರಿಕತೆ ವಿಸ್ತರಿಸುತ್ತಿದ್ದರೆ ಇನ್ನೊಂದಡೆ ಆಧ್ಯಾತ್ಮಿಕತೆಯೂ ಸಹ ತಮ್ಮ ಮೂಲವನ್ನು ಕಾಪಾಡಿಕೊಳ್ಳುತ್ತಾ ಮನಸ್ಸಿಗೆ ಶಾಂತಿಯನ್ನು ನೀಡುತ್ತಿದೆ. ಹಿಂದುಸ್ಥಾನದಲ್ಲಿ ನಿಂತುಕೊಂಡು ನಾವು ಹಿಂದುಗಳಲ್ಲ ನಾವು ಲಿಂಗಾಯತರು ಎಂದು ಹೇಳುವ ಅವರು, ಬೇರೆಯವರ ಅಡ್ಡಪಲ್ಲಕ್ಕಿಯನ್ನು ವಿರೋಧಿಸುತ್ತಾರೆ. ಮಾನವೀಯತೆ ಬಗ್ಗೆ ಮಾತನಾಡುತ್ತಾರೆ ಆದರೆ ತಾವೇ ಸ್ವತಃ ಭಕ್ತರಿಂದ ಕಾಲು ಮುಗಿಸಿಕೊಳ್ಳುವ ಮೂಲಕ ನಾನು ನಿನಗಿಂತ ಶ್ರೇಷ್ಠ ಎಂದು ತೋರಿಸಿಕೋಳ್ಳುತ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ. ಅವರವರ ಭಕ್ತಿಗೆ ಅವರವರು ಕಂಡುಕೊಂಡ ಶಕ್ತಿಯನ್ನು ದೇವರು ಎಂದು ಕರೆಯುವುದುಂಟು. ಆದರೆ ಇನ್ನೊಬ್ಬರಿಗೆ ತೊಂದರೆ ಕೊಡುವುದು ಯಾವ ನ್ಯಾಯ. ತಾವುಗಳು ನಡೆಸುವ ವಿವಿಧ ಸಮಾಜ ವಿರೋಧಿ ಚಟುವಟಿಕೆಗಳಿಗಳನ್ನು ಮುಚ್ಚಿಕೊಳ್ಳಲು ಮಾಧ್ಯಮದ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಅವರುಗಳನ್ನು ಈಗಲಾದರೂ ಮಾಧ್ಯಮಗಳು ಬೀಡಬೇಕಿದೆ. ಕಾರಣ ಭಾರತ ಎನ್ನುವದು ಚೈನಾ ಮಾದರಿ ಕಮ್ಯೂನಿಸ್ಟ ಆಡಳಿತವಲ್ಲ ಇದು ಧಾರ್ಮಿಕತೆ ನೆಲೆಯಲ್ಲಿ ನಿಂತ ಪ್ರಜಾಪ್ರಬುತ್ವ. 

Wednesday, October 2, 2013

ಅಡ್ಡಪಲ್ಲಕ್ಕಿಗೆ ಅಡ್ಡಗಾಲು ಯಾಕೆ...?

ಅಡ್ಡಪಲ್ಲಕ್ಕಿಗೆ ಅಡ್ಡಗಾಲು ಯಾಕೆ...?
------
ಇಂದು ಎಲ್ಲ ಮಾಧ್ಯಮಗಳಲ್ಲಿಯೂ ಸಹ ಬಹುಚರ್ಚಿತವಾಗಿರುವ ವಿಷಯ ಪಂಚಪೀಠಾಧಿಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ.
ವೀರಶೈವ ಪರಂಪರೆಯಲ್ಲಿ ಅದರಲ್ಲೂ ಪಂಚಪೀಠಗಳಲ್ಲಿ ಈ ಅಡ್ಡಪಲ್ಲಕ್ಕಿಗೆ ತನ್ನದೇಯಾದ ವಿಶೇಷ ಸ್ಥಾನವಿದೆ. ಹರ ಮುನಿದರು ಗುರು ಕಾಯುವನಯ್ಯಾ ಎಂಬಂತೆ, ವೀರಶೈವರಲ್ಲಿ ಗುರು ಶಿವನಿಗಿಂತಲೂ ದೊಡ್ಡವ. ಗುರು-ಲಿಂಗ-ಜಂಗಮ, ಪ್ರಸಾದ, ಪಾದೋದಕಗಳು ಪ್ರತಿಯೋಬ್ಬ ವೀರಶೈವರು ಪಾಲಿಸುತ್ತಾ ಬಂದಿರುವ ಆಚರಣೆಗಳು. ಗುರುಗಳ ಪಾದದ ನೀರನ್ನು ( ಪಾದೋದಕ) ಲಿಂಗಕ್ಕೆ ಹಾಕಿಕೊಳ್ಳುವ ಗುರುವಿನ ಕರುಣೆಗೆ ಪಾತ್ರರಾಗುತ್ತಾ ಬಂದಿರುವುದು ವೀರಶೈವರ ಆಚರಣೆಗಳಲ್ಲಿ ಒಂದು. ಇಂದಿಗೂ ನಾಡಿನ ಅನೇಕ ದತ್ತಿ ಇಲಾಖೆ ದೇವಸ್ಥಾನಗಳಲ್ಲಿಯೂ ದೇವರಿಗೆ ನೈವೈದ್ಯ ಮಾಡುವ ಸಂದರ್ಭದಲ್ಲಿ ಗುರುವಿನ ಪಾದೋದಕ ಪಡೆದ ನಂತರವೇ ನೈವೈದ್ಯ ಮಾಡುವ ಪದ್ದತಿ ಜಾರಿಯಲ್ಲಿದೆ. ಅಂದರೇ ಗುರುವನ್ನು ಸಾಕ್ಞಾತ್ ಶಿವನ ರೂಪವೆಂದೇ ಪರಿಗಣಿಸಲ್ಪಡಲಾಗುತ್ತಿದೆ.
ಇನ್ನೂ ಪೀಠಗಳ ಪರಂಪರೆ ವಿಚಾರವಾಗಿ ಬಂದರೆ , ರಂಭಾಪುರಿ ವೀರ ಸಿಂಹಾಸನ, ಉಜ್ಜೈನಿ ಸದ್ಧರ್ಮ ಸಿಂಹಾಸನ, ಕೇದಾರ ವೈರಾಗ್ಯ ಸಿಂಹಾಸನ, ಶ್ರೀಶೈಲ ಸೂರ್ಯ ಸಿಂಹಾಸನ ಹಾಗೂ ಕಾಶಿಯನ್ನು ಜ್ಞಾನ ಸಿಂಹಾಸನವೆಂದು ಕರೆಯಲಾಗುತ್ತಿದೆ.
(ಇಂದಿಗೂ ಸಹ ಅನೇಕ ಗುರುವಿರಕ್ತ ಸಾಧಕರು ಕಾಶಿಯ ಜಂಗಮವಾಡಿ ಮಠದಲ್ಲಿದ್ದುಕೊಂಡು ವಿಧ್ಯಾರ್ಜನೆ ಮಾಡುತ್ತಿರುವುದು ಗುರು-ವಿರಕ್ತರ ಸಂಬಂಧವನ್ನು ಸೂಚಿಸುತ್ತದೆ.)
ರಂಭಾಪುರಿ ಪೀಠದ ಗುರುಗಳಿ ಕಳೆದ ಸಾವಿರಾರು ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ 10ದಿನಗಳ ಕಾಲ ರಾಜ್ಯದ ಒಂದು ಭಾಗದಲ್ಲಿ ದಸರಾ ದರ್ಬಾರ್ ನಡೆಸುವ ಮೂಲಕ ನಾಡಿನಲ್ಲಿ ಆಧ್ಯಾತ್ಮಿಕ, ಸಾಂಸ್ಕ್ರತಿಕ  ಕ್ರಾಂತಿಗೆ ಕಾರಣವಾಗಿದ್ದಾರೆ. ಆದರೆ ಎಂದು ಸಹ ಎಲ್ಲಿಯೂ ವಿರೋಧ ವ್ಯಕ್ತವಾಗಿಲ್ಲ. ಕಾರಣ ಪರಂಪರೆ ಹಾಗೂ ಧಾರ್ಮಿಕತೆಗೆ ಯಾರು ಅಡ್ಡಗಾಲು ಹಾಕಿರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ರಾಜಧಾನಿಯಲ್ಲಿ ನಡೆದ ದಸರಾ ದರ್ಬಾರ್ ಸಂದರ್ಭಧಲ್ಲಿಯೂ ಸಹ ಯಾರು ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಜೇವರ್ಗಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅಡ್ಡಗಾಲಾಗುತ್ತಿರುವುದು ವಿಷಾದನೀಯ
ಸರ್ವ ಧರ್ಮಗಳಿಗೂ ಸಮಾನ ಅವಕಾಶ : ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ  ಕೇವಲ ವೀರಶೈವರಷ್ಟೇ ಅಲ್ಲ ನಾಡಿನ ಎಲ್ಲ ಧರ್ಮದವರು ಪಾಲ್ಗೊಳ್ಳುವ ಮೂಲಕ ಪೀಠದ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. 10 ದಿನಗಳ ಕಾಲ ನಡೆಯುವ ಜ್ಞಾನ ದಾಸೋಹ, ಅನ್ನ ದಾಸೋಹದಲ್ಲಿ ಪ್ರಸಾದ ಸ್ವೀಕರಿಸುವ ನಾಡಿನ ಜನ ತಮ್ಮ ಕೈಲಾದ ಭಕ್ತಿ ಸಮರ್ಪಿಸುವ ಮೂಲಕ ಧರ್ಮದ ಕಾರ್ಯದಲ್ಲಿ ನಾವು ನಿಮ್ಮ ಜತಗಿದ್ದೇವೆ ಎನ್ನುವ ಐಕ್ಯ ಸಂದೇಶ ಸಾರುತ್ತಿದ್ದಾರೆ.
ಶ್ರೀಗಳ ಇಚ್ಛೆಯಲ್ಲ : ಅಡ್ಡಪಲ್ಲಕ್ಕಿ ಶ್ರೀಗಳ ಇಚ್ಛೆಯಲ್ಲ ಬದಲಿಗೆ ಭಕ್ತರ ಇಚ್ಛೆ. ಸಾಕ್ಷಾತ್ ಶಿವನ ರೂಪವಾಗಿರುವ ಶ್ರೀಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗಿದಾಗ ತಾವು ತಿಳಿದು, ತಿಳಿಯದೆಯೋ ಮಾಡಿದ ಪಾಪಗಳು ನಾಶವಾಗಿ, ಮುಕ್ತಿ ದೊರಕುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಜತೆಗೆ ಅಡ್ಡಪಲ್ಲಕ್ಕಿಯಲ್ಲಿ ಸಾಗುವ ಶ್ರೀಗಳು ಭಕ್ತರ ಮನೆ ಬಾಗಿಲ ಬಈ ದರ್ಶನ ನೀಡುವ ಮೂಲಕ ಭಕ್ತರನ್ನು ಉದ್ದರಿಸುತ್ತಾರೆ ಎನ್ನುವ ನಂಬಿಕೆ ಮೊದಲಿನಿಂದಲೂ ಇದೆ.  ಇದಕ್ಕೆ ಜೇವರ್ಗಿಯ ಎಲ್ಲ ಸಮಾಜದ ಮುಖಂಡರು ಕೈ ಜೋಡಿಸಿರುವುದು ಸಾಕ್ಷಿಯಾಗಿದೆ. ಆದರೆ ಇದನ್ನು ಅರಿಯದ ಕೆಲ ವಿಕೃತ ಮನಸ್ಸುಗಳು ವಿನಾಕಾರಣ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವುದು ದುರಂತ.
ಬಸವಣ್ಣನವರ ಹೆಸರಲ್ಲಿ  ತಮ್ಮ ಕೆಟ್ಟಬೇಳೆ ಬೆಯಿಸಲು ಯತ್ನ : ಶತಾಯುಷಿಗಳಾಗಿರುವ ಕರ್ನಾಟಕ ರತ್ನ ಸಿದ್ಧಗಂಗಾ ಮಠಾಧಿಶರಾದ ಡಾ. ಶಿವಕುಮಾರ ಸ್ವಾಮಿಗಳು ವಿರಕ್ತ ಪರಂಪರೆಯನ್ನು ಮುಂದುವರೆಸುತ್ತಾ ಬಂದವರಾಗಿದ್ದು ತ್ರಿದೋಹ ದಾಸೋಹದಲ್ಲಿ ನಿರತರಾಗುವ ಮೂಲಕ ಕಾಯಕವೇ ಕೈಲಾಸ ಎಂಬುದನ್ನು ನಿರೂಪಿಸಿದ್ದಾರೆ. ಆದರೆ ಅವರು ಎಂದಿಗೂ ಸಹ  ಗುರು ಪರಂಪರೆಯ ಆಚರಣೆಗೆ ವಿರೋಧ ವ್ಯಕ್ತಪಡಿಸಿಲ್ಲ. ಕಾರಣ ಅವರು ಈ ಬಗ್ಗೆ ಪೂರ್ಣ ಜ್ಞಾನವನ್ನು ಹೊಂದಿದವರಾಗಿದ್ದಾರೆ. ಆದರೆ ಅಲ್ಪ ಜ್ಞಾನಿಗಳಾಗಿರುವ ( ವಿರಕ್ತರು ಎಂದು ಹೇಳಿಕೊಳ್ಳುವ ) ಕೆಲವರು  ತಮ್ಮ ವೈಯಕ್ತಿಕ ದ್ವೇಷಕ್ಕೆ  ಮಹಾನ್ ಮಾನವತಾವಾದಿ ಬಸವಣ್ಣನವರ ಹೆಸರನ್ನು ಬಳಸುವ ಮೂಲಕ ತಮ್ಮ  ವಿಕೃತ ಬೇಳೆ ಬೆಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಖಂಡನೀಯ.
ಸಮಾಜ ಅರ್ಥಮಾಡಿಕೊಳ್ಳಲಿ : ನಾಡಿನ ಸಕಲ ಜನರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುವ ಯಾವುದೇ ಮಠಾಧೀಶರ ಕಾರ್ಯಕ್ರಮಕ್ಕೆ   ಇನ್ನೊಂದು ಮಠಾಧಿಶರು ಅಡ್ಡಿಪಡಿಸುತ್ತಿರುವುದು ಇದೇ ಮೊದಲು. ಸಮಾಜದ ಜನ ಒಂದನ್ನು ಅರ್ಥ ಮಾಡಿಕೊಳ್ಳಬೇಕು . ಯಾರು ಸಮಾಜದ ಹಿತವನ್ನು ಬಯಸುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆತ್ತಿದ್ದಾರೋ ಅವರಿಗೆ ಬೆಂಬಲ ನೀಡಲೇಬೇಕು. ಇಂದಿಗೂ ಸಹ ಪಂಚಪೀಠಗಳು, ಮೈಸೂರಿಗೆ ಸುತ್ತೂರು, ಸಿದ್ಧಗಂಗಾ, ಸಿರಿಗೆರೆ ಮಠ,  , ಸೋಂದಾ ಸ್ವರ್ಣವಲ್ಲಿ ಮಠ, ಉಡುಪಿಯ ಅಷ್ಟಮಠಗಳು, ಮದರಸಾಗಳು, ಜೈನರ ಕ್ಷೇತ್ರಗಳು, ಗುರುದ್ವಾರಗಳು, ಚರ್ಚಗಳು ಸೇರಿದಂತೆ ಹಲವಾರು ಧಾರ್ಮಿಕ ಕ್ಷೇತ್ರಗಳು  ಸಮಾಜದ ಏಳಿಗೆಗೆ ಶ್ರಮಿಸುತ್ತಿವೆ. ಆದರೆ ಎಂದಿಗೂ ಪರಸ್ಪರ ಕೆಸರೆರಚಾಡಿಕೊಂಡ ಉದಾಹರಣೆಗಳು ಇಲ್ಲ. ಕಾರಣ ಎಲ್ಲರಿಗೂ ಸಮಾಜ ಗುರುವಿನ ಸ್ಥಾನವನ್ನು ನೀಡಿದ್ದು ಅದನ್ನು ಕಾಪಾಡಿಕೊಂಡು ಬರುತ್ತಿವೆ. ಆದ್ದರಿಂದ ಸಮಾಜ ಈ ಬಗ್ಗೆ ಗಂಭೀರ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ. 

Tuesday, October 1, 2013

ಪಂಚಾಚಾರ್ಯರು = ಬಸವಣ್ಣ

ಪಂಚಾಚಾರ್ಯರು  = ಬಸವಣ್ಣ 
ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕೆಲವರು ಅವರ ಆದರ್ಶಗಳನ್ನು ಮರೆಯುವ ಮೂಲಕ ಕೆಟ್ಟ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ. ಮಹಾನ್ ಮಾನವತಾವಾದಿಯಾಗಿದ್ದ ಬಸವಣ್ಣನವರು ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎಂದು ಹೇಳುವ ಮೂಲಕ ಎಲ್ಲರನ್ನೂ ಅಪ್ಪಿಕೊಂಡರು. ಆದರೆ ಅವರನ್ನು ಅನುಸರಿಸುವ ಕೆಲ ಸ್ವಯಂ ಘೋಷಿತ ಪ್ರಗತಿಪರರು ವೀರಶೈವ ಧರ್ಮದ ಮೂಲ ಪೀಠಗಳಲ್ಲಿ ಒಂದಾಗಿರುವ ಶ್ರೀ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ ದರ್ಬಾರ ಕಾರ್ಯಕ್ರಮ ವಿರೋಧಿಸುವ ಮೂಲಕ ತಮ್ಮ (ಸಣ್ಣ) ತನವನ್ನು ಪ್ರದರ್ಶಿಸಿದ್ದಾರೆ.
ಹಿನ್ನಲೆ ; ಸನಾತನ ಧರ್ಮಗಳಲ್ಲಿ ಒಂದಾಗಿರುವ ವೀರಶೈವ ಧರ್ಮ ತನ್ನದೇಯಾದ ಇತಿಹಾಸ ಪರಂಪರೆಯನ್ನು ಹೊಂದಿದೆ. ತೈತ್ರಾಯುಗದಲ್ಲಿ ಶಿವನ ಅಪ್ಪಣೆಯಿಂದ ಲಿಂಗೋಧ್ಬವರಾದ ಪಂಚಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸಿದರು ಎನ್ನುವುದು  ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಮುಂದೆ ಕಾಲಾನುಕ್ರಮದಲ್ಲಿ  ದೇಶದೆಲ್ಲೆಡೆ ಪಸರಿಸಿದ ಧರ್ಮ ಇಂದಿಗೂ ಸತ್ಯ, ಅಹಿಂಸೆ, ನ್ಯಾಯವನ್ನು ರಕ್ಷಿಸುತ್ತಾ ಬರುತ್ತಿದೆ.
ಆದರೆ ವಿವಾದ ಶುರುವಾಗಿದ್ದು, ಇತ್ತೀಚಿಗೆ ಕಾರಣ, ಕೆಲ ವಿಚಿದ್ರಕಾರಿ ಶಕ್ತಿಗಳು ಸಮಾಜವನ್ನು ತಮ್ಮ ಸ್ವಾರ್ಥಕ್ಕಾಗಿ ಒಡೆಯುವ ಹುನ್ನಾರ ನಡೆಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆದರೆ ಸಾಮಾನ್ಯ ವೀರಶೈವರಲ್ಲಿ ಈ ಬಗ್ಗೆ ಯಾವುದೇ ಸಂದೇಹವಿಲ್ಲ
ಬಸವಣ್ಣವರು ಪಂಚಾಚಾರ್ಯರ ವಿರೋಧಿಯಲ್ಲ:  12 ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರುಅಂದಿನ ಕೆಲ ಅನಿಷ್ಠ ಪದ್ದತಿಗಳನ್ನು ವಿರೋಧಿಸಿ ವೀರಶೈವ ಧರ್ಮದ ಗುರುಗಳಾಗಿದ್ದ ಜ್ಯಾತವೇದ ಮುನಿ ಶಿವಾಚಾರ್ಯರಿಂದ ಲಿಂಗದೀಕ್ಷೆ ಪಡೆದರು. ಇದಕ್ಕೆ ಮೂಲಕ ಕಾರಣ ವೀರಶೈವ ಧರ್ಮದಲ್ಲಿದ್ದ ಸ್ವಾತಂತ್ರ್ಯ. ಅದರಲ್ಲೂ ಮಹಿಳೆಯರಿಗೂ ಸಹ ಲಿಂಗದೀಕ್ಷೆ ನೀಡಿ ಅವರಿಗೆ ಶಿವನ ಕರುಣೆ ಸಿಗುವಂತ ಇದ್ದ ಅವಕಾಶ.  ಅದೇ ರೀತಿ ಜಾತಿ ಪದ್ದತಿ, ವಿವಿಧ ರೀತಿಯ ಪದ್ದತಿಗಳ ವಿರುದ್ದ ಹೋರಾಡುತ್ತ ಬಂದಿದ್ದ ಬಸವಣ್ಣನವರು ಮುಂದೆ ಕೂಡಲ ಸಂಗಮನಲ್ಲಿ ಐಕ್ಯರಾದರು ಎನ್ನುವುದು ಇತಿಹಾಸದಲ್ಲಿ ಕಾಣ ಸಿಗುತ್ತದೆ. ಆದರೆ ಎಲ್ಲಿಯೂ ಸಹ ಬಸವಣ್ಣನವರು ಪಂಚಾಚಾರ್ಯ ಪರಂಪರೆಯನ್ನು ವಿರೋಧಿಸಿದ ಉದಾಹರಣೆಗಳಿಲ್ಲ.  ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ತಮ್ಮ ವಚನಗಳಲ್ಲಿಯೇ ವೀರಶೈವ ಪದವನ್ನು ಅವರು ಬಳಕೆ ಮಾಡಿರುವುದು ಕಂಡು ಬರುತ್ತದೆ.
ಬಸವಣ್ಣನವರ ಬಗ್ಗೆ ಅಧ್ಯಯನ ಮಾಡಿದ ಕೆಲವರು ತಮ್ಮ ಕೆಟ್ಟ ಜ್ಞಾನದಿಂದಾಗಿ ಬಸವಣ್ಣನವರ ವಚನಗಳ ಅರ್ಥವನ್ನು ತಿರುಚಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದ್ದರು. ಆಗ ಎಚ್ಚೆತ್ತುಕೊಂಡಿದ್ದ ಹಾನಗಲ್ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾವನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಉಂಟಾಗಬಹುದಾಗಿದ್ದ ಒಡಕನ್ನು ತಪ್ಪಿಸಿದ ಪುಣ್ಯಾತ್ಮರು.
ಗುರು- ವಿರಕ್ತ ಪರಂಪರೆ : ವೀರಶೈವ ಸಮಾಜದಲ್ಲಿ ಪಂಚಾಚಾರ್ಯರನ್ನು ಅನುಸರಿಸುವ ಸ್ವಾಮಿಜಿಗಳನ್ನು ಗುರುಗಳೆಂದು ಹಾಗೂ ಬಸವತತ್ವವನ್ನು ಪ್ರತಿಪಾದಿರುವವರನ್ನು ವಿರಕ್ತ ಮಠಾಧಿಶರೆಂದು ಕರೆಯಲಾಗುತ್ತಿದ್ದು, ಇಲ್ಲಿ ಯಾವುದೇ ರೀತಿಯ ಭೇದಗಳಾಗಲಿ ಕಂಡು ಬರುವುದಿಲ್ಲ. ಈ ಎರಡು ಪರಂಪರೆಗಳು ಶತಮಾನಗಳಿಂದ ವೀರಶೈವ ಸಮಾಜವನ್ನು ಮುನ್ನಡೆಸುತ್ತಾ ಸಾರ್ವಜನಿರಿಗೆ ಧರ್ಮದ ಮಾರ್ಗ ತೋರಿಸುತ್ತಾ  ಬರುತ್ತಿದ್ದಾರೆ. ಇದಕ್ಕೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಪಂಚಗ್ರಹ ಹಿರೇಮಠದಲ್ಲಿ ಸುಮಾರು 500 ವರ್ಷಗಳ ಹಿಂದೆ ಬರೆದಿರುವ ಪತ್ರಗಳೇ ಸಾಕ್ಷಿಯಾಗಿವೆ.
ಇಂದು ವೈಚಾರಿಕೆಯನ್ನು ಬೆಳೆಸುವಲ್ಲಿ ನಿರತವಾಗಿರುವ ಚಿತ್ರದುರ್ಗದ ಮುರುಘಾಮಠದ ಹಿಂದಿನ ಶ್ರೀಗಳು ಅಂದು ಅಗ್ರಹಾರವಾಗಿದ್ದ ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಶ್ರೀಗಳಿಗೆ ಬರೆದ ಪತ್ರದಲ್ಲಿ  ರೇಣುಕರದ ವಾರಸುದಾರರು ಎಂದು ಒಕ್ಕಣೆಯಲ್ಲಿ ಬರೆದಿದ್ದಾರೆ. ಅದೇ ರೀತಿ ಹುಬ್ಬಳ್ಳಿ ಮೂರು ಸಾವಿರ ಮಠದ  ಉತ್ತಾರಾಧಿಕಾರಿ ವಿಷಯವನ್ನು ಚರ್ಚಿಸಲು ಸಹ  ಅಮ್ಮಿನಭಾವಿ ಮಠದ ಪೀಠಾಧ್ಯಕ್ಷರಿಗೆ ಆಮಂತ್ರಣ ನೀಡಿದ ಪತ್ರ  ಇಂದಿಗೂ ಇದೆ.
ಮುಜಗಂ= ರಂಭಾಪುರಿ ಶ್ರೀ : ವಿರಕ್ತ ಪರಂಪರೆಯ ಹಿಂದಿನ ಮಠವಾದ ಹುಬ್ಬಳ್ಳಿ ಮೂರು ಸಾವಿರ ಮಠದ ಹಿಂದಿನ ಶ್ರೀಗಳಾಗಿದ್ದ ಶ್ರೀ ಗಂಗಾಧರ ಜಗದ್ಗುರುಗಳು ಹಾಗೂ ಶ್ರೀ ರಂಭಾಪುರಿ ಪೀಠದ ಹಾಲಿ ಜಗದ್ಗುರುಗಳು ಗುರು ವಿರಕ್ತರನ್ನು ಒಂದು ಮಾಡುವ ಅತಿ ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದರು.  ಕಾರಣ ಸಮಾಜವನ್ನು ಬಲ ಪಡಿಸುವ ಮಹದಾಸೆಯನ್ನು ಹಿರಿಯರಾಗಿದ್ದ ಮುಜಗಂ ಶ್ರೀಗಳು ಹೊಂದಿದ್ದರು. ಅದಕ್ಕೆ ಪೂರಕವೆಂಬಂತೆ ರಂಭಾಪುರಿ ಪೀಠದಲ್ಲಿ ನಡೆದ ಶ್ರೀ ರೇಣುಕ ಜಯಂತಿ ಕಾರ್ಯಕ್ರಮದಲ್ಲಿ ಮುಜಗಂ ಶ್ರೀಗಳನ್ನು ಬರಮಾಡಿಕೊಂಡು ರಂಭಾಪುರಿ ಶ್ರೀಗಳು ಅವರಿಗೆ ಸರಿ ಸಮಾನ ವೇದಿಕೆ ಕಲ್ಪಿಸಿ ನಾವೆಲ್ಲರೂ ಒಂದೇ ಎನ್ನುವ ಘೋಷಣೆ ಮಾಡಿದರು. ಅಂದು ಮಾತನಾಡಿದ್ದ ಮುಜಗಂ ಶ್ರೀಗಳು ಸಹ ರಂಭಾಪುರಿ ಶ್ರೀಗಳ ಭಾವನೆಗೆ ಸಹಮತ ವ್ಯಕ್ತಪಡಿಸಿದ್ದರು.
ಇದರಿಂದ ಸಾಕಷ್ಟು ಗಲಿಬಿಲಿಗೊಂಡ ವಿಕೃತ ಮನಸ್ಸುಗಳು ಅಂದು ಸಹ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದರು.  ಆದರೆ ಈಗ ಮತ್ತೆ ವಿವಾದ ಹುಟ್ಟು ಹಾಕಿರುವ ವಿಕೃತರು, ಸಮಾಜವನ್ನು ಒಡೆಯುತ್ತಿರುವುದು ದುರಂತ.



Friday, September 27, 2013

ರಾಹುಲ್ v/s ಕೇಂದ್ರ ಸರ್ಕಾರ ಜಗನ್ನಾಟಕ

ಕಳೆದ 9 ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್  ಹಾಗೂ ಅವರ ಸರ್ಕಾರದ ಮೇಲೆ ಬೇಕಾದಷ್ಟು ಭ್ರಷ್ಟಾಚಾರ ಆರೋಪಗಳು ಸುರಿಮಳೆಯಾದರೂ ಪಕ್ಷ  ಮಾತ್ರ  ಅವರನ್ನು ಬಿಟ್ಟು ಕೊಟ್ಟಿರಲಿಲ್ಲ. 2ಜಿ ಇಂದ ಹಿಡಿದು, ಕಲ್ಲಿದ್ದಲು ಮಸಿ ಹತ್ತುವವರೆಗೂ ಹತ್ತಾರು ಹಗರಣಗಳು ನಡೆದರೂ ಪಕ್ಷದ ನಾಯಕರು ಯಾರೋಬ್ಬರು ಅವರ ಕಾರ್ಯ ವೈಖರಿ ಬಗ್ಗೆ ಚಕಾರ ಎತ್ತಿರಲಿಲ್ಲ. ಆದರೆ ಈಗ ಎಐಸಿಸಿ ಉಪಾದ್ಯಕ್ಷ ರಾಹುಲ್ ಗಾಂಧಿ ಸುಗ್ರಿವಾಜ್ಞೆ ವಿರುದ್ದ ತಮ್ಮ ಅಸಮಧಾನ ವ್ಯಕ್ತಪಡಿಸುವ ಮೂಲಕ ಸರ್ಕಾರ ಹಾಗೂ ಪಿಎಂಗೆ ಮುಜುಗುರು ಉಂಟುಮಾಡಿದ್ದಾರೆ.

ಜಗನ್ನಾಟಕ : ಹೌದು .,.. ಇದು ಪಕ್ಕಾ ಕುಟುಂಬ ರಾಜಕಾರಣದ ಜಗನ್ನಾಟಕ, ಜನಪ್ರಿಯತೆ ಕಳೆದುಕೊಂಡು ಸರ್ಕಾರದ ವಿರುದ್ದ ಜನ ಎಚ್ಚೆತ್ತಿರುವಾಗಲೇ  ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಕ್ಲೀನ್ ಇಮೇಜ್ ಇರುವ ರಾಹುಲ್ ಗಾಂಧಿಯನ್ನು ಮುಂದಿಟ್ಟು ಮತ್ತೆ ಜನರಿಗೆ ಮಂಕುಬೂದಿ ಎರಚಲು ಯತ್ನಿಸುತ್ತಿದೆ. ಈಗಾಗಲೇ ಬಿಜೆಪಿ ಗುಜರಾತ್ ಸಿಎಂ ನಮೋ ಅವರಿಗೆ ದೇಶದ ಜನ ಜೈ ಎನ್ನುವ ಕಾತುರದಲ್ಲಿರುವುದನ್ನು ಅರಿತ ರಾಜ ( ನೆಹರು )ಕುಟುಂಬ ಈಗ ರಾಹುಲ್ ಗಾಂಧಿ ಅವರನ್ನು ದಾಳವಾಗಿ ಬಳಸಿದೆ.
ಈ ಮೂಲಕ ತಾನು ಭ್ರಷ್ಟಾಚಾರ ವಿರೋಧಿ ಎನ್ನುವ ಹಣೆ ಪಟ್ಟಿ ಹೊತ್ತುಕೊಳ್ಳುವ ಇರಾದೆಯನ್ನು ಕಾಂಗ್ರೆಸ್  ಹೊಂದಿದ್ದು, ಮುಂಬರುವ ಚುನಾವಣೆಯಲ್ಲಿ ರಾಹುಲ್ ಪ್ರಧಾನ ಅಭ್ಯರ್ಥಿ ಎಂದು ಬಿಂಬಿಸಲು ತಯಾರಿ ನಡೆಸಿದೆ. ಆಗ ಯುವ ಜನರು ಸರ್ಕಾರದ ನಿರ್ಧಾರವನ್ನು ಟೀಕಿಸುವ ಮೂಲಕ ರಾಹುಲ್ ಸುಗ್ರಿವಾಜ್ಞೆಯನ್ನು ತಡೆಹಿಡಿದು ದೇಶವನ್ನು ರಕ್ಷಿಸಿದರು ಎಂದು ಹುಯಿಲೆಬ್ಬಿಸಿ ಬೆಳೆ ಬೇಯಿಸಲು ಸಜ್ಜಾಗಿದೆ. ಕಾರಣ ಇಷ್ಟೇ ಇಷ್ಟು ದಿನ ಸರ್ಕಾರ ಹಾಗೂ ಪಕ್ಷಕ್ಕೆ ಮಾರ್ಗದರ್ಶಕರಾಗಿದ್ದ ಪ್ರಣಬ್ ಮುಖರ್ಜಿ ಈಗ ಘನೆತೆವೆತ್ತ ರಾಷ್ಟ್ರಪತಿ ಸ್ಥಾನದಲ್ಲಿದ್ದು, ಅವರಿಗೂ ಸಹ ಸರ್ಕಾರದ ನಡೆ ಹಿಡಿಸಿರಲು ಸಾಧ್ಯವಿಲ್ಲ. ಇದರಿಂದಾಗಿ ಅವರು ಸಹ ಸುಗ್ರಿವಾಜ್ಞೆಯನ್ನು ಮರಳಿ ಕಳುಹಿಸುವ ಸಾಧ್ಯತೆಗಳಿತ್ತು. ಆಗ ಸರ್ಕಾರಕ್ಕೆ ಆಗುವ ಮುಜುಗುರವನ್ನು ತಪ್ಪಿಸಲು ರಾಹುಲ್ ಮೂಲಕವೇ ಅದನ್ನು ಮಾಡಿಸಿದರೆ ರಾಜಕೀಯ ಲಾಭವಾಗುವ ಸಂಬಂಧ 'ರಾಜ'  ಕುಟುಂಬ ಯುವರಾಜನನ್ನು ಬಳಸಿದೆ.

ರಾಜೀವ್ ನೆನಪು : ದಿ.ರಾಜೀವಗಾಂಧಿ ಹಿಂದೊಮ್ಮೆ ಪಕ್ಷವನ್ನು ಕುರಿತು.. ಕಾಂಗ್ರೆಸ್ ಒಂದು ಹೊಗಳು ಭಟ್ಟರ್ ಹಾಗೂ ಬಾಲ ಬಡುಕರ ಗುಂಪಾಗಿದೆ ಎನ್ನುವ ಮೂಲಕ ಪಕ್ಷಕ್ಕೆ ಮುಜುಗುರ ಉಂಟುಮಾಡಿದ್ದರು. ಅದೇ ರೀತಿ ಈಗ ಅವರ ಮಗ ರಾಹುಲ್ ಗಾಂಧಿ ತಮ್ಮದೆ ಸರ್ಕಾರದ ಕ್ರಮವನ್ನು ತೀರಸ್ಕರಿಸುವ ಮೂಲಕ ದೇಶದ ಜನರ ಹತ್ತಿರಕ್ಕೆ ಬರಲು ಯತ್ನಿಸುತ್ತಿದ್ದಾರೆ.

ದಿಗ್ಗಜರ ಮೌನ : ಪ್ರಧಾನ ಮಂತ್ರಿಗಳು ದೇಶದಲ್ಲಿಲ್ಲ. ಅವರನ್ನು ಬಿಟ್ಟು ಬಿಡೋಣ, ( ಅಷ್ಟಕ್ಕೂ ಅವರು ಮಾತನಾಡಲ್ಲ) , ಇಲ್ಲಿರುವ ಕೇಂದ್ರ ಮಂತ್ರಿಗಳು ರಾಹುಲ್ ಹೇಳಿಕೆ ವಿರುದ್ದ ತುಟಿ ಪಿಟಕ್ ಎನ್ನಲಿಲ್ಲ. ಇಷ್ಟು ದಿನಗಳ ಕಾಲ ಪ್ರತಿಪಕ್ಷ ಆದಿಯಾಗಿ ಎಲ್ಲರೂ ಬಾಯಿ ಬಡಿದುಕೊಂಡರು  ಕಳಂಕಿತರಿಗೆ ರಕ್ಷಣೆ ನೀಡುವುದು ತಮ್ಮ ಧರ್ಮ ಎನ್ನುವಂತೆ ಮಾತನಾಡುತ್ತಿದ್ದ ಹಿರಿಯ ಮಂತ್ರಿಗಳಾದ ಪಿ. ಚಿದಂಬರಂ, ಕಪಿಲ್ ಸಿಬಲ್, ಗೃಹ ಸಚಿವ ಸುಶೀಲ ಕುಮಾರ ಸಿಂಧೆ, ವೀರಪ್ಪ ಮೊಯ್ಲಿ  ಹೊದಲ್ಲಿ ಬಂದಲ್ಲಿ ಸರ್ಕಾರದ ಕ್ರಮವೇ ಸರಿ ಎನ್ನುತ್ತಿದ್ದರು ಆದರೆ ಈಗ ಮಾತ್ರ ಯಾರೊಬ್ಬರು ಹೂಂಂಂಂಂಂ ಹೂಂಂ.
ಅದು ಬಿಡಿ ಪತ್ರಿಕಾಗೋಷ್ಟಿ ಆರಂಭದಲ್ಲಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ನಾಯಕ ಅಜೇಯ ಮಾಕೇನ್ ಸಹ ರಾಹುಲ್ ಮಾತಿನ ನಂತರ ಉಲ್ಪಾ ಹೊಡೆದರು. ಇದರರ್ಥ ಇಷ್ಟೇ ಇಂದಿಗೂ  ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರವನ್ನು ಒಂದು ಕುಟುಂಬ ಮುನ್ನಡೆಸುತ್ತಿದೆ ಎನ್ನುವುದು.

ಕೊನೆಯದಾಗಿ : ಇದೊಂದು ಪೊಲಿಟಿಕಲ್ ಮೋಟಿವೆಟೆಡ್ ಹೈ ಡ್ರಾಮಾ, ಇದು 2014 ಚುನಾವಣೆಯಲ್ಲಿ ಸೋಲಿನ ಭೀತಿ ಎದುರುಸುತ್ತಿರುವ ಯುಪಿಎ ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲು ಹೂಡಿರುವ ಹೊಸ ದಾಳವಷ್ಟೇ..! 



Tuesday, July 2, 2013

ಹಿರಿಯರು ಚಿಂತಿಸಿದ್ದು ತಪ್ಪಾ. ?

ಎಲ್ಲ ಧರ್ಮಗಳು ತಮ್ಮದೇಯಾದ ಶ್ರೇಷ್ಠತೆಯನ್ನು ಹೊಂದಿವೆ. ಆದರೆ ಕೆಲ ಧರ್ಮಗಳ ಬೆರಳಣಿಕೆಯಷ್ಟು ಜನ ಬೇರೆ ಧರ್ಮಗಳನ್ನು ಕೀಳಾಗಿ ಕಾಣುವ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಭಾರತದಂತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನತೆ, ಸಹಭಾಳ್ವೆ ನಡೆಸಲು ಹಿರಿಯರು ಚಿಂತಿಸಿದ್ದು ತಪ್ಪಾ. ?

Sunday, June 9, 2013


ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ ನಡೆದು ಜೂನ್ 10 ಕ್ಕೆ ಐದು ವರ್ಷ. ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ವಾರವೇ ಧಾರವಾಡದಲ್ಲಿ ಪ್ರಾರಂಭವಾಗಿದ್ದ ಗೊಬ್ಬರ ಗಲಾಟೆ ಬರಬರುತ್ತ ಅವಿಭಿಜಿತ ಜಿಲ್ಲೆಯ ಭಾಗವಾಗಿದ್ದ ಹಾವೇರಿಗೂ ವ್ಯಾಪಿಸಿ ಅಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತೆ ಮಾಡಿತು.  

Wednesday, June 5, 2013

ಎಲ್ಲರಿಗೂ ನಮಸ್ಕಾರ...!  

ಇವತ್ತು ವಿಶ್ವ ಪರಿಸರ ದಿನಾಚರಣೆ, ಇವತ್ತೆ ನಾನು ಕೂಡ ಹೊಸ ಬ್ಗಾಗಿನಲ್ಲಿ ಬರಿತಾ ಇದಿನಿ. ಏನಾದ್ರೂ ತಪ್ಪು ಇದ್ರೆ ಹೇಳಿ. ತಿದ್ದಿಕೋಳ್ಳತಿನಿ....

ಪರಿಸರದ ಬಗ್ಗೆ ಜೂನ್ 5 ರಂದು ಮಾತ್ರ ಕಾಳಜೀ ತೋರುವ ಇವತ್ತಿನ ನಾಯಕರನ್ನ, ಸಾರ್ವಜನಿಕರನ್ನ ನೋಡಿದ್ರೆ ನನಗೆ ನಗು ಬರುತ್ತೆ. ಯಾಕಂದ್ರೆ, ಇವತ್ತೊಂದಿನ ಮಾತ್ರ ಹಸಿರು ಬೇಕು ಅವರಿಗೆಲ್ಲ. 364 ದಿನಗಳು ಬರಿ ಗಿಡ-ಮರ ಕಳಿಯುವುದರಲ್ಲೇ ಕಾಳ ಕಳಿತಾರೆ. ಬೇಕಾದ್ರೆ ಒಂದ ಸಲ ಸುಮ್ಮನೆ ವಿಚಾರ ಮಾಡಿ...

ಮನೆಯ ನಗುವಿಗೆ ಬೇಕು ಮರ.. ವಸುಂಧರೆಯ ನಗುವಿಗೆ ಬೇಕು ಮರ.