ಪಂಚಾಚಾರ್ಯರು = ಬಸವಣ್ಣ
ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕೆಲವರು ಅವರ ಆದರ್ಶಗಳನ್ನು ಮರೆಯುವ ಮೂಲಕ ಕೆಟ್ಟ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ. ಮಹಾನ್ ಮಾನವತಾವಾದಿಯಾಗಿದ್ದ ಬಸವಣ್ಣನವರು ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎಂದು ಹೇಳುವ ಮೂಲಕ ಎಲ್ಲರನ್ನೂ ಅಪ್ಪಿಕೊಂಡರು. ಆದರೆ ಅವರನ್ನು ಅನುಸರಿಸುವ ಕೆಲ ಸ್ವಯಂ ಘೋಷಿತ ಪ್ರಗತಿಪರರು ವೀರಶೈವ ಧರ್ಮದ ಮೂಲ ಪೀಠಗಳಲ್ಲಿ ಒಂದಾಗಿರುವ ಶ್ರೀ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ ದರ್ಬಾರ ಕಾರ್ಯಕ್ರಮ ವಿರೋಧಿಸುವ ಮೂಲಕ ತಮ್ಮ (ಸಣ್ಣ) ತನವನ್ನು ಪ್ರದರ್ಶಿಸಿದ್ದಾರೆ.
ಹಿನ್ನಲೆ ; ಸನಾತನ ಧರ್ಮಗಳಲ್ಲಿ ಒಂದಾಗಿರುವ ವೀರಶೈವ ಧರ್ಮ ತನ್ನದೇಯಾದ ಇತಿಹಾಸ ಪರಂಪರೆಯನ್ನು ಹೊಂದಿದೆ. ತೈತ್ರಾಯುಗದಲ್ಲಿ ಶಿವನ ಅಪ್ಪಣೆಯಿಂದ ಲಿಂಗೋಧ್ಬವರಾದ ಪಂಚಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸಿದರು ಎನ್ನುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಮುಂದೆ ಕಾಲಾನುಕ್ರಮದಲ್ಲಿ ದೇಶದೆಲ್ಲೆಡೆ ಪಸರಿಸಿದ ಧರ್ಮ ಇಂದಿಗೂ ಸತ್ಯ, ಅಹಿಂಸೆ, ನ್ಯಾಯವನ್ನು ರಕ್ಷಿಸುತ್ತಾ ಬರುತ್ತಿದೆ.
ಆದರೆ ವಿವಾದ ಶುರುವಾಗಿದ್ದು, ಇತ್ತೀಚಿಗೆ ಕಾರಣ, ಕೆಲ ವಿಚಿದ್ರಕಾರಿ ಶಕ್ತಿಗಳು ಸಮಾಜವನ್ನು ತಮ್ಮ ಸ್ವಾರ್ಥಕ್ಕಾಗಿ ಒಡೆಯುವ ಹುನ್ನಾರ ನಡೆಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆದರೆ ಸಾಮಾನ್ಯ ವೀರಶೈವರಲ್ಲಿ ಈ ಬಗ್ಗೆ ಯಾವುದೇ ಸಂದೇಹವಿಲ್ಲ
ಬಸವಣ್ಣವರು ಪಂಚಾಚಾರ್ಯರ ವಿರೋಧಿಯಲ್ಲ: 12 ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರುಅಂದಿನ ಕೆಲ ಅನಿಷ್ಠ ಪದ್ದತಿಗಳನ್ನು ವಿರೋಧಿಸಿ ವೀರಶೈವ ಧರ್ಮದ ಗುರುಗಳಾಗಿದ್ದ ಜ್ಯಾತವೇದ ಮುನಿ ಶಿವಾಚಾರ್ಯರಿಂದ ಲಿಂಗದೀಕ್ಷೆ ಪಡೆದರು. ಇದಕ್ಕೆ ಮೂಲಕ ಕಾರಣ ವೀರಶೈವ ಧರ್ಮದಲ್ಲಿದ್ದ ಸ್ವಾತಂತ್ರ್ಯ. ಅದರಲ್ಲೂ ಮಹಿಳೆಯರಿಗೂ ಸಹ ಲಿಂಗದೀಕ್ಷೆ ನೀಡಿ ಅವರಿಗೆ ಶಿವನ ಕರುಣೆ ಸಿಗುವಂತ ಇದ್ದ ಅವಕಾಶ. ಅದೇ ರೀತಿ ಜಾತಿ ಪದ್ದತಿ, ವಿವಿಧ ರೀತಿಯ ಪದ್ದತಿಗಳ ವಿರುದ್ದ ಹೋರಾಡುತ್ತ ಬಂದಿದ್ದ ಬಸವಣ್ಣನವರು ಮುಂದೆ ಕೂಡಲ ಸಂಗಮನಲ್ಲಿ ಐಕ್ಯರಾದರು ಎನ್ನುವುದು ಇತಿಹಾಸದಲ್ಲಿ ಕಾಣ ಸಿಗುತ್ತದೆ. ಆದರೆ ಎಲ್ಲಿಯೂ ಸಹ ಬಸವಣ್ಣನವರು ಪಂಚಾಚಾರ್ಯ ಪರಂಪರೆಯನ್ನು ವಿರೋಧಿಸಿದ ಉದಾಹರಣೆಗಳಿಲ್ಲ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ತಮ್ಮ ವಚನಗಳಲ್ಲಿಯೇ ವೀರಶೈವ ಪದವನ್ನು ಅವರು ಬಳಕೆ ಮಾಡಿರುವುದು ಕಂಡು ಬರುತ್ತದೆ.
ಬಸವಣ್ಣನವರ ಬಗ್ಗೆ ಅಧ್ಯಯನ ಮಾಡಿದ ಕೆಲವರು ತಮ್ಮ ಕೆಟ್ಟ ಜ್ಞಾನದಿಂದಾಗಿ ಬಸವಣ್ಣನವರ ವಚನಗಳ ಅರ್ಥವನ್ನು ತಿರುಚಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದ್ದರು. ಆಗ ಎಚ್ಚೆತ್ತುಕೊಂಡಿದ್ದ ಹಾನಗಲ್ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾವನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಉಂಟಾಗಬಹುದಾಗಿದ್ದ ಒಡಕನ್ನು ತಪ್ಪಿಸಿದ ಪುಣ್ಯಾತ್ಮರು.
ಗುರು- ವಿರಕ್ತ ಪರಂಪರೆ : ವೀರಶೈವ ಸಮಾಜದಲ್ಲಿ ಪಂಚಾಚಾರ್ಯರನ್ನು ಅನುಸರಿಸುವ ಸ್ವಾಮಿಜಿಗಳನ್ನು ಗುರುಗಳೆಂದು ಹಾಗೂ ಬಸವತತ್ವವನ್ನು ಪ್ರತಿಪಾದಿರುವವರನ್ನು ವಿರಕ್ತ ಮಠಾಧಿಶರೆಂದು ಕರೆಯಲಾಗುತ್ತಿದ್ದು, ಇಲ್ಲಿ ಯಾವುದೇ ರೀತಿಯ ಭೇದಗಳಾಗಲಿ ಕಂಡು ಬರುವುದಿಲ್ಲ. ಈ ಎರಡು ಪರಂಪರೆಗಳು ಶತಮಾನಗಳಿಂದ ವೀರಶೈವ ಸಮಾಜವನ್ನು ಮುನ್ನಡೆಸುತ್ತಾ ಸಾರ್ವಜನಿರಿಗೆ ಧರ್ಮದ ಮಾರ್ಗ ತೋರಿಸುತ್ತಾ ಬರುತ್ತಿದ್ದಾರೆ. ಇದಕ್ಕೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಪಂಚಗ್ರಹ ಹಿರೇಮಠದಲ್ಲಿ ಸುಮಾರು 500 ವರ್ಷಗಳ ಹಿಂದೆ ಬರೆದಿರುವ ಪತ್ರಗಳೇ ಸಾಕ್ಷಿಯಾಗಿವೆ.
ಇಂದು ವೈಚಾರಿಕೆಯನ್ನು ಬೆಳೆಸುವಲ್ಲಿ ನಿರತವಾಗಿರುವ ಚಿತ್ರದುರ್ಗದ ಮುರುಘಾಮಠದ ಹಿಂದಿನ ಶ್ರೀಗಳು ಅಂದು ಅಗ್ರಹಾರವಾಗಿದ್ದ ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಶ್ರೀಗಳಿಗೆ ಬರೆದ ಪತ್ರದಲ್ಲಿ ರೇಣುಕರದ ವಾರಸುದಾರರು ಎಂದು ಒಕ್ಕಣೆಯಲ್ಲಿ ಬರೆದಿದ್ದಾರೆ. ಅದೇ ರೀತಿ ಹುಬ್ಬಳ್ಳಿ ಮೂರು ಸಾವಿರ ಮಠದ ಉತ್ತಾರಾಧಿಕಾರಿ ವಿಷಯವನ್ನು ಚರ್ಚಿಸಲು ಸಹ ಅಮ್ಮಿನಭಾವಿ ಮಠದ ಪೀಠಾಧ್ಯಕ್ಷರಿಗೆ ಆಮಂತ್ರಣ ನೀಡಿದ ಪತ್ರ ಇಂದಿಗೂ ಇದೆ.
ಮುಜಗಂ= ರಂಭಾಪುರಿ ಶ್ರೀ : ವಿರಕ್ತ ಪರಂಪರೆಯ ಹಿಂದಿನ ಮಠವಾದ ಹುಬ್ಬಳ್ಳಿ ಮೂರು ಸಾವಿರ ಮಠದ ಹಿಂದಿನ ಶ್ರೀಗಳಾಗಿದ್ದ ಶ್ರೀ ಗಂಗಾಧರ ಜಗದ್ಗುರುಗಳು ಹಾಗೂ ಶ್ರೀ ರಂಭಾಪುರಿ ಪೀಠದ ಹಾಲಿ ಜಗದ್ಗುರುಗಳು ಗುರು ವಿರಕ್ತರನ್ನು ಒಂದು ಮಾಡುವ ಅತಿ ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದರು. ಕಾರಣ ಸಮಾಜವನ್ನು ಬಲ ಪಡಿಸುವ ಮಹದಾಸೆಯನ್ನು ಹಿರಿಯರಾಗಿದ್ದ ಮುಜಗಂ ಶ್ರೀಗಳು ಹೊಂದಿದ್ದರು. ಅದಕ್ಕೆ ಪೂರಕವೆಂಬಂತೆ ರಂಭಾಪುರಿ ಪೀಠದಲ್ಲಿ ನಡೆದ ಶ್ರೀ ರೇಣುಕ ಜಯಂತಿ ಕಾರ್ಯಕ್ರಮದಲ್ಲಿ ಮುಜಗಂ ಶ್ರೀಗಳನ್ನು ಬರಮಾಡಿಕೊಂಡು ರಂಭಾಪುರಿ ಶ್ರೀಗಳು ಅವರಿಗೆ ಸರಿ ಸಮಾನ ವೇದಿಕೆ ಕಲ್ಪಿಸಿ ನಾವೆಲ್ಲರೂ ಒಂದೇ ಎನ್ನುವ ಘೋಷಣೆ ಮಾಡಿದರು. ಅಂದು ಮಾತನಾಡಿದ್ದ ಮುಜಗಂ ಶ್ರೀಗಳು ಸಹ ರಂಭಾಪುರಿ ಶ್ರೀಗಳ ಭಾವನೆಗೆ ಸಹಮತ ವ್ಯಕ್ತಪಡಿಸಿದ್ದರು.
ಇದರಿಂದ ಸಾಕಷ್ಟು ಗಲಿಬಿಲಿಗೊಂಡ ವಿಕೃತ ಮನಸ್ಸುಗಳು ಅಂದು ಸಹ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದರು. ಆದರೆ ಈಗ ಮತ್ತೆ ವಿವಾದ ಹುಟ್ಟು ಹಾಕಿರುವ ವಿಕೃತರು, ಸಮಾಜವನ್ನು ಒಡೆಯುತ್ತಿರುವುದು ದುರಂತ.

No comments:
Post a Comment