ಕಳೆದ 9 ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಾಗೂ ಅವರ ಸರ್ಕಾರದ ಮೇಲೆ ಬೇಕಾದಷ್ಟು ಭ್ರಷ್ಟಾಚಾರ ಆರೋಪಗಳು ಸುರಿಮಳೆಯಾದರೂ ಪಕ್ಷ ಮಾತ್ರ ಅವರನ್ನು ಬಿಟ್ಟು ಕೊಟ್ಟಿರಲಿಲ್ಲ. 2ಜಿ ಇಂದ ಹಿಡಿದು, ಕಲ್ಲಿದ್ದಲು ಮಸಿ ಹತ್ತುವವರೆಗೂ ಹತ್ತಾರು ಹಗರಣಗಳು ನಡೆದರೂ ಪಕ್ಷದ ನಾಯಕರು ಯಾರೋಬ್ಬರು ಅವರ ಕಾರ್ಯ ವೈಖರಿ ಬಗ್ಗೆ ಚಕಾರ ಎತ್ತಿರಲಿಲ್ಲ. ಆದರೆ ಈಗ ಎಐಸಿಸಿ ಉಪಾದ್ಯಕ್ಷ ರಾಹುಲ್ ಗಾಂಧಿ ಸುಗ್ರಿವಾಜ್ಞೆ ವಿರುದ್ದ ತಮ್ಮ ಅಸಮಧಾನ ವ್ಯಕ್ತಪಡಿಸುವ ಮೂಲಕ ಸರ್ಕಾರ ಹಾಗೂ ಪಿಎಂಗೆ ಮುಜುಗುರು ಉಂಟುಮಾಡಿದ್ದಾರೆ.
ಜಗನ್ನಾಟಕ : ಹೌದು .,.. ಇದು ಪಕ್ಕಾ ಕುಟುಂಬ ರಾಜಕಾರಣದ ಜಗನ್ನಾಟಕ, ಜನಪ್ರಿಯತೆ ಕಳೆದುಕೊಂಡು ಸರ್ಕಾರದ ವಿರುದ್ದ ಜನ ಎಚ್ಚೆತ್ತಿರುವಾಗಲೇ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಕ್ಲೀನ್ ಇಮೇಜ್ ಇರುವ ರಾಹುಲ್ ಗಾಂಧಿಯನ್ನು ಮುಂದಿಟ್ಟು ಮತ್ತೆ ಜನರಿಗೆ ಮಂಕುಬೂದಿ ಎರಚಲು ಯತ್ನಿಸುತ್ತಿದೆ. ಈಗಾಗಲೇ ಬಿಜೆಪಿ ಗುಜರಾತ್ ಸಿಎಂ ನಮೋ ಅವರಿಗೆ ದೇಶದ ಜನ ಜೈ ಎನ್ನುವ ಕಾತುರದಲ್ಲಿರುವುದನ್ನು ಅರಿತ ರಾಜ ( ನೆಹರು )ಕುಟುಂಬ ಈಗ ರಾಹುಲ್ ಗಾಂಧಿ ಅವರನ್ನು ದಾಳವಾಗಿ ಬಳಸಿದೆ.
ಈ ಮೂಲಕ ತಾನು ಭ್ರಷ್ಟಾಚಾರ ವಿರೋಧಿ ಎನ್ನುವ ಹಣೆ ಪಟ್ಟಿ ಹೊತ್ತುಕೊಳ್ಳುವ ಇರಾದೆಯನ್ನು ಕಾಂಗ್ರೆಸ್ ಹೊಂದಿದ್ದು, ಮುಂಬರುವ ಚುನಾವಣೆಯಲ್ಲಿ ರಾಹುಲ್ ಪ್ರಧಾನ ಅಭ್ಯರ್ಥಿ ಎಂದು ಬಿಂಬಿಸಲು ತಯಾರಿ ನಡೆಸಿದೆ. ಆಗ ಯುವ ಜನರು ಸರ್ಕಾರದ ನಿರ್ಧಾರವನ್ನು ಟೀಕಿಸುವ ಮೂಲಕ ರಾಹುಲ್ ಸುಗ್ರಿವಾಜ್ಞೆಯನ್ನು ತಡೆಹಿಡಿದು ದೇಶವನ್ನು ರಕ್ಷಿಸಿದರು ಎಂದು ಹುಯಿಲೆಬ್ಬಿಸಿ ಬೆಳೆ ಬೇಯಿಸಲು ಸಜ್ಜಾಗಿದೆ. ಕಾರಣ ಇಷ್ಟೇ ಇಷ್ಟು ದಿನ ಸರ್ಕಾರ ಹಾಗೂ ಪಕ್ಷಕ್ಕೆ ಮಾರ್ಗದರ್ಶಕರಾಗಿದ್ದ ಪ್ರಣಬ್ ಮುಖರ್ಜಿ ಈಗ ಘನೆತೆವೆತ್ತ ರಾಷ್ಟ್ರಪತಿ ಸ್ಥಾನದಲ್ಲಿದ್ದು, ಅವರಿಗೂ ಸಹ ಸರ್ಕಾರದ ನಡೆ ಹಿಡಿಸಿರಲು ಸಾಧ್ಯವಿಲ್ಲ. ಇದರಿಂದಾಗಿ ಅವರು ಸಹ ಸುಗ್ರಿವಾಜ್ಞೆಯನ್ನು ಮರಳಿ ಕಳುಹಿಸುವ ಸಾಧ್ಯತೆಗಳಿತ್ತು. ಆಗ ಸರ್ಕಾರಕ್ಕೆ ಆಗುವ ಮುಜುಗುರವನ್ನು ತಪ್ಪಿಸಲು ರಾಹುಲ್ ಮೂಲಕವೇ ಅದನ್ನು ಮಾಡಿಸಿದರೆ ರಾಜಕೀಯ ಲಾಭವಾಗುವ ಸಂಬಂಧ 'ರಾಜ' ಕುಟುಂಬ ಯುವರಾಜನನ್ನು ಬಳಸಿದೆ.
ರಾಜೀವ್ ನೆನಪು : ದಿ.ರಾಜೀವಗಾಂಧಿ ಹಿಂದೊಮ್ಮೆ ಪಕ್ಷವನ್ನು ಕುರಿತು.. ಕಾಂಗ್ರೆಸ್ ಒಂದು ಹೊಗಳು ಭಟ್ಟರ್ ಹಾಗೂ ಬಾಲ ಬಡುಕರ ಗುಂಪಾಗಿದೆ ಎನ್ನುವ ಮೂಲಕ ಪಕ್ಷಕ್ಕೆ ಮುಜುಗುರ ಉಂಟುಮಾಡಿದ್ದರು. ಅದೇ ರೀತಿ ಈಗ ಅವರ ಮಗ ರಾಹುಲ್ ಗಾಂಧಿ ತಮ್ಮದೆ ಸರ್ಕಾರದ ಕ್ರಮವನ್ನು ತೀರಸ್ಕರಿಸುವ ಮೂಲಕ ದೇಶದ ಜನರ ಹತ್ತಿರಕ್ಕೆ ಬರಲು ಯತ್ನಿಸುತ್ತಿದ್ದಾರೆ.
ದಿಗ್ಗಜರ ಮೌನ : ಪ್ರಧಾನ ಮಂತ್ರಿಗಳು ದೇಶದಲ್ಲಿಲ್ಲ. ಅವರನ್ನು ಬಿಟ್ಟು ಬಿಡೋಣ, ( ಅಷ್ಟಕ್ಕೂ ಅವರು ಮಾತನಾಡಲ್ಲ) , ಇಲ್ಲಿರುವ ಕೇಂದ್ರ ಮಂತ್ರಿಗಳು ರಾಹುಲ್ ಹೇಳಿಕೆ ವಿರುದ್ದ ತುಟಿ ಪಿಟಕ್ ಎನ್ನಲಿಲ್ಲ. ಇಷ್ಟು ದಿನಗಳ ಕಾಲ ಪ್ರತಿಪಕ್ಷ ಆದಿಯಾಗಿ ಎಲ್ಲರೂ ಬಾಯಿ ಬಡಿದುಕೊಂಡರು ಕಳಂಕಿತರಿಗೆ ರಕ್ಷಣೆ ನೀಡುವುದು ತಮ್ಮ ಧರ್ಮ ಎನ್ನುವಂತೆ ಮಾತನಾಡುತ್ತಿದ್ದ ಹಿರಿಯ ಮಂತ್ರಿಗಳಾದ ಪಿ. ಚಿದಂಬರಂ, ಕಪಿಲ್ ಸಿಬಲ್, ಗೃಹ ಸಚಿವ ಸುಶೀಲ ಕುಮಾರ ಸಿಂಧೆ, ವೀರಪ್ಪ ಮೊಯ್ಲಿ ಹೊದಲ್ಲಿ ಬಂದಲ್ಲಿ ಸರ್ಕಾರದ ಕ್ರಮವೇ ಸರಿ ಎನ್ನುತ್ತಿದ್ದರು ಆದರೆ ಈಗ ಮಾತ್ರ ಯಾರೊಬ್ಬರು ಹೂಂಂಂಂಂಂ ಹೂಂಂ.
ಅದು ಬಿಡಿ ಪತ್ರಿಕಾಗೋಷ್ಟಿ ಆರಂಭದಲ್ಲಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ನಾಯಕ ಅಜೇಯ ಮಾಕೇನ್ ಸಹ ರಾಹುಲ್ ಮಾತಿನ ನಂತರ ಉಲ್ಪಾ ಹೊಡೆದರು. ಇದರರ್ಥ ಇಷ್ಟೇ ಇಂದಿಗೂ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರವನ್ನು ಒಂದು ಕುಟುಂಬ ಮುನ್ನಡೆಸುತ್ತಿದೆ ಎನ್ನುವುದು.
ಕೊನೆಯದಾಗಿ : ಇದೊಂದು ಪೊಲಿಟಿಕಲ್ ಮೋಟಿವೆಟೆಡ್ ಹೈ ಡ್ರಾಮಾ, ಇದು 2014 ಚುನಾವಣೆಯಲ್ಲಿ ಸೋಲಿನ ಭೀತಿ ಎದುರುಸುತ್ತಿರುವ ಯುಪಿಎ ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲು ಹೂಡಿರುವ ಹೊಸ ದಾಳವಷ್ಟೇ..!

No comments:
Post a Comment