ಬಸವಪೂರ್ವದಲ್ಲಿ ವೀರಶೈವ ಧರ್ಮ ಇಲ್ಲವೆನ್ನುವುದು ಸುಳ್ಳಿಿನ ಕಂತೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿಿರುವ ಬಿಸಿಬಿಸಿ ಚರ್ಚೆಗೆ ಮಾಧ್ಯಮಗಳು ವೇದಿಕೆ ಕಲ್ಪಿಿಸಿವೆ ವಿನಃ. ಮೂಲ ಹುಡುಕುವ ಯಾವ ಪ್ರಯತ್ನವನ್ನು ಮಾಡಿಲ್ಲ ಎನ್ನುವುದು ಖೇದಕರ.
ಕೃತಯುಗದಿಂದ ಬೆಳದು ಬಂದಿರುವ ವೀರಶೈವ ಧರ್ಮಕ್ಕೆೆ ಅದಕ್ಕೂ ಪೂರ್ವದಲ್ಲಿಯೇ ಇತಿಹಾಸವಿತ್ತು ಎನ್ನುವುದು ಸಾಕಷ್ಟು ಜನರಿಗೆ ತಿಳಿಯದ ವಿಷಯವಾಗಿದೆ. ಈ ಕುರಿತಂತೆ ಸಂಶೋಧಕ ಡಾ. ಚಿದಾನಂದಮೂರ್ತಿಗಳು ಸಾಕಷ್ಟು ಬಾರಿ ಅದನ್ನು ಸಾಕ್ಷಿಿ ಸಮೇತ ವಿವರಿಸಿದ್ದರು ಸಹ ಯಾವೊಬ್ಬ ಆ ಕುರಿತಂತೆ ಚರ್ಚೆಗೆ ತಯಾರಿಲ್ಲದಿರುವುದು ಸಾಕಷ್ಟು ಸಂಶಯಗಳನ್ನು ಹುಟ್ಟುಹಾಕಿದೆ. ಕಾರಣ ವಿವಿಧ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿಿರುವ ಸ್ವಯಂ ಘೋಷಿತ ಜಗದ್ಗುರು ಮಾತೆ ಮಹಾದೇವಿ ಅವರ ಅನುಯಾಯಿಗಳಿಗೆ ಕಾಮಾಲೆ ರೋಗ ಬಂದಂತೆ ವರ್ತಿಸುತ್ತಿಿರುವುದು ಅವರು ಅಧ್ಯಯನದ ಫಲವಾಗಿದೆ.
ಈ ಹಿಂದೆ ಮಾತೆ ಮಾತೆ ಮಹಾದೇವಿ ಅವರು, ಬಸವಣ್ಣನವರೇ ಸುಳ್ಳು ಎನ್ನುವ ಮೂಲಕ ಬಸವ ಅನುಯಾಯಿಗಳನ್ನು ದಿಕ್ಕು ತಪ್ಪಿಿಸಿದ್ದನ್ನು ಯಾರು ಮರೆಯುವಂತಿಲ್ಲ. ತಮಗೆ ಆಧ್ಯಾಾತ್ಮಿಿಕ ಗುರುಗಳಾಗಿದ್ದ ಲಿಂಗದೇವರೆ ಎಲ್ಲ ವಚನಗಳ ಕರ್ತೃ ಎನ್ನುವ ಮೂಲಕ ಬಸವಣ್ಣನ ವಚನಗಳನ್ನು ತಿದ್ದಿದ್ದರು ಅಷ್ಟೇ ಅಲ್ಲದೇ ಅಕ್ಕನ ವಚನಗಳ ನಾಮಾಂಕಿತ ತಿದ್ದಿ ಸಾಕಷ್ಟು ಆಕ್ರೋೋಶಕ್ಕೆೆ ಗುರಿಯಾಗಿದ್ದರು. ಇಂತಹ ಸಣ್ಣ ಮನಸ್ಸಿಿನ ಖಾವಿಧಾರಿಗಳಿಂದ ಬಸವ ಅನುಯಾಯಿಗಳು ಜಾಗೃತ ಕಾಲ ಬಂದಂತಿದೆ.
ಈಗಾಗಲೇ ಸಾಕಷ್ಟು ಸಂಶೋಧನೆ ಹಾಗೂ ಪುರಾತತ್ವ ಇಲಾಖೆ ನೀಡಿರುವ ದಾಖಲೆಗಳ ಪ್ರಕಾರವೇ ವೀರಶೈವ ಧರ್ಮ ಬಸವಪೂರ್ವ ಯುಗದ್ದು ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಅಲ್ಲದೇ ಬಸವಣ್ಣನವರ ಅನುಯಾಯಿಗಳಾದ ವಿರಕ್ತ ಮಠಾಧೀಶರು ಸಹ ಇದನ್ನು ಒಪ್ಪಿಿಕೊಂಡಾಗಿದೆ. ಅದರಲ್ಲೂ ವಿರಕ್ತ ಪರಂಪರೆಯ ಮೇರು ಶಿಖರದಂತಿದ್ದ ಯಡಿಯೂರು ಸಿದ್ಧಲಿಂಗೇಶ್ವರರು ಸಹ ವೀರಶೈವ ಧರ್ಮದ ಕುರಿತು ಸಾಕಷ್ಟು ಉಲ್ಲೇಖ ಮಾಡಿರುವುದು ಇತಿಹಾಸದಿಂದ ಕಾಣ ಸಿಗುತ್ತದೆ.
ದಾಖಲೆಯಾಗಿ ಶಾಸನಗಳು
ಬಯರಿತ್ತಿಿ ಶಾಸನ ಕ್ರಿಿಶ 1000 ಕಕ್ಕೇರಿ, 1127, ಉದ್ರಾಾಮಿ ಕ್ರಿಿಶ 1157 ಕೊಳ್ಳೂರು ಕ್ರಿಿಶ1180, ಅಮ್ಮಿಿನಭಾವಿ ಮಠದಲ್ಲಿರುವ ಪತ್ರ ಕ್ರಿಿಶ 1130, ಶಿರನಾಳ ಕ್ರಿಿಶ 1187, ಅವ್ವೇರಹಳ್ಳಿಿ ಕ್ರಿಿಶ 1193 ಚೌಡದಾನಪುರ ಕ್ರಿಿಶ 1193 ಮುಂತಾದ ಶಾಸನಗಳಲ್ಲಿ ರಂಭಾಪುರಿ ಪೀಠದ ಕುರಿತು ಉಲ್ಲೇಖವಿದೆ. ಬಾಗಳಿ ಕ್ರಿಿಶ 1078 ಅವ್ವೇರಹಳ್ಳಿಿ ಕ್ರಿಿಶ1093ಮರಡಿಪುರ ಕ್ರಿಿಶ 1280 ಶಾಸನಗಳು ಉಜ್ಜಯಿನಿ ಪೀಠದ ಕುರಿತು ಹೇಳುತ್ತವೆ. ಇನ್ನೂ ಸುಪ್ರಸಿದ್ದ ರಾಜನಾಗಿದ್ದ ಜನಮೇಯನ ತಾಮ್ರ ಶಾಸನ ಕ್ರಿಿಪೂ 1500 ಮರಡಿಪುರ ಕ್ರಿಿಶ1280 ಶಾಸನಗಳು ಕೇದಾರ ಪೀಠದ ಚರಿತ್ರೆೆಗೆ ಹಿಡಿದ ಕೈ ಗನ್ನಡಿಯಾಗಿದೆ. ಪಾಣೆಂ ಕ್ರಿಿಶ ಸುಮಾರು 8020 ಗುಂಡಾಲ, ನಡಾಲ. ಹನುಮಕೊಂಡ, ಪಾಲಂಪೇಟ ಬಿಜವಾಡ ಕ್ರಿಿಶ 1100 ಘಂಟಾಮರ ಮುಂತಾದ ಶಾಸನಗಳು ಶ್ರೀಶೈಲ ಪೀಠದ ಕುರಿತು ಉಲ್ಲೇಖ ಮಾಡಿವೆ,
ಇನ್ನೂ ಕಾಶಿ ಪೀಠದ ಕುರಿತು ಹೇಳಬೇಕೆಂದರೆ , ಜಯನಂದ ದೇವ ಶಾಸನ ಕ್ರಿಿಶ 574, ಜಂಗಮಪುರ ಕ್ರಿಿಶ 631, ನೇಪಾಳ ಜಂಗಮಠ ಕ್ರಿಿಶ 635 ಮುಂತಾದ ಶಾಸನಗಳು ಶ್ರೀಪೀಠದ ಕುರಿತು ಸ್ಪಷ್ಟ ಮಾಹಿತಿ ಹೊಂದಿದೆ.ಇನ್ನೂ ಹಿಂದೂ ವಿರೋಧಿಗಳಾಗಿದ್ದ ಮೊಗಲ್ ದೊರೆಗಳು ಪೀಠದ ಅಂದಿನ ಜಗದ್ಗುರುಗಳ ತಪಶಕ್ತಿಿಗೆ ತಲೆಬಾಗಿ ಕಾಶಿ ಮಠಕ್ಕೆೆ ನಡೆದುಕೊಂಡಿರುವುದು ಹಾಗೂ ಆ ಕುರಿತು ಇರುವ ದಾಖಲೆಗಳು ಇಂದಿಗೂ ಜಂಗಮವಾಡಿ ಮಠದಲ್ಲಿ ಕಾಣ ಸಿಗುತ್ತವೆ.
ಕೃತ, ತ್ರೇತಾ, ದ್ವಾಾಪರ ಹಾಗೂ ಕಲಿಯುಗದಲ್ಲಿ ಸಂದರ್ಭಕ್ಕೆೆ ಅನುಸಾರವಾಗಿ ಶಿವನ ಅಪ್ಪಣೆಯಿಂದ ಉದಯಿಸಿ ವೀರಶೈವ ಧರ್ಮ ಸ್ಥಾಾಪಿಸಿದ ರೇಣುಕಾದಿ ಪಂಚಾಚಾರ್ಯರು, ವೀರಶೈವ ಧರ್ಮದ ಜತೆಗೆ ಹಿಂದೂ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಿದ್ದರು ಎನ್ನುವುದನ್ನು ನಾವು ಅರಿಯಬೇಕಿದೆ. ವೀರಶೈವ ಅಥವಾ ಲಿಂಗಾಯತ ಧರ್ಮ ಹಿಂದು ಸಂಸ್ಕೃತಿಯ ಭಾಗವೇ ಅಲ್ಲ ಎಂದು ಹೇಳಿಕೆ ನೀಡುತ್ತಿಿರುವ ಅಲ್ಪ ಜ್ಞಾಾನಿಗಳಿಗೆ ಒಂದು ಮಾತನ್ನು ಹೇಳಲೆ ಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತದಲ್ಲಿ ಸುಮಾರು 130 ಕೋಟಿ ಜನಸಂಖ್ಯೆೆಯಲ್ಲಿ ಕೇವಲ 6-7 ಬಗೆಯ ಮಾನವನ ಜೀನ್‌ಸ್‌ಗಳು ಒಂದಕ್ಕಿಿಂತ ವಿಭಿನ್ನವಾಗಿದ್ದು ಉಳಿದ್ದೇಲ್ಲವು ಸಹ ಹೊಲಿಕೆಯಾಗುತ್ತವೆ. ಇದು ವೈಜ್ಞಾಾನಿಕವಾಗಿಯೂ ದೃಢಪಟ್ಟಿಿದೆ. ಅಂತಹುದರಲ್ಲಿ ವೀರಶೈವ ಲಿಂಗಾಯತರು ಹಿಂದೂ ಸಂಸ್ಕೃತಿಯ ಭಾಗವೇ ಅಲ್ಲ ಎನ್ನುವುದು ಮೂರ್ಖತನದ ಪರಮಾವಧಿಯಾದಿತು. ಈಗಾಗಲೇ ವಿವಿಧ ಕಾರಣಗಳಿಂದ ದಾಳಿಗೊಳಗಾಗಿರುವ ಹಿಂದು ಧರ್ಮವನ್ನು ರಕ್ಷಿಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ವಿನಾಕಾರಣ ಜನರನ್ನು ದಿಕ್ಕು ತಪ್ಪಿಿಸುತ್ತಿಿರುವ ಕೆಲವರು ಹಿಂದು ಧರ್ಮವೇ ಬೇರೆ ಲಿಂಗಾಯತರೇ ಬೇರೆ ಎನ್ನುವ ಮೂಲಕ ತಮ್ಮನ್ನು ತಾವೇ ಹಳಿದುಕೊಳ್ಳುತ್ತಿಿದ್ದಾಾರೆ.
ಚನ್ನಬಸವಣ್ಣ, ಘಟ್ಟಿಿವಾಳಯ್ಯ, ಮೆರಿಮಿಂಢಿದೇವಯ್ಯ, ಡಿ. ಬಾಲಬೊಮ್ಮಣ್ಣ, ಅಕ್ಕನಾಗಾಯಿ, ಹಾವಿನಹಾಳ ಕಲ್ಲಯ್ಯ ಅಕ್ಕ, ಸಿದ್ಧಾಾರಾಮಯ್ಯ, ತೋಂಟದ ಯತಿಗಳು ಮತ್ತು ಬಸವಣ್ಣನವರ ಹಿರಿಯ ಸಮಕಾಲಿನರಾದ ಆದಯ್ಯ, ಸಕಲೇಶ ಮಾದಯ್ಯ, ಮುಂತಾದ ಶರಣರು ತಮ್ಮ ಅನೇಕ ವಚನಗಳಲ್ಲಿ ಪಂಚಾಚಾರ್ಯರರನ್ನು ಭಕಿ ಭಾವದಿಂದ ಅನನ್ಯವಾಗಿ ನೆನದಿದ್ದಾಾರೆ.
ತಮ್ಮ ಧರ್ಮದ ಬಗೆಗೆ ಪ್ರತಿಯೊಬ್ಬರಿಗೂ ಗೌರವ ಆದರಾಭಿಮಾನಗಳು ಇದ್ದೇ ಇರುತ್ತವೆ. ಇಲ್ಲಿ ಮೇಲು ಕೀಳೆಂಬುದೇ ಇಲ್ಲ. ತಾಯಿಗೆ ಚಂದನೆಯ ಹೆಸರಿಲ್ಲವೆಂದು ಬೇರೆಯವರನ್ನು ತಾಯಿ ಎನ್ನಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿಯಾಗಿ ಈ ಹೆಸರು ಸರಿಯಿಲ್ಲವೆಂದು ಧರ್ಮಕ್ಕೆೆ ಮೊತ್ತಂದೊ ಹೆಸರಿಟ್ಟರೆ ಹೇಗಾದಿತೂ. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪರಂಪರೆ ಹಾಗೂ ಧರ್ಮ ಉಳಿಯಬೇಕಾದರೆ ಎಲ್ಲರೂ ಒಂದಾಗಿ ಸ್ವಾಾರ್ಥಿಗಳನ್ನು ಹಿಮ್ಮೆೆಟ್ಟಿಿಸಬೇಕಿದೆ.
ವಚನಗಳಲ್ಲಿ ಹಾಗೂ ಅದಕ್ಕಿಿಂತಲೂ ಮುಂಚಿನ ವೇದಾಗಮಗಳಲ್ಲಿ ವೀರಶೈವ ಪದ ಸಾಕಷ್ಟು ಬಾರಿ ಬಳಕೆಯಾಗಿದೆ. ಅದರಲ್ಲೂ ಬಸವಣ್ಣನವರಿಂದ ಹಿಡಿದು ಹೇಮಗಲ್ಲ ಹಂಪನವರೆಗಿನ 29 ಶರಣರು ಒಟ್ಟು 161 ವಚನಗಳಲ್ಲಿ 170 ಸಲ ವೀರಶೈವ ಪದವನ್ನು ಧರ್ಮವಾಚಕವಾಗಿ ಬಳಸಿದ್ದಾಾರೆ. ಇದನ್ನೇ ವಿವರಿಸುತ್ತಾಾ ಹೋದರೆ ಒಂದು ಪುಟವಲ್ಲ ನೂರು ಪುಟಗಳಾದರೂ ವೀರಶೈವ ಪರಂಪರೆ ಇತಿಹಾಸದ ಕುರಿತು ಬರೆಯಬಹುದಾಗಿದೆ.
ವೀರಶೈವ ಲಿಂಗಾಯತ ಒಂದೇ ಅಲ್ಲಿ ಭೇದವಿಲ್ಲ. ಈಚೆಗೆ ಭೇದ ಕಲ್ಪಿಿಸುತ್ತಿಿರುವುದು ಸರಿಯಲ್ಲ ಎನ್ನುವುದು ಬಹುತೇಕರವಾದವಾಗಿದೆ. ಈ ಕುರಿತಂತೆ ಸಿದ್ಧಗಂಗೆಯ ಮುಕುಟವಾಗಿರುವ ಶತಾಯುಷಿಗಳು ಹೇಳಿಕೆ ನೀಡುವುದು ಅನಿವಾರ್ಯವಾಗಿದೆ ಎನ್ನುವುದು ನನ್ನ ಭಾವನೆ. ಕಾರಣ ಬಸವಣ್ಣನವರ ವಚನಗಳ ಸಾರವನ್ನು ದಿನನಿತ್ಯದಲ್ಲಿ ಅಳವಡಿಸಿಕೊಂಡಿರುವ ಶ್ರೀಗಳು ಈ ಕುರಿತು ಹೇಳಿಕೆ ನೀಡಿದ್ದಲ್ಲಿ ಪಂಚಪೀಠಾಧೀಶ್ವರರು ಹೇಳುತ್ತಿಿರುವ ಮಾತುಗಳಿಗೆ ಇನ್ನೂ ಹೆಚ್ಚಿಿನ ಮಹತ್ವ ಬರುತ್ತದೆ. ಈಗಾಗಲೇ ಸಮಾಜ ಒಡೆದು ಹೋಗಿದ್ದು ಇನ್ನೂ ಹೆಚ್ಚಿಿನ ಪ್ರಮಾಣದಲ್ಲಿ ವಿಭಜನೆಯಾದರೆ ಮುಂದೊಂದು ದಿನ ಈ ಅಲ್ಪ ಮತಿಗಳು ಹಾಗೂ ಸ್ವಯಂ ಘೋಷಿತ ಜಗದ್ಗುರು ಎಂದು ಹೇಳಿಕೊಳ್ಳುವವರು ಬಸವಣ್ಣ ಹುಟ್ಟೆೆಯಿಲ್ಲ ಅಂದರೆ ಏನು ಮಾಡುವುದು.?
- ಪ್ರಶಾಂತ ರಾಜ ರಾಜ ಗುರು