ನಿಜಕ್ಕೂ ಈ ಪ್ರೇಮ ಕಥೆಯ ಕೊನೆಯ ಕಂತನ್ನೂ ಬರೆಯಲು ತುಂಬಾನೇ ಕಷ್ಟವಾಗುತ್ತಿದೆ.
ಸುಮಾರು ವರ್ಷಗಳ ಕಾಲ ಬಚ್ಚಿಟ್ಟಿದ್ದ ಪ್ರೇಮವನ್ನು ಹೇಳಿಕೊಂಡಿದ್ದ ನಾಯಕ ಪ್ರೇಮ ಹಾಗೂ ಅದನ್ನು ಕೇಳಿ ದುಃಖಿತಳಾಗದ್ದ ನಾಯಕಿ ರಮ್ಯಾ ಈಗ ಮತ್ತೆ ದೂರವಾಗುತ್ತಿದ್ದಾರೆ. ಕಾರಣ ಅವಳು ಗೃಹಿಣಿ. ಸಮಾಜದಲ್ಲಿ ಈ ರೀತಿಯ ಸಂಬಂಧಕ್ಕೆ ಯಾವುದೇ ಬೆಲೆ ಇರದು ಎಂದು ಅರಿತಿದ್ದ ಪ್ರೇಮ ಇಷ್ಟು ವರ್ಷಗಳಾದರೂ ಅದನ್ನು ಹೇಳಿರಲಿಲ್ಲ. ಆದರೆ ಅವಳು ಒತ್ತಾಯಮಾಡಿದಳೆಂಬ ಕಾರಣಕ್ಕೆ ಪ್ರೀತಿಸುತ್ತಿರುವ ವಿಷಯ ಹೇಳಿದ ಪ್ರೇಮನಿಗೆ ಒಳಗೊಳಗೆ ಅಪರಾಧಿ ಮನೋಭಾವನೆ ಕಾಡಹತ್ತಿತು. ಈ ನಡುವೆ ಅವಳಿಗೆ ಸಂದೇಶ ಕಳುಹಿಸಿದ ಪ್ರೇಮನಿಗೆ ಬಂದ ಉತ್ತರ ಅವನನ್ನು ಇನ್ನಷ್ಟು ಗಾಸಿ ಘೋಳಿಸಿದ್ದವು. ಸ್ನೇಹಿತರಿದ್ದಾಗಿನಿಂದ ಹಿಡಿದು ಇಲ್ಲಿಯವರೆಗೂ ಎಲ್ಲಿಯೂ ಸಹ ಎಂದು ಆತ ಅವಳ ಮೇಲೆ ಸಿಟ್ಟು ಮಾಡಿಕೊಂಡವನಲ್ಲ. ಎಲ್ಲೇ ಮೀರಿದವನೂ ಅಲ್ಲ. ಅವಳನ್ನು ದೇವತೆಯಂತೆ ಪೂಜಿಸುತ್ತಿದ್ದ. ಅವಳನ್ನು ಅಪ್ಪಿ ತಪ್ಪಿಯೂ ಕೆಟ್ಟ ಭಾವನೆಯಿಂದ ಮುಟ್ಟಿದವನು ಅಲ್ಲ. ಅವಳು ಸಹ ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಳು. ಅವನನ್ನು ಪ್ರೀತಿಸುತ್ತಿದ್ದರೂ ಸಹ ಅವಳು ಅವನ ಮುಂದೆ ಎಂದಿಗೂ ಆ ರೀತಿಯ ನಡುವಳಿಕೆ ತೋರಿರಲಿಲ್ಲ. ಕಾರಣ ಮತ್ತದೇ ಸ್ನೇಹ. ಇಷ್ಟು ಗಾಡವಾಗಿದ್ದ ಸ್ನೇಹ ಪ್ರೇಮಕ್ಕೆ ತಿರುಗಿದ್ದರೂ ಅದನ್ನು ವ್ಯಕ್ತಪಡಿಸಿದ ಇಬ್ಬರೂ ಈಗ ಕಣ್ಣಿರಿನಲ್ಲಿ ಕೈ ತೊಳಯುವಂತಾಗಿತ್ತು. ಆದರೆ ಇದನ್ನೆಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಇತ್ತು. ಆದರೆ ನಾಯಕ ಪ್ರೇಮ ಮಾತ್ರ ಮನೆಯಲ್ಲಿ ಮದುವೆ ಮಾತು ಎತ್ತಿದರೆ ಸಾಕು ಉರಿದು ಬೀಳುತ್ತಿದ್ದ. ಅವನನ್ನು ಇಷ್ಟಪಟ್ಟಿದ್ದ ಹಲವಾರು ಹುಡುಗಿಯರು ಅವನೆದರು ಮಂಡಿಯೂರಿ ಕುಳಿತರು ಅವನು ಜಪ್ಪಯ್ಯ ಎನ್ನಲಿಲ್ಲ. ಅದರಲ್ಲೂ ಒಂದು ಹುಡುಗಿಯಂತೂ ಆತ್ಮಹತ್ಯೆಗೆ ಯತ್ನಿಸಿದ್ದರೇ ಇನ್ನೋಬ್ಬಳು ತನ್ನ ಸರ್ವಸ್ವವನ್ನು ಈತನಿಗೆ ಧಾರೆ ಎರೆಯಲು ಕಾತುರಳಾಗಿದ್ದಳು ಆದರೂಸಹ ಪ್ರೇಮ ಮಾತ್ರ ಅದ್ಯಾವುದಕ್ಕೂ ಬೆಲೆ ನೀಡದೆ ತನ್ನ ಗುಪ್ತ ಪ್ರೇಯಸಿ ರಮ್ಯಳನ್ನು ಪ್ರೀತಿಸುತ್ತಿದ್ದ.
ಈ ನಡುವೆ ಗೃಹಿಣಿಯಾಗಿದ್ದ ರಮ್ಯಾ ಆಗೊಂದು ಈಗೊಂದು ಸಂದೇಶಗಳನ್ನು ಬಿಟ್ಟರೆ ಎಂದೂ ಸಹ ಅವನ ಜತೆ ಮಾತನಾಡುವುದಾಗಲಿ ಭೇಟಿ ಮಾಡುವುದಾಗಲಿ ಮಾಡಲೇಯಿಲ್ಲ. ಅವಳ ಸ್ಥಿತಿಯನ್ನು ಅರಿತಿದ್ದ ಪ್ರೇಮ ಸಹ ತನ್ನ ಪ್ರೇಮವನ್ನು ಬಿಟ್ಟುಕೊಟ್ಟಿದ್ದ. ಆದರೆ ಅವನ ಮನಸ್ಸಿನಲ್ಲಿ ಅವಳು ಮಾತ್ರ ಅಚ್ಚಳಿಯದೆ ಉಳಿದು ಬಿಟ್ಟಿದ್ದಳು. ಜತೆಗೆ ತನ್ನ ವ್ಯವಹಾರದಲ್ಲಿ ಲಾಸ್ ಮಾಡಿಕೊಂಡ ಪ್ರೇಮ ಮತ್ತಷ್ಟು ಕೃಷನಾದ. ಇದರಿಂದಾಗಿ ಅವನ ಆರೋಗ್ಯ ಸಹ ಹದಗೆಟ್ಟಿತು. ಆಗ ಅವನ ಮನೆಯವರಿಗೆ ಚಿಂತೆ ಕಾಡಲಾರಂಭಿಸಿತು. ಅವನಿಗೆ ಇದದ್ದು ಒಂದು ಆಸೆ ಅದು ರಮ್ಯಾಳನ್ನು ಲಾಂಗ್ ಡ್ರೈವಗೆ ಕರೆದುಕೊಂಡು ಹೋಗುವುದು, ಅಲ್ಲಿ ಅವನ ಕೈಯಿಂದ ಅವಳಿಗೆ ಊಟ ಮಾಡಿಸುವುದು ಅಷ್ಟೇ. ಆದರೆ ಕೊನೆಗೂ ಅದಕ್ಕೆ ಅವಕಾಶ ಸಿಗಲೇ ಯಿಲ್ಲ. ಇದರಿಂದಾಗಿ ಅವನ ತನ್ನ ಜೀವನವನ್ನೇ ಕೊನೆಗೊಳಿಸಲು ಉದ್ದೇಶಿಸಿದ. ಒಂದು ದಿನ ಮುಂಜಾನೆಯ ಸಮಯದಲ್ಲಿ ಹೊರಟ ಪ್ರೇಮ ಮತ್ತೆ ತಿರುಗಿ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ. ಅಂದು ಮುಂಜಾನೆ ಎದ್ದ ಪ್ರೇಮ ತನ್ನ ನೆಚ್ಚಿನ ಸೂಟ್ ಧರಿಸಿ ಟಿಪ್ ಟಾಪ್ ಆಗಿ ಹೋರಟ, ಕಾಲು ನಡಿಗೆಯಲ್ಲಿ ಸುಮಾರು ದೂರ ನಡೆದ ಮೇಲೆ ಅಲ್ಲಿ ಅವನಿಗೆ ದೂರದ ಬೆಟ್ಟವೊಂದು ಕಾಣಿಸಿತು. ಬೆಟ್ಗದ ತುದಿಗೇರಿದ ಆತ ಇನ್ನೇನು ಸಾಯಬೇಕು ಎನ್ನುವ ಸಂದರ್ಭದಲ್ಲಿ ದಿವ್ಯವಾಣಿಯೊಂದು ಕೇಳಿದ ಅನುಭವವಾಯಿತು. ಹಿಂದಿರುಗಿ ನೋಡಿದ ಪ್ರೇಮನಿಗೆ ಸನ್ಯಾಸಿಗಳೊಬ್ಬರು ಆತನನ್ನು ನೋಡುತ್ತಿರುವುದು ಕಾಣಿಸಿತು. ಆಗ ಅವರ ಮಾರ್ಗದರ್ಶನ ಪಡೆದ ಪ್ರೇಮ ಮುಂದೆ ಅವರನ್ನು ಹಿಂಬಾಲಿಸಿದ. ಅವರು ಅವನಲ್ಲಿನ ಆಧ್ಯಾತ್ಮದ ಹಸಿವನ್ನು ಗಮನಿಸಿ ಆತನಿಗೆ ದೀಕ್ಷೆ ನೀಡಿದರು. ಆಗ ಪ್ರೇಮನಾಗಿದ್ದವ ಬದಲಾಗಿ ಸ್ವಾಮೀ ಪ್ರೇಮಾನಂದ ಗೂರುಜಿಯಾಗಿ ಬದಲಾದ. ಹಿಂದಿನ ಎಲ್ಲ ಘಟನೆಗಳನ್ನು ,ಮರೆತು ಸಮಾಜಕ್ಕೆ ದಾರಿ ದೀಪವಾದ. ಆದರೆ ಅವನನ್ನು ಈ ಹಂತಕ್ಕೆ ತಂದ ರಮ್ಯಾ ಮಾತ್ರ ಅಲ್ಲೇ ಉಳಿದಳು. ಆದರೆ ಅವನ ಈ ಸ್ಥಿತಿಗೆ ಕಾರಣವಾಗಿದ್ದೂ ಏನು ಎನ್ನುವುದು ಮಾತ್ರ ಯಾರಿಗೂ ತಿಳಿಯಲಿಲ್ಲ. ಕಾರಣ ಅವನು ಎಲ್ಲಿಯೂ ಸಹ ಅಪ್ಪಿ-ತಪ್ಪಿ ಬಾಯಿಬಿಡಲಿಲ್ಲ. ಈ ಪ್ರೇಮದಲ್ಲಿ ಅವನ ಆಸೆಗಳು ಈಡೆರಲಿಲ್ಲ ಆದರೆ ಪ್ರೇಮನ ನಿಷ್ಕಲ್ಮಶ ಪ್ರೇಮ -ಪ್ರೀತಿ-ಪ್ಯಾರ- ಇಷ್ಕ -ಮೋಹಬ್ಬತ್ ಮಾತ್ರ ಅಮರವಾಯಿತು.

No comments:
Post a Comment