ಅದು 2010 ರ ಸಮಯ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಆಗ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ನೂರಾರು ಕೋಟಿ ಸುರಿದ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಮುಟ್ಟಿದ್ದೇಲ್ಲ ಚಿನ್ನ. ಅದು ಸಚಿವ ಸಂಪುಟ ಸಭೆ ಇರಬಹುದು ಅಥವಾ ವೈಯಕ್ತಿಕ ಖಾತೆಗಳ ನಿರ್ವಹಣೆ ಇರಬಹುದು ಎಲ್ಲವೂ ಅವರ ಆದೇಶದಂತೆಯೇ ನಡೆಯುತ್ತಿತ್ತು. ( ಬಳ್ಳಾರಿ ಕೆಲ ಹಿರಿಯ ಪತ್ರಕರ್ತರ ಊಹೆ ಪ್ರಕಾರ ಬಿಎಸ್ ವೈಕೂಡ ದೂರವಾಣಿ ಮಾತನಾಡಬೇಕಾದರೆ ಅದಕ್ಕೆ ಅವರ ಅನುಮತಿ ಬೇಕಿದ್ದಿರಬಹುದಾಗಿತ್ತು) ಅಷ್ಟರ ಮಟ್ಟಿಗೆ ಸರಕಾರವನ್ನು ಹಾಗೂ ರಾಜ್ಯವನ್ನು ಹಿಡಿತದಲ್ಲಿಟ್ಟಿಕೊಂಡಿದ್ದ ಸಮಯವದು. ಆ ಸಮಯದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಇಂದಿನ ಮುಖ್ಯಮಂತ್ರಿ ಸಿದ್ದಣ್ಣ ತೋಳುತಟ್ಟಿ ಪಂದ್ಯ ಸ್ವೀಕರಿಸಿ ಪಾದಯಾತ್ರೆ ಮೂಲಕ ಬಳ್ಳಾರಿ ತಲುಪಿ ಬಳ್ಳಾರಿ ರಿಪಬ್ಲಿಕ್ ಎಂದು ಅಬ್ಬರಿಸಿ ಬೊಬ್ಬಿರಿದಿದ್ದರು. ಆದರೆ ಇಂದು ಅದೇ ಬಳ್ಳಾರಿ ಮತ್ತೆ ರಿಪಬ್ಲಿಕ್ ಆಗುತ್ತಿದೆ.
ಹೌದು ಇದನ್ನು ನೀವು ನಂಬಲೇ ಬೇಕು ಕಾಂಗ್ರೆಸ್ ಆಡಳಿತ ಬಂದ ಮೇಲೆ ಬಳ್ಳಾರಿಯ ಉಸ್ತುವಾರಿ ಹೊತ್ತ ಪಿಟಿಪಿ ( ಪಿ.ಟಿ.ಪರಮೇಶ್ವನಾಯ್ಕ್) ಇಂದು ಜನರ ಪಾಲಿಗೆ ಖಳ ನಾಯಕರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಮಾಡಿದ ಅವಾಂತರಗಳನ್ನು ವಿವಿಧ ಮಾಧ್ಯಮಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದನ್ನುನೋಡಿದರೆ ಮತ್ತೆ ಬಳ್ಳಾರಿಗೆ ರಿಪಬ್ಲಿಕ್ ಪಟ್ಟ ಗ್ಯಾರಂಟಿ ಅನ್ನುವಂತಾಗಿದೆ. ಒಂದು ವೇಳೆ ಅನುಪಮಾ ಶಣೈ ವರ್ಗಾವಣೆ ಆಗಿದ್ದಿದ್ದರೆ ಅದನ್ನು ಬಳ್ಳಾರಿ ವಿಜಯ ಕರ್ನಾಟಕ ವರದಿಗಾರ ಶಶಿಧರ ಮೇಟಿ ರಾಜ್ಯಕ್ಕೆ ಪರಿಚಯಿಸಿದಿದ್ದರೆ ಇದು ಮಾಮೂಲಿ ವರ್ಗಾವಣೆ ಎಂದೇ ಬಿಂಬಿತವಾಗುತ್ತಿತ್ತು. ಆದರೆ ಪ್ರಾಮಾಣಿಕ ಪತ್ರಕರ್ತರಲ್ಲಿ ಒಬ್ಬರಾಗಿರುವ ಮೇಟಿ ಅದರ ಜಾಡು ಹಿಡಿದು ಹೊರಟಾಗ ಸಿಕ್ಕ ಸುಳಿವು ಇಂದು ಅವರ ವ್ಯಕ್ತಿತ್ವವನ್ನು ಮತ್ತಷ್ಟು ಮೇಲ್ಲಕ್ಕೆ ಏರಿಸಿದೆ. ಇದಾದ ನಂತರವೂ ಸಹ ಪಿಟಿಪಿ ನಾನು ಮಾಡೆಯಿಲ್ಲ ನನಗೂ ಅದಕೂ ಸಂಬಂಧವೇ ಇಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿದ್ದರು ಆದರೆ ಚುನಾವಣೆ ಪ್ರಚಾರದಲ್ಲಿ ಶೋ ಮಾಡಲು ( ಜಂಭಕೊಚ್ಚಿಕೊಳ್ಳಲು)ಹೋಗಿ ಸಿಕ್ಕಿ ಹಾಕಿಕೊಳ್ಳುವ ಮೂಲಕ ಮಾಧ್ಯಮಗಳಿಗೆ ಆಹಾರವಾದರು. ಈ ವಿಷಯ ಸಹ ಅಲ್ಲೆ ಸತ್ತು ಹೋಗುತ್ತಿತ್ತೋ ಏನೋ ಆದರೆ ಈಟಿವಿ ನ್ಯೂಸ್ ನ ವರದಿಗಾರ ಶರಣು ಹಂಪಿ ಸಿಕ್ಕ ಆಡಿಯೋ ತುಣಕನ್ನು ಮೊದಲು ಭಿತ್ತರಿಸುವ ಮೂಲಕ ನಾಯಕನ ಪಟ್ಟವನ್ನು ಕಸಿದುಕೊಳ್ಳುವಂತಾಯಿತು. ಈ ನಡುವೆ ನೆರೆ ಜಿಲ್ಲೆಯ ಶಾಸಕರು ಕೂಡ ಈ ವಿಷಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ನಾಯಕ್ ಹೆಡೆ ಮುರಿ ಕಟ್ಟಿವಲ್ಲಿ ತೆರೆಯ ಹಿಂದಿನ ತಮ್ಮ ಚಾಣಕ್ಷ್ಯ ನೀತಿಯನ್ನು ಪ್ರದರ್ಶಿಸಿದ್ದಾರೆ. ತಮಗೆ ಸಿಕ್ಕ ಎಲ್ಲ ಸಾಕ್ಷಿಗಳನ್ನು ನಿರ್ಭೆಡೆಯ ಮಾಧ್ಯಮಗಳಿಗೆ ಕೊಟ್ಟ ಅವರುಗಳು ಆ ಮೂಲಕ ತಮ್ಮ ರಾಜಕೀಯ ನಡೆಯನ್ನು ಚದುರಂಗದಾಟಕ್ಕೆ ಹೊಲಿಸಿಕೊಂಡಿದ್ದಾರೆ. ಕಾರಣ ಈ ಹಿಂದೆ ಆ ಶಾಸಕರು ಒಂದು ಸಂಸ್ಥೆಯ ಅಧ್ಯಕ್ಷರಾಗುವ ಸಂದರ್ಭದಲ್ಲಿ ಇದೇ ಪಿಟಿಪಿ ಅಡ್ಡಗಾಲು ಹಾಕಿದ್ದರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಿದೆ.
ರಿಪಬ್ಲಿಕ್ ಹೇಗಾಯ್ತು ?
ಏನ್ರಿ ನೀವು ಜನಾರ್ಧನ ರೆಡ್ಡಿಗೂ ಪಿಟಿಪಿಗೂ ಹೋಲಿಕೆ ಮಾಡೋದಾ ಅವರೆಲ್ಲಿ ಇವರೆಲ್ಲಿ ಎಲ್ಲಿಯ ಹೆಲಿಕ್ಯಾಪ್ಟರ ಎಲ್ಲಿನ ಇನ್ನೋವಾ ಕಾರು ಎಂದು ಆಡಿಕೊಳ್ಳುವವರಿಗೆ ಒಂದು ಮಾತು ಹೇಳಲೇಬೇಕು. ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಅಭಿವೃದ್ಧೀ ಕಾರ್ಯಗಳನ್ನು ನೋಡಿದರೆ ಪಿಟಿಪಿ ಸಾಧನೆ ಶೂನ್ಯ ಎನಿಸುವುದರಲ್ಲಿ ಸಂಶಯವಿಲ್ಲ. ರೆಡ್ಡಿ ಸಹೋದರರು ಮಾಡಿದ್ದರೆನ್ನಲಾದ ಅಕ್ರಮ ಗಣಿಗಾರಿಕೆ ಸೇರಿದಂತೆ ಎಲ್ಲ ಕೇಸುಗಳು ಕೋರ್ಟನಲ್ಲಿದ್ದು ಅದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವಲ್ಲ. ಅದನ್ನು ಬಿಟ್ಟು ಮಾತನಾಡುವುದಾದರೆ ಬಳ್ಳಾರಿಯಲ್ಲಿ ಅಭಿವೃದ್ಧಿಯಾಗಿದೆ ಎನ್ನುವುದನ್ನು ಅವರ ರಾಜಕೀಯ ವಿರೋಧಿಗಳೇ ಒಪ್ಪಿಕೊಳ್ಳುತ್ತಾರೆ. ಆದರೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಒಂದಿಷ್ಟು ಕಾಳಜಿ ತೋರಿಸದ ಪಿಟಿಪಿ ಕೇವಲ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಬೇರೆ ಎಲ್ಲ ವಿಚಾರಗಳಲ್ಲಿಯೂ ಸಹ ಕಾಳಜೀ ತೋರಿಸಿರುವುದು ರಿಪಬ್ಲಿಕ್ ಎನ್ನುವ ಪದಕ್ಕೆ ಅರ್ಥ ನೀಡುತ್ತದೆ. ನನಗೆ ಗೊತ್ತಿರುವುವಂತೆ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿದ್ದ ಪಿಟಿಪಿ ಮರಳನ್ನು ಬೆಂಗಳೂರಿಗೆ ಸಾಗಿಸುವಂತೆ ಸಿಎಂ ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಹೇಳಿದ್ದರು. ಅಂದರೆ ಅಕ್ರಮ ಮರಳು ಸಾಗಣೆ ಇವರಿಗೆ ತಿಳಿದಿತ್ತು ಅದರಲ್ಲಿ ತಮ್ಮ ಪಾಲು ಇತ್ತು ಎಂದು ಒಪ್ಪಿಕೊಂಡಂತೆ ಅಲ್ಲವೇ? ಇದೇ ರೀತಿ ಬೇರೆ ಬೇರೆ ವಿಚಾರಗಳು ಈಗಾಗಲೇ ಮಾಧ್ಯಮಗಳಲ್ಲಿ ಬಂದಿರುವಂತೆ ನಡೆದಿದೆ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ. ಅಂದರೆ ನಾನು ಹೇಳಿದ್ದ ಸತ್ಯ, ನಾನು ಮಾಡಿದ್ದೇ ಕಾನೂನು ನಾನು ಹೋದಿದ್ದೆ ಹಾದಿ ಎಂದು ಹೇಳಿ ಅಧಿಕಾರವನ್ನು ದುರಪಯೋಗ ಪಡಿಸಿಕೊಂಡ ಪಿಟಿಪಿ ದರ್ಬಾರ್ ಗೆ ಬಳ್ಳಾರಿ ರಿಪಬ್ಲಿಕ್ ಆಗಿದೆ ಎಂದರೆ ತಪ್ಪೇನಿಲ್ಲ.
ಒಟ್ಟಿನಲ್ಲಿ ಹಾರಾಟ ಚೀರಾಟದ ಮೂಲಕ ಮತ್ತೆ ಬಳ್ಳಾರಿಯಲ್ಲಿ ನೆಲೆ ಕಂಡುಕೊಂಡ ಕಾಂಗ್ರೆಸ್ ಜನಾರ್ಧನ ರೆಡ್ಡಿ ಸರ್ವಾಧಿಕಾರಿ ಎಂದು ಹೇಳಿ ಓಟು ಗಿಟ್ಟಿಸಿಕೊಂಡಿತ್ತಲ್ಲ.ಈಗ ಹಡಗಲಿ ಮನೆಯಲ್ಲಿ ಕುಳಿತು ಜಿಲ್ಲೆಯಲ್ಲಿನ ಎಲ್ಲ ಅಧಿಕಾರವನ್ನು ನಿಯಂತ್ರಿಸುತ್ತಿರುವ ಪಿಟಿಪಿ ಬಗ್ಗೆ ಏನು ಹೇಳುತ್ತೇ?
ಇದರ ಅರ್ಥ ಇಷ್ಟೇ ನಾನು ಮಾಡಿದರೆ ಮಾಫಿ ಉಳಿದವರು ಮಾಡಿದರೆ ಮಾಫೀಯಾ ಎನ್ನುವ ಹೊಸ ಗಾದೆಯನ್ನು ಸೃಷ್ಟಿಸಿಕೊಂಡಿದೆ

No comments:
Post a Comment