Thursday, July 27, 2017

ವೀರಶೈವ ಲಿಂಗಾಯತ ಸತ್ಯ ಇಲ್ಲಿದೆ

ಬಸವಪೂರ್ವದಲ್ಲಿ ವೀರಶೈವ ಧರ್ಮ ಇಲ್ಲವೆನ್ನುವುದು ಸುಳ್ಳಿಿನ ಕಂತೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿಿರುವ ಬಿಸಿಬಿಸಿ ಚರ್ಚೆಗೆ ಮಾಧ್ಯಮಗಳು ವೇದಿಕೆ ಕಲ್ಪಿಿಸಿವೆ ವಿನಃ. ಮೂಲ ಹುಡುಕುವ ಯಾವ ಪ್ರಯತ್ನವನ್ನು ಮಾಡಿಲ್ಲ ಎನ್ನುವುದು ಖೇದಕರ. 

ಕೃತಯುಗದಿಂದ ಬೆಳದು ಬಂದಿರುವ ವೀರಶೈವ ಧರ್ಮಕ್ಕೆೆ ಅದಕ್ಕೂ ಪೂರ್ವದಲ್ಲಿಯೇ ಇತಿಹಾಸವಿತ್ತು ಎನ್ನುವುದು ಸಾಕಷ್ಟು ಜನರಿಗೆ ತಿಳಿಯದ ವಿಷಯವಾಗಿದೆ. ಈ ಕುರಿತಂತೆ ಸಂಶೋಧಕ ಡಾ. ಚಿದಾನಂದಮೂರ್ತಿಗಳು ಸಾಕಷ್ಟು ಬಾರಿ ಅದನ್ನು ಸಾಕ್ಷಿಿ ಸಮೇತ ವಿವರಿಸಿದ್ದರು ಸಹ ಯಾವೊಬ್ಬ ಆ ಕುರಿತಂತೆ ಚರ್ಚೆಗೆ ತಯಾರಿಲ್ಲದಿರುವುದು ಸಾಕಷ್ಟು ಸಂಶಯಗಳನ್ನು ಹುಟ್ಟುಹಾಕಿದೆ. ಕಾರಣ ವಿವಿಧ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿಿರುವ ಸ್ವಯಂ ಘೋಷಿತ ಜಗದ್ಗುರು ಮಾತೆ ಮಹಾದೇವಿ ಅವರ ಅನುಯಾಯಿಗಳಿಗೆ ಕಾಮಾಲೆ ರೋಗ ಬಂದಂತೆ ವರ್ತಿಸುತ್ತಿಿರುವುದು ಅವರು ಅಧ್ಯಯನದ ಫಲವಾಗಿದೆ. 

ಈ ಹಿಂದೆ ಮಾತೆ ಮಾತೆ ಮಹಾದೇವಿ ಅವರು, ಬಸವಣ್ಣನವರೇ ಸುಳ್ಳು ಎನ್ನುವ ಮೂಲಕ ಬಸವ ಅನುಯಾಯಿಗಳನ್ನು ದಿಕ್ಕು ತಪ್ಪಿಿಸಿದ್ದನ್ನು ಯಾರು ಮರೆಯುವಂತಿಲ್ಲ. ತಮಗೆ ಆಧ್ಯಾಾತ್ಮಿಿಕ ಗುರುಗಳಾಗಿದ್ದ ಲಿಂಗದೇವರೆ ಎಲ್ಲ ವಚನಗಳ ಕರ್ತೃ ಎನ್ನುವ ಮೂಲಕ ಬಸವಣ್ಣನ ವಚನಗಳನ್ನು ತಿದ್ದಿದ್ದರು ಅಷ್ಟೇ ಅಲ್ಲದೇ ಅಕ್ಕನ ವಚನಗಳ ನಾಮಾಂಕಿತ ತಿದ್ದಿ ಸಾಕಷ್ಟು ಆಕ್ರೋೋಶಕ್ಕೆೆ ಗುರಿಯಾಗಿದ್ದರು. ಇಂತಹ ಸಣ್ಣ ಮನಸ್ಸಿಿನ ಖಾವಿಧಾರಿಗಳಿಂದ ಬಸವ ಅನುಯಾಯಿಗಳು ಜಾಗೃತ ಕಾಲ ಬಂದಂತಿದೆ.

ಈಗಾಗಲೇ ಸಾಕಷ್ಟು ಸಂಶೋಧನೆ ಹಾಗೂ ಪುರಾತತ್ವ ಇಲಾಖೆ ನೀಡಿರುವ ದಾಖಲೆಗಳ ಪ್ರಕಾರವೇ ವೀರಶೈವ ಧರ್ಮ ಬಸವಪೂರ್ವ ಯುಗದ್ದು ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಅಲ್ಲದೇ ಬಸವಣ್ಣನವರ ಅನುಯಾಯಿಗಳಾದ ವಿರಕ್ತ ಮಠಾಧೀಶರು ಸಹ ಇದನ್ನು ಒಪ್ಪಿಿಕೊಂಡಾಗಿದೆ. ಅದರಲ್ಲೂ ವಿರಕ್ತ ಪರಂಪರೆಯ ಮೇರು ಶಿಖರದಂತಿದ್ದ ಯಡಿಯೂರು ಸಿದ್ಧಲಿಂಗೇಶ್ವರರು ಸಹ ವೀರಶೈವ ಧರ್ಮದ ಕುರಿತು ಸಾಕಷ್ಟು ಉಲ್ಲೇಖ ಮಾಡಿರುವುದು ಇತಿಹಾಸದಿಂದ ಕಾಣ ಸಿಗುತ್ತದೆ. 

ದಾಖಲೆಯಾಗಿ ಶಾಸನಗಳು

ಬಯರಿತ್ತಿಿ ಶಾಸನ ಕ್ರಿಿಶ 1000 ಕಕ್ಕೇರಿ, 1127, ಉದ್ರಾಾಮಿ ಕ್ರಿಿಶ 1157 ಕೊಳ್ಳೂರು ಕ್ರಿಿಶ1180, ಅಮ್ಮಿಿನಭಾವಿ ಮಠದಲ್ಲಿರುವ ಪತ್ರ ಕ್ರಿಿಶ 1130, ಶಿರನಾಳ ಕ್ರಿಿಶ 1187, ಅವ್ವೇರಹಳ್ಳಿಿ ಕ್ರಿಿಶ 1193 ಚೌಡದಾನಪುರ ಕ್ರಿಿಶ 1193 ಮುಂತಾದ ಶಾಸನಗಳಲ್ಲಿ ರಂಭಾಪುರಿ ಪೀಠದ ಕುರಿತು ಉಲ್ಲೇಖವಿದೆ. ಬಾಗಳಿ ಕ್ರಿಿಶ 1078 ಅವ್ವೇರಹಳ್ಳಿಿ  ಕ್ರಿಿಶ1093ಮರಡಿಪುರ ಕ್ರಿಿಶ 1280 ಶಾಸನಗಳು ಉಜ್ಜಯಿನಿ ಪೀಠದ ಕುರಿತು ಹೇಳುತ್ತವೆ. ಇನ್ನೂ ಸುಪ್ರಸಿದ್ದ ರಾಜನಾಗಿದ್ದ ಜನಮೇಯನ ತಾಮ್ರ ಶಾಸನ ಕ್ರಿಿಪೂ 1500 ಮರಡಿಪುರ ಕ್ರಿಿಶ1280 ಶಾಸನಗಳು ಕೇದಾರ ಪೀಠದ ಚರಿತ್ರೆೆಗೆ ಹಿಡಿದ ಕೈ ಗನ್ನಡಿಯಾಗಿದೆ. ಪಾಣೆಂ ಕ್ರಿಿಶ ಸುಮಾರು 8020 ಗುಂಡಾಲ, ನಡಾಲ. ಹನುಮಕೊಂಡ, ಪಾಲಂಪೇಟ ಬಿಜವಾಡ ಕ್ರಿಿಶ 1100 ಘಂಟಾಮರ ಮುಂತಾದ ಶಾಸನಗಳು ಶ್ರೀಶೈಲ ಪೀಠದ ಕುರಿತು ಉಲ್ಲೇಖ ಮಾಡಿವೆ, 

ಇನ್ನೂ ಕಾಶಿ ಪೀಠದ ಕುರಿತು ಹೇಳಬೇಕೆಂದರೆ , ಜಯನಂದ ದೇವ ಶಾಸನ ಕ್ರಿಿಶ 574, ಜಂಗಮಪುರ ಕ್ರಿಿಶ 631, ನೇಪಾಳ ಜಂಗಮಠ ಕ್ರಿಿಶ 635 ಮುಂತಾದ ಶಾಸನಗಳು ಶ್ರೀಪೀಠದ ಕುರಿತು ಸ್ಪಷ್ಟ ಮಾಹಿತಿ ಹೊಂದಿದೆ.ಇನ್ನೂ ಹಿಂದೂ ವಿರೋಧಿಗಳಾಗಿದ್ದ ಮೊಗಲ್ ದೊರೆಗಳು ಪೀಠದ ಅಂದಿನ ಜಗದ್ಗುರುಗಳ ತಪಶಕ್ತಿಿಗೆ ತಲೆಬಾಗಿ ಕಾಶಿ ಮಠಕ್ಕೆೆ ನಡೆದುಕೊಂಡಿರುವುದು ಹಾಗೂ ಆ ಕುರಿತು ಇರುವ ದಾಖಲೆಗಳು ಇಂದಿಗೂ ಜಂಗಮವಾಡಿ ಮಠದಲ್ಲಿ ಕಾಣ ಸಿಗುತ್ತವೆ.

ಕೃತ, ತ್ರೇತಾ, ದ್ವಾಾಪರ ಹಾಗೂ ಕಲಿಯುಗದಲ್ಲಿ ಸಂದರ್ಭಕ್ಕೆೆ ಅನುಸಾರವಾಗಿ ಶಿವನ ಅಪ್ಪಣೆಯಿಂದ ಉದಯಿಸಿ ವೀರಶೈವ ಧರ್ಮ ಸ್ಥಾಾಪಿಸಿದ ರೇಣುಕಾದಿ ಪಂಚಾಚಾರ್ಯರು, ವೀರಶೈವ ಧರ್ಮದ ಜತೆಗೆ ಹಿಂದೂ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಿದ್ದರು ಎನ್ನುವುದನ್ನು ನಾವು ಅರಿಯಬೇಕಿದೆ. ವೀರಶೈವ ಅಥವಾ ಲಿಂಗಾಯತ ಧರ್ಮ ಹಿಂದು ಸಂಸ್ಕೃತಿಯ ಭಾಗವೇ ಅಲ್ಲ ಎಂದು ಹೇಳಿಕೆ ನೀಡುತ್ತಿಿರುವ ಅಲ್ಪ ಜ್ಞಾಾನಿಗಳಿಗೆ ಒಂದು ಮಾತನ್ನು ಹೇಳಲೆ ಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತದಲ್ಲಿ ಸುಮಾರು 130 ಕೋಟಿ ಜನಸಂಖ್ಯೆೆಯಲ್ಲಿ ಕೇವಲ  6-7 ಬಗೆಯ ಮಾನವನ ಜೀನ್‌ಸ್‌‌ಗಳು ಒಂದಕ್ಕಿಿಂತ ವಿಭಿನ್ನವಾಗಿದ್ದು ಉಳಿದ್ದೇಲ್ಲವು ಸಹ ಹೊಲಿಕೆಯಾಗುತ್ತವೆ. ಇದು ವೈಜ್ಞಾಾನಿಕವಾಗಿಯೂ ದೃಢಪಟ್ಟಿಿದೆ. ಅಂತಹುದರಲ್ಲಿ ವೀರಶೈವ ಲಿಂಗಾಯತರು ಹಿಂದೂ ಸಂಸ್ಕೃತಿಯ ಭಾಗವೇ ಅಲ್ಲ ಎನ್ನುವುದು ಮೂರ್ಖತನದ ಪರಮಾವಧಿಯಾದಿತು. ಈಗಾಗಲೇ ವಿವಿಧ ಕಾರಣಗಳಿಂದ ದಾಳಿಗೊಳಗಾಗಿರುವ ಹಿಂದು ಧರ್ಮವನ್ನು ರಕ್ಷಿಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ವಿನಾಕಾರಣ ಜನರನ್ನು ದಿಕ್ಕು ತಪ್ಪಿಿಸುತ್ತಿಿರುವ ಕೆಲವರು ಹಿಂದು ಧರ್ಮವೇ ಬೇರೆ ಲಿಂಗಾಯತರೇ ಬೇರೆ ಎನ್ನುವ ಮೂಲಕ ತಮ್ಮನ್ನು ತಾವೇ ಹಳಿದುಕೊಳ್ಳುತ್ತಿಿದ್ದಾಾರೆ.

ಚನ್ನಬಸವಣ್ಣ, ಘಟ್ಟಿಿವಾಳಯ್ಯ, ಮೆರಿಮಿಂಢಿದೇವಯ್ಯ, ಡಿ. ಬಾಲಬೊಮ್ಮಣ್ಣ, ಅಕ್ಕನಾಗಾಯಿ, ಹಾವಿನಹಾಳ ಕಲ್ಲಯ್ಯ ಅಕ್ಕ, ಸಿದ್ಧಾಾರಾಮಯ್ಯ, ತೋಂಟದ ಯತಿಗಳು ಮತ್ತು ಬಸವಣ್ಣನವರ ಹಿರಿಯ ಸಮಕಾಲಿನರಾದ ಆದಯ್ಯ, ಸಕಲೇಶ ಮಾದಯ್ಯ, ಮುಂತಾದ ಶರಣರು ತಮ್ಮ ಅನೇಕ ವಚನಗಳಲ್ಲಿ ಪಂಚಾಚಾರ್ಯರರನ್ನು ಭಕಿ ಭಾವದಿಂದ ಅನನ್ಯವಾಗಿ ನೆನದಿದ್ದಾಾರೆ.

ತಮ್ಮ ಧರ್ಮದ ಬಗೆಗೆ ಪ್ರತಿಯೊಬ್ಬರಿಗೂ ಗೌರವ ಆದರಾಭಿಮಾನಗಳು ಇದ್ದೇ  ಇರುತ್ತವೆ. ಇಲ್ಲಿ ಮೇಲು ಕೀಳೆಂಬುದೇ ಇಲ್ಲ. ತಾಯಿಗೆ ಚಂದನೆಯ ಹೆಸರಿಲ್ಲವೆಂದು ಬೇರೆಯವರನ್ನು ತಾಯಿ ಎನ್ನಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿಯಾಗಿ ಈ ಹೆಸರು ಸರಿಯಿಲ್ಲವೆಂದು ಧರ್ಮಕ್ಕೆೆ ಮೊತ್ತಂದೊ ಹೆಸರಿಟ್ಟರೆ ಹೇಗಾದಿತೂ. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪರಂಪರೆ ಹಾಗೂ ಧರ್ಮ ಉಳಿಯಬೇಕಾದರೆ ಎಲ್ಲರೂ ಒಂದಾಗಿ ಸ್ವಾಾರ್ಥಿಗಳನ್ನು ಹಿಮ್ಮೆೆಟ್ಟಿಿಸಬೇಕಿದೆ. 

ವಚನಗಳಲ್ಲಿ ಹಾಗೂ ಅದಕ್ಕಿಿಂತಲೂ ಮುಂಚಿನ ವೇದಾಗಮಗಳಲ್ಲಿ ವೀರಶೈವ ಪದ ಸಾಕಷ್ಟು ಬಾರಿ ಬಳಕೆಯಾಗಿದೆ. ಅದರಲ್ಲೂ ಬಸವಣ್ಣನವರಿಂದ ಹಿಡಿದು ಹೇಮಗಲ್ಲ ಹಂಪನವರೆಗಿನ 29 ಶರಣರು ಒಟ್ಟು 161 ವಚನಗಳಲ್ಲಿ 170 ಸಲ ವೀರಶೈವ ಪದವನ್ನು ಧರ್ಮವಾಚಕವಾಗಿ ಬಳಸಿದ್ದಾಾರೆ. ಇದನ್ನೇ ವಿವರಿಸುತ್ತಾಾ ಹೋದರೆ ಒಂದು ಪುಟವಲ್ಲ ನೂರು ಪುಟಗಳಾದರೂ ವೀರಶೈವ ಪರಂಪರೆ ಇತಿಹಾಸದ ಕುರಿತು ಬರೆಯಬಹುದಾಗಿದೆ. 

ವೀರಶೈವ ಲಿಂಗಾಯತ ಒಂದೇ  ಅಲ್ಲಿ ಭೇದವಿಲ್ಲ. ಈಚೆಗೆ ಭೇದ ಕಲ್ಪಿಿಸುತ್ತಿಿರುವುದು ಸರಿಯಲ್ಲ ಎನ್ನುವುದು ಬಹುತೇಕರವಾದವಾಗಿದೆ. ಈ ಕುರಿತಂತೆ ಸಿದ್ಧಗಂಗೆಯ ಮುಕುಟವಾಗಿರುವ ಶತಾಯುಷಿಗಳು ಹೇಳಿಕೆ ನೀಡುವುದು ಅನಿವಾರ್ಯವಾಗಿದೆ ಎನ್ನುವುದು ನನ್ನ ಭಾವನೆ. ಕಾರಣ ಬಸವಣ್ಣನವರ ವಚನಗಳ ಸಾರವನ್ನು ದಿನನಿತ್ಯದಲ್ಲಿ ಅಳವಡಿಸಿಕೊಂಡಿರುವ ಶ್ರೀಗಳು ಈ ಕುರಿತು ಹೇಳಿಕೆ ನೀಡಿದ್ದಲ್ಲಿ ಪಂಚಪೀಠಾಧೀಶ್ವರರು ಹೇಳುತ್ತಿಿರುವ ಮಾತುಗಳಿಗೆ ಇನ್ನೂ ಹೆಚ್ಚಿಿನ ಮಹತ್ವ ಬರುತ್ತದೆ. ಈಗಾಗಲೇ ಸಮಾಜ ಒಡೆದು ಹೋಗಿದ್ದು ಇನ್ನೂ ಹೆಚ್ಚಿಿನ ಪ್ರಮಾಣದಲ್ಲಿ ವಿಭಜನೆಯಾದರೆ ಮುಂದೊಂದು ದಿನ ಈ ಅಲ್ಪ ಮತಿಗಳು ಹಾಗೂ ಸ್ವಯಂ ಘೋಷಿತ ಜಗದ್ಗುರು ಎಂದು ಹೇಳಿಕೊಳ್ಳುವವರು ಬಸವಣ್ಣ ಹುಟ್ಟೆೆಯಿಲ್ಲ ಅಂದರೆ ಏನು ಮಾಡುವುದು.?

- ಪ್ರಶಾಂತ ರಾಜ ರಾಜ ಗುರು









Thursday, April 13, 2017

ಬಿಎಸ್‌ವೈಗೆ ಬ್ರೇಕ್ ಹಾಕಲು ಯತ್ನ

ಬ್ಲರ್ಬ್
ಚುನಾವಣೆ ಸೋಲು ಗೆಲುವುಗಳ ಕುರಿತು ಮೊದಲಿಂದಲೂ ರಾಜ್ಯಾಾಧ್ಯಕ್ಷರುಗಳು ವರದಿ ನೀಡುವುದು ಸಾಮಾನ್ಯ. ಆದರೆ ಈ ಬಾರಿ ಬಿಜೆಪಿಯಲ್ಲಿ ರಾಜ್ಯಾಾಧ್ಯಕ್ಷರ ವರದಿ ಹೊರತಾಗಿ ಮೊತ್ತೊೊಂದು ಗೌಪ್ಯ ವರದಿ ಸಿದ್ಧಮಾಡಲಾಗುತ್ತಿಿದ್ದು ಯಾರ ಮೂಲಕ ಅಮಿತ್ ಷಾ ಕೈ ತಲುಪಲಿದೆ ಎಂಬುದು ಕುತುಹಲ ಮೂಡಿಸಿದೆ.

ವರದಿ ನೆಪದಲ್ಲಿ ಪರೋಕ್ಷ ದೂರಿಗೆ ನಿರ್ಧಾರ
ಪ್ರಶಾಂತ ರಾಜಗುರು
ಪ್ರತಿಷ್ಠಿಿತ ಕಣವಾಗಿದ್ದ  ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆೆಸ್ ಜಯ ಸಾಧಿಸುತ್ತಿಿದ್ದಂತೆ ಕೇಸರಿ ಬ್ರಿಿಗೇಡ್‌ನಲ್ಲಿ ಸಂಚಲನ ಮೂಡಿದೆ. ಇದೇನ್ರಿಿ ಈ ಥರಾ ಹೇಳ್ತಾಾಯಿದಿರಾ ಅಂತ ಮೂಗು ಮೂರಿಬೇಡಿ. ಏನೇನ್ ಆಗ್ತಾಾಯಿದೆ ಅನ್ನುದನ್ನ ಮುಂದೆ ಹೇಳ್ತಿಿನಿ ಕೇಳಿ.
ಶ್ರೀನಿವಾಸ್ ಪ್ರಸಾದ ಅವರನ್ನು ಬಿಜೆಪಿಗೆ ಕರೆ ತರುವ ಮೂಲಕ ಮೈಸೂರು ಭಾಗದಲ್ಲಿ  ಜೆಡಿಎಸ್ ಹಾಗೂ ಕಾಂಗ್ರೆೆಸ್‌ಗೆ ಪರ್ಯಾಾಯ ಶಕ್ತಿಿಯಾಗಿ ಬೆಳೆಯಬೇಕು ಎಂದು ಕೊಂಡಿದ್ದ ಬಿಎಸ್‌ವೈಗೆ ಸೋಲು ಸಾಕಷ್ಟು ಘಾಸಿ ಮಾಡಿದೆ. ಗುಂಡ್ಲುಪೇಟೆಯಲ್ಲಿ ಅನುಕಂಪ ಪ್ರಭಾವಿ ಬೀರಿದ್ದರೆ ಇಲ್ಲಿ ಡಿಕೆಶಿ ರಣತಂತ್ರ ಕೈ ಹಿಡಿದಿದೆ. ಇದರಿಂದಾಗಿ ಬಿಜೆಪಿಯಲ್ಲಿನ ಬಿಎಸ್‌ವೈ ವಿರೋಧಿ ಬಣ ತುರುಸಿನ ಕಾರ್ಯಚಟುವಟಿಕೆ ನಡೆಸುತ್ತಿಿದೆ. ಸೋಲು ಖಚಿತವಾಗುತ್ತಿಿದ್ದೆೆ ಬಿಎಸ್‌ವೈ ಹಣಿಯಲು ಯತ್ನಿಿಸುತ್ತಿಿರುವ ಗುಂಪು ಸೋಲಿಗೆ ಏನು ಕಾರಣ ಎಂಬುದನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಮೂಲಕ ವರಿಷ್ಠರಿಗೆ ವರದಿ ನೀಡಲು ಸಜ್ಜಾಾಗಿದೆ.
ಈಗಾಗಲೇ ಸಂಗೋಳ್ಳಿಿ ರಾಯಣ್ಣ ಬ್ರಿಿಗೇಡ್ ಕಟ್ಟುವ ವಿಚಾರದಲ್ಲಿ ಸಾಕಷ್ಟು ಗೊಂದಲ ಮೂಡಿಸಿದ್ದ ಈಶ್ವರಪ್ಪ ತಮ್ಮ ಹೇಳಿಕೆಯಲ್ಲಿ ಬಿಜೆಪಿ ಸೋಲಿಗೆ ಒಳಜಗಳವೇ ಕಾರಣ ಎನ್ನುವ ಅರ್ಥದಲ್ಲಿ ಮಾತನಾಡಿರುವುದು ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವಿನ ವೈಮನಸ್ಸು ಆರಿಲ್ಲ ಎಂಬುದನ್ನು ಸಷ್ಟವಾಗಿಸಿದೆ. ಜತೆಗೆ ಮೊದಲಿನಿಂದಲೂ ಬಿಜೆಪಿಯಲ್ಲಿ ತಮ್ಮದೇಯಾದ ಹಿಂಬಾಲಕರನ್ನು ಹೊಂದಿರುವ ಕೇಂದ್ರ ಸಚಿವರು ಸುಮ್ಮನೆ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ವರದಿ ತಯಾರಿಗೆ ಕಾರಣ
ಬಿಎಸ್‌ವೈ ಅಧ್ಯಕ್ಷರಾದ ದಿನದಿಂದಲೂ ಕೆಜೆಪಿಯಲ್ಲಿ ತಮ್ಮ ಜತೆಗಿದ್ದ ನಾಯಕರಿಗೆ ಜಿಲ್ಲಾಾಧ್ಯಕ್ಷ ಹಾಗೂ ವಿವಿಧ ಮೋರ್ಚಾಗಳ ನೇಮಕಾತಿಯಲ್ಲಿ ಮಾನ್ಯತೇ ನೀಡಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ಈ ಮೊದಲೇ ಸಿಟ್ಟಾಾಗಿದ್ದ ನಾಯಕರು ಬಿಎಸ್‌ವೈ ದರ್ಬಾರಿಗೆ ಬ್ರೇಕ್ ಹಾಕಲು ಹವಣಿಸುತ್ತಿಿದ್ದರು. ಈ ಸೋಲನ್ನೆೆ ದಾಳವಾಗಿಟ್ಟುಕೊಂಡು ಮುಂದಿನ ಚುನಾವಣೆ ವೇಳೆಗೆ ಬಿಎಸ್‌ವೈ ಹಾಗೂ ಹಿಂಬಾಲಕರಿಗೆ ಚುರುಕು ಮುಟ್ಟಿಿಸಲು ಸಜ್ಜಾಾಗಿದ್ದಾಾರೆ. ಅಲ್ಲದೇ ಮಿಷನ್ 150 ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಓಡಾಡುತ್ತಿಿರುವ ಯಡಿಯೂರಪ್ಪ ಈಗಾಗಲೇ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವ ಲಕ್ಷಣಗಳು ಕಂಡು ಬಂದ ಹಿನ್ನೆೆಲೆಯಲ್ಲಿ ವಿರೋಧಿ ಬಣ ವರದಿ ತಯಾರಿಸಿದೆ.
ವರಿಷ್ಠರ ಮಾತನ್ನು ಅವರಿಗೆ ತಿರುಗಿಸುವ ಯತ್ನ
ಕಾಂಗ್ರೆೆಸ್ ಮುಕ್ತ ಭಾರತ ಬಿಜೆಪಿ ಒಂದಂಶದ ಕಾರ್ಯಕ್ರಮವಾಗಿರುವುದನ್ನು ಮನಗಂಡಿರುವ ವಿರೋಧಿ ನಾಯಕರು ರಾಜ್ಯ ಸರಕಾರ ಸಾಕಷ್ಟು ಹಗರಣ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿಿದೆ. ಆದರೂ ಸಹ ವಿರೋಧ ಪಕ್ಷವಾಗಿರುವ ಬಿಜೆಪಿಗೆ ಸೋಲಾಗಿದೆ. ಇದರಿಂದ ಬಿಜೆಪಿ ಪಾಠ ಕಲಿಯಬೇಕಿದ್ದು, ಜನರನ್ನು ಸೆಳೆಯುವಲ್ಲಿ ಬಿಎಸ್‌ವೈ ವಿಫಲರಾಗಿದ್ದಾಾರೆ. ಇದರಿಂದಾಗಿ ಕಾಂಗ್ರೆೆಸ್ ಮುಕ್ತ ಭಾರತದ ಕನಸು ಕಾಣುತ್ತಿಿರುವ ನಿಮಗೆ ( ವರಿಷ್ಠರಿಗೆ) ಕರ್ನಾಟಕ ಅಡ್ಡಗಾಲು ಆಗಬಾರದು ಆ ನಿಟ್ಟಿಿನಲ್ಲಿ ಕೂಡಲೇ ಕ್ರಮಕ್ಕೆೆ ಮುಂದಾಗಬೇಕು ಎನ್ನುವ ಮಾತನ್ನು ವರಿಷ್ಠರಿಗೆ ಹೇಳುವ ಮೂಲಕ ವರಿಷ್ಠರಲ್ಲಿ ಪರೋಕ್ಷವಾಗಿ ದೂರು ನೀಡಲು ನಿರ್ಧರಿಸಿದೆ.
ಒಟ್ಟಿಿನಲ್ಲಿ ಮುಂದಿನ ಚುನಾವಣೆಯಲ್ಲಿ ಜಯ ಸಾಧಿಸಿ ಮತ್ತೆೆ ಅಧಿಕಾರದ ಗದ್ದುಗೆ ಏರುವ ಮೂಲಕ ಎರಡನೇ ಬಾರಿ ಸಿಎಂ ಆಗುವ ಹಾಗೂ ಆ ಮೂಲಕ ದಕ್ಷಿಣ ಭಾರತದಲ್ಲಿ ಸ್ವತಂತ್ರ್ಯವಾಗಿ ಬಿಜೆಪಿಯನ್ನು ಅಧಿಕಾರಕ್ಕೆೆ ತರುವ ಕನಸು ಕಾಣುತ್ತಿಿರುವ ಬಿಎಸ್‌ವೈಗೆ ಅವರ ಪಕ್ಷದ ಮುಖಂಡರೆ ಈ ರೀತಿ ವಿರೋಧಿ ನೀತಿ ಅನುಸರಿಸುತ್ತಿಿರುವುದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.


Wednesday, March 15, 2017

ಧಾರವಾಡದಲ್ಲಿ ಮತ್ತೆೆ ಆಪರೇಷನ್ ಕಮಲ -ವಿಶ್ಲೇಷಣೆ : ಪ್ರಶಾಂತ ರಾಜ ಗುರು

ಧಾರವಾಡದಲ್ಲಿ ಮತ್ತೆೆ ಆಪರೇಷನ್ ಕಮಲ ಶುರವಾಗುವ ಲಕ್ಷಣಗಳು ಗೋಚರಿಸುತ್ತಿಿವೆ. 2008 ಹಾಗೂ 2009ರ ಆದಿಯಲ್ಲಿ ಬಿಜೆಪಿ ಸರಕಾರವಿದ್ದ ಸಂದರ್ಭದಲ್ಲಿ ಶುರುವಾಗಿದ್ದ ಆಪರೇಶನ್ ಕಮಲ ನಂತರದ ದಿನಗಳಲ್ಲಿ ಆಪರೇಶನ್ ಕೈವರೆಗೂ ಬಂದು ನಿಂತಿತ್ತು. ಆದರೆ ಈಗ ಮತ್ತೆೆ ಜಿಲ್ಲೆೆಯಲ್ಲಿ ಬೇರೆ ಪಕ್ಷಗಳ ಪ್ರಭಾವಿ ನಾಯಕರು ಕಮಲದತ್ತ ಮುಖ ಮಾಡುತ್ತಿಿದ್ದಾಾರೆ. ಇಂದರಿಂದಾಗಿ ಆಯಾ ಪಕ್ಷಗಳಲ್ಲಿ ಸಂಚಲನ ಉಂಟಾಗಿದ್ದು ತಮ್ಮ ನಾಯಕರುಗಳನ್ನು ಹಿಡಿದಿಟ್ಟುಕೊಳ್ಳಲು ಶತಾಯಗಥಾಯ ಪ್ರಯತ್ನ ಆರಂಭವಾದೆ.
ಯಾಕಿ ಹೀಗೆ : ಈಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆೆಸ್ ಹಾಗೂ ಪ್ರಾಾದೇಶಿಕ ಪಕ್ಷಗಳು ಮಕಾಡೆ ಮಲಗಿದ ಹಿನ್ನೆೆಲೆಯಲ್ಲಿ ಕಾಂಗ್ರೆೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿಯತ್ತ ಮುಖಮಾಡುತ್ತಿಿದ್ದಾಾರೆ ಎನ್ನಲಾಗಿದೆ. ಅದರಲ್ಲೂ ಕಾಂಗ್ರೆೆಸ್ ಆಡಳಿತವಿದ್ದರೂ ನಿಷ್ಠಾಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದು ಹಾಗೂ ಬಣ ರಾಜಕೀಯವಿಟ್ಟುಕೊಂಡು ಅವರನ್ನು ಅಧಿಕಾರದಿಂದ ದೂರವಿಟ್ಟ ಹಿನ್ನೆೆಲೆಯಲ್ಲಿ ಬಹುತೇಕ ಯುವ ಕಾರ್ಯಕರ್ತರು ಬಿಜೆಪಿಯತ್ತ ಮುಖಮಾಡುತ್ತಿಿದ್ದಾಾರೆ. ಜತೆಗೆ ಜೆಡಿಎಸ್ ಕಾರ್ಯಕರ್ತರು ಸಹ ಈಗಾಗಲೇ ತಮ್ಮ ತಮ್ಮ  ಬ್ಲಾಾಕ್ ಮಟ್ಟದ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವುದು ಖಚಿತವಾಗಿದೆ.
ಕಾಂಗ್ರೆೆಸ್‌ಗೆ ಬೀಳಲಿದೆ ದೊಡ್ಡ ಪೆಟ್ಟು
ಆಡಳಿತಾರೂಢ ಕಾಂಗ್ರೆೆಸ್‌ಗೆ ಧಾರವಾಡ ಜಿಲ್ಲೆೆಯಲ್ಲಿ ದೊಡ್ಡ ಪೆಟ್ಟು  ಬೀಳಲದೆ ಎನ್ನುವ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿ ಬರುತ್ತಿಿವೆ. ಆದರಲ್ಲೂ ಜಿಲ್ಲೆೆಯ ಪ್ರಭಾವಿ ಲಿಂಗಾಯತ ನಾಯಕರೊಬ್ಬರು 2017 ಡಿಸೆಂಬರ್ ವೇಳೆಗೆ ಕಾಂಗ್ರೆೆಸ್ ತೊರೆದು ಬಿಜೆಪಿ ಸೇರಲಿದ್ದಾಾರೆ. ಈ ಸಂಬಂಧ ಈಗಾಗಲೇ ಲಿಂಗಾಯತ ಮುಖಂಡರ ಮಧ್ಯಸ್ಥಿಿಕೆಯಲ್ಲಿ ರಾಜ್ಯಾಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು ಅಧಿಕಾರವಧಿ ಮುಗಿಸಿ, ಇರುವ ದಿನಗಳಲ್ಲಿ ಉತ್ತಮ ಕಾರ್ಯ ಮಾಡಿ ಡಿಸೆಂಬರ್ ವೇಳೆಗೆ ಪಕ್ಷಕ್ಕೆೆ ಸೇರ್ಪಡೆಯಾಗುವಿರಂತೆ ಎಂದು ಯಡಿಯೂರಪ್ಪ ಹೇಳಿದ್ದಾಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದಕ್ಕೆೆ ಕೆಲ ಮಾಜಿ ಶಾಸಕರು ಹಾಗೂ ಪ್ರಭಾವಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು ಕಳೆದೊಂದು ದಶಕದಿಂದ ಅವರೊಂದಿಗೆ ರಾಜಕೀಯ ಅಖಾಡದಲ್ಲಿ ವಿರೋಧಿಗಳಾಗಿದ್ದು ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಬಿಎಸ್‌ವೈಗೆ ಆರ್‌ಎಸ್‌ಎಸ್ ಮೂಲಕ ಹೇಳಿಸಿದ್ದಾಾರೆ ಎನ್ನಲಾಗಿದೆ. ಆದರೆ ಇದಕ್ಕೆೆ ಪ್ರತಿಯಾಗಿ ಬಿಎಸ್‌ವೈ ಬಿಜೆಪಿಯನ್ನು ಅಧಿಕಾರಕ್ಕೆೆ ತರುವ ಹೊಣೆ ನನ್ನದಾಗಿದ್ದು ಯಾರನ್ನೂ ಪಕ್ಷಕ್ಕೆೆ ಸೇರ್ಪಡೆ ಮಾಡಿಕೊಳ್ಳಬೇಕು ಅಥವಾ ಬಿಡಬೇಕು ಎಂಬುದನ್ನು ರಾಜ್ಯ ಮುಖಂಡರು ನಿರ್ಧರಿಸಲಿದ್ದಾಾರೆ. ಅದರ ಬಗ್ಗೆೆ ತಲೆಕೆಡಿಸಿಕೊಳ್ಳದೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾಾರೆ ಎಂಬ ಸುದ್ದಿಯಿದೆ.
ಮಹಾರಾಷ್ಟ್ರ -ಉತ್ತರ ಪ್ರದೇಶ ಮಾದರಿ
ಈಚೆಗೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆೆ ಹಾಗೂ ಉತ್ತರಾಖಂಡ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಮಲ ಪಾಳಯ ಅನುಸರಿಸಿದ ತಂತ್ರಗಾರಿಕೆಯನ್ನೇ ರಾಜ್ಯದಲ್ಲಿಯೂ ಅನುಸರಿಸಲು ಮುಂದಾಗಿರುವ ಬಿಜೆಪಿ ಅದಕ್ಕಾಾಗಿ ಈಗಿನಿಂದಲೇ ತಂತ್ರಗಾರಿಕೆ ಶುರುಮಾಡಿದೆ. ಅದರ ಭಾಗವಾಗಿಯೇ ಕಾಂಗ್ರೆೆಸ್ ಹಾಗೂ ಜೆಡಿಎಸ್‌ನಲ್ಲಿನ ಸಣ್ಣ ಸಣ್ಣ ಜಾತಿಯ ನಾಯಕರಿಗೆ ಮಣೆಹಾಕುವ ಜತೆಗೆ ಬೇರೆ ಪಕ್ಷಗಳಲ್ಲಿನ ಗೆಲ್ಲುವ ಕುದುರೆಗಳನ್ನು ಪಕ್ಷಕ್ಕೆೆ ಬರಮಾಡಿಕೊಳ್ಳಲು ನಾಯಕರಿಗೆ ಸೂಚಿಸಲಾಗಿದೆ ಎಂಬ ಮಾತು ಸಹ ಹರಿದಾಡುತ್ತಿಿದೆ. ಅದ ಭಾಗವಾಗಿಯೇ ಜಿಲ್ಲೆೆಯ ಕಾಂಗ್ರೆೆಸ್ ನಾಯಕರು ಬಿಜೆಪಿ ಸೇರಲಿದ್ದಾಾರೆ ಎನ್ನಲಾಗಿದೆ.
ಪಾರಾಗುವ ತಂತ್ರ
ಬಿಜೆಪಿ ಮುಖಂಡರೊಬ್ಬರ ಹತ್ಯೆೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಆರೋಪಿಗಳು ಶರಣಾಗಿದ್ದರೂ ಕೆಲ ಕಾಂಗ್ರೆೆಸ್ ನಾಯಕರ ಮೇಲೆ ಮೃತ ಬಿಜೆಪಿ ಮುಖಂಡರ ಮನೆಯವರು ಆರೋಪ ಮಾಡುತ್ತಿಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಕೊಲೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಸಾಕಷ್ಟು ಬಾರಿ ಸರಕಾರಕ್ಕೆೆ ಒತ್ತಾಾಯಿಸಿದರೂ ಸಹ ಕಾಂಗ್ರೆೆಸ್ ಸರಕಾರ ಅದನ್ನು ಸಿಬಿಐಗೆ ನೀಡಿಲ್ಲ ಇದರಿಂದಾಗಿ ಸಹಜವಾಗಿಯೇ ಕಾಂಗ್ರೆೆಸ್ ಸರಕಾರದ ಮೇಲೆ  ಬಿಜೆಪಿ ಆಕ್ರೋೋಶ ವ್ಯಕ್ತಪಡಿಸುತ್ತಿಿದೆ. ಆದರೆ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆೆಸ್ ಸರಕಾರಕ್ಕೆೆ ಮತ್ತೆೆ ಬಹುಮತ ದೊರೆಯುವ ನಿರೀಕ್ಷೆಗಳು ಕ್ಷೀಣಿಸಿದ್ದು ಇದನ್ನು ಮನಗಂಡಿರುವ ಕಾಂಗ್ರೆೆಸ್ ಮುಖಂಡರು ಒಂದು ವೇಳೆ ಬಿಜೆಪಿ ಅಧಿಕಾರಕ್ಕೆೆ ಬಂದಲ್ಲಿ ಆ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆಗಳು ದಟ್ಟವಾಗಿರುವ ಹಿನ್ನೆೆಲೆಯಲ್ಲಿ ಅದರಿಂದಲೂ ಸಹ ಪಾರಾಗಲೂ ಈ ಪಕ್ಷಾಂತರ ಸಹಕಾರಿಯಾಗಲಿದೆ ಅಲ್ಲದೇ ತಾವೇಷ್ಟೆೆ ಉತ್ತಮವಾಗಿ ಕಾರ್ಯ ನಿರ್ವಹಿಸಿದರೂ, ಸಹ ಆಡಳಿತ ವಿರೋಧಿ ಅಲೆ ಹೆಚ್ಚಿಿರುವ ಕಾರಣ ಮುಂದಿನ ಚುನಾವಣೆಯಲ್ಲಿ ಗೆಲ್ಲವುದು ಕಷ್ಟವಾಗಬಹುದು ಒಂದು ವೇಳೆ ತಾವು ಸಹ ಬಿಜೆಪಿ ಸೇರಿದಲ್ಲಿ ಆಡಳಿತ ಪಕ್ಷದಲ್ಲಿ ಇರಬಹುದಾಗಿದೆ  ಎನ್ನುವ ಲೆಕ್ಕಾಾಚಾರದಲ್ಲಿ ಬಿಜೆಪಿ ಸೇರಲು ಮುಂದಾಗಿದ್ದಾಾರೆ ಎನ್ನಲಾಗಿದೆ.
ಆಪ್ತರ ಸಲಹೆ
ಮುಖಂಡರ ಈ ನಡೆಗೆ ಆಪ್ತರ ಸಲಹೆಗಳು ಸಹ ಕಾರಣವಾಗಿವೆ ಎಂದು ಹೇಳಲಾಗುತ್ತಿಿದೆ. ಈಗಾಗಲೇ ಸಿದ್ಧರಾಮಯ್ಯ ಹಾಗೂ ಲಿಂಗಾಯಿತ ಮುಖಂಡರ ಸಂಬಂಧಗಳು ಹಳಸಿದ್ದು ಕೇವಲ ಅಹಿಂದ ಹಾಗೂ ಅಲ್ಪ ಸಂಖ್ಯಾಾತರನ್ನು ಮಾತ್ರವೇ ಓಲೈಸಲಾಗುತ್ತಿಿದೆ. 2013ರಲ್ಲಿ ಆಡಳಿತಕ್ಕೆೆ ಬಂದಾಗಿನಿಂದಲೂ ಲಿಂಗಾಯಿತ ನಾಯಕರ ಮಾತಿಗೆ ಬೆಲೆ ನೀಡಿದ್ದು ಅಷ್ಟಕಷ್ಟೇ ಅಲ್ಲದೇ ಮುಂದಿನ ಚುನಾವಣೆಯಲ್ಲಿ ಎಲ್ಲ ಲಿಂಗಾಯಿತ ಸಮುದಾಯದ ಸ್ವಾಾಮೀಜಿಗಳು ಈಗಾಗಲೇ ತಮ್ಮ ಮಠಗಳಿಗೆ ಭಕ್ತರಾಗಿರುವ ಸಮಾಜದ ಮುಖಂಡರನ್ನು ಕರೆದು ಬಿಎಸ್‌ವೈ ಅವರನ್ನು ಮುಖ್ಯಮಂತ್ರಿಿ ಮಾಡಲು ಎಲ್ಲರೂ ಒಂದಾಗಬೇಕಿದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾಾರೆ ಎನ್ನಲಾಗಿದ್ದು, ಇದೇ ವೇಳೆ ತಾವು ಸಹ ಗೆದ್ದೆೆತ್ತಿಿನ ಬಾಲ ಹಿಡಿದರೆ ಸಮುದಾಯದಲ್ಲೂ ಉತ್ತಮ ಹೆಸರು ಗಳಿಸುವುದು ಸಹ ಸಾಧ್ಯವಾಗಲಿದೆ ಎಂಬ ಸಲಹೆ ಆಪ್ತರಿಂದ ಬಂದಿದೆ. ಇದರಿಂದಾಗಿ ಇರುವ ಅಧಿಕಾರ ಬಳಸಿ ಲಿಂಗಾಯಿತ ಮುಖಂಡರು ಹಾಗೂ ಆಪ್ತರಿಗೆ ಅನುಕೂಲ ಮಾಡಿಕೊಟ್ಟು ಡಿಸೆಂಬರ್ ವೇಳೆಗೆ  ಪಕ್ಷ ಸೇರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿಿದೆ.
ಮಾಜಿ ಶಾಸಕಿಗೆ ಇರುಸು ಮುರುಸು
ಈಗಾಗಲೇ 2008ರ ಚುನಾವಣೆಯಲ್ಲಿ ಗೆಲವು ದಾಖಲಿಸಿ ಸಾಧನೆ ಮಾಡಿದ್ದ ಜಿಲ್ಲೆೆಯ ಮಾಜಿ ಶಾಸಕಿಗೆ ಕಾಂಗ್ರೆೆಸ್ ಮುಖಂಡರ ಪಕ್ಷ ಸೇರ್ಪಡೆ ಸುದ್ದಿ ಸಾಕಷ್ಟು ಇರುಸು ಮುರುಸು ತರಿಸಿದೆ. ಜಿಪಂಯಿಂದಲೂ ರಾಜಕೀಯ ವೈರಿಗಳೆಂದೆ ಬಿಂಬಿತವಾಗಿರುವ ಇಬ್ಬರ ನಡುವೆ ಸಾಕಷ್ಟು ರಾಜಕೀಯ ವೈರತ್ವ ವಿದೆ. ಆದರೆ ಕಳೆದ ಬಾರಿ ಠೇವಣಿ ಕಳೆದುಕೊಂಡ ಮೇಲೆ ಕ್ಷೇತ್ರದ ಜನತೆ ಜತೆ ಬೇರೆಯದೆ ಪಕ್ಷವನ್ನು ಕಟ್ಟುವಲ್ಲಿ ಅವರು ಸಹ ವಿಫಲರಾಗಿರುವುದು ಬಿಜೆಪಿ ಈ ನಡೆಗೆ ಕಾರಣವಾಗಿದೆ.
ಕಲಘಟಗಿ ಟಾರ್ಗೆಟ್
ಕಳೆದೆರೆಡು ಚುನಾವಣೆಗಳಿಂದ ಕಾಂಗ್ರೆೆಸ ತೆಕ್ಕೆೆಗೆ ಜಾರಿರುವ ಕಲಘಟಗಿ ಕ್ಷೇತ್ರವನ್ನು ಮತ್ತೆೆ ವಾಪಸ್ಸು ಪಡೆಯುವ ನಿಟ್ಟಿಿನಲ್ಲಿ ಸಾಕಷ್ಟು ಶ್ರಮ ವಹಿಸುತ್ತಿಿರುವ ಬಿಜೆಪಿಗೆ ಕಾಂಗ್ರೆೆಸ್ ಮುಖಂಡರ ಬಿಜೆಪಿ ಸೇರ್ಪಡೆ ಆನೆ ಬಲ ನೀಡಲಿದೆ. ಕಾರಣ ಹೊಸ ತಾಲೂಕಾಗಿ ಘೋಷಣೆಯಾಗಿರುವ ಅಳ್ನಾಾವರ ಕಲಘಟಗಿ ಮತಕ್ಷೇತ್ರದ ವ್ಯಾಾಪ್ತಿಿಗೆ ಬರುತ್ತಿಿದ್ದು ಅಲ್ಲಿ ಕಾಂಗ್ರೆೆಸ್ ಮುಖಂಡರು ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾಾರೆ. ಒಂದು ವೇಳೆ ಇವರು ಬಿಜೆಪಿಗೆ ಬಂದಿದ್ದೇ ಆದಲ್ಲಿ ಲಾಡ್ ಪ್ರತಿನಿಧಿಸುವ ಕಲಘಟಗಿ ಕ್ಷೇತ್ರ ವಶಪಡಿಸಿಕೊಳ್ಳಲು ಸಾಕಷ್ಟು ಅನುಕೂಲವಾಗಲಿದೆ ಎನ್ನುವುದು ಬಿಜೆಪಿ ಮುಖಂಡರ ಲೆಕ್ಕಾಾಚಾರವಾಗಿದೆ. ಇನ್ನೂ ಕೈ ಕಳೆದ ಬಾರಿ ಕೈ ತಪ್ಪಿಿ ಹೋಗಿರುವ ನವಲಗುಂದ ತಾಲೂಕಿನಲ್ಲಿ ಈ ಮುಖಂಡರ ಮೂಲ ಸ್ಥಾಾನವಾದ ಹಿನ್ನೆೆಲೆಯಲ್ಲಿ ಅಲ್ಲಿಯೂ ಸಹ ಮುನೇನಕೊಪ್ಪ ಅವರಿಗೆ ಪ್ಲಸ್ ಪಾಯಿಂಟ್ ಆಗುವ ಲೆಕ್ಕಾಾಚಾರದಲ್ಲಿ ಬಿಎಸ್‌ವೈಗೆ ಇಲ್ಲಿನ ಮುಖಂಡರು ಅವರನ್ನು ಬಿಜೆಪಿ ಕರೆ ತರಲು ತೆರೆ ಮರೆಯ ಕಸರತ್ತು ನಡೆಸಿದ್ದಾಾರೆ ಎಂದು ತಿಳಿದು ಬಂದಿದೆ.
ಒಟ್ಟಿಿನಲ್ಲಿ ಕಾಂಗ್ರೆೆಸ್‌ನ ಈ ಲಿಂಗಾಯಿತ ಮುಖಂಡರ ನಡೆಯಿಂದಾಗಿ ಜಿಲ್ಲೆೆಯ ಬಹುತೇಕ ಕಡೆ ಕಮಲ ಅರಳುವ ಸಾಧ್ಯತೆಗಳಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾದಲ್ಲಿ ಕಾಂಗ್ರೆೆಸ್ ನಷ್ಟ ಅನುಭವಿಸುವುದಂತೂ ಗ್ಯಾಾರಂಟಿ.

Wednesday, February 3, 2016

ನಾನು ಮಾಡಿದರೆ ಮಾಫಿ ಉಳಿದವರು ಮಾಡಿದರೆ ಮಾಫೀಯಾ

ಅದು 2010 ರ ಸಮಯ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಆಗ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ನೂರಾರು ಕೋಟಿ ಸುರಿದ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಮುಟ್ಟಿದ್ದೇಲ್ಲ ಚಿನ್ನ. ಅದು ಸಚಿವ ಸಂಪುಟ ಸಭೆ ಇರಬಹುದು ಅಥವಾ ವೈಯಕ್ತಿಕ ಖಾತೆಗಳ ನಿರ್ವಹಣೆ ಇರಬಹುದು ಎಲ್ಲವೂ ಅವರ ಆದೇಶದಂತೆಯೇ ನಡೆಯುತ್ತಿತ್ತು. ( ಬಳ್ಳಾರಿ ಕೆಲ ಹಿರಿಯ ಪತ್ರಕರ್ತರ ಊಹೆ ಪ್ರಕಾರ ಬಿಎಸ್ ವೈಕೂಡ ದೂರವಾಣಿ ಮಾತನಾಡಬೇಕಾದರೆ ಅದಕ್ಕೆ ಅವರ ಅನುಮತಿ ಬೇಕಿದ್ದಿರಬಹುದಾಗಿತ್ತು) ಅಷ್ಟರ ಮಟ್ಟಿಗೆ ಸರಕಾರವನ್ನು ಹಾಗೂ ರಾಜ್ಯವನ್ನು ಹಿಡಿತದಲ್ಲಿಟ್ಟಿಕೊಂಡಿದ್ದ ಸಮಯವದು. ಆ ಸಮಯದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ  ಇಂದಿನ ಮುಖ್ಯಮಂತ್ರಿ ಸಿದ್ದಣ್ಣ ತೋಳುತಟ್ಟಿ ಪಂದ್ಯ ಸ್ವೀಕರಿಸಿ ಪಾದಯಾತ್ರೆ ಮೂಲಕ ಬಳ್ಳಾರಿ ತಲುಪಿ ಬಳ್ಳಾರಿ ರಿಪಬ್ಲಿಕ್ ಎಂದು ಅಬ್ಬರಿಸಿ ಬೊಬ್ಬಿರಿದಿದ್ದರು. ಆದರೆ ಇಂದು ಅದೇ ಬಳ್ಳಾರಿ ಮತ್ತೆ ರಿಪಬ್ಲಿಕ್ ಆಗುತ್ತಿದೆ.
ಹೌದು ಇದನ್ನು ನೀವು ನಂಬಲೇ ಬೇಕು ಕಾಂಗ್ರೆಸ್ ಆಡಳಿತ ಬಂದ ಮೇಲೆ ಬಳ್ಳಾರಿಯ ಉಸ್ತುವಾರಿ ಹೊತ್ತ  ಪಿಟಿಪಿ ( ಪಿ.ಟಿ.ಪರಮೇಶ್ವನಾಯ್ಕ್) ಇಂದು ಜನರ ಪಾಲಿಗೆ ಖಳ ನಾಯಕರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಮಾಡಿದ ಅವಾಂತರಗಳನ್ನು ವಿವಿಧ ಮಾಧ್ಯಮಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದನ್ನುನೋಡಿದರೆ ಮತ್ತೆ ಬಳ್ಳಾರಿಗೆ ರಿಪಬ್ಲಿಕ್ ಪಟ್ಟ ಗ್ಯಾರಂಟಿ ಅನ್ನುವಂತಾಗಿದೆ. ಒಂದು ವೇಳೆ ಅನುಪಮಾ ಶಣೈ ವರ್ಗಾವಣೆ ಆಗಿದ್ದಿದ್ದರೆ ಅದನ್ನು ಬಳ್ಳಾರಿ ವಿಜಯ ಕರ್ನಾಟಕ ವರದಿಗಾರ ಶಶಿಧರ ಮೇಟಿ ರಾಜ್ಯಕ್ಕೆ ಪರಿಚಯಿಸಿದಿದ್ದರೆ ಇದು ಮಾಮೂಲಿ ವರ್ಗಾವಣೆ ಎಂದೇ ಬಿಂಬಿತವಾಗುತ್ತಿತ್ತು. ಆದರೆ ಪ್ರಾಮಾಣಿಕ ಪತ್ರಕರ್ತರಲ್ಲಿ ಒಬ್ಬರಾಗಿರುವ ಮೇಟಿ ಅದರ ಜಾಡು ಹಿಡಿದು ಹೊರಟಾಗ ಸಿಕ್ಕ ಸುಳಿವು ಇಂದು ಅವರ ವ್ಯಕ್ತಿತ್ವವನ್ನು ಮತ್ತಷ್ಟು ಮೇಲ್ಲಕ್ಕೆ ಏರಿಸಿದೆ. ಇದಾದ ನಂತರವೂ ಸಹ ಪಿಟಿಪಿ ನಾನು ಮಾಡೆಯಿಲ್ಲ ನನಗೂ ಅದಕೂ ಸಂಬಂಧವೇ ಇಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿದ್ದರು ಆದರೆ ಚುನಾವಣೆ ಪ್ರಚಾರದಲ್ಲಿ ಶೋ ಮಾಡಲು ( ಜಂಭಕೊಚ್ಚಿಕೊಳ್ಳಲು)ಹೋಗಿ ಸಿಕ್ಕಿ ಹಾಕಿಕೊಳ್ಳುವ ಮೂಲಕ ಮಾಧ್ಯಮಗಳಿಗೆ ಆಹಾರವಾದರು. ಈ ವಿಷಯ ಸಹ ಅಲ್ಲೆ ಸತ್ತು ಹೋಗುತ್ತಿತ್ತೋ ಏನೋ ಆದರೆ ಈಟಿವಿ ನ್ಯೂಸ್ ನ ವರದಿಗಾರ ಶರಣು ಹಂಪಿ ಸಿಕ್ಕ ಆಡಿಯೋ ತುಣಕನ್ನು ಮೊದಲು ಭಿತ್ತರಿಸುವ ಮೂಲಕ ನಾಯಕನ ಪಟ್ಟವನ್ನು ಕಸಿದುಕೊಳ್ಳುವಂತಾಯಿತು. ಈ ನಡುವೆ ನೆರೆ ಜಿಲ್ಲೆಯ ಶಾಸಕರು ಕೂಡ  ಈ ವಿಷಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ನಾಯಕ್ ಹೆಡೆ ಮುರಿ ಕಟ್ಟಿವಲ್ಲಿ ತೆರೆಯ ಹಿಂದಿನ ತಮ್ಮ ಚಾಣಕ್ಷ್ಯ ನೀತಿಯನ್ನು ಪ್ರದರ್ಶಿಸಿದ್ದಾರೆ. ತಮಗೆ ಸಿಕ್ಕ ಎಲ್ಲ ಸಾಕ್ಷಿಗಳನ್ನು ನಿರ್ಭೆಡೆಯ ಮಾಧ್ಯಮಗಳಿಗೆ ಕೊಟ್ಟ ಅವರುಗಳು ಆ ಮೂಲಕ ತಮ್ಮ ರಾಜಕೀಯ ನಡೆಯನ್ನು ಚದುರಂಗದಾಟಕ್ಕೆ ಹೊಲಿಸಿಕೊಂಡಿದ್ದಾರೆ. ಕಾರಣ ಈ ಹಿಂದೆ ಆ ಶಾಸಕರು ಒಂದು ಸಂಸ್ಥೆಯ ಅಧ್ಯಕ್ಷರಾಗುವ ಸಂದರ್ಭದಲ್ಲಿ ಇದೇ ಪಿಟಿಪಿ ಅಡ್ಡಗಾಲು ಹಾಕಿದ್ದರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಿದೆ.
ರಿಪಬ್ಲಿಕ್ ಹೇಗಾಯ್ತು ?
ಏನ್ರಿ ನೀವು ಜನಾರ್ಧನ ರೆಡ್ಡಿಗೂ ಪಿಟಿಪಿಗೂ ಹೋಲಿಕೆ ಮಾಡೋದಾ ಅವರೆಲ್ಲಿ ಇವರೆಲ್ಲಿ ಎಲ್ಲಿಯ ಹೆಲಿಕ್ಯಾಪ್ಟರ ಎಲ್ಲಿನ ಇನ್ನೋವಾ ಕಾರು ಎಂದು ಆಡಿಕೊಳ್ಳುವವರಿಗೆ ಒಂದು ಮಾತು ಹೇಳಲೇಬೇಕು. ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಅಭಿವೃದ್ಧೀ ಕಾರ್ಯಗಳನ್ನು ನೋಡಿದರೆ ಪಿಟಿಪಿ ಸಾಧನೆ ಶೂನ್ಯ ಎನಿಸುವುದರಲ್ಲಿ ಸಂಶಯವಿಲ್ಲ. ರೆಡ್ಡಿ ಸಹೋದರರು ಮಾಡಿದ್ದರೆನ್ನಲಾದ ಅಕ್ರಮ ಗಣಿಗಾರಿಕೆ ಸೇರಿದಂತೆ ಎಲ್ಲ ಕೇಸುಗಳು ಕೋರ್ಟನಲ್ಲಿದ್ದು ಅದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವಲ್ಲ. ಅದನ್ನು ಬಿಟ್ಟು ಮಾತನಾಡುವುದಾದರೆ ಬಳ್ಳಾರಿಯಲ್ಲಿ ಅಭಿವೃದ್ಧಿಯಾಗಿದೆ ಎನ್ನುವುದನ್ನು ಅವರ ರಾಜಕೀಯ ವಿರೋಧಿಗಳೇ ಒಪ್ಪಿಕೊಳ್ಳುತ್ತಾರೆ. ಆದರೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಒಂದಿಷ್ಟು ಕಾಳಜಿ ತೋರಿಸದ ಪಿಟಿಪಿ ಕೇವಲ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಬೇರೆ ಎಲ್ಲ ವಿಚಾರಗಳಲ್ಲಿಯೂ ಸಹ ಕಾಳಜೀ ತೋರಿಸಿರುವುದು ರಿಪಬ್ಲಿಕ್ ಎನ್ನುವ ಪದಕ್ಕೆ ಅರ್ಥ ನೀಡುತ್ತದೆ. ನನಗೆ ಗೊತ್ತಿರುವುವಂತೆ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿದ್ದ ಪಿಟಿಪಿ ಮರಳನ್ನು ಬೆಂಗಳೂರಿಗೆ ಸಾಗಿಸುವಂತೆ ಸಿಎಂ ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಹೇಳಿದ್ದರು. ಅಂದರೆ ಅಕ್ರಮ ಮರಳು ಸಾಗಣೆ ಇವರಿಗೆ ತಿಳಿದಿತ್ತು ಅದರಲ್ಲಿ ತಮ್ಮ ಪಾಲು ಇತ್ತು ಎಂದು ಒಪ್ಪಿಕೊಂಡಂತೆ ಅಲ್ಲವೇ? ಇದೇ ರೀತಿ ಬೇರೆ ಬೇರೆ ವಿಚಾರಗಳು ಈಗಾಗಲೇ ಮಾಧ್ಯಮಗಳಲ್ಲಿ ಬಂದಿರುವಂತೆ ನಡೆದಿದೆ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ. ಅಂದರೆ ನಾನು ಹೇಳಿದ್ದ ಸತ್ಯ, ನಾನು ಮಾಡಿದ್ದೇ ಕಾನೂನು ನಾನು ಹೋದಿದ್ದೆ ಹಾದಿ ಎಂದು ಹೇಳಿ ಅಧಿಕಾರವನ್ನು ದುರಪಯೋಗ ಪಡಿಸಿಕೊಂಡ ಪಿಟಿಪಿ ದರ್ಬಾರ್ ಗೆ ಬಳ್ಳಾರಿ ರಿಪಬ್ಲಿಕ್ ಆಗಿದೆ ಎಂದರೆ ತಪ್ಪೇನಿಲ್ಲ.
ಒಟ್ಟಿನಲ್ಲಿ ಹಾರಾಟ ಚೀರಾಟದ ಮೂಲಕ ಮತ್ತೆ ಬಳ್ಳಾರಿಯಲ್ಲಿ ನೆಲೆ ಕಂಡುಕೊಂಡ ಕಾಂಗ್ರೆಸ್ ಜನಾರ್ಧನ ರೆಡ್ಡಿ ಸರ್ವಾಧಿಕಾರಿ ಎಂದು ಹೇಳಿ ಓಟು ಗಿಟ್ಟಿಸಿಕೊಂಡಿತ್ತಲ್ಲ.ಈಗ ಹಡಗಲಿ ಮನೆಯಲ್ಲಿ ಕುಳಿತು ಜಿಲ್ಲೆಯಲ್ಲಿನ ಎಲ್ಲ ಅಧಿಕಾರವನ್ನು ನಿಯಂತ್ರಿಸುತ್ತಿರುವ ಪಿಟಿಪಿ ಬಗ್ಗೆ ಏನು ಹೇಳುತ್ತೇ?
ಇದರ ಅರ್ಥ ಇಷ್ಟೇ ನಾನು ಮಾಡಿದರೆ ಮಾಫಿ ಉಳಿದವರು ಮಾಡಿದರೆ ಮಾಫೀಯಾ ಎನ್ನುವ ಹೊಸ ಗಾದೆಯನ್ನು ಸೃಷ್ಟಿಸಿಕೊಂಡಿದೆ

Monday, January 25, 2016

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ರಾಷ್ಟ್ರ ಭವ್ಯ ಗಣರಾಜ್ಯೋತ್ಸವಕ್ಕೆ ಸಿದ್ಧವಾಗುತ್ತಿರುವಾಗ ಉಗ್ರರು ಅದನ್ನು ತಡೆಯಲು ಸಿದ್ಧವಾಗುತ್ತಿದ್ದರು.ಆದರೆ ನಮ್ಮ ಪೊಲೀಸ್ ವ್ಯವಸ್ಥೆಯ ಫಲದಿಂದಾಗಿ ವಿವಿಧ ರಾಜ್ಯಗಳಲ್ಲಿ ಅವತಿದ್ದ ಉಗ್ರರನ್ನು ಎಳೆದು ತಂದಿದ್ದಾರೆ. ಆದರೆ ವಿಚಿತ್ರ ನೋಡಿ ಮುಖ್ಯಮಂತ್ರಿಗಳ ಖಾಸಾ ಮನುಷ್ಯರು ಎಂದು ಹೇಳಿಕೊಳ್ಳುವ ಹಾಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ(?) ಪತ್ರಕರ್ತ ದಿನೇಶ ಅಮೀನ ಮಟ್ಟು ಬೇಜವಾಬ್ದಾರಿ ತನದ ಹೇಳಿಕೆ ನೀಡುವ ಮೂಲಕ ತಾವು ಏನು ಎಂದು ತಾವೇ ಬಣ್ಣಿಸಿಕೊಂಡಿದ್ದಾರೆ. ಮೂಲಭೂತವಾದ ಯಾವುದೇ ಇರಲಿ ಅದನ್ನುಸೆದೆ ಬಡಿಯಲೇಬೇಕು ಎನ್ನುವುದು ಎಲ್ಲರ ಚಿಂತನೆಯಾದರೆ ಇಲ್ಲಿ ಅನ್ಯಕೋಮಿನವರನ್ನು ಬಂಧಿಸಿದ್ದು ತಪ್ಪು ಎಂದು ದಿನೇಶ ಹೇಳುತ್ತಿದ್ದಾರೆ. ಹಾಗಾದರೆ ಉಗ್ರರನ್ನು ಸೆದೆ ಬಡೆಯುವುದು ತಪ್ಪೆ? ಈ ಹಿಂದಿನ ಘಟನೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಅಷ್ಟೇ ಏಕೆ ಮೊನ್ನೆಯ ಪಠಾಣ್ ಕೋಟ್ ದಾಳಿಯನ್ನೇ ಉದಾಹರಿಸುವುದಾದರೆ ಎಸ್ಪಿ ನೀಡಿದ ಎಚ್ಚರಿಕೆಯನ್ನು( ಈ ಬಗ್ಗೆ ಇನ್ನೂ ಎನ್ಐಎ ಸ್ಪಷ್ಟನೆ ನೀಡಬೇಕಿದೆ) ಗಮನಿಸದ ಪೊಲೀಸರಿಂದಾಗಿ ಎಂತಹ ಆತಂಕ ಸೃಷ್ಟಿಯಾಗಿತ್ತು. ಈ ರೀತಿ ನಮ್ಮ ಪಡೆಗಳು ನಮ್ಮನ್ನು ರಕ್ಷಿಸಿದಾಗ ಅವರ ಬೆನ್ನಿಗೆ ನಿಂತು ಶಹಬಾಷ್ ಗಿರಿ ಹೇಳಬೇಕಾದ ನಾವುಗಳು ಈ ರೀತಿ ಕಾಮಾಲೆ ನಾಲಿಗೆಯಿಂದ ಮಾತನಾಡಿದರೆ ಹೇಗೆ ಸ್ವಾಮಿ? ಇನ್ನೂ ಸ್ವಲ್ಪ ದಿನ ಹೋಗಿದ್ದರೆ ಇತಿಹಾಸದ ಪುಟದಲ್ಲಿರುವ ಪ್ರಜಾವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ತನ್ನ ವಸ್ತು ನಿಷ್ಠತೆಗೆ ಹೆಸರಾಗಿದ್ದ ಪತ್ರಿಕೆಯ ಸೌಭಾಗ್ಯವೋ ಏನೋ ನೀವು ಪತ್ರಿಕೋದ್ಯಮ ಬಿಟ್ಟಿದ್ದು ಒಳ್ಳಯದೆ ಆಯಿತು. ಒಂದು ವೇಳೆ ನೀವು ಇದ್ದಿದ್ದರೆ ಪತ್ರಿಕೆಯ  ಮುಖಪುಟದಲ್ಲಿ ಉಗ್ರರನ್ನುಹೀರೋಗಳಂತೆ ಬಿಂಬಿಸುತ್ತಿದ್ದಿರಿ ಎಂದೆನಿಸುತ್ತದೆ. ನೀವು ವಿದ್ಯಾವಂತರು ಎಂದು ಹೇಳಿಕೊಂಡು ತಿರಾಗುಡುತ್ತಿರಿ ಸಾಮಾನ್ಯ ನಾಗರೀಕನಿಗೆ ಇರುವ ಸಾಮಾನ್ಯ ಬುದ್ಧಿಯೂ ಇಲ್ಲವೇ. ಉಗ್ರರು ಇಡುವ ಬಾಂಬುಗಳಾಗಲಿ, ಅಥವಾ ಚಲಾಯಿಸುವ ಗುಂಡುಗಳಾಲಿ ಯಾವುದು ಕೂಡ ಜಾತಿ ಧರ್ಮವನ್ನು ನೋಡುವುದಿಲ್ಲ. ಹಾಗಿರುವಾಗ ನಿಮಗೇಕೆ ಸ್ವಾಮಿ ಜಾತಿ ಪ್ರೀತಿ.? ನಾವೇನು ಭಾರತೀಯ ಮುಸ್ಲಿಮರಿಗೆ ವಿರೋಧ ವ್ಯಕ್ತಪಡಿಸಿದವರಲ್ಲ ಕಾರಣ ಅವರಲ್ಲಿಯೂ ಸಹ ಸಾಕಷ್ಟು ಜನ ಈ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾರೆ. ಆದರೆ ಇತ್ತೀತ್ತಲಾಗಿ ಕೆಲವರು ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತವನ್ನು ಪ್ರೀತಿಸುವ ಮುಸ್ಲಿಂರು ಇಲ್ಲಿದ್ದಾರೆ ಅವರು ಸಹ ಉಗ್ರವಾದವನ್ನು ವಿರೋಧಿಸುತ್ತಿದ್ದಾರೆ. ಅಂತಹುದರಲ್ಲಿ ನಮ್ಮ ಸೇನಾ ಪಡೆಗಳು ಹಾಗೂ ಪೊಲೀಸರು ಮಾಡುವ ಕೆಲಸ ನಿಮಗೆ ರುಚಿಸಲಿಲ್ಲ ಅಲ್ಲವೇ. ನಿಮಗೆ ಒಂದು ಸವಾಲ್ ಹಾಕುತ್ತಿದ್ದೇನೆ. ಇಷ್ಟೇಲ್ಲಾ ಮಾತನಾಡುವ ನಿಮಗೆ ಒಂದು ವಾರ ಎಲ್ಲ ಐಶಾರಾಮಗಳನ್ನು ಬಿಟ್ಟು ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ. ಪಾಕಿಸ್ತಾನದಿಂದ ಏಕಾಏಕಿ ತೂರಿ ಬರುವ ಶೆಲ್ ಹಾಗೂ ಎಕೆ 47 ನಿಂದ ಬರುವ ಗುಂಡುಗಳಿಗೆ ಎದೆಕೊಡುವ ಶಕ್ತಿ ಇದೆಯೇ?  ಇಲ್ಲ ಅಲ್ವಾ ಹಾಗಿದ್ದರೆ ನಮ್ಮ ಪಡೆಗಳ ಹಾಗೂ ಪೊಲೀಸರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ. 

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ರಾಷ್ಟ್ರ ಭವ್ಯ ಗಣರಾಜ್ಯೋತ್ಸವಕ್ಕೆ ಸಿದ್ಧವಾಗುತ್ತಿರುವಾಗ ಉಗ್ರರು ಅದನ್ನು ತಡೆಯಲು ಸಿದ್ಧವಾಗುತ್ತಿದ್ದರು.ಆದರೆ ನಮ್ಮ ಪೊಲೀಸ್ ವ್ಯವಸ್ಥೆಯ ಫಲದಿಂದಾಗಿ ವಿವಿಧ ರಾಜ್ಯಗಳಲ್ಲಿ ಅವತಿದ್ದ ಉಗ್ರರನ್ನು ಎಳೆದು ತಂದಿದ್ದಾರೆ. ಆದರೆ ವಿಚಿತ್ರ ನೋಡಿ ಮುಖ್ಯಮಂತ್ರಿಗಳ ಖಾಸಾ ಮನುಷ್ಯರು ಎಂದು ಹೇಳಿಕೊಳ್ಳುವ ಹಾಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ(?) ಪತ್ರಕರ್ತ ದಿನೇಶ ಅಮೀನ ಮಟ್ಟು ಬೇಜವಾಬ್ದಾರಿ ತನದ ಹೇಳಿಕೆ ನೀಡುವ ಮೂಲಕ ತಾವು ಏನು ಎಂದು ತಾವೇ ಬಣ್ಣಿಸಿಕೊಂಡಿದ್ದಾರೆ. ಮೂಲಭೂತವಾದ ಯಾವುದೇ ಇರಲಿ ಅದನ್ನುಸೆದೆ ಬಡಿಯಲೇಬೇಕು ಎನ್ನುವುದು ಎಲ್ಲರ ಚಿಂತನೆಯಾದರೆ ಇಲ್ಲಿ ಅನ್ಯಕೋಮಿನವರನ್ನು ಬಂಧಿಸಿದ್ದು ತಪ್ಪು ಎಂದು ದಿನೇಶ ಹೇಳುತ್ತಿದ್ದಾರೆ. ಹಾಗಾದರೆ ಉಗ್ರರನ್ನು ಸೆದೆ ಬಡೆಯುವುದು ತಪ್ಪೆ? ಈ ಹಿಂದಿನ ಘಟನೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಅಷ್ಟೇ ಏಕೆ ಮೊನ್ನೆಯ ಪಠಾಣ್ ಕೋಟ್ ದಾಳಿಯನ್ನೇ ಉದಾಹರಿಸುವುದಾದರೆ ಎಸ್ಪಿ ನೀಡಿದ ಎಚ್ಚರಿಕೆಯನ್ನು( ಈ ಬಗ್ಗೆ ಇನ್ನೂ ಎನ್ಐಎ ಸ್ಪಷ್ಟನೆ ನೀಡಬೇಕಿದೆ) ಗಮನಿಸದ ಪೊಲೀಸರಿಂದಾಗಿ ಎಂತಹ ಆತಂಕ ಸೃಷ್ಟಿಯಾಗಿತ್ತು. ಈ ರೀತಿ ನಮ್ಮ ಪಡೆಗಳು ನಮ್ಮನ್ನು ರಕ್ಷಿಸಿದಾಗ ಅವರ ಬೆನ್ನಿಗೆ ನಿಂತು ಶಹಬಾಷ್ ಗಿರಿ ಹೇಳಬೇಕಾದ ನಾವುಗಳು ಈ ರೀತಿ ಕಾಮಾಲೆ ನಾಲಿಗೆಯಿಂದ ಮಾತನಾಡಿದರೆ ಹೇಗೆ ಸ್ವಾಮಿ? ಇನ್ನೂ ಸ್ವಲ್ಪ ದಿನ ಹೋಗಿದ್ದರೆ ಇತಿಹಾಸದ ಪುಟದಲ್ಲಿರುವ ಪ್ರಜಾವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ತನ್ನ ವಸ್ತು ನಿಷ್ಠತೆಗೆ ಹೆಸರಾಗಿದ್ದ ಪತ್ರಿಕೆಯ ಸೌಭಾಗ್ಯವೋ ಏನೋ ನೀವು ಪತ್ರಿಕೋದ್ಯಮ ಬಿಟ್ಟಿದ್ದು ಒಳ್ಳಯದೆ ಆಯಿತು. ಒಂದು ವೇಳೆ ನೀವು ಇದ್ದಿದ್ದರೆ ಪತ್ರಿಕೆಯ  ಮುಖಪುಟದಲ್ಲಿ ಉಗ್ರರನ್ನುಹೀರೋಗಳಂತೆ ಬಿಂಬಿಸುತ್ತಿದ್ದಿರಿ ಎಂದೆನಿಸುತ್ತದೆ. ನೀವು ವಿದ್ಯಾವಂತರು ಎಂದು ಹೇಳಿಕೊಂಡು ತಿರಾಗುಡುತ್ತಿರಿ ಸಾಮಾನ್ಯ ನಾಗರೀಕನಿಗೆ ಇರುವ ಸಾಮಾನ್ಯ ಬುದ್ಧಿಯೂ ಇಲ್ಲವೇ. ಉಗ್ರರು ಇಡುವ ಬಾಂಬುಗಳಾಗಲಿ, ಅಥವಾ ಚಲಾಯಿಸುವ ಗುಂಡುಗಳಾಲಿ ಯಾವುದು ಕೂಡ ಜಾತಿ ಧರ್ಮವನ್ನು ನೋಡುವುದಿಲ್ಲ. ಹಾಗಿರುವಾಗ ನಿಮಗೇಕೆ ಸ್ವಾಮಿ ಜಾತಿ ಪ್ರೀತಿ.? ನಾವೇನು ಭಾರತೀಯ ಮುಸ್ಲಿಮರಿಗೆ ವಿರೋಧ ವ್ಯಕ್ತಪಡಿಸಿದವರಲ್ಲ ಕಾರಣ ಅವರಲ್ಲಿಯೂ ಸಹ ಸಾಕಷ್ಟು ಜನ ಈ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾರೆ. ಆದರೆ ಇತ್ತೀತ್ತಲಾಗಿ ಕೆಲವರು ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತವನ್ನು ಪ್ರೀತಿಸುವ ಮುಸ್ಲಿಂರು ಇಲ್ಲಿದ್ದಾರೆ ಅವರು ಸಹ ಉಗ್ರವಾದವನ್ನು ವಿರೋಧಿಸುತ್ತಿದ್ದಾರೆ. ಅಂತಹುದರಲ್ಲಿ ನಮ್ಮ ಸೇನಾ ಪಡೆಗಳು ಹಾಗೂ ಪೊಲೀಸರು ಮಾಡುವ ಕೆಲಸ ನಿಮಗೆ ರುಚಿಸಲಿಲ್ಲ ಅಲ್ಲವೇ. ನಿಮಗೆ ಒಂದು ಸವಾಲ್ ಹಾಕುತ್ತಿದ್ದೇನೆ. ಇಷ್ಟೇಲ್ಲಾ ಮಾತನಾಡುವ ನಿಮಗೆ ಒಂದು ವಾರ ಎಲ್ಲ ಐಶಾರಾಮಗಳನ್ನು ಬಿಟ್ಟು ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ. ಪಾಕಿಸ್ತಾನದಿಂದ ಏಕಾಏಕಿ ತೂರಿ ಬರುವ ಶೆಲ್ ಹಾಗೂ ಎಕೆ 47 ನಿಂದ ಬರುವ ಗುಂಡುಗಳಿಗೆ ಎದೆಕೊಡುವ ಶಕ್ತಿ ಇದೆಯೇ?  ಇಲ್ಲ ಅಲ್ವಾ ಹಾಗಿದ್ದರೆ ನಮ್ಮ ಪಡೆಗಳ ಹಾಗೂ ಪೊಲೀಸರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ. 

Thursday, January 14, 2016

ಗುಳೇದ ಲಕ್ಕಮ್ಮ

ಜಾತ್ರೆಯೆಂದಾಕ್ಷಣ ಊರಿನಲ್ಲಿ ಸದ್ದು ಗದ್ದಲ ಇರುತ್ತದೆ, ಆದರೆ ಈ ಊರಲ್ಲಿ ಜಾತ್ರೆಯ ದಿನ ಬೆಳಿಗ್ಗೆಯಿಂದ ಸಂಜೆಯವರಿಗೆ ಯಾರೊಬ್ಬರು ಕಾಣುವುದಿಲ್ಲ! ಪ್ರತಿಯೊಂದು ಮನೆ, ಊರಿನ ಆಸ್ಪತ್ರೆ, ಶಾಲೆ, ಅಂಚೆ ಕಚೇರಿಗೆ ಬೀಗ ಹಾಕಿರುತ್ತಾರೆ. ನೀರವ ಮೌನ ಆವರಿಸುತ್ತದೆ. ಇದು ಈ ಗ್ರಾಮದ ಅನಾದಿಕಾಲದಿಂದ ನಡೆದುಕೊಂಡು ಬಂದ ಪದ್ಧತಿ. ಎಲ್ಲಲ್ಲಿ ಜನವಸತಿ ಇದೇಯೋ ಅಲ್ಲಲ್ಲಿ ದೇವರುಗಳು ಕೂಡ ಇವೆ. ಅವುಗಳಿ ಪ್ರತಿವರ್ಷ ಜಾತ್ರೆಗಳು ಕೂಡ ನಡೆಯುತ್ತವೆ. ಆ ಸಂದರ್ಭದಲ್ಲಿ ಊರಿನಲ್ಲಿ ಸಡಗರವೋ ಸಡಗರ. ಎಲ್ಲ ಮನೆಗಳ ಮುಂದೆ ರಂಗೋಲಿ ಹಾಕಿ ತಳಿರು ತೋರಣ ಕಟ್ಟಿ ಜಾತ್ರೆ ಮಾಡುವುದು ಸಂಪ್ರದಾಯ ಆದರೆ ಈ ಊರಿನಲ್ಲಿ ಮಾತ್ರ ಜಾತ್ರೆಯ ದಿನ ಊರೆ ಖಾಲಿಯಾಗುತ್ತದೆ. ಹೌದು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿ ಇಂತಹ ವಿನೂತನ ಪದ್ಧತಿ ಇದೆ. ಪ್ರತಿಯೊಬ್ಬರು ಊರ ಹೊರಗೆ ನಡೆಯುವ ತಮ್ಮೂರ ಜಾತ್ರೆಗೆ ಮನೆ ಬೀಗ ಹಾಕಿಕೊಂಡು ಹೋಗುತ್ತಾರೆ, ಯಾವೊಬ್ಬರು ಗ್ರಾಮದಲ್ಲಿ ಇರುವಂತಿಲ್ಲ. ಪ್ರತಿವರ್ಷ ಶೂನ್ಯ ಮಾಸದಲ್ಲಿ ಗುಳೇದ ಲಕ್ಕಮ್ಮ ಜಾತ್ರೆ ಮಾಡುತ್ತಾರೆ, ಜಾತ್ರೆ ಮಾಡುವಾಗ ಈ ಗ್ರಾಮದಲ್ಲಿ ಇಂತಹ ವಿಶೇಷ ಸಂಪ್ರದಾಯವನ್ನು ಆಚರಣೆ ಮಾಡುತ್ತಾರೆ. ಅಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 5.30ರವರೆಗೆ ಊರೊಳಗೆ ಪ್ರವೇಶ ಮಾಡುವಂತಿಲ್ಲ. ಇನ್ನೂ ಗ್ರಾಮ ದೇವತೆಯಾಗಿರುವ ಲಕ್ಕಮ್ಮ ಮೂಲತಃ ಶಾನಭೋಗರ ಮನೆಯ ಹೆಣ್ಣು ಮಗಳು ಎಂಬ ನಂಬಿಕೆಯಿದ್ದು, ಅವಳನ್ನು ಗೌಡರ ಮನೆಗೆ ಕೊಡಲಾಗಿತ್ತು ಎಂಬ ಪ್ರತೀತಿ ಇದೆ. ಅದಕ್ಕಾಗಿ ಇಂದಿಗೂ ಕೂಡ ಜಾತ್ರೆಯ ಸಂದರ್ಭದಲ್ಲಿ ಗೌಡರ ಮನೆಯಿಂದಲೇ ಆಕೆಗೆ ಮುತ್ತೈದೆ ಸಾಮಗ್ರಿಗಳನ್ನು ಕೂಡ ನೀಡಲಾಗುತ್ತದೆ
 ಈ ಊರಿನಿಂದ ಒಂದುವರೆ ಕಿ.ಮೀ ದೂರದಲ್ಲಿ ಗುಳೇದ ಲಕ್ಕಮ್ಮ ಜಾತ್ರೆ ಮಾಡುತ್ತಾರೆ. ಗ್ರಾಮದಲ್ಲಿ ಸುಮಾರು 2000 ಮನೆಗಳು 8,500 ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಜಾತ್ರೆಯ ದಿನ ದೇವಿಯ ಅದ್ದೂರಿ ಮೆರವಣಿಗೆ ನಡೆಯುತ್ತದೆ. ಲಕ್ಕಮ್ಮ ಮೂಕಿ ದೇವತೆ ಆದದರಿಂದಲೋ ಏನೋ ದೇವಿಯ ಮುಂದೆ ಜೋರಾಗಿ ಉರಿಮೆಯನ್ನ ಬಡೆಯಲಾಗುತ್ತದೆ. ಗ್ರಾಮದ ತುಂಬ ಸುತ್ತವ ದೇವಿ ನಂತರ ಊರ ಹೊರಗಿನ ಪ್ರದೇಶಕ್ಕೆ ಹೋಗುತ್ತಾಳೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಯಾರೂ ಇರುವಂತಿಲ್ಲ .ಅಂದು ಹುಟ್ಟಿದ ಕೂಸು, ಬಾಣಂತಿ, ಹಾಸಿಗೆ ಹಿಡಿದ ಹಿರಿಯ ಜೀವಗಳು, ಮಕ್ಕಳು, ಅಂಗವಿಕಲರು ಸೇರಿ ಯಾರೊಬ್ಬರು ಗ್ರಾಮದಲ್ಲಿ ಇರುವಂತಿಲ್ಲ, ಎಲ್ಲರೂ ಜಾತ್ರೆಗೆ ಮನೆಯ ಬೀಗ ಹಾಕಿಕೊಂಡು ಹೋಗಬೇಕು. ಒಂದು ವೇಳೆ ಯಾರಾದರೂ ಮೃತಪಟ್ಟರೆ, ಶವ ಸಂಸ್ಕಾರ ಕೂಡ ಮಾಡುವಂತಿಲ್ಲ. ಇನ್ನೂ ಊರನ್ನು ಕಾಯಲು ನಾಲ್ಕೈದ ಜನ ತಳವಾರರನ್ನು ನೇಮಿಸಲಾಗಿರುತ್ತದೆ. ಅವರು ಊರ ಅಗಸಿಯಲ್ಲಿ ಬೇಲಿ ಹಾಕಿಕೊಂಡು ಈಡಿ ದಿನ ಯಾರೂ ಊರ ಒಳಗಡೆ ಹೋಗದಂತೆ ಕಾಯುತ್ತಿರುತ್ತಾರೆ
: ಇತ್ತ ಗುಳೆಹೋದ ತಂಡ ಮರದ ನೆರಳನ್ನು ಆಶ್ರಯಿಸುತ್ತಾರೆ. ಬಂಧುಗಳಿಗೆ ಸಂಭ್ರಮದ ಸ್ವಾಗತ. ಬಗೆ ಬಗೆಯ ತಿಂಡಿ ತಿನಿಸುಗಳನ್ನು ನೀಡಿ, ಉಪಚರಿಸುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕ ಶೈಲಿಯ ಭೋಜನವಂತೂ ಎಲ್ಲರ ಬಾಯಲ್ಲೂ ನೀರು ತರಿಸುತ್ತದೆ. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ , ಅಗಸೆ ಚಟ್ನಿ, ಗುರಳ್ಳ ಚಟ್ನಿ, ಕಡಲೇ ಚಟ್ನಿ ವಿವಿಧ ರೀತಿಯ ಪಲ್ಯಗಳು ಹಾಹಾ.. ಅದನ್ನೂ ಸವಿದವರು ಎಂದು ಕೂಡ ಲಕ್ಕಮ್ಮನ ಜಾತ್ರೆಯನ್ನು ಮರೆಯಲಾರರು ಎನ್ನುವಷ್ಟರ ಮಟ್ಟಿಗೆ ಖಾದ್ಯಗಳು ಆಹಾರ ಪ್ರಿಯರನ್ನು ಸೆಳೆಯುತ್ತವೆ.
 ಕೆಲವೊಂದು ಸಂಪ್ರದಾಯಗಳು ಧರ್ಮದ ಭಾವನೆಗಳನ್ನು ಮೀರಿಸುತ್ತವೆ ಎನ್ನುವುದಕ್ಕೆ ಚೋರನೂರು ಗ್ರಾಮವೇ ಉದಾಹರಣೆಯಾಗಿದೆ. ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮುಸ್ಲಿಂ ಸಮಾಜದ ಮನೆಗಳು, ಕೆಲವೊಂದು ಕ್ರಿಶ್ಚಿಯನ್ ಸಮುದಾಯದ ಮನೆಗಳು, ಇವರು ಕೂಡ ಗುಳೇದ ಲಕ್ಕಮ್ಮ ಜಾತ್ರೆ ಆಚರಿಸುತ್ತಾರೆ, ಇವರು ಕೂಡ ಬೀಗ ಹಾಕಿ ಜಾತ್ರೆಗೆ ಹೋಗಿ, ಜಾತ್ರೆಯನ್ನು ಆಚರಿಸುವ ಸಂಪ್ರದಾಯವು ಧರ್ಮಗಳ ಭಾವನೆಯನ್ನು ಮೀರಿಸಿದೆ. ಅನಾದಿಕಾಲದಿಂದ ಇಂತಹ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಜಾತ್ರೆಯ ದಿನ ಬೆಳಿಗ್ಗೆಯಿಂದ ಸಂಜೆ ಯವರಿಗೆ ಎಲ್ಲಾ ಮನೆಗಳಿಗೆ ಬೀಗ ಹಾಕುತ್ತಾರೆ, ಯಾರೊಬ್ಬರು ಇಂತಹ ಸಂಪ್ರದಾಯ ಮುರಿಯುವುದಿಲ್ಲ. ಎಲ್ಲಾ ಜನರು ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ಇನ್ನೂ ಗ್ರಾಮದ ಕೆರೆ ಅಂಗಳದಲ್ಲಿ ಸೇರುವ ಭಕ್ತರು ತಮ್ಮ ಜಾನುವಾರುಗಳನ್ನು ಬೆದರಿಸುವ ಮೂಲಕ ಜಾನುವಾರುಗಳ ರಕ್ಷಣೆಗೆ ದೇವಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ.
 ಊರ ಹೊರಗಡೆ ಪ್ರತಿಷ್ಠಾಪನೆಗೊಳ್ಳುವ ದೇವಿಗೆ ಭಕ್ತರು ತಮ್ಮದೇಯಾದ ರೀತಿಯಲ್ಲಿ ಭಕ್ತಿ ಸಮರ್ಪಿಸುತ್ತಾರೆ. ಅದರಲ್ಲೂ ಯುವ ಜನರು ಸಂಪ್ರದಾಯದಂತೆ ಕೋಲಾಟವನ್ನು ಆಡುವ ಮೂಲಕ ಜಾತ್ರಗೆ ವಿಶೇಷ ಮೆರಗು ನೀಡಿ ಜನರನ್ನು ರಂಜಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವುದು ವಿಶೇಷ. ಇನ್ನೂ ಮತ್ತೆ ಸಂಜೆ ಗೋಧೂಳಿ ಸಮಯಕ್ಕೆ ಸರಿಯಾಗಿ ಚರಗವನ್ನು ಚೆಲ್ಲುತ್ತಾ ಮುಂದೆ ಮುಂದೆ ಸಾಗುತ್ತಾರೆ. ಲಕ್ಕಮ್ಮ ದೇವಿಯ ಹೊತ್ತು ಮೆರವಣಿಗೆಯ ಮೂಲಕ ಪಟ್ಟಣವನ್ನು ಪ್ರವೇಶ ಮಾಡುತ್ತಾರೆ.ಜಾತ್ರೆಯಲ್ಲಿ ಸಾಮೂಹಿಕವಾಗಿ ವನಬೋಜನ ಮಾಡುವುದರ ಮೂಲಕ  ಹಳೆಯ ಜಗಳ, ಮನಸ್ತಾಪಗಳನ್ನು ಮರೆತು ಒಂದಾಗುತ್ತಾರೆ. ಜಾತ್ರೆಯನ್ನು ಊರಾಚೆ ಹೋಗಿ ಮಾಡುವುದರಿಂದ ಸಾಂಕ್ರಾಮಿಕ ರೋಗ ಇತ್ಯಾದಿ ಅನಿಷ್ಠಗಳು ಬರುವುದಿಲ್ಲವೆಂದು ನಂಬುತ್ತಾರೆ.
ಒಟ್ಟಿನಲ್ಲಿ ವಸುದೈವ ಕುಟುಂಬಕಂ ಎನ್ನುವ ಮಾತನ್ನು ಆಚರಣೆಗೆ ತರುವ ಮೂಲಕ ಗುಳೆ ಲಕ್ಕಮ್ಮನ ಹೆಸರಿನಲ್ಲಿ ಒಂದಾಗಿರುವ ಚೋರುನೂರು ಗ್ರಾಮ ಬೇರೆ ಗ್ರಾಮಗಳಿಗೆ ಆದರ್ಶನವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ( ತುತಾ೵ಗಿ ಬರೆದಿರುವ ಕಾರಣ ಕಾಗುಣಿತ ಹಾಗೂ ವಾಕ್ಯ ರಚನೆ ಸರಿಯಾಗಿರದಿದ್ದರೆ ಸರಿಮಾಡಿಕೊಂಡು ಓದಿ)

Friday, October 3, 2014

ಮುಸ್ಲಿಂ ಪೂಜಾರಿ, ನೀವು ನೋಡಲೇಬೇಕಾದ ವಿಡಿಯೋ...!

ಜಾತಿ-ಧರ್ಮ ಅದು ಇದು ಅಂತ ಹೇಳಿ ನಾವೆಲ್ಲಾ ದಿನಕ್ಕೊಂದು ಜಗಳ ಹೊಡೆದಾಟಗಳಲ್ಲಿ ಭಾಗಿಯಾಗಿ ನೆಮ್ಮದಿಯ ಜೀವನವನ್ನು ಹಾಳು ಮಾಡಿಕೊಂಡಿದ್ದೇವೆ. ಆದರೆ ಇಲ್ಲೊಬ್ಬ ಮುಸ್ಲಿಂ ಯುವಕ ಹಿಂದು ದೇವತೆಯನ್ನು ಆರಾಧಿಸುವ  ಮೂಲಕ ನನಗೆ- ದರ್ಗಾ- ಹಾಗೂ ದುರ್ಗಾ ಎರಡು ಒಂದೇ ಎಂದು ಎನ್ನುವ ಮೂಲಕ  ಇತರರಿಗೆ ಮಾದರಿಯಾಗಿದ್ದಾರೆ. ಈಶ್ವರ -ಅಲ್ಲಾ  ತೇರೆನಾಮ ಎನ್ನುವಂತೆ ಹಿಂದು ದೇವರ ಆರ್ಶೀವಾದಕ್ಕೆ ಪಾತ್ರರಾಗಿರುವ ಅಬ್ದುಲ್ ರಜಾಕ್ ಈ ಮೂಲಕ ಜಿಹಾದ್ ಹೆಸರಲ್ಲಿ ರಕ್ತ ಪಿಪಾಸುಗಳಂತೆ ವರ್ತಿಸುವವರಿಗೆ ಹಾಗೂ ಜಾತಿ ಹೆಸರಲ್ಲಿ ವಿನಾಕಾರಣ ಸಮಾಜವನ್ನು ಹಾಳು ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಪಾಠವಾಗಿದ್ದಾರೆ.

ಬರಹ  ; ಪ್ರಶಾಂತ ರಾಜ ಗುರು 

Thursday, August 14, 2014

ನೀವು ಓದಲೇ  ಬೇಕಾದ ಬರಹ...

ಇದನ್ನು ನೀವು ಒಪ್ಪತ್ತಿರೋ ಬಿಡತೀರೋ ಗೊತ್ತಿಲ್ಲ ಆದ್ರೆ ನಾ ಒಂದು ವಿಷಯ  ಇಲ್ಲಿ ಹಂಚಿಕೊಳ್ಳಲೇಬೇಕು. ನಾವೆಲ್ಲರು ಇವತ್ತು ನಮ್ಮ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದೇವೆ. ಆದರೆ ಈ ಸಂಭ್ರಮ ನಿಜಕ್ಕೂ ಇದೇಯೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಕಾರಣ 1947 ರ ಮಧ್ಯರಾತ್ರಿ ಸಿಕ್ಕ ಸ್ವಾತಂತ್ರ್ಯ ಕೇವಲ ಬ್ರಿಟಿಷರು ತಮ್ಮ ಅಧಿಕಾರ ಬಿಟ್ಟು ಹೋದ ಸಮಯವೆಂದು ನನ್ನ ಭಾವನೆ. ಕಾರಣ ನೀವೆ ನೋಡಿ, ಇಂದಿಗೂ ಕೂಡ ನಮ್ಮ ಪ್ರಧಾನಿಗಳು ನಮ್ಮ ದೇಶದ ರಾಜಧಾನಿಯಲ್ಲಿ ನಮ್ಮ ಜನರ ನಡುವೆ ನಮ್ಮ ಜಾಗದಲ್ಲಿ ನಮ್ಮ ಭಾರತದ ತ್ರಿವರ್ಣೆ್  ಧ್ವಜ ಹಾರಿಸಬೇಕಾದರೆ ಸಾವಿರಾರು ಜನ ಪೊಲೀಸರು, ಸೈನಿಕರು ಇವರಿಗೆ ಭದ್ರತೆ ನೀಡಬೇಕು. 1947 ರಿಂದ 1950 ರವೆರೆಗೂ ಮಾತ್ರವೇ ನೆಹರು ಕಡಿಮೆ ಭದ್ರತೆಯಲ್ಲಿ ಧ್ವಜ ಹಾರಿಸಿದ್ದ ನೆನಪು. ಆದರೆ ಮುಂದಿನ ದಿನಗಳಲ್ಲಿ ಅವರು ಕೂಡ ಭದ್ರತೆ ಹೆಚ್ಚಿಸಿಕೊಂಡಿದ್ದರು. ನಮ್ಮ ನೆಲದಲ್ಲಿ ನಮ್ಮ ಪ್ರಧಾನಿಗೆ ವಿಶೇಷ ಭಧ್ರೆತೆ ಬೇಕಾದರೆ ಜನ ಸಾಮಾನ್ಯರ ಗತಿಯೇನು? ಪ್ರತಿ ದೀಪಾವಳಿ ಹಾಗೂ ಇನ್ನಿತರ ವಿಶೇಷ ಸಂದರ್ಭದಲ್ಲಿ ಸಹ ದೇಶದಾದ್ಯಂತ ಹೈ ಅಲರ್ಟ ಘೋಷಣೆ ಮಾಡ್ತಾರೆ, ಕಾರಣ ಮತ್ತದೆ ಉಗ್ರರ ಕಾಟ. 9/11 ದಾಳಿ ನಂತರ ಅಮೇರಿಕದ ಮೇಲೆ ಯಾವುದೇ ದೊಡ್ಡ ದಾಳಿಗಳು ನಡೆಯಲು ಸಾಧ್ಯವಾಗಲೇ ಇಲ್ಲ. ಕಾರಣ ಅಲ್ಲಿನ ವ್ಯವಸ್ಥೆ ಹಾಗೂ ಅಲ್ಲಿನ ಆಡಳಿತಗಾರರ ಮನಸ್ಥಿತಿ. ಆದರೆ ಮೂರು ಯುದ್ದಗಳು ಹಾಗೂ ದಿನನಿತ್ಯ ನಡೆಯುವ ಆಂತರಿಕ ದಾಳಿಗಳಿಂದಲೂ ಸಹ ನಾವು ಪಾಠ ಕಲಿಯದಿದ್ದರೆ ಹೇಗೆ ನೀವೆ ಹೇಳಿ. ? 26.11
ಮುಂಬೈ ದಾಳಿ ನಂತರ ಭದ್ರತೆ ಸುಧಾರಿಸಬಹುದೆಂಬ ಹಾಗೂ ನಂತರ ದಿನಗಳಲ್ಲಿ ಭಾರತ ಪಾಪಿ ಪಾಕಿಸ್ತಾನದ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಬಹುದೆಂಬ ನಂಬಿಕೆಯಿತ್ತು. ಆದರೆ ಆ ರೀತಿಯ ಯಾವುದೇ ಕ್ರಮಗಳು ನಡೆಯಲಿಲ್ಲ, ಇದರಿಂದಾಗಿ ಭಾರತದ ಧ್ವಜ ಹಾರಿಸಬೇಕಾದಗಲೂ ಸಹ ನಮ್ಮ ಪ್ರಧಾನಿಗಳಿಗೆ ವಿಶೇಷ ಭದ್ರತೆ ನೀಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. 

Sunday, July 27, 2014

ನೀವಾದರೂ ಬಾಯಿಬಿಡಿ…..!



ನೀವಾದರೂ ಬಾಯಿಬಿಡಿ…..!
ಬೆಳಗಾವಿ ಗಡಿ ಭಾಗದಲ್ಲಿ ಎಂಇಎಸ್ ಪುಂಡರು ಅಟ್ಟಹಾಸ ಮೆರೆಯುತ್ತಿದ್ದರೆ ಪೊಲೀಸರು ಕೈಲಾಗದ ಹೇಡಿಗಳಂತೆ ಹಾಗೂ ಜಿಲ್ಲಾಡಳಿತ ರೋಮ ಸಾಮ್ರಾಜ್ಯದ್ಯಂತೆ ಸುಮ್ಮನೆ ಕುಳಿತಿದೆ. ನೀವಾದರೂ ಬಾಯಿಬಿಡಿ..!
ಕನ್ನಡಿಗರ ದೇವಾಲಯದಂತಿದ್ದ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು ಸುಮ್ಮನೆ ಕುಳಿತಿರುವುದು ನಿಜಕ್ಕೂ ನಾಚಿಗೇಗೇಡಿನ ಸಂಗತಿ.  ವಿನಾಕಾರಣ ವಿವಾದಗಳನ್ನು ಹುಟ್ಟುಹಾಕುವ ಅನಂತಮೂರ್ತಿ , ಕೋಮುಸೌಹಾರ್ದ ಹೆಸರಲ್ಲಿ ಜಾತಿ ವಿಷ ಬೀಜ ಬಿತ್ತುವ ಗಿರೀಶ ಕಾರ್ನಾಡ  ಹಾಗೂ ಉತ್ತಮರು ಎಂದು ಕರೆಸಿಕೊಳ್ಳುವ ಬೆಳಗಾವಿ ಜಿಲ್ಲೆಯವರಾದ ಚಂದ್ರಶೇಖರ ಕಂಬಾರ ಎಲ್ಲಿ ಅಡಗಿದ್ದಾರೆ ಎನ್ನುವುದು ತಿಳಿಯದಾಗಿದೆ.
ಕನ್ನಡ ನೆಲ-ಜಲ-ಭಾಷಾ ರಕ್ಷಣೆಗೆ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ ಅಕ್ಷರಷಃ ಅನಾಥ ಸ್ಥಿತಿಯಲ್ಲಿದೆ, ಸದಾ ಬಾಯಲ್ಲಿ ಎಲೆ ಅಡಿಕೆ ಜಗಿಯುತ್ತಾ ಸಮ್ಮೇಳನ ಹೆಸರಲ್ಲಿ ಜಾತ್ರ ನಡೆಸುವ ಅಧ್ಯಕ್ಷ ಹಾಲಂಬಿಗೆ ಇನ್ನೂ ಬಾಯಲ್ಲಿನ ಕವಳ ಮುಗಿದ್ದಿಲ್ಲವೆಂದ ಕಾಣುತ್ತದೆ. ಇದು ಕೇವಲ ಆಕ್ರೋಶದ ಮಾತುಗಳಲ್ಲ. ಬದಲಾಗಿ ಇವರ ನಾಟಕ ನೋಡಿ ಬರೆದಿರುವ ವಿಮರ್ಷೆ.  ನಾಡಿನ ಜನರಿಂದ ಸನ್ಮಾನ ಸ್ವೀಕರಿಸುವ ಜ್ಞಾನಪೀಠ ಪುರಸ್ಕೃತರು ಹಾಗೂ ಸಾಹಿತಿಗಳು ಭಾಷಾ ಹಾಗೂ ಗಡಿ ವಿವಾದ ಬಂದಾಗ ಮನೆ ಸೇರುವುದನ್ನು ನೋಡಿದರೆ ಇವರಿಗಾಗಿಗೂ ಸಹ ಕನ್ನಡತನ ಉಳಿಯುವುದು ಬೇಕಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ನಾವು ಹಿಂದಿನ ಘಟನೆಗಳನ್ನು ಮರೆತಿದ್ದೇವೆ ಹಾಗೂ ಕಂಪ್ಯೂಟರ ಪರದೆಯ ಮೇಲೆ ನಾನಾ ಕೆಲಸಕ್ಕೆ ಬಾರದ ಕವನಗಳನ್ನು ಗೀಚುವ ಸೋಕಾಲ್ಡ ನವ ಯುಗದ ಸಾಹಿತಿಗಳಿಗೆ ಆ ಬಗ್ಗೆ ತಿಳುವಳಿಕೆ ನೀಡಿಲ್ಲ. ಏಕೀಕರಣ ಹಾಗೂ ಗೋಕಾಕ್ ಚಳುವಳಿಯನ್ನು ಒಮ್ಮೆ ನೆನೆಪಿಸಿಕೊಳ್ಳಬೇಕಿದೆ. ಏಕೀಕರಣದ ನಂತರ ಬಂದ ಗೋಕಾಕ್ ಚಳುವಳಿ ಆರಂಭದಲ್ಲಿ ಅಷ್ಟೊಂದು ಪ್ರಭಾವ ಶಾಲಿ ಅನಿಸಿರಲಿಲ್ಲ,.ಆದರೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಭೆ ಹೋರಾಟದ ಹಾದಿಯನ್ನು ಬಲಿಷ್ಠಗೊಳಿಸಿತು. ಚಳುವಳಿಗೆ ಮೇರು ನಟ ಡಾ. ರಾಜ್ ಎಂಟ್ರಿ ಹಾಗೂ ಅದಕ್ಕೆ ಅಂದಿನ ಸಾಹಿತಿಗಳ ಬೆಂಬಲ ಎಷ್ಟಿತ್ತೆಂದರೆ ಸ್ವತಃ ರಾಜ್ ಸಹ  ಅನೇಕ ಸಲ ಹೇಳಿಕೊಂಡಿದ್ದರು. ಅಂದು ನಡೆದ ಹೋರಾಟಗಳು ಕೇವಲ ಹಾರಾಟಕ್ಕೆ ಸೀಮಿತವಾಗಿರಲಿಲ್ಲ,.  ಬದಲಾಗಿ ನಾಡಿನ ರಕ್ಷಣೆಗೆ ಬದ್ಧ ಎಂಬುದನ್ನು ಎತ್ತಿ ತೋರಿಸಿದವು.
ಇನ್ನೂ ಇಂದಿನ ಹೋರಾಟಗಾರ ಎಂದು ಹೇಳಿಕೊಳ್ಳುವ ಕೆಲವರಿಗೆ ಇನ್ನೂ ಕೂಡ “ಹ “ ಓ”  ಕಾರಣಗಳನ್ನು ಹೇಳಿಕೊಡಬೇಕಾದ ಅನಿವಾರ್ಯತೆಯಿದ್ದು ಅವರಿಂದ ನಾಡಿನ ರಕ್ಷಣೆ ನೀರಿಕ್ಷಿಸುವುದು ಅಸಾಧ್ಯ. ಜತೆಗೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಸಚಿವ ಸತೀಶಜಾರಕಿಹೋಳಿ ಮಾಧ್ಯಮಗಳ ಮುಂದೆ ಮಾತನಾಡಿ, ಅಲ್ಲಿನ ಸಮಸ್ಯೆಯನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎನ್ನುವ ಮೂಲಕ ತಿಪ್ಪೆ ಸಾರಿಸುವ ಕೆಲಸ ಮಾಡುವುದರ ಜತೆಗೆ ನಾನು ಯಾರನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ ಹಾಗೂ ಇದು ರಾಜ್ಯದ ಸಮಸ್ಯೆಯಾಗಿದ್ದು ನನಗೂ ಅದಕೂ ಸಂಬಂಧವಿಲ್ಲ. ಹೋದರೆ ನಂದೇನು ಹೋಗುವುದಿಲ್ಲ ಕರ್ನಾಟಕದ  ಜಾಗ ಹೋಗುತ್ತದೆ ಎನ್ನುವ ಭಾವನೆ ಹೊಂದಿರುವುದು ನಿಜಕ್ಕೂ ಬೇಸರ ಮೂಡಿಸಿದೆ.
ಮೂರು ದಿನಗಳಿಂದ ಸದನದಲ್ಲಿ ಅರ್ಕಾವತಿ ಬಗ್ಗೆ ವಿನಾಕಾರಣ ಜಗಳ ಮಾಡುತ್ತಿರುವ ವಿಪಕ್ಷ ನಾಯಕರಿಗೆ ತಮ್ಮ ಪಕ್ಕದ ಜಿಲ್ಲೆಯ ಸಮಸ್ಯೆ ಬಗ್ಗೆ ಅರಿವಿಲ್ಲವಂತೆ, ಸಮಯ ಸಿಕ್ಕಾಗ ಮಾತನಾಡುತ್ತೇನೆ ಎನ್ನುವ ಮೂಲಕ ಅವರು ಕೂಡ ಮರಾಠಿಗರು ಹಾಗೂ ಶಿವಸೇನೆ ಯ ಓಟುಗಳ ಮೇಲೆ ಅವಲಂಬಿತನಾಗಿದ್ದು ಇದರಲ್ಲಿ ಕರ್ನಾಟಕದ ಹಿತ ಮಣ್ಣು ಪಾಲಾದರೂ ನಮಗೇನು ಚಿಂತೆಯಿಲ್ಲ ಎನ್ನುವ ರೀತಿಯಲ್ಲಿ ಮಾತಾಡಿರುವುದು ನಾಡಿನ ಜನತೆ ಗಮನಿಸಬೇಕಾದೆ.
ಬೆಳಗಾವಿ ಭಾಷಾ ಸಮಸ್ಯೆಯಿಂದ  ಹೊತ್ತಿಯುರಿತ್ತೊದ್ದರು, ಯಾವೋಬ್ಬ ಜನ ಪ್ರತನಿಧಿಗಳಾಗಲಿ ಸರ್ಕಾರದ ಪ್ರಮುಖ ಸ್ಥಳಗಳಲ್ಲಿ ಕುಳಿತಿರುವ ಜಿಲ್ಲೆಯ ಶಾಸಕರುಗಳಾಗಲಿ ಬಾಯಿಬಿಡದೆ ಇರುವುದು ನಿಜಕ್ಕೂ ನಾಚಿಗೆ ಗೇಡಿನ ಸಂಗತಿ.

Friday, December 27, 2013

ಈಡೆರದ ಆಸೆ : ಅಮರನಾದ ಪ್ರೇಮ

ನಿಜಕ್ಕೂ  ಈ ಪ್ರೇಮ ಕಥೆಯ ಕೊನೆಯ ಕಂತನ್ನೂ ಬರೆಯಲು ತುಂಬಾನೇ ಕಷ್ಟವಾಗುತ್ತಿದೆ.

ಸುಮಾರು ವರ್ಷಗಳ ಕಾಲ ಬಚ್ಚಿಟ್ಟಿದ್ದ ಪ್ರೇಮವನ್ನು ಹೇಳಿಕೊಂಡಿದ್ದ ನಾಯಕ ಪ್ರೇಮ ಹಾಗೂ ಅದನ್ನು ಕೇಳಿ ದುಃಖಿತಳಾಗದ್ದ ನಾಯಕಿ ರಮ್ಯಾ ಈಗ ಮತ್ತೆ ದೂರವಾಗುತ್ತಿದ್ದಾರೆ. ಕಾರಣ ಅವಳು ಗೃಹಿಣಿ. ಸಮಾಜದಲ್ಲಿ ಈ ರೀತಿಯ ಸಂಬಂಧಕ್ಕೆ ಯಾವುದೇ ಬೆಲೆ ಇರದು ಎಂದು ಅರಿತಿದ್ದ ಪ್ರೇಮ ಇಷ್ಟು ವರ್ಷಗಳಾದರೂ ಅದನ್ನು ಹೇಳಿರಲಿಲ್ಲ. ಆದರೆ ಅವಳು  ಒತ್ತಾಯಮಾಡಿದಳೆಂಬ ಕಾರಣಕ್ಕೆ ಪ್ರೀತಿಸುತ್ತಿರುವ  ವಿಷಯ ಹೇಳಿದ ಪ್ರೇಮನಿಗೆ ಒಳಗೊಳಗೆ ಅಪರಾಧಿ ಮನೋಭಾವನೆ ಕಾಡಹತ್ತಿತು. ಈ ನಡುವೆ ಅವಳಿಗೆ ಸಂದೇಶ ಕಳುಹಿಸಿದ ಪ್ರೇಮನಿಗೆ ಬಂದ  ಉತ್ತರ ಅವನನ್ನು  ಇನ್ನಷ್ಟು ಗಾಸಿ ಘೋಳಿಸಿದ್ದವು. ಸ್ನೇಹಿತರಿದ್ದಾಗಿನಿಂದ ಹಿಡಿದು ಇಲ್ಲಿಯವರೆಗೂ ಎಲ್ಲಿಯೂ ಸಹ ಎಂದು ಆತ ಅವಳ ಮೇಲೆ ಸಿಟ್ಟು ಮಾಡಿಕೊಂಡವನಲ್ಲ.  ಎಲ್ಲೇ ಮೀರಿದವನೂ ಅಲ್ಲ. ಅವಳನ್ನು ದೇವತೆಯಂತೆ ಪೂಜಿಸುತ್ತಿದ್ದ. ಅವಳನ್ನು ಅಪ್ಪಿ ತಪ್ಪಿಯೂ ಕೆಟ್ಟ ಭಾವನೆಯಿಂದ ಮುಟ್ಟಿದವನು ಅಲ್ಲ. ಅವಳು ಸಹ  ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಳು. ಅವನನ್ನು ಪ್ರೀತಿಸುತ್ತಿದ್ದರೂ ಸಹ ಅವಳು ಅವನ ಮುಂದೆ ಎಂದಿಗೂ ಆ ರೀತಿಯ ನಡುವಳಿಕೆ ತೋರಿರಲಿಲ್ಲ. ಕಾರಣ ಮತ್ತದೇ ಸ್ನೇಹ. ಇಷ್ಟು ಗಾಡವಾಗಿದ್ದ ಸ್ನೇಹ ಪ್ರೇಮಕ್ಕೆ ತಿರುಗಿದ್ದರೂ ಅದನ್ನು ವ್ಯಕ್ತಪಡಿಸಿದ  ಇಬ್ಬರೂ ಈಗ ಕಣ್ಣಿರಿನಲ್ಲಿ ಕೈ  ತೊಳಯುವಂತಾಗಿತ್ತು. ಆದರೆ ಇದನ್ನೆಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಇತ್ತು. ಆದರೆ  ನಾಯಕ ಪ್ರೇಮ ಮಾತ್ರ ಮನೆಯಲ್ಲಿ ಮದುವೆ ಮಾತು ಎತ್ತಿದರೆ ಸಾಕು ಉರಿದು ಬೀಳುತ್ತಿದ್ದ. ಅವನನ್ನು ಇಷ್ಟಪಟ್ಟಿದ್ದ ಹಲವಾರು ಹುಡುಗಿಯರು ಅವನೆದರು ಮಂಡಿಯೂರಿ ಕುಳಿತರು ಅವನು ಜಪ್ಪಯ್ಯ  ಎನ್ನಲಿಲ್ಲ. ಅದರಲ್ಲೂ ಒಂದು ಹುಡುಗಿಯಂತೂ ಆತ್ಮಹತ್ಯೆಗೆ ಯತ್ನಿಸಿದ್ದರೇ ಇನ್ನೋಬ್ಬಳು ತನ್ನ ಸರ್ವಸ್ವವನ್ನು ಈತನಿಗೆ ಧಾರೆ ಎರೆಯಲು ಕಾತುರಳಾಗಿದ್ದಳು ಆದರೂಸಹ ಪ್ರೇಮ ಮಾತ್ರ ಅದ್ಯಾವುದಕ್ಕೂ ಬೆಲೆ ನೀಡದೆ ತನ್ನ ಗುಪ್ತ ಪ್ರೇಯಸಿ ರಮ್ಯಳನ್ನು ಪ್ರೀತಿಸುತ್ತಿದ್ದ.
ಈ ನಡುವೆ ಗೃಹಿಣಿಯಾಗಿದ್ದ ರಮ್ಯಾ ಆಗೊಂದು ಈಗೊಂದು ಸಂದೇಶಗಳನ್ನು ಬಿಟ್ಟರೆ ಎಂದೂ ಸಹ ಅವನ ಜತೆ ಮಾತನಾಡುವುದಾಗಲಿ ಭೇಟಿ ಮಾಡುವುದಾಗಲಿ ಮಾಡಲೇಯಿಲ್ಲ. ಅವಳ ಸ್ಥಿತಿಯನ್ನು ಅರಿತಿದ್ದ ಪ್ರೇಮ ಸಹ ತನ್ನ ಪ್ರೇಮವನ್ನು ಬಿಟ್ಟುಕೊಟ್ಟಿದ್ದ.  ಆದರೆ ಅವನ ಮನಸ್ಸಿನಲ್ಲಿ ಅವಳು ಮಾತ್ರ ಅಚ್ಚಳಿಯದೆ ಉಳಿದು ಬಿಟ್ಟಿದ್ದಳು.  ಜತೆಗೆ ತನ್ನ ವ್ಯವಹಾರದಲ್ಲಿ ಲಾಸ್ ಮಾಡಿಕೊಂಡ ಪ್ರೇಮ ಮತ್ತಷ್ಟು ಕೃಷನಾದ. ಇದರಿಂದಾಗಿ ಅವನ ಆರೋಗ್ಯ ಸಹ ಹದಗೆಟ್ಟಿತು. ಆಗ ಅವನ ಮನೆಯವರಿಗೆ ಚಿಂತೆ ಕಾಡಲಾರಂಭಿಸಿತು. ಅವನಿಗೆ ಇದದ್ದು ಒಂದು ಆಸೆ ಅದು ರಮ್ಯಾಳನ್ನು ಲಾಂಗ್ ಡ್ರೈವಗೆ ಕರೆದುಕೊಂಡು ಹೋಗುವುದು, ಅಲ್ಲಿ ಅವನ ಕೈಯಿಂದ ಅವಳಿಗೆ ಊಟ ಮಾಡಿಸುವುದು ಅಷ್ಟೇ. ಆದರೆ ಕೊನೆಗೂ ಅದಕ್ಕೆ ಅವಕಾಶ ಸಿಗಲೇ ಯಿಲ್ಲ. ಇದರಿಂದಾಗಿ ಅವನ ತನ್ನ ಜೀವನವನ್ನೇ ಕೊನೆಗೊಳಿಸಲು ಉದ್ದೇಶಿಸಿದ. ಒಂದು ದಿನ ಮುಂಜಾನೆಯ ಸಮಯದಲ್ಲಿ ಹೊರಟ ಪ್ರೇಮ ಮತ್ತೆ ತಿರುಗಿ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ. ಅಂದು ಮುಂಜಾನೆ ಎದ್ದ ಪ್ರೇಮ ತನ್ನ ನೆಚ್ಚಿನ ಸೂಟ್ ಧರಿಸಿ ಟಿಪ್ ಟಾಪ್ ಆಗಿ ಹೋರಟ, ಕಾಲು ನಡಿಗೆಯಲ್ಲಿ ಸುಮಾರು ದೂರ ನಡೆದ ಮೇಲೆ ಅಲ್ಲಿ ಅವನಿಗೆ ದೂರದ ಬೆಟ್ಟವೊಂದು ಕಾಣಿಸಿತು. ಬೆಟ್ಗದ ತುದಿಗೇರಿದ ಆತ   ಇನ್ನೇನು ಸಾಯಬೇಕು ಎನ್ನುವ ಸಂದರ್ಭದಲ್ಲಿ  ದಿವ್ಯವಾಣಿಯೊಂದು ಕೇಳಿದ ಅನುಭವವಾಯಿತು. ಹಿಂದಿರುಗಿ ನೋಡಿದ ಪ್ರೇಮನಿಗೆ ಸನ್ಯಾಸಿಗಳೊಬ್ಬರು ಆತನನ್ನು ನೋಡುತ್ತಿರುವುದು ಕಾಣಿಸಿತು. ಆಗ ಅವರ ಮಾರ್ಗದರ್ಶನ ಪಡೆದ ಪ್ರೇಮ ಮುಂದೆ ಅವರನ್ನು ಹಿಂಬಾಲಿಸಿದ. ಅವರು ಅವನಲ್ಲಿನ ಆಧ್ಯಾತ್ಮದ ಹಸಿವನ್ನು ಗಮನಿಸಿ ಆತನಿಗೆ ದೀಕ್ಷೆ ನೀಡಿದರು. ಆಗ  ಪ್ರೇಮನಾಗಿದ್ದವ ಬದಲಾಗಿ ಸ್ವಾಮೀ ಪ್ರೇಮಾನಂದ ಗೂರುಜಿಯಾಗಿ ಬದಲಾದ. ಹಿಂದಿನ ಎಲ್ಲ ಘಟನೆಗಳನ್ನು ,ಮರೆತು ಸಮಾಜಕ್ಕೆ ದಾರಿ ದೀಪವಾದ. ಆದರೆ ಅವನನ್ನು ಈ ಹಂತಕ್ಕೆ ತಂದ ರಮ್ಯಾ ಮಾತ್ರ  ಅಲ್ಲೇ ಉಳಿದಳು. ಆದರೆ ಅವನ ಈ ಸ್ಥಿತಿಗೆ ಕಾರಣವಾಗಿದ್ದೂ ಏನು ಎನ್ನುವುದು ಮಾತ್ರ ಯಾರಿಗೂ ತಿಳಿಯಲಿಲ್ಲ. ಕಾರಣ ಅವನು ಎಲ್ಲಿಯೂ ಸಹ ಅಪ್ಪಿ-ತಪ್ಪಿ ಬಾಯಿಬಿಡಲಿಲ್ಲ.  ಈ ಪ್ರೇಮದಲ್ಲಿ ಅವನ ಆಸೆಗಳು ಈಡೆರಲಿಲ್ಲ ಆದರೆ ಪ್ರೇಮನ ನಿಷ್ಕಲ್ಮಶ ಪ್ರೇಮ -ಪ್ರೀತಿ-ಪ್ಯಾರ- ಇಷ್ಕ -ಮೋಹಬ್ಬತ್ ಮಾತ್ರ ಅಮರವಾಯಿತು.

"ಪ್ರೇಮ " ಪತ್ರ : ಹೇಳಲಾಗದ ಪ್ರೀತಿಯ ಪತ್ರ

ಸ್ನೇಹಿತರೇ ಪ್ರೇಮ ಮತ್ತು  ರಮ್ಯಳ ಪ್ರೇಮದ ವಿಷಯ ನಿಮಗೆ ಗೊತ್ತಿರುವಂತೆ ಒಂದು ಹಂತಕ್ಕೆ ಬಂದು ನಿಂತಿದೆ. ಮದುವೆಯಾಗಿರುವ ರಮ್ಯಳನ್ನು ಪ್ರೀತಿಸುವುದು ತಪ್ಪು ಎಂದು ಗೊತ್ತಿದ್ದರೂ ಸಹ ಪ್ರೇಮ ಮಾತ್ರ ತನ್ನ ಪ್ರೇಮಕ್ಕೆ ಯಾವುದೇ ಕಪ್ಪು ಚುಕ್ಕಯಾಗದಂತೆ ನೋಡಿಕೊಂಡಿದ್ದಾನೆ. ಅವಳು ಸಹ ತಮ್ಮ ಸ್ನೇಹಕ್ಕೆ ಬೆಲೆ ನೀಡಿ ಪ್ರೇಮವನ್ನು ಹಿಡಿದಿಟ್ಟಿಕೊಂಡಿದ್ದಳು. ಆದರೆ ಈಗ ಅವಳೇ ಅವನ ಬಾಯಿ ಬಿಡಿಸುವ ಮೂಲಕ ಅವನು ಕಣ್ಣಿರಿಡುವಂತೆ ಮಾಡಿದ್ದಾಳೆ. ಇತ್ತ ಪ್ರೇಮ ತಾನು ಪ್ರೀತಿಸಿದ ಹುಡುಗಿ ನೀನೆ ಎಂದು ಹೇಳುವ ಮೂಲಕ ಅವಳಿಗೆ ತನ್ನ ಪ್ರೀತಿಯನ್ನು ವಿವರಿಸಿದ್ದಾನೆ. ಆದರೆ ಅವನಲ್ಲಿ ಈಗ ಒಂದು ರೀತಿಯ ಗೀಲ್ಟ ಕಾಡಲು ಆರಂಭಿಸಿದೆ.  

ಇದು ಒತ್ತಟ್ಟಿಗಿರಲಿ ಸ್ನೇಹಿತರೇ, ಈಗ  ಒಂದು ವಿಷಯ ಹೇಳಲೇಬೇಕು ಅದೇನಪ್ಪ ಅಂದ್ರೆ, ಪ್ರೇಮ ನೂ ಕೂಡಾ ತನ್ನ ಹುಡುಗಿಗೆ ಅವಳ ಮದುವೆಗೆ ಮುಂಚೆ ಒಂದು ಪ್ರೇಮ ಪತ್ರ ಬರೆದಿದ್ದ.  

" ಹಾಯ್ ಚಿನ್ನ, ಹೇಗಿದಿಯಾ, ಎಷ್ಟು ದಿನ ಆಯ್ತು ನಿನ್ನ ನೋಡಿ, ಆ ನಿನ್ನ ನಗು,  ಆ ನಿನ್ನ ಇಳಿಬಿಟ್ಟ ಕೂದಲೂ ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಶಾಂತತೆ, ಏನೇ ಆದರೂ ಯಾರಿಗೂ ಹೇಳದೇ ಏನನ್ನೂ ತೋರಿಸಿ ಕೋಡದೆ ಇರುವ  ನಿನ್ನ  ಈ ಮಾರ್ಗದರ್ಶಕ ವ್ಯಕ್ತಿತ್ವಕ್ಕೆ  ಕಣೇ ನಾನು ಸೋತು ಹೋಗಿದ್ದು,
ನಿನ್ನಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ ಸ್ನೇಹ ಶ್ರೀಗಂಧದ ಪರಿಮಳದಂತೆ. ಆ ಸವಿನೆನಪು ನನ್ನ ಬದುಕನ್ನು ಹಸಿರಾಗಿಸಿದೆ. ಅಂದು ನಿನ್ನ ನೋಡಿದ ನಾನು ಇಂದಿನವರೆಗೂ ಆ ಮುಖವನ್ನು ಮರೆಯಲು ಸಾಧ್ಯವಾಗಿಲ್ಲ. ನಿನ್ನ ಪ್ರತಿಯೊಂದು ಮಾತು ಕ(ವಿ)ತೆ ಇಂದಿಗೂ ನನ್ನ ಕಿವಿಯಲ್ಲಿ ಹಾಗೇ ಇದೆ. ಎರಡು ವರ್ಷಗಳ ನಂತರ ಆದರೂ ನೀನು ನನ್ನ ಮರೆತಿಲ್ಲ. ಅದು ನನಗೆ ಎಷ್ಟು ಖುಷಿ ನೀಡಿದೆ ಗೊತ್ತಾ ಚಿನ್ನ. 
""ನೀನು ಬಂದ ಮೇಲೆ ಮೇಲೆ ತಾನೇ ಇಷ್ಟೂ ಚಂದ  ಈ ಬಾಳು
ನೀನೇ ತಾನೆ ಹೇಳೆ ಕೋಟ್ಟೆ ಪ್ರೀತಿಸಲು'' 
ನಿಜವಾಗ್ಲು ನಿನು ಮರಳಿ ಪೋನ ಮಾಡಿದ ದಿನಾ ನಾನು ರಾತ್ರಿಯಲ್ಲ ನಿದ್ದೆನೇ ಮಾಡ್ಲಿಲ್ಲ. ಯಾಕೇ ಗೊತ್ತಾ ನಿನ್ನ ಸ್ನೇಹನೇ ಅಂತದ್ದೂ, ಆದರೆ ಮುಂದೆ ನೀನು ಯಾರನ್ನೋ ಪ್ರೀತಿಸ್ತೀನಿ ಅಂತ ಹೇಳಿದಾಗ ಆದ ಗಾಯ  ಇನ್ನೂ ಆರಿಲ್ಲ.  ಈಗಲೂ ಕಾಲ ಮಿಂಚಿಲ್ಲ ಚಿನ್ನು ನಾನು ನಿನ್ನ ತುಂಬ ಪ್ರೀತಿಸ್ತೀನಿ. ಎಷ್ಟೋ ಬಾರಿ ನಿನ್ನ ಹತ್ರ ಹೇಳಬೇಕು ಅಂದ್ಕೋಂಡೆ ಆದ್ರೆ ಹೇಳಕೋ ಆಗ್ಲಿಲ್ಲ.  ಬೇರೆಯಾರನ್ನೋ ಮದುವೆ ಮಾಡ್ಕೊಂಡು ಬಾಳೋದಕ್ಕಿನ ನಿನ್ನ ಮದುವೆಯಾದ್ರೆ ಉತ್ತಮ ಅಂತ ನನ್ನ ಅಭಿಪ್ರಾಯ. ನಿನ್ನ ಅಭಿಪ್ರಾಯನಾ ಬೇಗ ತಿಳಿಸು

""ಮಿಂಚಾಗಿ ನೀನು ಬರಲು ನಿಂತಲಿಯೇ ಮಳೆಗಾಲ
ಬೆಚ್ಚಗೆ ನೀ ಜತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನಲ್ಲೇ ನನಗೆ ಉಳಿಗಾಲ..  

ವಿರಹದ ಬೇಗೆಯಲ್ಲಿ ಬೇಯುತ್ತಿರುವ ನನ್ನಗೆ ಒಪ್ಪಿಗೆ ಸೂಚಿಸುವ ಮೂಲಕ ಪ್ರೀತಿಯ ಮಹಲ್ ಕಟ್ಟುತ್ತಿಯೋ ಅಥವಾ ನಿರಾಕರಿಸಿ ನಮ್ಮ ಪ್ರೀತಿಗೆ ಗೋರಿ ಕಟ್ಟುತ್ತಿಯೋ ನಿನಗೆ ಬಿಟ್ಟಿದ್ದು..

( ಓದುಗರೆ ಈ ಪ್ರೀತಿ ಹೇಗ ಮುಂದುವರಿತು ರಮ್ಯಳಾ ಮದುವೆ ಮುಂಚೆ ಅವರ ಸ್ನೇಹ ಹೇಗಿತ್ತು ಎನ್ನುವ ಇನ್ನೂ ಕೆಲವು ಕೂತುಹಲಕಾರಿ ಘಟನೆಯೊಂದಿಗೆ ಮತ್ತೆ ಬೇಟಿಯಾಗೋಣ) 




Sunday, December 22, 2013

ಒಂದು ಸಣ್ಣ ಪ್ರೇಮ ಕಥೆ

ಅದೊಂದು ಊರು ಅಲ್ಲಿನ ಒಂದು ಹುಡುಗ (ಕಥಾ ನಾಯಕ ಪ್ರೇಮ) ನಿಗೂ ದೂರದ ಊರಿನ ಹುಡುಗಿ( ಕಥಾ ನಾಯಕಿ ರಮ್ಯ)ಗೂ ಪರಿಚಯ ಆಯ್ತು. ಆದರೆ ನಂತರದ ದಿನಗಳಲ್ಲಿ ಆ ಹುಡುಗ ಆ ಹುಡುಗಿ ಭೇಟಿ ಆಗಿರಲಿಲ್ಲ. ಆದರೆ ಸುಮಾರು ವರ್ಷಗಳ ನಂತರ  ಒಂದು ಮದುವೆ ಇವರಿಬ್ಬರ ಅನನ್ಯ ಸ್ನೇಹಕ್ಕೆ ವೇದಿಕ ಆಗುತ್ತೆ. ಅಲ್ಲಿಂದ ಮುಂದೆ ಗಾಡವಾಗುತ್ತಾ ಬಂದ ಸ್ನೇಹ ಯಾವತ್ತೂ ಹಳಿ ತಪ್ಪಲಿಲ್ಲ   ಎಲ್ಲೇ ಮೀರಲಿಲ್ಲ.  ಆ ವೇಳೆಗೆ ಆಗಲೇ ರಮ್ಯಾ ತಾನು  ಒಂದು ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ ನನಗೆ ನೀನು ನನಗೆ ಸಹಾಯ ಮಾಡಬೇಕೆಂದು ಆ ಪ್ರೇಮನಲ್ಲಿ ಕೇಳ್ತಾಳೆ. ಆಯ್ತು ಎಂದ ಪ್ರೇಮ ಅವಳೆಡೆಗೆ ಧಾವಿಸುತ್ತಾನೆ. ಆದರೆ ಆ ವೇಳೆಗಾಗಲೇ ಇದನ್ನು ಅರಿತಿದ್ದ ರಮ್ಯಾಳ ತಂದೆ ಅವಳನ್ನು ಕಲಿಕೆಯನ್ನು ಬಿಡಿಸಿ ರಾಜಧಾನಿಯಿಂದ ಮನೆಯಲ್ಲಿ  ಇಟ್ಟುಕೊಂಡಿರುತ್ತಾನೆ.  ಇದನ್ನು ಕಂಡ ಕಥಾ ನಾಯಕ ಪ್ರೇಮ ಬಹಳಷ್ಟು ನೊಂದುಕೊಳ್ಳುತ್ತಾನೆ.

ಎರಡು ವರ್ಷಗಳ ನಂತರ :  ಇದೆನಪ್ಪಾ ಧೀಡಿರ ಅಂತ ಎರಡು ವರ್ಷಾ ಆಯ್ತಾ ಅಂತ ಹುಬ್ಬೇರಿಸಬೇಡಿ. ಕಾರಣ ಈ ಎರಡು ವರ್ಷ  ಪ್ರೇಮನಿಗೂ ಹಾಗೂ ರಮ್ಯಳಿಗೂ ಯಾವುದೇ ರೀತಿಯ ಸಂವಹನ ನಡೆದಿರುವುದಿಲ್ಲ. ಕಾರಣ ಅವಳು ಏನನ್ನೋ ಸಾಧಿಸುವ ನಿಟ್ಟಿನಲ್ಲಿ ಹಾಗೂ  ಪ್ರೇಮ ಸಹ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆದಿರ್ತಾರೆ.  ಎರಡು ವರ್ಷಗಳ ನಂತರ ಆಕೆಗೆ ತನ್ನ ಆತ್ಮೀಯ ಸ್ನೇಹಿತನ ನೆನಪಾಗುತ್ತೆ.  ಅವಳು ಒಂದು ದಿನ ಅನುಮಾನದಿಂದಲೇ ಅವನ ಹಳೇ ನಂಬರಿಗೆ ಪೋನ್ ಮಾಡ್ತಾಳೆ. ಅವನು ಯಾರದೋ ನಂಬರ  ಎಂದು ಸುಮ್ಮನಾಗುತ್ತಾನೆ. ಆಗ ಅವನಿಗೆ ಸಂದೇಶವೊಂದು ಬರುತ್ತೇ. ನಾನು ರಮ್ಯ ಕಣೋ ಹೇಗಿದಿಯಾ. ನಾನು ನಿನ್ನ ಜತೆ ಮಾತಡಬೇಕು ಅಂತಾಳೆ. ಆಗ ಅವನು ಆಯ್ತು ಆದ್ರೆ ಈಗ ಬೇಡ ರಾತ್ರಿ 12 ಮೇಲೆ ಮಾಡು ಅಂತಾನೆ.
5 ಗಂಟೆಗಳ ಕಾಲ ಸುಧಿರ್ಘ ಮಾತು : ಎರಡು ವರ್ಷಗಳ ನಂತರ ಮಾತಿಗಿಳಿದ ರಮ್ಯ ಬರೋಬ್ಬರಿ 2.30 ಗಂಟೆಗೂ ಹೆಚ್ಚು ಕಾಲ ಮಾತಾಡ್ತಾಳೆ. ಆಗ ಕರೆನ್ಸಿ ಖಾಲಿ ಆಗುತ್ತೇ. ಮತ್ತೆ ಈತ ಅವಳಿಗೆ ಪೋನ್ ಮಾಡ್ತಾನೆ. ಅವನಿಗೋ ಖುಷಿಯೋ ಖುಷಿ ಕಾರಣ ಅವಳು ಎಂದರೆ ಅದೇನೋ ಅವನಿಗೆ ತುಂಬ  ಇಷ್ಟ. ಇಲ್ಲಿನ ಸ್ನೇಹಕ್ಕೆ ಯಾವುದೇ ರೀತಿಯ ಬಣ್ಣವಿರಲಿಲ್ಲ ಅದೊಂದು ಸುಂದರ ಅನುಬಂಧವಷ್ಟೇ. ಹೀಗೆ ಬೆಳಗಿನವರೆಗೂ ಎರಡು ವರ್ಷಗಳ ಮಾತಿನ ಬರ ನೀಗಿಸಿಕೊಂಡು ಸ್ನೇಹಿತರು ಮತ್ತೆ ಹಳೆಯ ದಿನಗಳಂತೆ ಒಂದಾಗಿರುತ್ತಾರೆ.
ಮತ್ತೆ ರಮ್ಯಳ ಪ್ರೇಮಾಯಣ : ಈ ನಡುವೆ ತನ್ನ ಊರಿನ ಪ್ರಸಿದ್ದ ಜಾತ್ರೆಗೆ ಸ್ನೇಹಿತನನ್ನು ಕರೆಸಿಕೊಳ್ಳುವ ರಮ್ಯ ಅವನೊಂದಿಗೆ ಹಾಗೂ ಇತರೇ ಸ್ನೇಹಿತರೊಂದಿಗೆ ಮೂರು ದಿನ ಅಲ್ಲಿ ಇಲ್ಲಿ ಸುತ್ತಾಡುತ್ತಾಳೆ.   ಜಾತ್ರೆ ಮುಗಿದು ಪ್ರೇಮ ತನ್ನ ಸ್ವಂತ  ಊರಿಗೆ ಬಂದಿದ್ದೇ ತಡ ಅವನ ಜತೆ ಮಾತಿಗಿಳಿದ ರಮ್ಯ ನಾನು ನನ್ನ ಅತ್ತೆ ಮಗನನ್ನು ಪ್ರೀತಿಸುತ್ತಿರುವುದಾಗಿ ತಿಳಿಸುತ್ತಾಳೆ. ಇದನ್ನು ಅರಿತ  ಪ್ರೇಮ ಮದುವೆಗೆ ಏನು ಸಮಸ್ಯೆ ಎಂದು ಕೇಳುತ್ತಾನೆ. ಆಗ ರಮ್ಯ ಮೊದಲು ನನ್ನನ್ನು ಪ್ರೀತಿಸುತ್ತೀದ್ದ ನನ್ನ ಅತ್ತೆ ಮಗ ನಾನು ಆಡಿದ ಒಂದು ಮಾತಿನಿಂದ ಬೇಸರಗೊಂಡು ನನ್ನನ್ನು ದೂರ ಮಾಡಿದ್ದು ನನಗೆ ದಿಕ್ಕು ತೋಚದಂತಾಗಿದೆ ಹೇಗಾದರೂ ಮಾಡಿ ಅವನ ಮನವೊಲಿಸಬೇಕಿದೆ ಎಂದು ಹೇಳುತ್ತಾಳೆ. ಆಯಿತು ಎಂದ ಪ್ರೇಮ ತನಗೆ ಗೋತ್ತಿರುವ ಜ್ಯೋತಿಷಿಗಳು ಹಾಗೂ ವಿದ್ವಾಂಸರ ಬಳಿ ಇಬ್ಬರ ಪೋಟೋಗಳನ್ನು ಹಾಗೂ ಜಾತಕಗಳನ್ನು ತೋರಿಸಿ ಇವರ ಮದುವೆಯಾಗುವಂತೆ ಮಾಡಿ ಎಂದು ಬೇಡುತ್ತಾನೆ. ಜತೆಗೆ ತನಗೆ ನಂಬಿಕೆಯಿದ್ದ ದೇವರಲ್ಲಿ ಪ್ರಾರ್ಥಿಸಿ ಅವರು ಒಂದಾಗುವಂತೆ ಮಾಡಿ ಎಂದು ಬೇಡಿಕೊಳ್ಳುತ್ತಾನೆ.
ಆದರೆ ಪಟ್ಟು ಸಡಿಲಿಸದ ರಮ್ಯಾಳ ಅತ್ತೆ ಮಗ ಅವಳನ್ನು ಮದುವೆಯಾಗಲಾರೆ ಎಂದು ಹೇಳುತ್ತಾನೆ. ಇದರಿಂದ ಜರ್ಜಿತಳಾದ ರಮ್ಯಳನ್ನು ಸಂತೈಸಿದ ಪ್ರೇಮ ಅವಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾನೆ. ಈ ನಡುವೆ ಅವನಿಗೆ ಗೊತ್ತಿಲ್ಲದಂತೆ ರಮ್ಯಳನ್ನು ಪ್ರೀತಿಸ ತೊಡಗುವ ಪ್ರೇಮ ಆ ವಿಷಯವನ್ನು ಅವಳಿಗೆ ತಿಳಿಸುವುದಿಲ್ಲ ಕಾರಣ ಅವಳು ಒಪ್ಪದಿದ್ದರೇ ಎನ್ನುವ ಭಯ ಅವನಿಗೆ.
ಅನಟೋಲ್ಡ ಲವ್ : ನಿಜಕ್ಕೂ ಈ ಪ್ರೇಮ ಕಥೆ ಶುರುವಾಗುವುದೇ ಇಲ್ಲಿ. ಪ್ರೇಮನ ಮಾತು, ಕೃತಿ, ಅವನ ನೀಡಿದ ಬೆಂಬಲದಿಂದ ಪ್ರಭಾವಿತಳಾದ ರಮ್ಯ ಸಹ ಅವನನ್ನು ಪ್ರೀತಿಸತೊಡಗುತ್ತಾಳೆ. ಆದರೆ ಅವಳು ಸಹ  ಬಾಯಿ ಬಿಡುವುದಿಲ್ಲ. ಹೀಗೆ ದಿನ ಕಳೆದಂತೆ ಮನೆಯಲ್ಲಿ ರಮ್ಯಳಿಗೆ ಬೇರೆ ಕಡೆ ಗಂಡು ನೋಡಲು ಪ್ರಾರಂಭಿಸುತ್ತಾರೆ. ಈ ವಿಷಯ ಪ್ರೇಮನಿಗೂ ಗೊತ್ತಾಗುತ್ತದೆ ಆಗಲೂ ಸಹ ಅವನು ಬಾಯಿ ಬಿಡುವುದಿಲ್ಲ. ಕಾರಣ ಮತ್ತೇ ಅದೇ ಅವಳು ದೂರವಾದರೆ, ಅವಳು ಸಹ ಅವನಲ್ಲಿ ಈ ವಿಷಯ ಹೇಳುವುದಿಲ್ಲ. ದಿನಗಳು ಹೀಗೆ ಸಾಗಿರುವಾಗ ಒಂದು ಹುಡುಗನ ಪೋಟೋವನ್ನು ಹಾಗೂ ಜಾತಕವನ್ನು ಪ್ರೇಮನಿಗೆ ಮೇಲ್ ಮಾಡುವ ರಮ್ಯ  ಇವನನ್ನು ನಮ್ಮ ಮನೆಯವರೆಲ್ಲರೂ ಒಪ್ಪಿದ್ದು ನೀನು ಒಪ್ಪಿಗೆ ಸೂಚಿಸಿದರೆ ಹಾಗೂ ನನ್ನ ಜಾತಕದ ಜತೆ ಹೊಂದಾಣಿಕೆ ಯಾಗುತ್ತದೆ ಎಂದರೆ ನಾನು ಮದುವೆಯಾಗಲು ಸಿದ್ಧ ಎಂದು ತಿಳಿಸುತ್ತಾಳೆ. ಇದರಿಂದ ಬಹುವಾಗಿ ನೊಂದುಕೊಂಡ ಪ್ರೇಮ ಆಯಿತು ಎಂದು ತನ್ನ ಸ್ನೇಹಕ್ಕಾಗಿ ಪ್ರೀತಿಯನ್ನು ಬಿಟ್ಟುಕೊಡಲು ಒಪ್ಪಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾನೆ.
 ಮುಂದೆ ಮದುವೆಗೆ ಆಮಂತ್ರಣ ಬಂದಾಗ ಹೃದಯ ಚೂರಾದರೂ ಅವಳ ಸಂತಸದಲ್ಲಿ ತನ್ನನ್ನು ತಾನು ಸಂತೈಸಿಕೊಂಡ ಪ್ರೇಮ ಮದುವೆಗೆ ಹೋಗಿ ವಧುವರರಿಗೆ ಶುಭ ಕೋರುತ್ತಾನೆ. ಮದುವೆಯಾಗಿ ಸುಮಾರು ತಿಂಗಳು ಕಳೆದ ಮೇಲೇ ಏಕಾಏಕಿ ಪೋನ್ ಮಾಡುವ ರಮ್ಯ ಗಳಗಳನೇ ಅಳಲು ಶುರು ಮಾಡುತ್ತಾಳೆ. ಆಗ ಪ್ರೇಮ ಕಾರಣವೆನೆಂದು ಕೇಳಲು ಗಂಡ ವಿನಾಕಾರಣ ಅನುಮಾನ ಪಡುತ್ತಿದ್ದು ನನಗೆ ಜೀವನವೇ ಬೇಸರವಾಗಿದೆ ಎಂದು ದುಖಃ ಹಂಚಿಕೊಳ್ಳುತ್ತಾಳೆ.ಆಗ ಮತ್ತೆ ಅವಳಿಗೆ ಸಾಂತ್ವಾನ ನೀಡಿದ ಪ್ರೇಮ, ಗೊತ್ತಿರುವ ಜ್ಯೋತಿಷಿಗಳು ಹಾಗೂ ದೇವರ ಮೊರೆ ಹೋಗಿ ಅವರಿಬ್ಬರು ಚನ್ನಾಗಿರಲಿ ಎಂದು ಬೇಡಿಕೊಳ್ಳುತ್ತಾನೆ.
ಮಗುವಿನ ಸಂಭ್ರಮ : ನಂತರ ಗಂಡ ಹೆಂಡತಿಯ ನಡುವೆ ಇದ್ದ ಕಂದಕ ಮುಚ್ಚಿ ರಮ್ಯ ತಾಯಿಯಾಗತ್ತಾಳೆ. ಆಗಲೂ ಸಹ ತನ್ನ ಸ್ನೇಹವೇ ದೊಡ್ಡದು ಎಂದು ತಿಳಿದು ಪ್ರೇಮ ಮಗುವನ್ನು ಕಂಡು ಅದಕ್ಕೆ ಮುತ್ತಿಟ್ಟು ಬರುತ್ತಾನೆ. ಈ ನಡುವೆ ಅವನಿಗೆ ಜೀವನ ಬೇಸರವೆನಿಸ ತೊಡಗುತ್ತದೆ. ಜೀವನದಲ್ಲಿ ಕೆಲ ಕಹಿ ಘಟನೆಗಳು ಅವನನ್ನು ಆಧ್ಯಾತ್ಮದೆಡೆಗೆ ಒಯ್ಯಲಾರಂಭಿಸುತ್ತವೆ. ಸಣ್ಣ ಹುಡುಗನಿದ್ದಾನಿಂದಲೂ ಆಧ್ಯಾತ್ಮದ ಬಗ್ಗೆ ಅಪಾರ  ಒಲವಿದ್ದ ಪ್ರೇಮ  ಈ ವಿಷಯವನ್ನು ಅವಳಿಗೆ ತಿಳಿಸುತ್ತಾನೆ. ಅದಕ್ಕೆ ಅವಳಿಂದ ಯಾವುದೇ ಬಗೆಯ ಪ್ರತಿ ಉತ್ತರ ಬರುವುದಿಲ್ಲ. ಹೀಗೆ ಒಂದು ದಿನ ಸಂದೇಶ ವನಿಮಯ ಸಮಯದಲ್ಲಿ ರಮ್ಯ ಇವನ ಮದುವೆ ಬಗ್ಗೆ ಕೇಳುತ್ತಾಳೆ. ಆಗ ಅವನು ತಾನು ಒಂದು ಹುಡುಗಿಯನ್ನು ಪ್ರೀತಿಸಿದ್ದು ಅವಳಿಗೆ ಹೇಳಲಾಗಲಿಲ್ಲ. ಆದರೆ ಅವಳನ್ನು ಈಗಲೂ ತಾನು ಪ್ರೀತಿಸುತ್ತೀರುವುದಾಗಿಯೂ ಅವಳಿಗೆ ಮದುವೆಯಾಗಿ ಗೃಹಿಣಿಯಾಗಿದ್ದಾಳೆ ಎಂದು ತಿಳಿಸುತ್ತಾನೆ. ಕೆಲ ದಿನಗಳ ನಂತರ ಮತ್ತೆ ಸಂದೇಶ ವಿನಿಮಯ ಮಾಡುತ್ತಿರುವ ಸಂದರ್ಭದಲ್ಲಿ ಮತ್ತೆ ಆ ವಿಷಯ ಪ್ರಸ್ತಾಪವಾಗಿ ನೀನು ಪ್ರೀತಿಸಿದ ಹುಡುಗಿ ನಾನೇ...!  ನಾನು ಸಹ ನಿನ್ನನ್ನು ಪ್ರೀತಿಸಿದ್ದು, ನೀನು ನನ್ನನ್ನು ಪ್ರೀತಿಸುತ್ತಿದ್ದ ವಿಷಯ ತನಗೆ ಗೊತ್ತಿದೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ದೂರವಾಗಿದ್ದೇವೆ ನಾನು ಏನು ಮಾಡುವ ಸ್ಥೀತಿಯಲ್ಲಿ ಇಲ್ಲ.  ಎಂದು ಕೈ ಚೆಲ್ಲುತ್ತಾಳೆ.
ಹೀಗೆ ಮದುವೆಯಾಗಿರುವ ರಮ್ಯ ಹಾಗೂ  ಪ್ರೇಮ ನಡುವಿನ ಪ್ರೀತಿ ಮುಂದೇನಾಯ್ತ ಎನ್ನುವುದನ್ನು ಮುಂದಿನ ಬರಹದಲ್ಲಿ ತಿಳಿಸುತ್ತೇನೆ...

ಇಂತಿ ನಿಮ್ಮ 
ಪ್ರಶಾಂತ  ರಾಜ ರಾಜ ಗುರು...!

Thursday, November 28, 2013

ಬೆಳಗಾವಿ : ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಜನ್ಮತಳೆದ ಸುವರ್ಣ ಸೌಧದ ಎದುರು ಅಮಾಯಕ ರೈತನ ಬಲಿ ನಡೆದಿದೆ. ಅಷ್ಟಕ್ಕೂ ರಾಜ್ಯದಲ್ಲಿ ರೈತರ ವಿರುದ್ಧ ನಡೆಯುತ್ತಿರುವುದಾದರೂ ಏನು?

ಹೌದು... ಹಸಿರು ಕ್ರಾಂತಿಯ ಆರಂಭದಲ್ಲಿ ಹಸನ್ಮುಕಿಯಾಗಿದ್ದ ರೈತ ನಂತರದ ದಿನಗಳಲ್ಲಿ ಏಕೆ ಈ ರೀತಿಯ ಕೃತ್ಯಗಳಿಗೆ ಬಲಿಯಾಗುತ್ತಿದ್ದಾನೆ ಎಂದು ಒಮ್ಮೆ ಅವಲೋಕಿಸಿದರೆ ಸಿಗುವ ಉತ್ತರ ಬಂಡವಾಳ ಶಾಹಿಗಳ ಕೀಯಂತೆ ಕುಣಿಯುತ್ತಿರುವ ಆಡಳಿತಗಾರರು ಎಂಬುದು ಸ್ಪಷ್ಟವಾಗುತ್ತದೆ. ಉತ್ಪಾದನೆ ಹೆಚ್ಚಿಸುವ ದೃಷ್ಠೀಯಿಂದ ಆರಂಭಗೊಂಡ ಹಸಿರುಕ್ರಾಂತಿ ಬರಬರುತ್ತ ರೈತರ ಜೀವಕ್ಕೆ ಎರವಾಗ ತೊಡಗಿತು. ಸಾವಯವ ಕೃಷಿಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದ ರೈತರು ಬರಬರುತ್ತ ರಸಗೊಬ್ಬರಗಳ ಮೇಲೆ ಅವಲಂಬಿತರಾಗತೊಡಗಿದರು. ಜತೆಗೆ ವಿವಿಧ ರೀತಿಯ ಸವಲತ್ತುಗಳನ್ನು ಬಳಸಿಕೊಳ್ಳುವ ನೆಪದಲ್ಲಿ ಸಾಲಗಾರರು ಆದರು. ಈ ರೀತಿಯ ಸಾಲದ ಸುಳಿಯಲ್ಲಿ ಸಿಕ್ಕ ರೈತ ತನ್ನ ಅಹವಾಲನ್ನು ಆಡಳಿತಗಾರರ ಮುಂದೆ ಮಂಡಿಸಿದರು ಯಾವ ಸರ್ಕಾರಗಳು ಅವರ ನೆನವಿಗೆ ಬರಲಿಲ್ಲ. ಅವರು ಎಂದು ಸಹ ತನ್ನನ್ನು ಸಾಲ ಮುಕ್ತನನ್ನಾಗಿ ಮಾಡು ಎಂದು ಬೇಡಿಕೊಂಡವರಲ್ಲ, ಸರ್ಕಾರಗಳಿಗೆ ತಮ್ಮ ಬೆಳೆ ಬೇಯಿಸಿಕೊಳ್ಳಲು ಸಾಲ ಮನ್ನಾ ಮಾಡಿವೆ ಅಷ್ಟೇ.  ಪ್ರಕೃತಿಯೊಡನೆ ಜೂಜಾಡುವ ಅವನ ಕಷ್ಟ ಅವನಿಗೆ ಮಾತ್ರ ಗೊತ್ತು. ರೈತರ ಮಕ್ಕಳು ಎಂದು ಹೇಳಿಕೊಳ್ಳುವ ಆಡಳಿತಗಾರರು ರೈತರು ಅರ್ಜಿ ಹಿಡಿದು ಬಂದಾಗ ಹವಾನಿಯಂತ್ರಿಕ ರೂಮಿನೊಳಗೆ ಕುಳಿತು ಮಾಯಾಪೆಟ್ಟಿಗೆಯನ್ನು ವೀಕ್ಷಿಸುವುದರಲ್ಲಿ ಬ್ಯೂಸಿಯಾಗಿರುತ್ತಾರೆ. ಕಾರಣ  ಇಷ್ಟೇ ಅಧಿಕಾರದ ಮದ ನೆತ್ತಿಗೆರಿರುವುದರಿಂದ. ( ಲಾಲ್ ಬಹದ್ದೂರ ಶಾಸ್ತ್ರಿ  ಅವರನ್ನು ಬಿಟ್ಟು)
ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳುವ ಎಲ್ಲಾ ಪಕ್ಷಗಳು ಎಂದಿಗೂ ಸಹ ಅವನ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ. ಒಂದು ವೇಳೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ವಿಷಯಗಳೆ ಇಲ್ಲದೆ ತಮ್ಮ ಪಕ್ಷಗಳು  ಅಧಿಕಾರಕ್ಕೆ ಬರದಿದ್ದರೆ ಎಂಬ ಚಿಂತೆ ಅವರಿಗೆ.

ವೈಜ್ಞಾನಿಕ ಬೆಲೆ ನೀಡಲು ಆಗದವರು ಅಧಿಕಾರದಲ್ಲಿರಬೇಕೆ? : ರೈತರ ಬೆಳೆಗಳಿಗೆ ಪೂರಕ ಬೆಂಬಲ ನೀಡಲು ಆಗದಿದ್ದವರು ಅಧಿಕಾರದಲ್ಲಿರಬೇಕೆ ಎಂಬ ಪ್ರಶ್ನೆಗೆ ಇನ್ನೂವರೆಗೂ ಉತ್ತರ ಸಿಕ್ಕಿಲ್ಲ. ಸಿಗುವುದು ಇಲ್ಲ ಎಂದು ಅನಿಸುತ್ತಿದೆ. ಈಗಾಗಲೇ ಸಾಕಷ್ಟು ಫಲವತ್ತಾದ ಭೂಮಿ ಬಂಡವಾಳ ಶಾಹಿಗಳ ಕೈ ಸೇರಿ, ಕೃಷಿ ಉತ್ಪಾದನೆ ನೆಲಕಚ್ಚಿದ್ದು, ಇರುವ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗೆ ಬೆಲೆ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೂ ಸಹ ಆಳುವ ಸರ್ಕಾರಗಳು ಈ ಬಗ್ಗೆ ಕಿಂಚಿತ್ತು ತಲೆ ಕೆಡಿಸಕೊಂಡಿಲ್ಲ.

ಕೈಗಾರಿಕೆಗೆ ರಿಯಾಯ್ತಿ : ರೈತರಿಗೆ ಪಂಚಾಯ್ತಿ : ಕಳೆದ ಕೆಲ ವರ್ಷಗಳಿಂದ ಈಚೆಗೆ ಕೈಗಾರಿಕೊದ್ಯಮಿಗಳನ್ನು ಆಕರ್ಷಿಸಲು ಭಾರಿ ಕಸರತ್ತು ನಡೆಸಿರುವ ಸರ್ಕಾರಗಳು ಅವರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿವೆ. ಆದರೆ ಅದೇ ನಮ್ಮ ನಾಡಿನ ಬೆನ್ನಲೆಬಾಗಿರುವ ರೈತನಿಗೆ  ಬೆಲೆ ನೀಡಲು ಸತಾಯಿಸುತ್ತವೆ. ಯಾಕೆ ಹೀಗೆ ಎಂದು ನೋಡಿದರೆ ಮತ್ತೆ ಸಿಗುವ ಉತ್ತರ  ಕೈಗಾರಿಕೆಗಳಿಂದ ಬರುವ ಕಪ್ಪು ಹಣ. ಹೌದು. ಇದು ಕೇವಲ  ಆರೋಪವಲ್ಲ ಬದಲಾಗಿ ಕಟು ಸತ್ಯ. ಸಕ್ಕರೆ ಕಾರ್ಖಾನೆಗಳ ನೀಡಬೇಕಾಗಿದ್ದ ತೆರಿಗೆಯನ್ನು ಸಹ ಮನ್ನಾ ಮಾಡಿರುವ ಆಡಳಿತಗಾರರು ಅವರಿಂದ ಬರಬೇಕಾಗಿದ್ದ ತೆರಿಗೆಯಲ್ಲಿನ ಶೇ 50% ರಷ್ಟನ್ನು ತಮ್ಮ ಖಾತೆಗೆ ಜಮಾಮಾಡಿಕೊಂಡಿದ್ದಾರೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ಖೋತಾ ಆಗುವ ಜತೆಗೆ ಕೈಗಾರಿಕೊದ್ಯಮಿಗಳು ಕೋಟಿಗಟ್ಟಲೇ ಲಾಭ ಮಾಡಿಕೊಂಡಿದ್ದಾರೆ.

ಲೇಖನ ಅಷ್ಟು ಚೆನ್ನಾಗಿಲ್ಲ ಆದ್ಗರಿಂದ ಮತ್ತೆ ಮುಂದುವರೆಯುವುದು ....




Friday, October 11, 2013

ಟಿ ಆರ್ ಪಿ ನೇ ಮುಖ್ಯಾನಾ..?

ಟಿ ಆರ್ ಪಿ ನೇ ಮುಖ್ಯಾನಾ..? 


ಕಳೆದ 15 ದಿನಗಳಿಂದ ಇಂಥದೊಂದು ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಕಾರಣ ಇಷ್ಟೇ ಸಮಾಜವನ್ನು ಸರಿದಾರಿಗೆ ತರಬೇಕಾದ ಅಥವಾ ಸರಿ ದಾರಿಯಲ್ಲಿ ಮುನ್ನಡೆಸಲು ಸಹಕಾರಿಯಾಗಬೇಕಾದ ಮಾಧ್ಯಮಗಳು ತಮ್ಮ ಟಿ ಆರ್ ಪಿ ಗಾಗಿ
, ನಾನಾ ರೀತಿಯ ಕಸರತ್ತು ನಡೆಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.
ಉತ್ತಮ ಸಮಾಜಕ್ಕಾಗಿ, ನೇರ ದಿಟ್ಟ ನಿರಂತರ, ಪ್ರಾಮಾಣಿಕತೆ ಅದು ಇದು ಎಂದು ಟ್ಯಾಗ್ ಲೈನ್ ಎಳೆದುಕೊಂಡಿರುವ ದೃಶ್ಯ ಮಾಧ್ಯಮಗಳು ಇಂದು ನಿರಂತರವಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ.
ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆಗೆ ಕಡಿವಾಣ ಬೀಳಲೆ ಬೇಕಿದೆ.
ಕಡಿವಾಣ ಏಕೆ ?: ವಿವಿಧತೆಯಲ್ಲೂ  ಏಕತೆ ಪ್ರದರ್ಶಿಸುತ್ತಿರುವ ನಮ್ಮ ದೇಶದಲ್ಲಿ ಅಭಿಪ್ರಾಯ ಬೇದಗಳು ಸಹಜವೇ. ಆದರೂ ಸಹ  ಎಲ್ಲರೂ ಒಟ್ಟಾಗಿ ಬಾಳುತ್ತಿರುವುದು ಸಂತಸದ ಸಂಗತಿ. ಆದರೆ  ಇಂದು ಸಮಾಜವನ್ನು ವೈಚಾರಿಕತೆಯನ್ನುವ ಹಣೆಪಟ್ಟಿಯಲ್ಲಿ ಮುನ್ನಡೆಸಲು ಹಾಗೂ ಭಾರತೀಯ ಸಂಸ್ಕೃತಿಯನ್ನು ಮುಗಿಸಲು ಕಾಯುತ್ತಿರುವ ಕೆಲವರು ವಿನಾಕಾರಣ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮೌಢ್ಯಗಳನ್ನು ತೊಡೆದು ಹಾಕುತ್ತೇವೆ ಎನ್ನುವ ಅವರುಗಳು ಪ್ರಚಾರಕ್ಕಾಗಿ ಮಾಧ್ಯಮದ ಮೊರೆ ಹೋಗಿದ್ದಾರೆ. ಇದನ್ನು ತಿಳಿಯದ ಮಾಧ್ಯಮಗಳು ಅವರಿಗೆ ಮಣೆ ಹಾಕುವ ಮೂಲಕ ಲಕ್ಷಾಂತರ ಆಸ್ತಿಕರಲ್ಲಿ  ಗೊಂದಲವನ್ನುಂಟು ಮಾಡುತ್ತಿವೆ. ಇದರಿಂದಾಗಿ 2020 ಭಾರತ ಸುಪರ್ ಪವರ್ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವ ಅನೇಕರಿಗೆ ನೋವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಶಕ್ತಿಯಾಗಿಸಬೇಕು ಎನ್ನುವ ವಿವೇಕರ ವಾಣಿಯನ್ನು ಹಾಗೂ ದಾರ್ಶನಿಕ ರ ಮಾತನ್ನು ಮರೆತು ತಮ್ಮ ಪ್ರತಿಷ್ಠೆಗೋಸ್ಕೃರ  ಇನ್ನೊಬ್ಬರ ಆಸ್ತಿಕತೆ, ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿರುವ ಅವರುಗಳನ್ನು ಮಾಧ್ಯಮಗಳು ಸಹ ಬೆನ್ನು ತಟ್ಟುತ್ತಿರುವುದು ನೋವಿನ ಸಂಗತಿ.
ಭಾರತ ಆಧ್ಯಾತ್ಮತ ನೆಲವಾಗಿದ್ದು, ಇಲ್ಲಿ ಏಕ ಕಾಲಕ್ಕೆ ಎಲ್ಲವೂ ನಡೆದುಕೊಂಡು ಬರುತ್ತಿದೆ. ಒಂದೇಡೆ ವೈಚಾರಿಕತೆ ವಿಸ್ತರಿಸುತ್ತಿದ್ದರೆ ಇನ್ನೊಂದಡೆ ಆಧ್ಯಾತ್ಮಿಕತೆಯೂ ಸಹ ತಮ್ಮ ಮೂಲವನ್ನು ಕಾಪಾಡಿಕೊಳ್ಳುತ್ತಾ ಮನಸ್ಸಿಗೆ ಶಾಂತಿಯನ್ನು ನೀಡುತ್ತಿದೆ. ಹಿಂದುಸ್ಥಾನದಲ್ಲಿ ನಿಂತುಕೊಂಡು ನಾವು ಹಿಂದುಗಳಲ್ಲ ನಾವು ಲಿಂಗಾಯತರು ಎಂದು ಹೇಳುವ ಅವರು, ಬೇರೆಯವರ ಅಡ್ಡಪಲ್ಲಕ್ಕಿಯನ್ನು ವಿರೋಧಿಸುತ್ತಾರೆ. ಮಾನವೀಯತೆ ಬಗ್ಗೆ ಮಾತನಾಡುತ್ತಾರೆ ಆದರೆ ತಾವೇ ಸ್ವತಃ ಭಕ್ತರಿಂದ ಕಾಲು ಮುಗಿಸಿಕೊಳ್ಳುವ ಮೂಲಕ ನಾನು ನಿನಗಿಂತ ಶ್ರೇಷ್ಠ ಎಂದು ತೋರಿಸಿಕೋಳ್ಳುತ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ. ಅವರವರ ಭಕ್ತಿಗೆ ಅವರವರು ಕಂಡುಕೊಂಡ ಶಕ್ತಿಯನ್ನು ದೇವರು ಎಂದು ಕರೆಯುವುದುಂಟು. ಆದರೆ ಇನ್ನೊಬ್ಬರಿಗೆ ತೊಂದರೆ ಕೊಡುವುದು ಯಾವ ನ್ಯಾಯ. ತಾವುಗಳು ನಡೆಸುವ ವಿವಿಧ ಸಮಾಜ ವಿರೋಧಿ ಚಟುವಟಿಕೆಗಳಿಗಳನ್ನು ಮುಚ್ಚಿಕೊಳ್ಳಲು ಮಾಧ್ಯಮದ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಅವರುಗಳನ್ನು ಈಗಲಾದರೂ ಮಾಧ್ಯಮಗಳು ಬೀಡಬೇಕಿದೆ. ಕಾರಣ ಭಾರತ ಎನ್ನುವದು ಚೈನಾ ಮಾದರಿ ಕಮ್ಯೂನಿಸ್ಟ ಆಡಳಿತವಲ್ಲ ಇದು ಧಾರ್ಮಿಕತೆ ನೆಲೆಯಲ್ಲಿ ನಿಂತ ಪ್ರಜಾಪ್ರಬುತ್ವ. 

ಟಿ ಆರ್ ಪಿ ನೇ ಮುಖ್ಯಾನಾ..?

ಟಿ ಆರ್ ಪಿ ನೇ ಮುಖ್ಯಾನಾ..? 


ಕಳೆದ 15 ದಿನಗಳಿಂದ ಇಂಥದೊಂದು ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಕಾರಣ ಇಷ್ಟೇ ಸಮಾಜವನ್ನು ಸರಿದಾರಿಗೆ ತರಬೇಕಾದ ಅಥವಾ ಸರಿ ದಾರಿಯಲ್ಲಿ ಮುನ್ನಡೆಸಲು ಸಹಕಾರಿಯಾಗಬೇಕಾದ ಮಾಧ್ಯಮಗಳು ತಮ್ಮ ಟಿ ಆರ್ ಪಿ ಗಾಗಿ
, ನಾನಾ ರೀತಿಯ ಕಸರತ್ತು ನಡೆಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.
ಉತ್ತಮ ಸಮಾಜಕ್ಕಾಗಿ, ನೇರ ದಿಟ್ಟ ನಿರಂತರ, ಪ್ರಾಮಾಣಿಕತೆ ಅದು ಇದು ಎಂದು ಟ್ಯಾಗ್ ಲೈನ್ ಎಳೆದುಕೊಂಡಿರುವ ದೃಶ್ಯ ಮಾಧ್ಯಮಗಳು ಇಂದು ನಿರಂತರವಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ.
ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆಗೆ ಕಡಿವಾಣ ಬೀಳಲೆ ಬೇಕಿದೆ.
ಕಡಿವಾಣ ಏಕೆ ?: ವಿವಿಧತೆಯಲ್ಲೂ  ಏಕತೆ ಪ್ರದರ್ಶಿಸುತ್ತಿರುವ ನಮ್ಮ ದೇಶದಲ್ಲಿ ಅಭಿಪ್ರಾಯ ಬೇದಗಳು ಸಹಜವೇ. ಆದರೂ ಸಹ  ಎಲ್ಲರೂ ಒಟ್ಟಾಗಿ ಬಾಳುತ್ತಿರುವುದು ಸಂತಸದ ಸಂಗತಿ. ಆದರೆ  ಇಂದು ಸಮಾಜವನ್ನು ವೈಚಾರಿಕತೆಯನ್ನುವ ಹಣೆಪಟ್ಟಿಯಲ್ಲಿ ಮುನ್ನಡೆಸಲು ಹಾಗೂ ಭಾರತೀಯ ಸಂಸ್ಕೃತಿಯನ್ನು ಮುಗಿಸಲು ಕಾಯುತ್ತಿರುವ ಕೆಲವರು ವಿನಾಕಾರಣ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮೌಢ್ಯಗಳನ್ನು ತೊಡೆದು ಹಾಕುತ್ತೇವೆ ಎನ್ನುವ ಅವರುಗಳು ಪ್ರಚಾರಕ್ಕಾಗಿ ಮಾಧ್ಯಮದ ಮೊರೆ ಹೋಗಿದ್ದಾರೆ. ಇದನ್ನು ತಿಳಿಯದ ಮಾಧ್ಯಮಗಳು ಅವರಿಗೆ ಮಣೆ ಹಾಕುವ ಮೂಲಕ ಲಕ್ಷಾಂತರ ಆಸ್ತಿಕರಲ್ಲಿ  ಗೊಂದಲವನ್ನುಂಟು ಮಾಡುತ್ತಿವೆ. ಇದರಿಂದಾಗಿ 2020 ಭಾರತ ಸುಪರ್ ಪವರ್ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವ ಅನೇಕರಿಗೆ ನೋವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಶಕ್ತಿಯಾಗಿಸಬೇಕು ಎನ್ನುವ ವಿವೇಕರ ವಾಣಿಯನ್ನು ಹಾಗೂ ದಾರ್ಶನಿಕ ರ ಮಾತನ್ನು ಮರೆತು ತಮ್ಮ ಪ್ರತಿಷ್ಠೆಗೋಸ್ಕೃರ  ಇನ್ನೊಬ್ಬರ ಆಸ್ತಿಕತೆ, ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿರುವ ಅವರುಗಳನ್ನು ಮಾಧ್ಯಮಗಳು ಸಹ ಬೆನ್ನು ತಟ್ಟುತ್ತಿರುವುದು ನೋವಿನ ಸಂಗತಿ.
ಭಾರತ ಆಧ್ಯಾತ್ಮತ ನೆಲವಾಗಿದ್ದು, ಇಲ್ಲಿ ಏಕ ಕಾಲಕ್ಕೆ ಎಲ್ಲವೂ ನಡೆದುಕೊಂಡು ಬರುತ್ತಿದೆ. ಒಂದೇಡೆ ವೈಚಾರಿಕತೆ ವಿಸ್ತರಿಸುತ್ತಿದ್ದರೆ ಇನ್ನೊಂದಡೆ ಆಧ್ಯಾತ್ಮಿಕತೆಯೂ ಸಹ ತಮ್ಮ ಮೂಲವನ್ನು ಕಾಪಾಡಿಕೊಳ್ಳುತ್ತಾ ಮನಸ್ಸಿಗೆ ಶಾಂತಿಯನ್ನು ನೀಡುತ್ತಿದೆ. ಹಿಂದುಸ್ಥಾನದಲ್ಲಿ ನಿಂತುಕೊಂಡು ನಾವು ಹಿಂದುಗಳಲ್ಲ ನಾವು ಲಿಂಗಾಯತರು ಎಂದು ಹೇಳುವ ಅವರು, ಬೇರೆಯವರ ಅಡ್ಡಪಲ್ಲಕ್ಕಿಯನ್ನು ವಿರೋಧಿಸುತ್ತಾರೆ. ಮಾನವೀಯತೆ ಬಗ್ಗೆ ಮಾತನಾಡುತ್ತಾರೆ ಆದರೆ ತಾವೇ ಸ್ವತಃ ಭಕ್ತರಿಂದ ಕಾಲು ಮುಗಿಸಿಕೊಳ್ಳುವ ಮೂಲಕ ನಾನು ನಿನಗಿಂತ ಶ್ರೇಷ್ಠ ಎಂದು ತೋರಿಸಿಕೋಳ್ಳುತ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ. ಅವರವರ ಭಕ್ತಿಗೆ ಅವರವರು ಕಂಡುಕೊಂಡ ಶಕ್ತಿಯನ್ನು ದೇವರು ಎಂದು ಕರೆಯುವುದುಂಟು. ಆದರೆ ಇನ್ನೊಬ್ಬರಿಗೆ ತೊಂದರೆ ಕೊಡುವುದು ಯಾವ ನ್ಯಾಯ. ತಾವುಗಳು ನಡೆಸುವ ವಿವಿಧ ಸಮಾಜ ವಿರೋಧಿ ಚಟುವಟಿಕೆಗಳಿಗಳನ್ನು ಮುಚ್ಚಿಕೊಳ್ಳಲು ಮಾಧ್ಯಮದ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಅವರುಗಳನ್ನು ಈಗಲಾದರೂ ಮಾಧ್ಯಮಗಳು ಬೀಡಬೇಕಿದೆ. ಕಾರಣ ಭಾರತ ಎನ್ನುವದು ಚೈನಾ ಮಾದರಿ ಕಮ್ಯೂನಿಸ್ಟ ಆಡಳಿತವಲ್ಲ ಇದು ಧಾರ್ಮಿಕತೆ ನೆಲೆಯಲ್ಲಿ ನಿಂತ ಪ್ರಜಾಪ್ರಬುತ್ವ.